ಸೆಲೆಬ್ರಿಟಿಗಳ ಮತ್ತೊಂದು ಟೀಮ್‌ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಇದು ಆರು ದಿನಗಳ ಬಿಗ್‌ಬಾಸ್ ಶೋ. ಇದಕ್ಕೆ ಕಲರ್ಸ್ ಕನ್ನಡದ ಕ್ರಿಯೇಟಿವ್ ಟೀಮ್ ಕೊಟ್ಟಿರೋ ಹೆಸರು - 'ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್'.

ಬಿಗ್‌ಬಾಸ್‌ ಸೀಸನ್‌ 8 ಸೆಕೆಂಡ್‌ ಇನ್ನಿಂಗ್ಸ್ ಇದೀಗ ತಾನೇ ಮುಗಿದಿದೆ. ಆದರೆ ಕಲರ್ಸ್ ಕನ್ನಡ ಚಾನೆಲ್‌ ಇನ್ನೂ ಬಿಗ್‌ಬಾಸ್ ಕನಸಿಂದ ಹೊರಬಂದಿಲ್ಲ. ಇದೀಗ ಕನ್ನಡತಿ ಹರ್ಷ ಪಾತ್ರಧಾರಿ ಕಿರಣ್‌ ರಾಜ್‌, ನಿರೂಪಕ ಅಕುಲ್‌ ಬಾಲಾಜಿ ಸೇರಿ ಹಲವು ಕಿರುತೆರೆ ಸೆಲೆಬ್ರಿಟಿಗಳ ಮತ್ತೊಂದು ಟೀಮ್‌ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಇದು ಆರು ದಿನಗಳ ಬಿಗ್‌ಬಾಸ್ ಶೋ. ಇದಕ್ಕೆ ಕಲರ್ಸ್ ಕನ್ನಡದ ಕ್ರಿಯೇಟಿವ್ ಟೀಮ್ ಕೊಟ್ಟಿರೋ ಹೆಸರು - 'ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್'.

View post on Instagram

ಆರು ದಿನಗಳ ಕಾಲ ನಡೆಯೋ ಈ ಶೋನಲ್ಲಿ, ಹಿಂದಿನ ಬಿಗ್ ಬಾಸ್‌ನಲ್ಲಿ ಇದ್ದಂತೆ, ಮನೆಯೊಳಗೆ ಆಟ, ಕಿತ್ತಾಟ, ಮುದ್ದಾಟ ಎಲ್ಲನೂ ಇರುತ್ತಾ, ದೊಡ್ಡ ಬಿಗ್‌ಬಾಸ್ ಶೋ ಥರ ಈ ಶೋ ಸಹ ಜನರ ಮನರಂಜಿಸುತ್ತಾ ಅನ್ನೋ ಪ್ರಶ್ನೆಗಳೆಲ್ಲ ಪ್ರೇಕ್ಷಕರ ಮುಂದಿವೆ. ಸುಮಾರು 15 ಜನ ಸೆಲೆಬ್ರಿಟಿಗಳಿರೋ ಈ ಶೋ ಶನಿವಾರ ಗ್ರ್ಯಾಂಡ್‌ ಓಪನಿಂಗ್ ಕಾಣಲಿದೆ ಅಂತ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ. ಅಷ್ಟಕ್ಕೂ ಯಾವ ಮುನ್ಸೂಚನೆಯೂ ಇಲ್ಲದೇ ಸಡನ್ನಾಗಿ ಹೀಗೊಂದು ಶೋ ಹುಟ್ಟಿಕೊಳ್ಳೋಕೆ ಏನು ಕಾರಣ?

