Asianet Suvarna News Asianet Suvarna News

Knowledge : ವಿಮಾನದ ಸೀಟಿನ ಬಣ್ಣ ನೀಲಿ ಇರೋದ್ಯಾಕೆ?

ಬಣ್ಣಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಅನೇಕ ಮಾನಸಿಕ ಸಮಸ್ಯೆಗೆ ಬಣ್ಣ ಮದ್ದು ಅಂದ್ರೆ ತಪ್ಪಾಗೋದಿಲ್ಲ. ವಿಮಾನದಲ್ಲಿ ಕಾಡುವ ಭಯವನ್ನು ಶಾಂತಗೊಳಿಸುವ ಶಕ್ತಿ ಬಣ್ಣಕ್ಕಿದೆ. ಹಾಗಾಗಿಯೇ ವಿಮಾನದ ಸೀಟಿಗೆ ವಿಶೇಷ ಬಣ್ಣದ ಬಳಕೆ ಮಾಡೋದು.
 

Why Airplane Seats Are Blue
Author
First Published Jan 4, 2023, 3:20 PM IST

ಈಗಿನ ದಿನಗಳಲ್ಲಿ ವಿಮಾನ ಪ್ರಯಾಣ ಅಪರೂಪವೇನಲ್ಲ. ಮದ್ಯಮ ವರ್ಗದ ಜನರು ಕೂಡ ವಿಮಾನ ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ಅನೇಕರು ತಿಂಗಳಲ್ಲಿ ನಾಲ್ಕೈದು ಬಾರಿಯಾದ್ರೂ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ವಿಮಾನ ಪ್ರಯಾಣ ಆರಾಮದಾಯಕ ಮತ್ತು ಸಮಯ ಉಳಿಸುವಂತಹದ್ದಾಗಿದೆ. ನಾವಿಂದು ವಿಮಾನ ಪ್ರಯಾಣದ ಬಗ್ಗೆ ನಿಮಗೆ ಮಾಹಿತಿ ನೀಡ್ತಿಲ್ಲ. ವಿಮಾನದ ಸೀಟುಗಳ ಬಣ್ಣದ ಬಗ್ಗೆ ಮಾಹಿತಿ ನೀಡ್ತಿದ್ದೇವೆ.

ವಿಮಾನ (Airplane) ಏರುತ್ತಿದ್ದಂತೆ ನಿಮ್ಮ ಸೀಟ್ ಹುಡುಕಿ ಅದ್ರ ಮೇಲೆ ಕುಳಿತುಕೊಳ್ತಿರಿ. ಆದ್ರೆ ಅದ್ರ ಬಣ್ಣ (Color) ನೋಡೋರು ಕಡಿಮೆ. ನೋಡಿದ್ರೂ ಅದ್ರ ಬಗ್ಗೆ ಹೆಚ್ಚು ಆಲೋಚನೆ ಮಾಡೋದಿಲ್ಲ. ನೀವು ಗಮನಿಸಿರಬಹುದು, ಬಹುತೇಕ ವಿಮಾನುಗಳಲ್ಲಿ ಸೀಟುಗಳ ಬಣ್ಣ ನೀಲಿ (Blue) ಬಣ್ಣದಲ್ಲಿರುತ್ತದೆ. ನಾವಿಂದು ವಿಮಾನದಲ್ಲಿ ನೀಲಿ ಬಣ್ಣವನ್ನೇ ಹೆಚ್ಚು ಏಕೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ತಿಳಿಸ್ತೇವೆ.
ಬಣ್ಣ ಹಾಗೂ ಮನುಷ್ಯನ ಮಧ್ಯೆ ಅವಿನಾಭಾವ ಸಂಬಂಧವಿದೆ. ಬಣ್ಣಗಳು ಮನುಷ್ಯನ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಅನೇಕ ಬಣ್ಣಗಳು ನಮ್ಮ ಸ್ವಭಾವ ಬದಲಿಸುವ ಗುಣ ಹೊಂದಿರುತ್ತವೆ. ಅದೇನೇ ಇರಲಿ, ಈ ನೀಲಿ ಬಣ್ಣ ಹಾಗೂ ವಿಮಾನ ಸೀಟ್ ವಿಷ್ಯಕ್ಕೆ ಬಂದಾಗ ಅದಕ್ಕೂ ಅನೇಕ ಕಾರಣವಿದೆ.

ವಿಮಾನದ ಸೀಟಿಗೆ ಮೊದಲಿತ್ತು ಈ ಬಣ್ಣ : ಮೊದಲು ವಿಮಾನದ ಸೀಟಿಗೆ ಕೆಂಪು ಬಣ್ಣವನ್ನು ಬಳಸುತ್ತಿದ್ದರು. 1970 ಮತ್ತು 1980ರ ಸಮಯದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಆಸನಗಳ ಮೇಲೆ ಕೆಂಪು ಬಟ್ಟೆಯನ್ನು ಬಳಸಲು ಪ್ರಯತ್ನಿಸಿದವು. ಆದರೆ ಕೆಂಪು ಬಣ್ಣದ ಸೀಟ್ ಹೆಚ್ಚು ದಿನ ಇರಲಿಲ್ಲ. ವಿಮಾನ ಕಂಪನಿಗಳು ನಂತ್ರ ಸೀಟ್ ಬಣ್ಣವನ್ನು ನೀಲಿಗೆ ತಿರುಗಿಸಿದವು. ಕೆಂಪು ಬಣ್ಣವನ್ನು ಬಳಸದಿರಲು ಕಾರಣ, ಅದು ಮನುಷ್ಯನ ಸ್ವಭಾವದ ಮೇಲೆ ಬೀರುವ ಪ್ರಭಾವ. ಹೌದು, ಕೆಂಪು ಬಣ್ಣದ ಸೀಟ್ ಪ್ರಯಾಣಿಕರನ್ನು ಹೆಚ್ಚು ಆಕ್ರಮಣಕಾರಿಯಾಗಿ ಮಾಡುತ್ತದೆ ಎಂದು ಕಂಡು ಬಂತು. ಅಂದಿನಿಂದ ವಿಮಾನಯಾನ ಕಂಪನಿಗಳು ಸೀಟುಗಳ ಬಣ್ಣವನ್ನು ನೀಲಿಗೆ ಬದಲಿಸಿದವು. 

