Asianet Suvarna News Asianet Suvarna News
breaking news image

ಸೀ ಫೇಸ್ ಹೊಟೆಲ್ ರೂಂ ಬುಕ್ ಮಾಡಿದ ಯುವತಿಗೆ ಆಘಾತ ಜೊತೆಗೆ ತಡೆಯಲಾಗದ ನಗು, ಕಾರಣ ವೈರಲ್!

ಸಮುದ್ರಕ್ಕೆ ಮುಖ ಮಾಡಿರುವ ಸುಂದರ ಪ್ರಾಕೃತಿಯ ತಾಣದ ಹೊಟೆಲ್ ಬುಕ್ ಮಾಡಿದ್ದಾಳೆ. ಆದರೆ ಹೊಟೆಲ್‌ಗೆ ಭೇಟಿ ನೀಡಿದಾಗ ಆಘಾತವಾಗಿದೆ, ಆಕ್ರೋಶದ ಜೊತೆಗೆ ನಗು ತಡೆಯಲಾಗದ ಪರಿಸ್ಥಿತಿ ಎದುರಾಗಿದೆ.
 

Woman Scammed after she booked Sea face hotel room online during Italy Trip its just poster on building ckm
Author
First Published May 27, 2024, 11:00 PM IST

ಇಟಲಿ(ಮೇ.27) ಪ್ರವಾಸಕ್ಕೆ ತೆರಳು ಮುನ್ನ ಆನ್‌ಲೈನ್ ಮೂಲಕ ಹೊಟೆಲ್ ರೂಂ ಬುಕ್ ಮಾಡಿಕೊಳ್ಳುವುದು ಸುಲಭ ಹಾಗೂ ವೆಚ್ಚವೂ ಕಡಿಮೆ. ಇದೀಗ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತಿರುವ ಕಾರಣ ಇದಕ್ಕಿಂತ ಸುಲಭ ಮಾರ್ಗ ಮತ್ತೊಂದಿಲ್ಲ. ಜೊತೆಗೆ ಅಂತಿಮ ಕ್ಷಣದ ಗೊಂದಲಕ್ಕೆ ಅವಕಾಶವಿರುವುದಿಲ್ಲ. ಹೀಗೆ ಯವತಿಯೊಬ್ಬಳು ಆನ್‌ಲೈನ್ ಮೂಲಕ ಸೀ ಫೇಸ್ ಹೊಟೆಲ್ ರೂಂ ಬುಕ್ ಮಾಡಿದ್ದಾಳೆ. ಫೋಟೋಗಳನ್ನು ನೋಡಿ ಆನ್‌ಲೈನ್ ಮೂಲಕ ಕೊಠಡಿ ಬುಕ್ ಮಾಡಿದ್ದಾಳೆ. ಆದರೆ ಪ್ರವಾಸಕ್ಕೆ ತೆರಳಿ ತಂಗಲು ಹೊಟೆಲ್‌ಗೆ ಭೇಟಿ ನೀಡಿದಾಗ ಅಚ್ಚರಿಯಾಗಿದೆ. ಕಾರಣ ಸಮುದ್ರ ಮುಖ ಮಾಡಿರುವ(ಸೀ ಫೇಸ್) ಹೊಟೆಲ್ ಎಂದರೆ, ಹೊಟೆಲ್ ಕೊಠಡಿಯ ಗೋಡೆಗಳ ಮೇಲೆ ಸಮುದ್ರದ ಪೋಸ್ಟ್ ಅಂಟಿಸಲಾಗಿತ್ತು.

ಅರ್ಜೆಂಟೈನಾದ ಇನ್ಫ್ಲುಯೆನ್ಸರ್ ರಜಾ ದಿನದಲ್ಲಿ ಯೂರೋಪ್ ಪ್ರವಾಸ ಮಾಡಬೇಕೆಂಬ ಬಯಕೆ ಇಟ್ಟುಕೊಂಡಿದ್ದಳು. ಇದರಂತೆ ಇಟಲಿ ಪ್ರವಾಸಕ್ಕೆ ಎಲ್ಲಾ ತಯಾರಿ ಮಾಡಿದ್ದಾಳೆ. ಪ್ರವಾಸಿ ವೀಸಾ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ರೆಡಿ ಮಾಡಿದ್ದಾರೆ. ಇದರ ಜೊತೆಗೆ ಹೊಟೆಲ್ ರೂಂ ಬುಕಿಂಗ್, ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿ ಮಾಡಿದ್ದಾಳೆ.

ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ದಂಧೆ: ಓದದಿದ್ರೂ ಶೇ.99 ರಷ್ಟು ಅಂಕ ಸಿಗುತ್ತೆ..!

ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕಾದ ಕಾರಣ ಈ ತಾಣಗಳಿಗೆ ಕೇಂದ್ರವಾಗುವ ರೀತಿಯಲ್ಲಿ ಹೊಟೆಲ್ ರೂಂ ಬುಕ್ ಮಾಡಲು ಆನ್‌ಲೈನ್ ಮೂಲಕ ಸರ್ಚ್ ಮಾಡಿದ್ದಾಳೆ. ಈ ವೇಳೆ ಸೀ ಫೇಸ್ ಹೊಟೆಲ್ ರೂಂ ಜಾಹೀರಾತು ನೋಡಿದ್ದಾಳೆ. ಈ ಹೊಟೆಲ್ ಕುರಿತು ಸರ್ಚ್ ಮಾಡಿದ್ದಾಳೆ. ಈ ವೇಳೆ ಹಲವು ಫೋಟೋಗಳು ಕಣ್ಣಿಗೆ ಬಿದ್ದಿದೆ. ಸಮುದ್ರಕ್ಕೆ ಮುಖ ಮಾಡಿರುವ ಈ ಹೊಟೆಲ್ ಫೋಟೋಗಳು ಯುವತಿಗೆ ಮತ್ತಷ್ಟು ಮುದ ನೀಡಿತ್ತು.

ಬೆಲೆಯೂ ಇತರ ಹೊಟೆಲ್‌ಗೆ ಹೋಲಿಸಿದರೆ ಕಡಿಮೆ ಇತ್ತು. ಹೀಗಾಗಿ ಇದೇ ಹೋಟೆಲ್ ಇರಲಿ ಎಂದು ಬುಕ್ ಮಾಡಿದ್ದಾಳೆ. ಬಳಿಕ ಇಟಲಿ ಪ್ರವಾಸ ಕೈಗೊಂಡಿದ್ದಾಳೆ. ಇಟಲಿ ತಲಪಿದ ಬಳಿಕ ತಂಗಲು ಹೊಟೆಲ್‌ಗೆ ಭೇಟಿ ನೀಡಿದ್ದಾಳೆ. ಈ ವೇಲೆ ಅಚ್ಚರಿಯಾಗಿದೆ. ಕಾರಣ ಹೊಟೆಲ್ ಕಟ್ಟಡದ ಮುಂಭಾಗದಲ್ಲಿ ರಸ್ತೆ, ಹೊಟೆಲ್ ಕಂಪೌಂಡ್, ಹೊಟೆಲ್ ಕೊಠಡಿಯ ಗೋಡೆಗಳಲ್ಲಿ ಸುಂದರ ಸಮುದ್ರದ ದೊಡ್ಡ ದೊಡ್ಡ ಪೋಸ್ಟ್ ಅಂಟಿಸಲಾಗಿದೆ. 

ಎದ್ದರೂ, ನಿಂತರೂ, ಕುಳಿತರೂ ಇದೇ ಪೋಸ್ಟರ್ ಕಾಣಲಿದೆ. ಈ ದೃಶ್ಯ ನೋಡಿ ಯುವತಿಯ ಆಕ್ರೋಶ ಹೆಚ್ಚಾಗಿದೆ. ಆದರೆ ಹೊಟೆಲ್ ಬುಕ್ ಮಾಡಿ ಆಗಿದೆ. ಜೊತೆಗೆ ಬೇರೇ ದೇಶ. ಹೀಗಾಗಿ ಜಗಳ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ಮತ್ತೆ ಮೋಸಹೋಗದಂತೆ ಎಚ್ಚರಹಿಸುವುದೇ ಒಳಿತು ಎಂದುಕೊಂಡು ಪ್ರವಾಸ ಮುಗಿಸಿದ್ದಾಳೆ. ಬಳಿಕ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ರೀತಿ ಯಾರು ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾಳೆ.

ಮಹದೇವ ಬೆಟ್ಟಿಂಗ್ ಆಪ್ ಹಗರಣ : ಎಕ್ಸ್‌ಕ್ಯೂಸ್‌ ಮಿ ನಟ ಸಾಹಿಲ್ ಖಾನ್ ಬಂಧನ
 

Latest Videos
Follow Us:
Download App:
  • android
  • ios