Asianet Suvarna News Asianet Suvarna News

ರೈಲಲ್ಲಿ ಈ ಮೂರು ವಸ್ತು ಕೊಂಡೊಯ್ದರೆ ಜೈಲು ಗ್ಯಾರಂಟಿ

ದೂರದ ಪ್ರಯಾಣಕ್ಕೆ ಶ್ರೀಸಾಮಾನ್ಯರ ಮೊದಲ ಆಯ್ಕೆ ರೈಲು. ಅಗತ್ಯವಿರುವ ಎಲ್ಲ ವಸ್ತುಗಳನ್ನು ಅವರು ಕೊಂಡೊಯ್ಯುತ್ತಾರೆ. ಆದರೆ ರೈಲ್ವೆ ಇಲಾಕೆ ಕೂಡ ಕೆಲ ನಿಯಮ ರೂಪಿಸಿದೆ. ಮನಸ್ಸಿಗೆ ಬಂದ ಎಲ್ಲವನ್ನೂ ನೀವು ರೈಲಿನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. 
 

You Cant Carry In Train Three Prohibited Things
Author
First Published Nov 19, 2022, 5:20 PM IST

ಪ್ರವಾಸಕ್ಕೆ ಕೆಲವೊಂದು ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡ್ಲೇಬೇಕಾಗುತ್ತದೆ. ಅದ್ರ ಜೊತೆಗೆ ಒಂದಿಷ್ಟು ವಸ್ತುಗಳು ಬ್ಯಾಗ್ ಸೇರುತ್ತವೆ. ಸ್ವಂತ ವಾಹನದಲ್ಲಿ ಪ್ರಯಾಣ ಬೆಳೆಸುವುದಿದ್ದರೆ ಲಗೇಜ್ ಜಾಸ್ತಿಯಾಗೋದು ಮಾಮೂಲಿ. ಇನ್ನು ವಿಮಾನ ಪ್ರಯಾಣ ಎಂದಾಗ ಜನರು ಎಷ್ಟು ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು ಎಂಬುದನ್ನು ಪರಿಶೀಲಿಸಿ, ಅದಕ್ಕೆ ತಕ್ಕಂತೆ ಪ್ಯಾಕಿಂಗ್ ಮಾಡ್ತಾರೆ. ಬಸ್ ಹಾಗೂ ಟ್ರೈನ್ ನಲ್ಲಿ ಹೋಗುವಾಗ ಜನರು ಅದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ರೈಲು ಪ್ರಯಾಣಕ್ಕೂ ಕೆಲವೊಂದು ನಿರ್ಬಂಧವಿದೆ. 

ರೈಲು (Train) ಪ್ರಯಾಣದಲ್ಲಿ ಕೂಡ, ವಿಮಾನ (Plane) ಪ್ರಯಾಣದಂತೆ ಹೆಚ್ಚುವರಿ ಲಗೇಜ್ ಗೆ ಹಣ ಪಾವತಿ ಮಾಡಬೇಕಾಗುತ್ತೆ ಎಂಬುದು ನೆನಪಿರಲಿ. ಮನೆಯಲ್ಲಿರುವ, ಅಗತ್ಯವೆನಿಸುವ ಎಲ್ಲ ವಸ್ತುಗಳನ್ನು ನೀವು ರೈಲಿನ ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವಂತಿಲ್ಲ. ಅದಕ್ಕೆ ಎಷ್ಟು ಶುಲ್ಕ ನೀಡ್ತೇವೆ ಎಂದ್ರೂ ರೈಲ್ವೆ ಇಲಾಖೆ ಅನುಮತಿ ನೀಡಲಾಗುವುದಿಲ್ಲ. ರೈಲಿನಲ್ಲಿ ಕಟ್ಟುನಿಟ್ಟಾಗಿ ಯಾವ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬುದನ್ನು ನೀವು ತಿಳಿದಿರಬೇಕು. ಇಲ್ಲವೆಂದ್ರೆ ಪ್ರಯಾಣದ ವೇಳೆ ಸಮಸ್ಯೆಯಾಗುತ್ತದೆ. ನಾವಿಂದು ಯಾವ ವಸ್ತುವನ್ನು ರೈಲು ಪ್ರಯಾಣದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ನಿಮಗೆ ಹೇಳ್ತೆವೆ.

ರೈಲಿನಲ್ಲಿ ಈ ವಸ್ತುಗಳ ನಿಷಿದ್ಧ : 

ಪಟಾಕಿ (Crackers) ಸೇರಿದಂತೆ ಸ್ಫೋಟ (Explosion) ಕ ವಸ್ತು : ದೀಪಾವಳಿ ಹಬ್ಬ ಬಂತೆಂದ್ರೆ ಜನರು ಪಟಾಕಿ ಖರೀದಿ ಶುರು ಮಾಡ್ತಾರೆ. ಖರೀದಿಸಿದ ಪಟಾಕಿಯನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ತೆಗೆದುಕೊಂಡು ಹೋಗಲು ಮುಂದಾಗ್ತಾರೆ. ಆದ್ರೆ ರೈಲಿನಲ್ಲಿ ನಿಮ್ಮೊಂದಿಗೆ ಪಟಾಕಿ ತೆಗೆದುಕೊಂಡು ಹೋಗುವಂತಿಲ್ಲ. ರೈಲಿನಲ್ಲಿ ಪಟಾಕಿ ನಿಷಿದ್ಧ. ಪಟಾಕಿ ಮಾತ್ರವಲ್ಲ ಸ್ಫೋಟಕ ವಸ್ತುಗಳನ್ನು ರೈಲಿನಲ್ಲಿ ಒಯ್ಯಬಾರದು. ಯಾಕೆಂದ್ರೆ ಈ ವಸ್ತುಗಳು ಸ್ಫೋಟಗೊಂಡು ಪ್ರಯಾಣಿಕರು ಮತ್ತು ರೈಲಿಗೆ ಹಾನಿಯುಂಟಾಗುವ ಸಾಧ್ಯತೆಯಿರುತ್ತದೆ.  ರೈಲಿನ ನಿಯಮ ಮೀರಿ ನೀವು ಪಟಾಕಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರೆ ನೀವು ಜೈಲು ಪಾಲಾಗಬಹುದು. 

