80 ಲಕ್ಷ ಜನರನ್ನು ಬಲಿತೆಗೆದುಕೊಂಡ ಈ ಪರ್ವತದೊಳಗೆ ಏನಿದೆ ಗೊತ್ತಾ?
ಜಗತ್ತಿನಲ್ಲಿ ಅಪಾಯಕಾರಿ ಜಾಗಗಳ ಸಂಖ್ಯೆ ಸಾಕಷ್ಟಿದೆ. ಅನೇಕ ಪ್ರದೇಶಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಇಂದು ನಾವು ಲಕ್ಷಾಂತರ ಮಂದಿಯನ್ನು ಬಲಿಪಡೆದ ಪರ್ವತವೊಂದರ ಬಗ್ಗೆ ನಿಮಗೆ ಹೇಳ್ತೇವೆ.
ಜಗತ್ತಿನಲ್ಲಿರುವ ಎಷ್ಟೋ ನಗರಗಳು ಹಲವಾರು ರೀತಿಯ ವೈವಿಧ್ಯತೆಯನ್ನು ಹೊಂದಿದೆ. ಕೆಲವು ಸ್ಥಳಗಳು ಇಂದಿಗೂ ನಿಗೂಢವಾಗಿಯೇ ಇವೆ. ಅಂತಹ ಸ್ಥಳಗಳಲ್ಲಿನ ರಹಸ್ಯವನ್ನು ಭೇದಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಕೆಲವೊಮ್ಮೆ ಮನುಷ್ಯ ತನ್ನ ಹುಂಬತನದಿಂದ ರಹಸ್ಯವನ್ನು ಭೇದಿಸುತ್ತೇನೆ ಎಂದು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಎಷ್ಟೋ ಉದಾಹರಣೆಗಳಿವೆ.
ಪುರಾತನ (Ancient) ಕಾಲದಲ್ಲಿನ ಎಷ್ಟೋ ದೇವಾಲಯ (Temple) ಗಳ ಅಡಿಯಲ್ಲಿ ಹಾಗೂ ಪರ್ವತಗಳ ಅಡಿಯಲ್ಲಿ ಧನಸಂಪತ್ತು, ಚಿನ್ನ, ಬೆಳ್ಳಿ ಮುಂತಾದವು ಇರುತ್ತವೆ ಎಂಬುದನ್ನು ನಾವು ಕೇಳಿದ್ದೇವೆ. ಅಂತಹ ಸಂಪತ್ತನ್ನು ಕಾಯಲು ಸರ್ಪಗಳು ಇರುತ್ತವೆ ಎಂಬ ಪ್ರತೀತಿಯೂ ಇದೆ. ಬೊಲಿವಿಯಾ (Bolivia) ಎಂಬ ದೇಶದ ಒಂದು ಪರ್ವತ (Mountain) ದ ಅಡಿಯಲ್ಲಿಯೂ ಟನ್ ಗಟ್ಟಲೆ ಬೆಳ್ಳಿ ಅಡಗಿದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಇದನ್ನು ಅತ್ಯಂತ ಶ್ರೀಮಂತ ಪರ್ವತ ಎಂದೂ ಕರೆಯುತ್ತಾರೆ. ಈ ಪರ್ವತ ಕೂಡ ತನ್ನಲ್ಲಿ ಎಷ್ಟೋ ರಹಸ್ಯಗಳನ್ನು ಹೊತ್ತುಕೊಂಡಿದೆ.
ಭಾರತೀಯ ಪ್ರವಾಸಿಗರಿಗೆ 5 ವರ್ಷ ಅವಧಿಯ ವೀಸಾ ಸೌಲಭ್ಯ ಕಲ್ಪಿಸಿದ ದುಬೈ;ವರ್ಷದಲ್ಲಿ180 ದಿನ ನೆಲೆಸಲು ಅವಕಾಶ
ಜನರನ್ನು ನುಂಗುವ ಶ್ರೀಮಂತ ಪರ್ವತ ಇದು : ದಕ್ಷಿಣ ಅಮೆರಿಕದಲ್ಲಿರುವ ಬೊಲಿವಿಯಾ ದೇಶವು ಅನೇಕ ಬೆಳ್ಳಿಯ ಗಣಿಗಳನ್ನು ಹೊಂದಿದೆ. ಇದರ ಜೊತೆಗೆ ಇಲ್ಲಿ ಸೆರೊ ರಿಕೊ ಎಂಬ ನಿಗೂಢ ಪರ್ವತವೂ ಇದೆ. ಈ ಪರ್ವತ ಈಗಾಗಲೇ ಸುಮಾರು 80 ಲಕ್ಷ ಜನರನ್ನು ನುಂಗಿದೆ. ಈ ಪರ್ವತದ ಕಾರಣದಿಂದಲೇ ಪ್ರತಿ ತಿಂಗಳು ಇಲ್ಲಿ 14 ಮಹಿಳೆಯರು ವಿಧವೆಯರಾಗುತ್ತಾರೆ. ಇದರ ಹಿಂದೆ ಒಂದು ಕಾರಣವೂ ಅಡಗಿದೆ.
