Asianet Suvarna News Asianet Suvarna News

ಎಲ್ಲಾ ನದಿಗಳೂ ಒಂದು ದಿಕ್ಕಿನಲ್ಲಿ ಹರಿದರೆ, ಈ ನದಿ ಮಾತ್ರ ಉಲ್ಟಾ ಹರಿಯುತ್ತೆ!

ನಮ್ಮ ದೇಶದ ನದಿಗಳನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಅವುಗಳನ್ನು ತಾಯಿ ಎಂದು ಪೂಜೆ ಮಾಡಲಾಗುತ್ತದೆ. ನಮ್ಮಲ್ಲಿ ಹರಿಯುವ ನದಿ ಅನೇಕ ವಿಶೇಷತೆ ಹೊಂದಿದೆ. ಒಂದು ವಿಶೇಷ ನದಿಯ ವಿವರ ಇಲ್ಲಿದೆ. 
 

What Causes Narmada River To Flow In Opposite Direction roo
Author
First Published Aug 14, 2023, 3:55 PM IST

ನಮ್ಮ ದೇಶದಲ್ಲಿ ಅನೇಕ ನದಿಗಳು ಹರಿಯುತ್ತವೆ. ನಮ್ಮ ದೇಶದ ರಾಜ್ಯಗಳ ಪೈಕಿ ಒಂದಾದ ಪಂಜಾಬ್ ನಲ್ಲಿ 5 ನದಿಗಳು ಹರಿಯುತ್ತದೆ. ಪಂಜಾಬ್ ಎಂಬ ಹೆಸರು ಎರಡು ಪದಗಳಿಂದ ಉಂಟಾಗಿದೆ. ‘ಪಂಜ್’ ಎಂದರೆ ಐದು ಮತ್ತು ‘ಆಬ್’ ಎಂದರೆ ನೀರು. ಈ ಎರಡೂ ಪದಗಳು ಸೇರಿ ಪಂಜಾಬ್ ಎಂಬ ಹೆಸರು ಬಂದಿದೆ. ಸಟ್ಲೆಜ್,  ಬಿಯಾಸ್, ರವಿ, ಚೆನಾಬ್ ಮತ್ತು ಝೀಲಂ ಎಂಬ ಐದು ನದಿಗಳು ಹರಿಯುವ ಕಾರಣ ಇದು ಪಂಚ ನದಿಗಳ ನಾಡು ಎಂದೇ ಖ್ಯಾತವಾಗಿದೆ.

ಪಂಜಾಬ್ (Punjab) ನಂತೆಯೇ ಕರ್ನಾಟಕದ ವಿಜಯಪುರ  ಜಿಲ್ಲೆಯಲ್ಲಿಯೂ ಐದು ನದಿಗಳು ಹರಿಯುತ್ತವೆ. ಈ ಕಾರಣಕ್ಕಾಗಿ ಈ ಜಿಲ್ಲೆಯನ್ನು ಪಂಜಾಬ್ ಆಫ್ ಕರ್ನಾಟಕ ಎಂದು ಕರೆಯಲಾಗುತ್ತದೆ. ಇಲ್ಲಿ ಕೃಷ್ಣಾ, ಭೀಮಾ, ದೋನಿ, ಘಟಪ್ರಭಾ, ಮಲಪ್ರಭಾ ಎನ್ನುವ ಐದು ನದಿಗಳು ಹರಿಯುತ್ತವೆ. ಇಷ್ಟೇ ಅಲ್ಲದೇ ಗೋದಾವರಿ, ಕಾವೇರಿ, ಶರಾವತಿ ಮುಂತಾದ ಅನೇಕ ನದಿಗಳು ಕೂಡ ನಮ್ಮಲ್ಲಿ ಹರಿಯುತ್ತವೆ. ಈ ಎಲ್ಲ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತವೆ. ಆದರೆ ನಮ್ಮ ದೇಶದ ಒಂದು ನದಿ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ವಿರುದ್ಧ ದಿಕ್ಕಿನಲ್ಲಿ ಹರಿಯುವ ಈ ನದಿ ಎಲ್ಲ ನದಿಗಳಿಗಿಂತ ಭಿನ್ನವಾಗಿದೆ.

