Knowledge : ಈ ದೇಶದಲ್ಲಿ ಅಪರಾಧಿಗಳೇ ಇಲ್ಲ…! ಹಾಗಾದ್ರೆ ಜೈಲು ಇನ್ಯಾಕೆ?

ಅಪರಾಧ ಮಾಡಿದ ವ್ಯಕ್ತಿಗಳನ್ನು ಜೈಲಿನಲ್ಲಿಟ್ಟು ಶಿಕ್ಷೆಸೋದು ಕಾನೂನು. ಆದ್ರೆ ಅಪರಾಧಿಗಳೇ ಇಲ್ಲ ಎಂದಾಗ ಜೈಲಿನ ಅವಶ್ಯಕತೆ ಇರೋದಿಲ್ಲ. ಪ್ರಪಂಚದಲ್ಲಿ ಅಂಥ ದೇಶ ಕೂಡ ಇದೆ. ಅಲ್ಲಿ ಅಪರಾಧಿ ಮಾಡೋರು ಬೆರಳೆಣಿಕೆಯಷ್ಟಿದ್ದಾರೆ. 
 

Which Country Has No Prisoners

ಭಾರತದಲ್ಲಿ ಪ್ರತಿ ದಿನ ಅಪರಾಧಗಳ ಸಂಖ್ಯೆ ಹಾಗೂ ಅಪರಾಧಿಗಳ ಸಂಖ್ಯೆ ಹೆಚ್ಚಾಗ್ತಿದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಕ್ರೈಂ ಏರಿಕೆಯಾಗ್ತಿದೆ. ಅಪರಾಧಿಗಳಿಗೆ ಶಿಕ್ಷೆ ನೀಡಲು ಎಲ್ಲ ದೇಶಗಳಲ್ಲಿ ಪೊಲೀಸ್, ಕೋರ್ಟ್, ಜೈಲುಗಳಿರುತ್ತವೆ. ಕಳ್ಳತನ, ಅತ್ಯಾಚಾರ, ಕೊಲೆ ಸೇರಿದಂತೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಜೈಲಿನಲ್ಲಿ ಇಡಲಾಗುತ್ತದೆ. ನಮ್ಮ ದೇಶದಲ್ಲಿ ಜೈಲುಗಳು ತುಂಬುತ್ತಿದ್ದರೆ ಈ ಒಂದು ದೇಶದಲ್ಲಿ ಜೈಲು ಖಾಲಿಯಾಗ್ತಿದೆ. ಅಚ್ಚರಿ ಎನ್ನಿಸಿದ್ರೂ ಸತ್ಯ. ಯಾವ ದೇಶದಲ್ಲಿ ಅಪರಾಧಿಗಳ ಸಂಖ್ಯೆ ಕಡಿಮೆಯಾಗಿದ್ದು, ಜೈಲು ಮುಚ್ಚುವ ಹಂತದಲ್ಲಿದೆ ಎಂಬುದನ್ನು ನಾವಿಂದು ಹೇಳ್ತೆವೆ.

ಈ ದೇಶ (Country) ದಲ್ಲಿ ಕಡಿಮೆಯಾಗಿದೆ ಅಪರಾಧಿ (Criminal) ಗಳ ಸಂಖ್ಯೆ :  ಅಪರಾಧ ಕಡಿಮೆಯಾದ ದೇಶವೆಂದ್ರೆ ಅದು ನೆದರ್ಲ್ಯಾಂಡ್ (Netherland). ಇದನ್ನು ನಾವು ಅತ್ಯಂತ ಸುರಕ್ಷಿತ ದೇಶವೆನ್ನಬಹುದು. ಯಾಕೆಂದ್ರೆ ಇಲ್ಲಿ ಅಪರಾಧ (Crime) ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದ್ರಿಂದಾಗಿ ಜೈಲಿ (Jail) ಗೆ ಸೇರುವ ಖೈದಿಗಳು ಕಡಿಮೆಯಾಗಿದ್ದಾರೆ.  

ಚುಮು ಚುಮು ಚಳೀಲಿ ಸಂಗಾತಿ ಜೊತೆ ಇಂಥಾ Romantic Placeಗೆ ಹೋಗಿಲ್ಲಾಂದ್ರೆ ಹೇಗ್ ಹೇಳಿ

ಜೈಲಿನ ಬಾಗಿಲು ಮುಚ್ಚುವ ನಿರ್ಧಾರ : ಅಪರಾಧಿಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿರುವ ಕಾರಣ ನಾರ್ವೆ (Norway) ಯ ಕೈದಿಗಳನ್ನು ನೆದರ್ಲ್ಯಾಂಡ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಹಾಗೆಯೇ ನಾರ್ವೆ ಜೈಲನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗ್ತಿದೆ.  

