Asianet Suvarna News Asianet Suvarna News

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

ಬಿಗ್‌ಬಾಸ್‌ ವಿನ್ನರ್‌ ಮಂಜು ಅವರ ಕಾಲು ನೆಲದ ಮೇಲೆ ನಿಲ್ತಿಲ್ಲ. ಕಾರಣ ರಾತ್ರೋ ರಾತ್ರಿ ಸಿಕ್ಕಿರೋ ಸೆಲೆಬ್ರಿಟಿ ಪಟ್ಟ. ಈಗ ಮಂಜಣ್ಣ ಮನೆಯಿಂದ ಹೊರಬಿದ್ರೆ ಸಾಕು, ದಾರಿಲಿ ಹೋಗೋ ಬರೋರೆಲ್ಲ ನಿಲ್ಲಿಸಿ ಮಾತಾಡಿಸ್ತಾರಂತೆ!

 

Life of Manju Pavada after winning Bigg Boss Kannada-8 in colors and Kannada
Author
Bengaluru, First Published Aug 11, 2021, 12:32 PM IST
  • Facebook
  • Twitter
  • Whatsapp

ಬಿಗ್‌ಬಾಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದೇ ಲ್ಯಾಗ್‌ ಮಂಜು ಅವರಿಗೆ ಫುಲ್‌ ಎಕ್ಸಾಯಿಟ್‌ಮೆಂಟ್‌. ಆ ಖುಷಿಗೆ ಅವರ ಕಾಲೇ ನೆಲದ ಮೇಲೆ ನಿಲ್ತಿಲ್ಲ. ರಾತ್ರೋ ರಾತ್ರಿ ತಾನೂ ಸೆಲೆಬ್ರಿಟಿ ಆದೆ ಅನ್ನೊ ಖುಷಿ ಮಂಜು ಮುಖದಲ್ಲಿ ಎದ್ದೆದ್ದು ಕಾಣ್ತಿದೆ. ನಿನ್ನೆ ತಾನೇ ಅವರು ತನ್ನ ಮಜಾಭಾರತ ಫ್ರೆಂಡ್ಸ್‌ ಜೊತೆಗೆ ಸಿಟಿ ರೌಂಡ್ಸ್ ಹೊಡೆದಿದ್ರು. ಈ ಟೈಮಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ನಿಮಿಷಾಂಬ ದೇವಸ್ಥಾನಕ್ಕೆ ಭೇಟಿಕೊಟ್ಟು ಪ್ರಸಾದ ಸ್ವೀಕರಿಸಿದ್ರು. ಧರ್ಮಸ್ಥಳ ಮಂಜುನಾಥನ ಮಹಾನ್‌ ಭಕ್ತರಾದ ಮಂಜು ದೇವಿ ದೇವಸ್ಥಾನಕ್ಕೆ ಯಾಕೆ ಬಂದ್ರು ಅನ್ನೋದು ಬೇರೆ ಮಾತು. ಮಂಜುನಾಥನ ಭಕ್ತರಾದ ಕಾರಣಕ್ಕೆ ದೇವಿ ದೇವಸ್ಥಾನಕ್ಕೆ ವಿಸಿಟ್‌ ಮಾಡಬಾರದು ಅಂತೇನೂ ರೂಲ್‌ ಇಲ್ಲವಲ್ಲಾ. ಇಷ್ಟೇ ಆದ್ರೆ ಅದೊಂದು ನಾರ್ಮಲ್‌ ಸುದ್ದಿ. ಆದರೆ ಇಲ್ಲಿ ಲ್ಯಾಗ್‌ ಮಂಜು ಆಡಿದ ಮಾತುಗಳು ಅವರೀಗ ಸಖತ್‌ ಎಕ್ಸಾಯಿಟ್‌ಮೆಂಟ್‌ನಲ್ಲಿದ್ದಾರೆ ಅನ್ನೋದಕ್ಕೆ ಸಾಕ್ಷಿಯಂತಿದೆ.

