ಚೆನ್ನೈನಲ್ಲಿ ಶೂಟಿಂಗ್ ವೇಳೆ ಅಪಘಡ, ಸರ್ಜರಿಗಾಗಿ ಪ್ರಕಾಶ್ ಹೈದರಾಬಾದಿಗೆ ಶೀಘ್ರ ಚೇತರಿಸ್ತಾರಾ ಬಹುಭಾಷಾ ನಟ ?
ದಕ್ಷಿಣ ಭಾರತದ ಹಿರಿಯ ನಟ ಪ್ರಕಾಶ್ ರೈ ಶೂಟಿಂಗ್ ವೇಳೆಗೆ ಬಿದ್ದು, ಕೈಯ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಅವರು ಚೆನ್ನೈನಲ್ಲಿ ತಮಿಳಿನ ಜನಪ್ರಿಯ ನಟ ಧನುಷ್ ಅವರ ಹೊಸ ಚಿತ್ರದ ಚಿತ್ರೀಕರಣ ದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೈ ಅವರು ಹೈದರಾಬಾದ್‌ನತ್ತ ಪ್ರಯಾಣಿಸಿದ್ದಾರೆ.
"
ಅಲ್ಲಿ ಹಿರಿಯ ಆರ್ಥೋಪೆಡಿಕ್ ಸರ್ಜನ್ ಡಾ. ಗುರುವ ರೆಡ್ಡಿ ಅವರು ಪ್ರಕಾಶ್ ರೈ ಅವರ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಕೈ ಮೂಳೆ ಮುರಿತದ ಬಗ್ಗೆ ಪ್ರಕಾಶ್ ರೈ ಟ್ವೀಟ್ ಮಾಡಿದ್ದು, ‘ಕೈಗೆ ಸಣ್ಣ ಮೂಳೆ ಮುರಿತವಾಗಿದೆ. ಭಯ ಪಡುವಂಥದ್ದು ಏನೂ ಆಗಿಲ್ಲ. ಸರ್ಜರಿಗಾಗಿ ಹೈದರಾಬಾದ್‌ಗೆ ಪ್ರಯಾಣಿಸುತ್ತಿರುವೆ. ಅಲ್ಲಿ ಡಾ. ಗುರುವ ರೆಡ್ಡಿ ಸರ್ಜರಿ ಮಾಡಲಿದ್ದಾರೆ. ಅವರ ಚಿಕಿತ್ಸೆಯ ಮೂಲಕ ಶೀಘ್ರ ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದಿದ್ದಾರೆ.
ಶೂಟಿಂಗ್ ವೇಳೆ ನಟ ಪ್ರಕಾಶ್ ರಾಜ್‌ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ
ನಟ ಧುನುಷ್ ಅವರ ಬಹು ನಿರೀಕ್ಷಿತ ಚಿತ್ರ 'ತಿರುಚಿತ್ರಾಂಬಲಂ' ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್ ರೈ ಗೆ ಗಾಯವಾಗಿದೆ. ನಾನು ಆರೋಗ್ಯವಾಗಿದ್ದು ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಪ್ರಕಾಶ್ ತಿಳಿಸಿದ್ದಾರೆ.
