ಈ ಊರುಗಳಲ್ಲಿ ಸೆಲ್ಫಿ ತಗೊಂಡ್ರೆ ಸೀದಾ ಜೈಲಿಗೆ
ಗುಜರಾತ್‌ನ ಒಂದಿಷ್ಟು ಊರುಗಳಲ್ಲಿ ಸೆಲ್ಫಿ ತಗೆದುಕೊಳ್ಳೋ ಹಾಗಿಲ್ಲ. ಒಂದು ವೇಳೆ ಈ ರೂಲ್ಸ್ ಮೀರಿ ಸೆಲ್ಫಿ ತಗೊಂಡ್ರೋ ಜೈಲಿಗೆ ಹೋಗೋದು ಗ್ಯಾರಂಟಿ. ದಾಂಗ್ ಅನ್ನೋ ಜಿಲ್ಲೆಯ ಸೆಲ್ಫಿ ಲೆಸ್ ಊರುಗಳನ್ನೊಮ್ಮೆ ನೋಡ್ಕೊಂಡು ಬರೋಣ.
ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ. ಇಲ್ಲಿನ ಕೆಲವು ಗ್ರಾಮಗಳು ಸ್ವಚ್ಛತೆ, ಸಾಮಾಜಿಕ ಕಾರಣಕ್ಕೆ ಗಮನ ಸೆಳೆಯುವ ಜೊತೆಗೆ ಪ್ರಕೃತಿ ಸೌಂದರ್ಯದಿಂದಲೂ ಗಮನ ಸೆಳೆಯುತ್ತವೆ. ಅಂಥಾ ನಯನ ಮನೋಹರ ಜಾಗಗಳ ಒಂದು ಜಿಲ್ಲೆ ದಾಂಗ್.
ಈ ಜಿಲ್ಲೆಯೊಳಗೆ ಬರುವ ಕೆಲವು ಗ್ರಾಮಗಳಲ್ಲಿ ಸೆಲ್ಫಿ ತಗೊಳ್ಳೋದು ಬ್ಯಾನ್ ಆಗಿದೆ. ಮೊದಲು ಈ ಊರುಗಳಲ್ಲಿ ಎಂತೆಂಥಾ ಜಾಗಗಳಿವೆ ಅಂತ ನೋಡೋಣ. ಆಮೇಲೆ ಅಲ್ಯಾಕೆ ಸೆಲ್ಫಿ ಬ್ಯಾನ್ ಆಗಿದೆ ಅಂತ ತಿಳ್ಕೊಳ್ಳೋಣ.
ಪ್ರಾಕೃತಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿರುವ ಅನೇಕ ಜಾಗಗಳು ಈ ಜಿಲ್ಲೆಯಲ್ಲಿವೆ. ಇಲ್ಲಿನ ಸಪುತಾರಾ ಎಂಬ ಹಿಲ್ ಸ್ಟೇಶನ್‌ನಲ್ಲಿ ಇರುವ ಟ್ರೈಬಲ್ ಮ್ಯೂಸಿಯಂ ವರ್ಲ್ಡ್ ಫೇಮಸ್. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಹಿಲ್ ಸ್ಟೇಶನ್‌ನಲ್ಲಿ ಏನಿದೆ ಏನಿಲ್ಲ. ಚೆಂದದ ಝರಿ, ಜಲಪಾತಗಳಿವೆ, ಅದ್ಭುತ ಸೀನಿಕ್ ಬ್ಯೂಟಿ ಇರುವ ತಾಣಗಳಿವೆ, ಸುಂದರವಾದ ಸರೋವರವಿದೆ. ಇಲ್ಲಿ ಬೋಟಿಂಗ್ ಇತ್ಯಾದಿ ಮನರಂಜನೆಗೆ ಅವಕಾಶ ಒದಗಿಸಲಾಗಿದೆ.