ಅಧ್ಯಾತ್ಮ ಸಾಧನೆಯ ಲಕ್ಕಿಮ್ಯಾನ್ ಹುಡುಗಿ ಸಂಗೀತಾ ಶೃಂಗೇರಿ

 ಮಂಜು ಪಾವಗಡ ಅವರು ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಅಲ್ಲಿದ್ದ ಸಿನಿಮಾ ತಾರೆಯರ ಸಿಂಪ್ಲಿಸಿಟಿಯನ್ನು ಮೆಚ್ಚಿಕೊಳ್ಳುತ್ತಿದ್ದರು, ಅಂಥಾ ಸೆಲೆಬ್ರಿಟಿಗಳ ಜೊತೆಗೆ ತಾನೂ ಇದ್ದೀನಿ ಅಂತ ಖುಷಿ ಹಂಚಿಕೊಳ್ತಾ ಇದ್ರು. ಅಷ್ಟೇ ಅಲ್ಲ, ರಾತ್ರಿ ಬೆಡ್ ಇಲ್ಲದೇ ಮನೆಯ ಅಂಗಳದಲ್ಲೇ ಕಸಕ್ಕೆ ಹಾಕುವ ಕವರ್‌ನಿಂದ ಮೈ ಮುಚ್ಚಿಕೊಂಡು ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದ ಶುಭಾ ಪೂಂಜಾ, ನಿಧಿ, ವೈಷ್ಣವಿ ಅವ್ರಿಗೆಲ್ಲ ಕಾಲೆಳೆಯುತ್ತಿದ್ದರು. 'ಎಷ್ಟೋ ಸಿನಿಮಾಗಳಲ್ಲಿ ನಟಿಸಿದ ದೊಡ್ಡ ಸೆಲೆಬ್ರಿಟಿಗಳು ನೀವು, ಅಂಥಾ ನಿಮ್ಗೆ ನಮ್‌ ಜೊತೆಗೆ ಹೀಗೆ ಅಂಗಳದಲ್ಲಿ ಕಸಕ್ಕೆ ಹಾಕೋ ಕವರ್ ಹೊದ್ದುಕೊಂಡು ಮಲಗೋ ಗತಿ ಬಂತಲ್ಲಪಾ' ಅಂತ ತಮಾಷೆ ಮಾಡುತ್ತಿದ್ದರು. ಬಿಗ್‌ಬಾಸ್‌ ಮನೆಯಲ್ಲಿದ್ದ ಅಷ್ಟೋ ದಿನಗಳಲ್ಲಿ ಮಂಜು ಯಾವತ್ತೂ ಸೆಲೆಬ್ರಿಟಿ ಥರ ಆಡಿರಲಿಲ್ಲ. ತನ್ನ ಬಡತನದ ಕಷ್ಟದ ದಿನಗಳನ್ನು ಆಗಾಗ ನೆನೆಸಿಕೊಳ್ಳುತ್ತಿದ್ದರೂ, ಹೆಚ್ಚಿನ ಸಮಯ ಮನರಂಜಿಸೋದ್ರಲ್ಲಿ, ಟೈಮ್ಲೀ ಜೋಕ್  ಮಾಡಿ ನಗೋದಕ್ಕೆ ಸ್ಪೆಂಡ್ ಮಾಡುತ್ತಿದ್ದರು. ಹಾಗಿರುವ ಮಂಜಣ್ಣಂಗೆ ಇದೀಗ ರಾತ್ರೋ ರಾತ್ರೋ ತನ್ನ ಸ್ಥಾನ ಬದಲಾಗಿರೋದು ಗಮನಕ್ಕೆ ಬಂದಿದೆ. ತಾನೊಬ್ಬ ಸೆಲೆಬ್ರಿಟಿಯಾಗಿರೋದು ಸಖತ್ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ, 'ಮೊದ್ಲು ಇದೇ ರೋಡಲ್ಲಿ ಎಷ್ಟು ಸಲ ಓಡಾಡಿದ್ದೇನೋ ಏನೋ, ಆವಾಗ ಒಬ್ಬನೂ ತಿರುಗಿಯೂ ನೋಡ್ತಿರಲಿಲ್ಲ. ಈಗ ಮನೆಯಿಂದ ಹೊರಬಿದ್ದರೆ ಸಾಕು, ಜನ ಮುಗಿಬಿದ್ದು ಮಾತಾಡಿಸ್ತಾರೆ. ನನ್ನ ಜೊತೆ ಸೆಲ್ಫಿ ತಗೊಳ್ತಾರೆ. ಅಲ್ಲಿಗೆ ನಾನೂ ಸೆಲೆಬ್ರಿಟಿಯಾಗಿ ಬಿಟ್ನಾ ಅನಿಸ್ತಿದೆ' ಅಂತಾರೆ ಮಂಜು.