ಬರೀ ಲಿಫ್ಟ್ ಪಡೆದೇ 20 ಸಾವಿರ ಕಿಲೋ ಮೀಟರ್ ಸಂಚರಿಸಿದ ವಿದೇಶಿ ಪ್ರಜೆ

ಒಂದೊಂದು ನದಿಗಳು ಒಂದೊಂದು ವಿಶೇಷತೆಯನ್ನು ಹಾಗೂ ಅದರದೇ ಆದ ಹಿನ್ನಲೆಯನ್ನು ಹೊಂದಿರುತ್ತವೆ. ಭಾರತ (India) ದಲ್ಲಿ ಹರಿಯುವ ನದಿಗಳ ಪೈಕಿ ನರ್ಮದಾ ನದಿ ಭಿನ್ನವಾಗಿದೆ. ನರ್ಮದಾ ನದಿಗೆ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ಇದು ನಮ್ಮ ದೇಶದ ದೊಡ್ಡ ನದಿಗಳ ಪೈಕಿ ಒಂದಾಗಿದೆ. ಇದಕ್ಕೆ ಕೆಲವು ಪೌರಾಣಿಕ ಕಾರಣಗಳು ಕೂಡ ಇವೆ. ಇಂದು ನಾವು ನರ್ಮದಾ ನದಿಯ ವಿಶೇಷತೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ನರ್ಮದಾ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯೋದ್ಯಾಕೆ?: ನರ್ಮದಾ ನದಿ ಹೀಗೆ ವಿರುದ್ಧ ದಿಕ್ಕಿನಲ್ಲಿ ಹರಿಯುವುದಕ್ಕೆ ಕಾರಣ ರಿಫ್ಟ್ ವ್ಯಾಲಿ. ಇದರ ಸ್ಲಫ್ ವಿರುದ್ಧ ದಿಕ್ಕಿನಲ್ಲಿ ಇರುವ ಕಾರಣ ನರ್ಮದಾ ನದಿ ಕೂಡ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ನದಿಗಳಲ್ಲಿ ನರ್ಮದಾ ನದಿಯೂ ಒಂದಾಗಿದೆ.

ಮದುವೆಗೆ ಒಪ್ಪದ ಯುವಕರು, ಬ್ಲೈಂಡ್ ಡೇಟಿಂಗ್‌ಗೆ ಪ್ರೋತ್ಸಾಹಿಸುತ್ತಿದೆ ಸರಕಾರ!

ಪುರಾಣಗಳು ಏನು ಹೇಳುತ್ತೆ? : ನರ್ಮದಾ ನದಿ ಹೀಗೆ ವಿರುದ್ಧ ದಿಕ್ಕಿನಲ್ಲಿ ಹರಿಯಲು ಪೌರಾಣಿಕ ಹಿನ್ನಲೆ ಕೂಡ ಇದೆ. ನರ್ಮದೆಗೆ ಸೋನಭದ್ರ ಎನ್ನುವವನ ಮೇಲೆ ಪ್ರೇಮಾಂಕುರವಾಗುತ್ತೆ. ಆದರೆ ಸೋನಭದ್ರ ನರ್ಮದೆಯ ಗೆಳತಿ ಜುಹಿಲಾ ಎನ್ನುವವಳನ್ನು ಪ್ರೀತಿಸುತ್ತಾನೆ. ತಾನು ಪ್ರೀತಿಸಿದ ಹುಡುಗ ಬೇರೊಬ್ಬಳ ಪ್ರೀತಿಯಲ್ಲಿದ್ದಾನೆ ಎಂದು ತಿಳಿದ ನರ್ಮದೆಗೆ ಬೇಸರವಾಗುತ್ತೆ. ಭಗ್ನಪ್ರೇಮಿಯಾದ ನರ್ಮದೆ ಬೇಸರವಾಗಿ ತಿರುಗಿ ವಾಪಸ್ಸು ಹೋಗುತ್ತಾಳೆ. ಹಾಗಾಗಿ ನರ್ಮದೆಯ ಹರಿವು ವಿರುದ್ಧ ದಿಕ್ಕಿಗಿದೆ ಎನ್ನುವ ನಂಬಿಕೆ ಇದೆ. ಅದರ ಕುರುಹಾಗಿ ಇಂದಿಗೂ ನಾವು ಒಂದು ಕಡೆ ಸೋನಭದ್ರ ನದಿಯಿಂದ ನರ್ಮದಾ ನದಿ ಬೇರೆಯಾಗಿ ಹೋಗುವುದನ್ನು ಕಾಣಬಹುದು.

ಶಿವನ ಪುತ್ರಿ ಈ ನರ್ಮದೆ (Daughter of Shiva): ನರ್ಮದೆಯನ್ನು ಈಶ್ವರನ ಪುತ್ರಿ ಎಂದು ಕೂಡ ಹೇಳಲಾಗುತ್ತೆ. ಶಿವನು ಏಕಾಗ್ರತೆಯಿಂದ ತಪಸ್ಸಿಗೆ ಕುಳಿತ ಸಮಯದಲ್ಲಿ ಶಿವನ ಮೈಯಿಂದ ಹರಿದ ಬೆವರೇ ನರ್ಮದಾ ನದಿ ಪ್ರತೀತಿ ಇದೆ. ಈಶ್ವರನಿಂದ ಜನಿಸಿದ ನರ್ಮದೆಯನ್ನು ರುದ್ರ ಕನ್ಯೆ ಎಂದು ಕೂಡ ಕರೆಯಲಾಗುತ್ತದೆ. ಹಾಗಾಗಿಯೇ ಈ ನದಿಯ ನೀರು ಪವಿತ್ರ ಎನ್ನಲಾಗುತ್ತದೆ. ಕೇವಲ ಇದರ ದರ್ಶನದಿಂದಲೇ ಅನೇಕ ಪಾಪಕರ್ಮಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ.
 

Follow Us:
Download App:
  • android
  • ios