ಮಕ್ಕಳ ಜೊತೆ ಪ್ರಯಾಣಿಸುವಾಗ ಮೆಡಿಕಲ್‌ ಕಿಟ್‌ನಲ್ಲಿ ಈ ವಸ್ತುಗಳಿರಲಿ

ಸಿಲಿಂಡರ್ (Cylinder) ಮತ್ತು ಒಲೆ : ಭಾರತದಲ್ಲಿ ರೈಲು ಜನರ ಉಸಿರು. ಯಾಕೆಂದ್ರೆ ದೂರದ ಊರುಗಳಿಗೆ ಜನರು ರೈಲನ್ನು ಅವಲಂಬಿಸುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನ ಮೂಲಕವೇ ಮನೆ ಸಾಮಾನುಗಳನ್ನು ಸಾಗಿಸುತ್ತಾರೆ. ಅನೇಕರು ತಮ್ಮೊಂದಿಗೆ ಒಲೆ ಮತ್ತು ಸಿಲಿಂಡರ್ ತೆಗೆದುಕೊಂಡು ಹೋಗ್ತಾರೆ. ಆದ್ರೆ ಈ ವಸ್ತುಗಳನ್ನು ರೈಲಿನಲ್ಲಿ ನಿಷೇಧಿಸಲಾಗಿದೆ. ಈ ವಸ್ತುಗಳನ್ನು ರಹಸ್ಯವಾಗಿ ರೈಲಿನಲ್ಲಿ ಸಾಗಿಸಿದರೆ ಅಥವಾ ಸಿಕ್ಕಿಬಿದ್ದರೆ ಜೈಲು (Jail) ಶಿಕ್ಷೆ ವಿಧಿಸಲಾಗುತ್ತದೆ.  
ರೈಲು ಪ್ರಯಾಣದ ವೇಳೆ ನಿಷೇಧಿತ ವಸ್ತು (Material) ಗಳನ್ನು ಕೊಂಡೊಯ್ಯುವುದು ಅಪರಾಧ. ರೈಲು ಪ್ರಯಾಣದ ವೇಳೆ ಗ್ಯಾಸ್ ಸಿಲಿಂಡರ್ ಕೊಂಡೊಯ್ಯುವುದಾದರೆ ಅದಕ್ಕೆ ಪೂರ್ವಾನುಮತಿ ಪಡೆಯಬೇಕು. ಒಪ್ಪಿಗೆ ಪಡೆದರೂ ನೀವು ತುಂಬಿದ ಸಿಲಿಂಡರ್ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಖಾಲಿ ಸಿಲಿಂಡರ್ ಅನ್ನು ತೆಗೆದುಕೊಂಡು ಹೋಗಬಹುದು.

ಕಡಿಮೆ ಬಜೆಟ್ ನಲ್ಲಿ ಫಾರಿನ್ ಟ್ರಿಪ್ ಮಾಡಲು ಬಯಸಿದ್ರೆ… ಇದು ನಿಮಗಾಗಿ!

ಆಸಿಡ್ : ಆಸಿಡ್ ಕೂಡ ರೈಲಿನಲ್ಲಿ ನಿಷೇಧಿಸಲ್ಪಟ್ಟ ವಸ್ತುಗಳಲ್ಲಿ ಒಂದಾಗಿದೆ. ಆಸಿಡ್ ತುಂಬಾ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆ. ಕೆಲವರು ಬಾಟಲಿಯಲ್ಲಿ ತುಂಬಿ ರಹಸ್ಯವಾಗಿ ಅದನ್ನು ಕೊಂಡೊಯ್ಯುವ ಪ್ರಯತ್ನ ನಡೆಸುತ್ತಾರೆ. ಆಸಿಡನ್ನು ರೈಲಿನಲ್ಲಿ ಕೊಂಡೊಯ್ಯುವುದು ಪತ್ತೆಯಾದ್ರೆ ನೀವು ಜೈಲೂಟ ಸೇವನೆ ಮಾಡ್ಬೇಕಾಗುತ್ತದೆ. ನಿಮ್ಮ ಮೇಲೆ ರೈಲು ಸಿಬ್ಬಂದಿ ದಂಡ ವಿಧಿಸುತ್ತಾರೆ. ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವವರ ವಿರುದ್ಧ ರೈಲ್ವೆ ಕಾಯಿದೆಯ ಸೆಕ್ಷನ್ 164 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಶಿಕ್ಷಿ ವಿಧಿಸಲಾಗುತ್ತದೆ.  ಇದಲ್ಲದೆ 1 ಸಾವಿರ ರೂಪಾಯಿ ದಂಡ ಅಥವಾ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ.
 

Follow Us:
Download App:
  • android
  • ios