Asianet Suvarna News Asianet Suvarna News

Viral Video : ಸಕ್ರಿಯ ಜ್ವಾಲಾಮುಖಿಯಲ್ಲಿ ಸಿದ್ಧವಾಯ್ತು ಪಿಜ್ಜಾ..

ಗ್ವಾಟೆಮಾಲಾಗೆ ಅನೇಕ ಪ್ರವಾಸಿಗರು ಭೇಟಿ ನೀಡ್ತಾರೆ. ಅಲ್ಲಿ ಸಿಗುವ ಪಿಜ್ಜಾ ಪ್ರಸಿದ್ಧಿ ಪಡೆದಿದೆ. ಅಲ್ಲಿಗೆ ಹೋಗಿದ್ದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದು ಸಖತ್ ಸುದ್ದಿ ಮಾಡ್ತಿದೆ.
 

Woman Traveller Eats Pizza Cooked On An Active Volcano Video Viral Guatemala roo
Author
First Published Jul 14, 2023, 3:23 PM IST

ಕೆಲವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರವಾಸ ಮಾಡ್ತಾನೆ ಇರ್ತಾರೆ.  ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಸಾಮಾನ್ಯ ಜನರು ಅಲ್ಲಿನ ಪರಿಸರ, ಆಸಕ್ತಿಕರ ವಿಷ್ಯಗಳನ್ನು ನೋಡಿ ಆನಂದಪಡುತ್ತಾರೆ. ವಿಶ್ವದ ಅನೇಕ ಪ್ರಸಿದ್ಧ ಸ್ಥಳಗಳು ನಮಗೆ ತಿಳಿದಿಲ್ಲ. ನಮ್ಮೂರಿನ ವಿಶೇಷವೇ ನಮಗೆ ಸರಿಯಾಗಿ ತಿಳಿದಿಲ್ಲ ಎನ್ನುವವರೇ ಹೆಚ್ಚು. ಹಾಗಿರುವಾಗ ಈ ಬ್ಲಾಗರ್ ಗಳು ನಮ್ಮ ಜ್ಞಾನ ವೃದ್ಧಿಸೋದು ಸತ್ಯ. 

ಪ್ರವಾಸ (Trip) ಕ್ಕೆ ಹೋದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಗತ್ಯ ವಸ್ತು, ಆಹಾರ (Food) ಸಿಗೋದು ಕೆಲವೊಮ್ಮೆ ಕಷ್ಟ. ಆದ್ರೆ ತುಂಬಾ ಚಳಿಯಿರುವ, ಜ್ವಾಲಾಮುಖಿ ಸ್ಫೋಟಗೊಂಡ ಪ್ರದೇಶದಲ್ಲಿ ಪಿಜ್ಜಾ (Pizza) ಸಿಕ್ಕಿದ್ರೆ ಎಷ್ಟು ಆನಂದವಾಗ್ಬೇಡ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ, ಪ್ರವಾಸವನ್ನು ಎಂಜಾಯ್ ಮಾಡುವ ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಗೂ ಅಷ್ಟೇ ಖುಷಿಯಾಗಿದೆ.  ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನೀವು ಜ್ವಾಲಾಮುಖಿ ಪಿಜ್ಜಾ ನೋಡ್ಬಹುದು. ಗ್ವಾಟೆಮಾಲಾಗೆ ಹೋಗಿರುವ ಅಲೆಕ್ಸಾಂಡ್ರಾ ಬ್ಲೋಡ್ಜೆಟ್, ಜ್ವಾಲಾಮುಖಿ ಪಿಜ್ಜಾ ತಿನ್ನುವ ವಿಡಿಯೋ ಹಂಚಿಕೊಂಡಿದ್ದಾರೆ.

ಮಸಾಲೆ ದೋಸೆಗೆ ಸಾಂಬಾರ್ ಕೊಡದ್ದಕ್ಕೆ ವ್ಯಕ್ತಿಯಿಂದ ದೂರು, ಕೋರ್ಟ್ ತೀರ್ಪಿಗೆ ರೆಸ್ಟೋರೆಂಟ್ ಮಾಲೀಕ ಕಕ್ಕಾಬಿಕ್ಕಿ

ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಹಂಚಿಕೊಂಡಿರುವ ವಿಡಿಯೋದಲ್ಲಿ ನೀವು ಜ್ವಾಲಾಮುಖಿ ಮೇಲೆ ಪಿಜ್ಜಾ ಬೇಯಿಸೋದನ್ನು ನೋಡ್ಬಹುದು. ನಂತ್ರ ಅದನ್ನು ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಗೆ ಸರ್ವ್ ಮಾಡಲಾಗುತ್ತದೆ. ಚಳಿ ಪ್ರದೇಶದಲ್ಲಿ ಬಿಸಿ ಬಿಸಿ ಪಿಜ್ಜಾವನ್ನು ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ತಿನ್ನೋದನ್ನು ನೀವು ವಿಡಿಯೋದ ಎರಡನೇ ಭಾಗದಲ್ಲಿ ನೋಡ್ಬಹುದು. ವಿಡಿಯೋದ ಆರಂಭದಲ್ಲಿ ನೆಲದ ಅಡಿಯಲ್ಲಿ ಕಚ್ಚಾ ಪಿಜ್ಜಾವನ್ನು ಹಾಕಿ ಅದನ್ನು ವ್ಯಕ್ತಿಯೊಬ್ಬ ಮುಚ್ಚಿಡೋದನ್ನು ಕಾಣಬಹುದು. ಸಕ್ರಿಯ ಜ್ವಾಲಾಮುಖಿಯ ಮೇಲೆ ಬೇಯಿಸಿದ ಪಿಜ್ಜಾ ತಿನ್ನಲು ಗ್ವಾಟೆಮಾಲಾಗೆ ಪ್ರಯಾಣ. ಬಹುಶಃ ನಾವು ಅದಕ್ಕಾಗಿಯೇ ಅಲ್ಲಿಗೆ ಪ್ರಯಾಣಿಸಿಲ್ಲ, ಆದರೆ ಇದೊಂದು ಬೋನಸ್ ಆಗಿತ್ತು ಎಂದು ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಶೀರ್ಷಿಕೆ ಹಾಕಿದ್ದಾರೆ.