Interesting Facts: ಸ್ಟೂಲ್ ಮಧ್ಯೆ ರಂಧ್ರ ಇರೋಕೆ ಇದೇ ಕಾರಣ ನೋಡಿ

ಈ ಸಂಕೇತವನ್ನು ನೀಡುತ್ತೆ ನೀಲಿ ಬಣ್ಣ : ವಿಮಾನದ ಸೀಟುಗಳಿಗೆ ಯಾವಾಗಿನಿಂದ ನೀಲಿ ಬಣ್ಣವನ್ನು ಬಳಸಲಾಯಿತು ಎನ್ನುವ ಬಗ್ಗೆ ನಿಖರವಾಗಿ ಯಾವುದೇ ಮಾಹಿತಿಯಿಲ್ಲ. ಹಲವು ದಶಕಗಳ ಹಿಂದಿನಿಂದಲೇ ಇದು ಬಳಕೆಗೆ ಬಂದಿದೆ ಎನ್ನಲಾಗುತ್ತದೆ. ಈಗ್ಲೂ ನಾವು ಅನೇಕ ವಿಮಾನಗಳಲ್ಲಿ ನೀಲಿ ಬಣ್ಣದ ಸೀಟುಗಳನ್ನು ನೋಡಬಹುದು. ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ, ಜನರು ನೀಲಿ ಬಣ್ಣವನ್ನು ವಿಶ್ವಾಸಾರ್ಹತೆ ಮತ್ತು ಭದ್ರತೆಯೊಂದಿಗೆ ನೋಡ್ತಾರೆ. ನೀಲಿ ಬಣ್ಣ ಜನರಿಗೆ ಭದ್ರತೆಯ ಭಾವ ಮೂಡಿಸುತ್ತದೆ. 

ಕೊಳಕಿನಿಂದ ರಕ್ಷಣೆ : ವಿಮಾನಗಳನ್ನು ಸ್ವಚ್ಛವಾಗಿಡುವುದು ದೊಡ್ಡ ಕೆಲಸ. ಧೂಳು ಹಾಗೂ ಕೊಳಕು ಎದ್ದು ಕಾಣ್ತಿದ್ದರೆ ಅದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಬಹುದು. ಈ ನೀಲಿ ಬಣ್ಣ ಕೊಳಕು ಮತ್ತು ಧೂಳನ್ನು ಮುಚ್ಚಿಡುವ ಕೆಲಸ ಮಾಡುತ್ತದೆ. ಬೇಗ ನಿಮಗೆ ಧೂಳು ಗೋಚರಿಸುವುದಿಲ್ಲ. ಬೇರೆ ತಿಳಿ ಬಣ್ಣಕ್ಕಿಂತ ನೀಲಿ ಬಣ್ಣದಲ್ಲಿ ಕೊಳಕು ಬೇಗ ಕಾಣಿಸುವುದಿಲ್ಲ. ಅಲ್ಲದೆ ಈ ಬಣ್ಣ ಹೆಚ್ಚು ಆಕರ್ಷಕವಾಗಿ ಕಾಣುವ ಕಾರಣಕ್ಕೆ ಕೂಡ ವಿಮಾನದಲ್ಲಿ ನೀಲಿ ಬಣ್ಣದ ಸೀಟ್ ಬಳಕೆಗೆ ಬಂತು. 

Garuda Purana: ಸ್ನಾನ ಮಾಡದಿದ್ರೆ ಪಾಪ ಸುತ್ತಿಕೊಳ್ಳತ್ತಾ?

ಏರ್ ಫೋಬಿಯಾಕ್ಕೆ (Air Phobia) ಮದ್ದು : ಹೌದು, ಅನೇಕರಿಗೆ ವಿಮಾನ ಏರಲು ಭಯವಿರುತ್ತದೆ. ವಿಮಾನ ಹತ್ತುತ್ತಿದ್ದಂತೆ ಭಯ, ಚಡಪಡಿಕೆಗೆ ಒಳಗಾಗ್ತಾರೆ. ಈ ಏರ್ ಫೋಬಿಯಾವನ್ನು ಕಡಿಮೆ ಮಾಡುವ ಕೆಲಸವನ್ನು ನೀಲಿ ಬಣ್ಣ ಮಾಡುತ್ತದೆ. ದೀರ್ಘ ಹಾರಾಟದ ಸಮಯದಲ್ಲಿ ಏರ್ ಫೋಬಿಯಾದಿಂದ ಬಳಲುತ್ತಿರುವ ಜನರ ಕೋಪ ಮತ್ತು ಚಡಪಡಿಕೆಯನ್ನು ನೀಲಿ ಬಣ್ಣ ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ. 
 

Follow Us:
Download App:
  • android
  • ios