ವನ್ಯಜೀವಿಗಳು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದ ವೈಲ್ಡ್ ಲೈಫ್ ಸ್ಯಾಂಚ್ಯುರಿ ಇದೆ. ಜೊತೆಗೆ ಇಲ್ಲಿ ಸಾಕಷ್ಟು ಮಂದಿ ಬುಡಕಟ್ಟು ಜನರಿದ್ದಾರೆ. ಅವರ ಕಲೆ, ಆಚರಣೆಗಳ ಬಗ್ಗೆ ತಿಳಿದುಕೊಳ್ಳಬಹುದು. ಅವರ ಬದುಕು, ಜನಪದಗಳನ್ನು ಬಿಂಬಿಸೋ ಒಂದು ಮ್ಯೂಸಿಯಂ ಸಹ ಇಲ್ಲಿದೆ. ಇಲ್ಲಿ ಆರ್ಟಿಸ್ಟ್ ವಿಲೇಜ್ ಇದೆ. ಅಲ್ಲಿಗೆ ವಿಸಿಟ್ ಮಾಡಿ ಕಲೆ ಅರಳೋದನ್ನು ಕಂಡು ಬರಬಹುದು. ಜೊತೆಗೆ ಛತ್ರಪತಿ ಶಿವಾಜಿ ಕಾಲದ ಕೋಟೆ ಇದೆ.
ಗಿರಾ ಫಾಲ್ಸ್, ವನ್ಸದಾ ನ್ಯಾಶನಲ್ ಪಾರ್ಕ್ ಹೀಗೆ ಹಲವು ತಾಣಗಳನ್ನು ಈ ಧಾಂಗ್ ಜಿಲ್ಲೆಯಲ್ಲಿ ನೋಡಬಹುದು. ಪ್ರಶಾಂತವಾಗಿರುವ ಈ ಜಾಗಗಳು ಹೆಚ್ಚು ಗಲಾಟೆ ಇಲ್ಲದೇ ಮನ ಸೆಳೆಯುವ ಹಾಗಿದೆ.
ಭಾರತದಲ್ಲೂ ನ್ಯೂಡ್ ಬೀಚ್‌ಗಳಿವೆ, ನಿಮಗೆ ಗೊತ್ತೆ? ...
ಎಷ್ಟು ಚೆಂದ ಜಾಗ ಇದು, ಇಲ್ಲೊಂದು ಸೆಲ್ಫಿ ತಗೊಳ್ತೀನಿ ಅಂತ ನಿಂತ್ರೋ ನಿಮ್ಮ ಗ್ರಹಚಾರ ಕೆಟ್ಟಿತು ಅಂತನೇ ಅರ್ಥ. ಏಕೆಂದರೆ ಇಲ್ಲಿ ಸೆಲ್ಫಿ ತೆಗೆದುಕೊಳ್ಳೋದು ಕ್ರಿಮಿನಲ್ ಅಫೆನ್ಸ್. ಗುಜರಾತ್ ರಾಜ್ಯದಲ್ಲೆ ಸೆಲ್ಫಿ ಬ್ಯಾನ್ ಮಾಡಿದ ಮೊದಲ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ದಾಂಗ್ ಪಾತ್ರವಾಗಿದೆ. ಟಿ ಕೆ ದಮೋರ್ ಅನ್ನೋ ಇಲ್ಲಿನ ಆಡಳಿತಾಧಿಕಾರಿ ಜೂ.23 ರಿಂದ ಇಂಥದ್ದೊಂದು ನಿಯಮ ತಂದಿದ್ದಾರೆ. ಇದಕ್ಕೂ ಮೊದಲು ವಾಘೈ ಹಾಗೂ ಸಪುತಾರಾ ಹೈವೇ, ಜಲಪಾತ ಮೊದಲಾದೆಡೆ ಸೆಲ್ಫಿ ಬ್ಯಾನ್ ಮಾಡಲಾಗಿತ್ತು. ಈಗ ಈ ಊರುಗಳಲ್ಲಿ ಸೆಲ್ಫಿ ಬ್ಯಾನ್ ಮಾತ್ರ ಅಲ್ಲ, ಇಲ್ಲಿನ ಸ್ಥಳೀಯರೂ ಮಳೆಗಾಲದಲ್ಲಿ ನದೀ ತೀರಕ್ಕೆ ಬಟ್ಟೆ ತೊಳೆಯೋದಕ್ಕೆ, ಸ್ನಾನಕ್ಕೆ ಹೋಗೋದಕ್ಕೂ ನಿಷೇಧ ಹೇರಲಾಗಿದೆ. ಇದೆಂಥ ವಿಚಿತ್ರ ಅಂತ ಮೂಗು ಮುರಿಯೋ ಮುಂಚೆ ಈ ರೂಲ್ ಯಾಕೆ ತಂದರು ಅಂತ ನೋಡೋಣ.