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

 ಬಿಗ್‌ಬಾಸ್‌ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಅಂತಲೇ ಫೇಮಸ್‌. ಇದೀಗ ಅತ್ಯಂತ ಸಣ್ಣ ರಿಯಾಲಿಟಿ ಶೋ ಅನ್ನೋ ಟೈಟಲ್‌ಅನ್ನೂ ಕ್ಯಾಚ್ ಮಾಡೋಕೆ ಹೊರಟಿದೆ ಹೊಸ ಬಿಗ್‌ಬಾಸ್‌ ಶೋ. ಸ್ಮಾಲ್‌ಸ್ಕ್ರೀನ್ ಪ್ರೇಕ್ಷಕರಿಗೆ ಇರುವ ಬಿಗ್‌ಬಾಸ್ ಕ್ರೇಜ್‌ಗೆ ಇನ್ನಷ್ಟು ನೀರೆರೆಯೋ ಪ್ರಯತ್ನ ಇದು.. ಒಂದು ಕಡೆ ಬಿಗ್‌ಬಾಸ್ ಮನೆಯಿಂದ ವಿನ್ನರ್ ಮಂಜು ಪಾವಗಡ ಆಂಡ್‌ ಟೀಮ್‌ ಹೊರಬರುತ್ತಿರುವಂತೇ ಇನ್ನೊಂದು ದೊಡ್ಡ ಟೀಮ್‌ ಎಂಟ್ರಿ ಕೊಟ್ಟು ಹವಾ ಕ್ರಿಯೇಟ್ ಮಾಡೋಕೆ ಸಜ್ಜಾಗುತ್ತಿದೆ. 'ಬಿಗ್‌ ಬಾಸ್‌ ಫ್ಯಾಮಿಲಿ ಅವಾರ್ಡ್ಸ್'ಗೆ ಕ್ಷಣಗಣನೆ ಶುರುವಾಗಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಪರಮೇಶ್ವರ ಗುಂಡ್ಕಲ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. '100 ದಿನ ಇರುವ ಬಿಗ್‌ಬಾಸ್‌ ಮನೆಯಲ್ಲಿ 6 ದಿನಗಳ ಹೊಸ ಜರ್ನಿ. ಅದೇ ಅರಮನೆ, ಅದೇ ಕ್ಯಾಮರಾ ಮತ್ತು ನೀವು ಮೆಚ್ಚಿರುವ 15 ತಾರೆಯರು' ಎನ್ನುವ ಸಂದೇಶವನ್ನೂ ಈ ಪ್ರೋಮೋ ಬಿತ್ತರಿಸಿದೆ. ಜೊತೆಗೆ 'ಬರೀ ಆರು ದಿನಗಳ ಶೋ, ಇದು ಸುಲಭ ಅಂದುಕೊಂಡಿದ್ದೀರಾ, ಚಾನ್ಸೇ ಇಲ್ಲ. ಆರು ದಿನ ನಮ್ಮ ಕಂಟೆಸ್ಟೆಂಟ್ ಹೇಗಿರ್ತಾರೆ ಗೊತ್ತಾ' ಅನ್ನೋ ಅಕುಲ್ ಬಾಲಾಜಿ ಮಾತು ಪ್ರೋಮೋದಲ್ಲಿ ಪ್ರಸಾರವಾಗಿದೆ. ಅಲ್ಲಿಗೆ ಈ ಶೋಗೆ ಸಖತ್ ಬಿಲ್ಡಪ್ ಕ್ರಿಯೇಟ್ ಮಾಡಲಾಗಿದೆ. 

ಬಿಗ್‌ಬಾಸ್‌ನಿಂದ ಪಡೆದಿದ್ದೂ, ಕಳ್ಕೊಂಡಿದ್ದು ಎರಡೂ ಇವೆ: ಸಂಬರಗಿ

ಅಷ್ಟಕ್ಕೂ ಸಡನ್ನಾಗಿ ಇಂಥದ್ದೊಂದು ಶೋ ಯಾಕೆ, ಇದಕ್ಕೆ ಕಿರುತೆರೆ ಸೆಲೆಬ್ರಿಟಿಗಳನ್ನೇ ಯಾಕೆ ಬಳಸಿಕೊಳ್ಳಲಾಗಿದೆ ಅನ್ನೋ ಪ್ರಶ್ನೆಗಳಿಗೆ ಸದ್ಯದಲ್ಲೇ ಶೋ ಮೂಲಕ ಉತ್ತರ ಸಿಗಲಿದೆ. ಸದ್ಯಕ್ಕೆ ಇದು ಚಾನೆಲ್‌ ಮಟ್ಟಿಗೆ ಹೊಸ ಬಗೆಯ ಕಾರ್ಯಕ್ರಮ. ಬಿಗ್‌ಬಾಸ್ ಟಿಆರ್‌ಪಿಯನ್ನು ಇನ್ನೂ ಕೆಲದಿನಗಳ ಕಾಲ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಅನ್ನೋ ಬಗೆಯ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಹೊಸ ಪ್ರಯೋಗದ ಬಗ್ಗೆ ಜನರಲ್ಲಿ ಕುತೂಹಲ ಇದೆ. ಕೆಲವು ದಿನಗಳಿಂದ ಹಿಂದಿಯಲ್ಲೂ 'ಬಿಗ್‌ಬಾಸ್‌ ಓಟಿಟಿ' ಶೋ ಶುರುವಾಗಿದೆ. ಇದರಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರ ಜಗಳ ಸಖತ್‌ ವೈರಲ್‌ ಆಗಿತ್ತು. ಆದರೆ ಅದು ವೂಟ್‌ ಓಟಿಟಿಯಲ್ಲಿ ಮಾತ್ರ ಬರುತ್ತಿದೆ. ಈ ಶೋವನ್ನು ವೂಟ್‌ ಜೊತೆಗೆ ಟಿವಿಯಲ್ಲೂ ನೋಡಬಹುದು. ಸದ್ಯ ಸೀರಿಯಲ್, ನಿರೂಪಣೆ ಮೂಲಕ ಗಮನ ಸೆಳೆಯುತ್ತಿರುವ ಕಿರಣ್‌ರಾಜ್‌, ಅಭಿನವ್‌, ಕೌಸ್ತುಭ, ನಯನಾ, ಚಂದನಾ, ನಿರೂಪಕ ಅಕುಲ್‌ ಬಾಲಾಜಿ ಸೇರಿ 15 ಜನ ಇದ್ದಾರೆ. ಮನೆಯೊಳಗೆ ಇವರ ಜೋಶ್, ಸರ್ಕಸ್‌ಗೆ ಕ್ಷಣಗಣನೆ ಶುರುವಾಗಿದೆ. 

ಶೂಟಿಂಗ್ ಮಧ್ಯೆ ಅವಘಡ: ಪ್ರಕಾಶ್ ರೈ ಆಸ್ಪತ್ರೆಗೆ ದಾಖಲು