ನೆದರ್‌ಲ್ಯಾಂಡ್‌ನ ಜೈಲಿನಲ್ಲಿ ಕೈದಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು? : ನಮ್ಮ ದೇಶದಲ್ಲಿ ಜೈಲಿಗೆ ಹೋಗುವವರ ಸಂಖ್ಯೆ ಹೆಚ್ಚಿದೆಯೇ ಹೊರತು ಅಲ್ಲಿಂದ ಹೊರ ಬರುವವರ ಸಂಖ್ಯೆ ಬಹಳ ಕಡಿಮೆ. ಹೊರಗೆ ಬಂದ ನಂತ್ರವೂ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗೋದಿಲ್ಲ. ಮತ್ತೆ ಅಪರಾಧ ಕೃತ್ಯಕ್ಕೆ ತೊಡಗುವವರು ಹೆಚ್ಚು. ಆದ್ರೆ ನೆದರ್ಲ್ಯಾಂಡ್ ನಲ್ಲಿ ಕೈದಿಯೊಬ್ಬ ಜೈಲಿಗೆ ಹೋದರೆ ಆದಷ್ಟು ಬೇಗ ಹೊರ ಬರುತ್ತಾನೆ. ಜೈಲಿನಿಂದ ಬಿಡುಗಡೆಯಾದ್ಮೇಲೆ ಮತ್ತೆ ಸಮಾಜದೊಂದಿಗೆ ಬೆಸೆಯುತ್ತಾನೆ. ನೆದರ್ಲ್ಯಾಂಡ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಭಿಯಾನ ಕೂಡ ನಡೆಯುತ್ತಿದೆ. ಹಾಗಾಗಿಯೇ ನೆದರ್ಲ್ಯಾಂಡ್ ನ ಎಲ್ಲಾ ಜೈಲುಗಳನ್ನು ಮುಚ್ಚಲಾಗ್ತಿದೆ.  

ಇಲ್ಲಿ ಅಪರಾಧಿಗಳ ಸಂಖ್ಯೆ ಎಷ್ಟು ಗೊತ್ತಾ? : ಸಂಶೋಧನೆಯೊಂದರ ಪ್ರಕಾರ, ನೆದರ್ಲ್ಯಾಂಡ್ ನ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಕೇವಲ 60 ಜನರು ಮಾತ್ರ ಅಪರಾಧ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲ, ಈ ಅಪರಾಧಿಗಳ ವಿರುದ್ಧ ಯಾವುದೇ ಗಂಭೀರ ಆರೋಪಗಳಿರುವುದಿಲ್ಲ. ಅಪರಾಧ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಜೈಲು ಖಾಲಿಯಾಗಿದೆ. 
ಮಾಧ್ಯಮ ವರದಿಗಳ ಪ್ರಕಾರ, 2013 ರಲ್ಲಿ ಈ ದೇಶದಲ್ಲಿ ಕೇವಲ 19 ಕೈದಿಗಳಿದ್ದರು. 2018 ರ ವೇಳೆಗೆ ಒಂದೇ ಒಂದು ಕೈದಿ ಜೈಲಿನಲ್ಲಿ ಇರಲಿಲ್ಲ. ಟೆಲಿಗ್ರಾಫ್ ಯುಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ ಒಟ್ಟು ಅಪರಾಧದಲ್ಲಿ ಶೇಕಡಾ 0.9 ರಷ್ಟು ಇಳಿಕೆಯಾಗಲಿದೆ ಎಂಬ ಸಂಗತಿ ತಿಳಿದು ಬಂದಿದೆ.  

ನೆದರ್ಲ್ಯಾಂಡ್ ನಲ್ಲಿ ಬಾಗಿಲು ಮುಚ್ಚಿದೆ ಇಷ್ಟು ಜೈಲು : ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳನ್ನು ಮುಚ್ಚಲಾಗಿದೆ. 2016 ರಲ್ಲಿ  ಆಮ್ಸ್ಟರ್ಡ್ಯಾಮ್ ಮತ್ತು ಬಿಜ್ಲ್ಮರ್ಬರ್ಗ್ ಜೈಲುಗಳನ್ನು ಮುಚ್ಚಲಾಯಿತು. ಜೈಲನ್ನು ಕೌಶಲ್ಯಾಭಿವೃದ್ಧಿ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಕೆಲವು ಕಡೆ ಜೈಲಿನ ಜಾಗ ಕಾಫಿ ಶಾಪ್ ಹಾಗೂ ಶಾಲೆಗಳಾಗಿ ರೂಪಗೊಂಡಿವೆ.

Knowledge : ವಿಮಾನದ ಸೀಟಿನ ಬಣ್ಣ ನೀಲಿ ಇರೋದ್ಯಾಕೆ?

ನೆದರ್ಲ್ಯಾಂಡ್ ಜೈಲಿನ ವ್ಯವಸ್ಥೆ : ನೆದರ್ಲ್ಯಾಂಡ್ ಜೈಲಿನಲ್ಲಿ ಕೈದಿಗಳನ್ನು ಕೂಡಿ ಹಾಕುವುದಿಲ್ಲ. ಎಲೆಕ್ಟ್ರಾನಿಕ್ ಎಂಗಲ್ ಮೊನಿಟರಿಂಗ್ ವಿಧಾನದ ಮೂಲಕ ಕೈದಿಗಳ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ. ಕೈದಿಗಳಿಗೆ ಹೊಸ ಹೊಸ ವಿಷ್ಯಗಳನ್ನು ಕಲಿಸುವ ಪ್ರಯತ್ನವನ್ನು ಪೊಲೀಸರು ಮಾಡ್ತಾರೆ. ಅವರನ್ನು ಮತ್ತೆ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಯನ್ನಾಗಿ ಬದಲಿಸುವುದು ಪೊಲೀಸರ ಕೆಲಸವಾಗಿರುತ್ತದೆ.  
 

Latest Videos
Follow Us:
Download App:
  • android
  • ios