ಸೇಫಾಗಿ ಮನೆಯಲ್ಲೇ ಕುಳಿತು ನಾಗರಹೊಳೆ ಸಫಾರಿ ಫೀಲ್ ಮಾಡಿ ...
ಮಾನ್ಸೂನ್ ಬಂತೆಂದರೆ ದಾಂಗ್ ಪ್ರಕೃತಿ ಸೌಂದರ್ಯದಿಂದ ನಳನಳಿಸುತ್ತಿರುತ್ತದೆ. ಆಗ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತದೆ. ಹೀಗೆ ಬಂದವರು ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುತ್ತಾರೆ. ಇದರಿಂದ ಈ ಜಾಗದಲ್ಲಿ ಅತ್ಯಧಿಕ ಸಂಖ್ಯೆಯ ಮರಣ ಪ್ರಕರಣ ದಾಖಲಾಗಿದೆ.
ಅಪರಿಚಿತರ ಜೊತೆ ಸೆಕ್ಸ್ ತೀರ್ಥಯಾತ್ರೆ! ಇದು ಇಂಡೋನೇಷ್ಯಾ ಸ್ಪೆಶಲ್! ...
ಜನ ಜಲಪಾತ, ಬೆಟ್ಟದ ಅಂಚು, ನದಿ ದಂಡೆ, ಇಳಿಜಾರುಗಳಲ್ಲೆಲ್ಲ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಾರೆ. ಮಳೆಗಾಲವಾದ ಕಾರಣ ತೇವಾಂಶಕ್ಕೆ ಕಾಲು ಜಾರಿ ಬಿದ್ದು ಗಂಭೀರ ಗಾಯ ಮಾಡಿಕೊಳ್ಳುತ್ತಾರೆ, ಇಲ್ಲವೇ ಸಾವನ್ನಪ್ಪುತ್ತಾರೆ, ವರ್ಷ ವರ್ಷ ಇಂಥಾ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿರುವುದನ್ನು ಗಮನಿಸಿ ಇಲ್ಲಿನ ಜಿಲ್ಲಾಡಳಿತ ಇಂಥದ್ದೊಂದು ಸ್ಟ್ರಿಕ್ಟ್ ರೂಲ್ ತಂದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್ ಕಾರಣಕ್ಕೆ ಮುಚ್ಚಲಾಗಿದ್ದ ಪ್ರವಾಸಿ ತಾಣಗಳು ತೆರೆಯುತ್ತವೆ. ಆಗ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ನಿಯಮ ತಂದಿದೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಅರ್ಧದಷ್ಟು ಸೆಲ್ಫಿ ಡೆತ್‌ಗಳು ನಮ್ಮ ದೇಶದಲ್ಲೇ ಆಗುತ್ತಿದೆ. ಹೀಗಾಗಿ ಪ್ರವಾಸಿತಾಣಗಳಲ್ಲಿ ಸೆಲ್ಫಿ ನಿಷೇಧಿಸುವ ಬಗ್ಗೆ ಎಲ್ಲ ರಾಜ್ಯಗಳೂ ಚಿಂತಿಸಬೇಕಿದೆ.