2021ರಲ್ಲಿ ಸ್ಫೋಟಗೊಂಡಿತ್ತು ಜ್ವಾಲಾಮುಖಿ : ಗ್ವಾಟೆಮಾಲಾದಲ್ಲಿ ನೀವು ಈಗ್ಲೂ ಜ್ವಾಲಾಮುಖಿ ನೋಡಬಹುದು. ಅದು ಸಕ್ರಿಯವಾಗಿದೆ. ಕೊನೆಯ ಬಾರಿ 2021 ರಲ್ಲಿ ಇದು ಸ್ಫೋಟಗೊಂಡಿತ್ತು. ಇದ್ರ ಬಗ್ಗೆಯೂ ಮಾಹಿತಿ ನೀಡಿದ ಅಲೆಕ್ಸಾಂಡ್ರಾ, ಇಲ್ಲಿ ತುಂಬಾ ಚಳಿ ಇದೆ, ತುಂಬಾ ಬಟ್ಟೆ ಹಾಕಿಕೊಂಡು ಬನ್ನಿ ಎಂದು ಪ್ರವಾಸಿಗರಿಗೆ ಸಲಹೆ ನೀಡಿದ್ದಾರೆ. 

ದಿನಾಲೂ ಸೋರೆಕಾಯಿ ಸೇವಿಸಿ, ಇವೆ 7 ಅದ್ಭುತ ಆರೋಗ್ಯ ಪ್ರಯೋಜನ

ವಿಶ್ವದ ಏಕೈಕ ಜ್ವಾಲಾಮುಖಿ ಪಿಜ್ಜಾ : ಸಕ್ರಿಯವಾಗಿರುವ ಜ್ವಾಲಾಮುಖಿ ಮೇಲೆ ಫಿಜ್ಜಾ ತಯಾರಾಗೋದು ಇಲ್ಲಿ ಮಾತ್ರ.  ಗ್ವಾಟೆಮಾಲಾದ ಸ್ಯಾನ್ ವಿಸೆಂಟೆ ಪಕಾಯಾ ಎಂಬ ನಗರವು ಜ್ವಾಲಾಮುಖಿಯೊಳಗೆ ಪಿಜ್ಜಾವನ್ನು ಬೇಯಿಸುವ ಏಕೈಕ ಸ್ಥಳವಾಗಿದೆ. ಪಿಜ್ಜಾ ಪಕಾಯಾ ಎಂದು ಕರೆಯಲ್ಪಡುವ ಈ ರೆಸ್ಟೋರೆಂಟ್ ಅನ್ನು ಡೇವಿಡ್ ಗಾರ್ಸಿಯಾ ಪ್ರಾರಂಭಿಸಿದರು. ಕೆಲವು ಪ್ರವಾಸಿಗರು ಜ್ವಾಲಾಮುಖಿ ಗುಹೆಗಳಲ್ಲಿ ಮಾರ್ಶ್ ಮೆಲೊ ಹುರಿಯುವುದನ್ನು ನೋಡಿದ ನಂತರ ಡೇವಿಡ್ ಗಾರ್ಸಿಯಾ ಪಿಜ್ಜಾ ವ್ಯವಹಾರವನ್ನು ಇಲ್ಲಿ ಶುರು ಮಾಡಿದ್ರು.
ಅಲೆಕ್ಸಾಂಡ್ರಾ ಬ್ಲೋಡ್ಜೆಟ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಕ್ಲಿಪನ್ನು ಒಂದು ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ವಿಡಿಯೋ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್‌ ಪಡೆದಿದೆ. ಎಂತಹ ವಿಶಿಷ್ಟ ಅನುಭವ ಎಂದು ಒಬ್ಬರು ಬರೆದ್ರೆ ಇನ್ನೊಬ್ಬರು, ನಾನು ಖಂಡಿತವಾಗಿಯೂ ಇದನ್ನು ಪ್ರಯತ್ನಿಸುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.   

ಗ್ವಾಟೆಮಾಲಾದಲ್ಲಿ ಎಷ್ಟು ಜ್ವಾಲಾಮುಖಿ ಇದೆ? : ಗ್ವಾಟೆಮಾಲಾವು ಜ್ವಾಲಾಮುಖಿಗಳ ದೊಡ್ಡ ಸರಣಿಯಿಂದ ಆವೃತವಾಗಿದೆ. ಉತ್ತರಕ್ಕೆ ಮೆಕ್ಸಿಕೋ ಮತ್ತು ದಕ್ಷಿಣಕ್ಕೆ ಹೊಂಡುರಾಸ್ ಮತ್ತು ಸಾಲ್ವಡಾರ್  ನಡುವೆ, ಕನಿಷ್ಠ 300 ಜ್ವಾಲಾಮುಖಿ ರಚನೆಗಳಿವೆ. ಅವುಗಳಲ್ಲಿ 37 ಜ್ವಾಲಾಮುಖಿಗಳಾಗಿ ಗುರುತಿಸಲ್ಪಟ್ಟಿವೆ.

Follow Us:
Download App:
  • android
  • ios