ಬಿಗ್‌ಬಾಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ ಧರ್ಮಸ್ಥಳ ಮಂಜುನಾಥನ ಮಹಿಮೆ!
 

Life of Manju Pavada after winning Bigg Boss Kannada-8 in colors and Kannada

 

ಇದೀಗ ಮಂಜು ಅವರಿಗೆ ಸಿನಿಮಾದಲ್ಲೂ ಆಫರ್‌ಗಳು ಬರುತ್ತಿವೆ. ಕಿರುತೆರೆಯಲ್ಲೂ ಅವರು ಮಿಂಚುತ್ತಿದ್ದಾರೆ. ರಾಜ್ಯದ ಜನರಿಗೆಲ್ಲ ಮಂಜು ಅಂದರೆ ಯಾರು ಅಂತ ಗೊತ್ತು, ಅವರ ಕಾಮಿಡಿ ಸೆನ್ಸ್ ಎಷ್ಟು ಹ್ಯೂಮರಸ್ ಆಗಿದೆ ಅನ್ನೋದು ಗೊತ್ತು. ಹೀಗಾಗಿ ಅವರು ಸಾಮಾನ್ಯ ಯುವಕನಿಂದ ಸೆಲೆಬ್ರಿಟಿ ಪಟ್ಟಕ್ಕೆ ಏರಿರೋದು ಸುಳ್ಳಲ್ಲ. ಆದರೆ ಇದಕ್ಕಾಗಿ ಅವರು ಪಟ್ಟ ಕಷ್ಟವನ್ನೂ ಮರೆಯೋ ಹಾಗಿಲ್ಲ. ಆ ಕಾರಣಕ್ಕೋ ಏನೋ, ಅವರು ವಿನ್ನರ್ ಆಗಿದ್ರೂ, ಸೆಲೆಬ್ರಿಟಿ ಆಗಿ ಹೊರಹೊಮ್ಮಿದ್ರೂ ಅವರಲ್ಲಿ ಅಹಂಕಾರದ ಛಾಯೆ ಇಲ್ಲ. ಮೊದಲಿನಂತೆ ನಗು, ತಮಾಷೆಯಿಂದಲೇ ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ. ಸುಮಾರು ೪೫ ಲಕ್ಷಕ್ಕೂ ಹೆಚ್ಚು ಜನ ತನ್ನನ್ನು ಓಟ್‌ ಮಾಡಿ ಗೆಲ್ಲಿಸಿದ್ದಕ್ಕೆ ಜನರಿಗೆ ಯಾವತ್ತೂ ವಿಧೇಯನಾಗಿರುವೆ ಅಂತ ಅವರು ಹೇಳಿದ್ದಾರೆ. ಇದೇ ಮನಸ್ಥಿತಿಯನ್ನು ಉಳಿಸಿಕೊಂಡು ಮುಂದೆ ಹೋದರೆ ಅವರು ಸಿನಿಮಾ ಅಥವಾ ಕಿರುತೆರೆಯಲ್ಲಿ ಹೆಚ್ಚೆಚ್ಚು ಮಿಂಚುವುದು ಗ್ಯಾರಂಟಿ ಅನ್ನೋದು ಜನರ ಮಾತು. ಮುಂದಿನ ದಿನಗಳಲ್ಲಿ ಹೆಸರು, ಖ್ಯಾತಿ, ಹಣ ಮಂಜು ಅವರನ್ನು ಬದಲಾಯಿಸುತ್ತಾ ಅನ್ನೋದನ್ನೂ ಕಾದು ನೋಡಬೇಕಿದೆ. 

ನಟಿ ಶುಭ ಪೂಂಜಾ ಮದುವೆ ತಯಾರಿ ಶುರು?
 

Follow Us:
Download App:
  • android
  • ios