ಸೆರೊ ರಿಕೊ ಪರ್ವತದ ಕೆಳಗೆ ಸುಮಾರು 500 ವರ್ಷದ ಹಿಂದಿನ ಬೆಳ್ಳಿಯ ಖಜಾನೆಯಿದೆ. ಇದರಲ್ಲಿ ಸಾವಿರಾರು ಟನ್ ಬೆಳ್ಳಿಯಿದೆ. ಒಂದು ಕಾಲದಲ್ಲಿ ಸ್ಪೇನ್ ದೊರೆಗಳು ಇಲ್ಲಿ ಸಾಕಷ್ಟು ಗಣಿಗಾರಿಕೆ ನಡೆಸಿ ಪರ್ವತವನ್ನು ಲೂಟಿ ಮಾಡಿದ್ದರು. ಸ್ಪ್ಯಾನಿಷ್ ವಸಾಹತುಶಾಹಿ ಯುಗದಲ್ಲಿ ಪರ್ವತದಿಂದ ಎರಡು ಬಿಲಿಯನ್ ಔನ್ಸ್ ಬೆಳ್ಳಿಯನ್ನು ಹೊರತೆಗೆಯಲಾಯಿತು ಎಂದು ಹೇಳಲಾಗುತ್ತದೆ. ಸೆರೊ ರಿಕೊ ಪರ್ವತದಲ್ಲಿ ಗಣಿಗಾರಿಕೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಗಣಿಗಾರಿಕೆಯ ಸಮಯದಲ್ಲಿ ಅದರ ಸುರಂಗದಲ್ಲಿ ಸಿಲುಕಿ 80 ಲಕ್ಷಕ್ಕೂ ಹೆಚ್ಚು ಪುರುಷರು ಪ್ರಾಣ ಕಳೆದುಕೊಂಡರು. ಈ ಕಾರಣಕ್ಕಾಗಿ ಈ ಪರ್ವತವನ್ನು ಪುರುಷರನ್ನು ನುಂಗುವ ಪರ್ವತ ಎನ್ನಲಾಗುತ್ತದೆ. ಇಂದಿಗೂ ಇಲ್ಲಿ 15000 ಕ್ಕೂ ಹೆಚ್ಚು ಮಂದಿ ಇಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಅನೇಕ ಮಂದಿ ಸಾವನ್ನಪ್ಪುತ್ತಲೇ ಇದ್ದಾರೆ. ಇಲ್ಲಿ ಕೆಲಸ ಮಾಡುವ ಯಾರೊಬ್ಬರೂ 40 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ.
ಸುರಂಗಗಳಿಂದಲೇ ತುಂಬಿಹೋಗಿರುವ ಈ ಪರ್ವತ ಪುರುಷ ಹಾಗೂ ಯುವಕರಿಗೆ ಸಾವಿನ ಬಲೆಯನ್ನು ಬೀಸುತ್ತದೆ. ಗಣಿಗಾರಿಕೆಯ ಕಾರಣ ಈ ಪರ್ವತದಲ್ಲಿ ಸಾವಿರಾರು ರಂದ್ರಗಳಾಗಿವೆ. ಇದರಿಂದ ಪರ್ವತ ಕುಸಿಯುವ ಭೀತಿಯೂ ಎದುರಾಗಿದೆ. ಇಲ್ಲಿ ಹೆಚ್ಚು ಧೂಳು ಇರುವ ಕಾರಣ ಕಾರ್ಮಿಕರ ಶ್ವಾಸಕೋಶಕ್ಕೆ ಹಾನಿಯಾಗಿ ಅವರು ಬೇಗ ಸಾವನ್ನಪ್ಪುತ್ತಾರೆ. ಜನರು ಸಾವಿನಿಂದ ಬಚಾವಾಗಲು ಇಲ್ಲಿನ ದುಷ್ಟ ದೇವರಾದ ಎಲ್ ಟಿಯೊವನ್ನು ಪ್ರಾರ್ಥಿಸುತ್ತಾರೆ. ಪ್ರತಿ ಸುರಂಗದಲ್ಲೂ ಇರುವ ಎಲ್ ಟಿಯೋ ಪ್ರತಿಮೆಗೆ ಆಲ್ಕೋಹಾಲ್, ಸಿಗರೇಟ್ ಮತ್ತು ಕೋಕಾ ಎಲೆಗಳನ್ನು ಅರ್ಪಿಸುತ್ತಾರೆ. ಪ್ರತಿ ಶುಕ್ರವಾರ ಈ ದೆವ್ವಕ್ಕೆ ನೈವೇದ್ಯವನ್ನೂ ಸಲ್ಲಿಸುತ್ತಾರೆ.
ಮಹಾಬಲೇಶ್ವರದಿಂದ ಮಾಲ್ಶೆಜ್ ಘಾಟ್‌ವರೆಗೆ ಮಹಾರಾಷ್ಟ್ರದ ಬೆಸ್ಟ್ ಹಿಲ್‌ಸ್ಟೇಷನ್ಸ್
ಸೆರೊ ರಿಕೊ ಪರ್ವತದಲ್ಲಿ ಕೆಲಸ ಮಾಡುವ ಜನರು ಸಿಲಿಕೋಸಿಸ್ ನಿಂದಲೇ ಸಾಯುತ್ತಾರೆ. ಶ್ವಾಸಕೋಶದೊಳಗೆ ಸೇರುವ ಧೂಳಿನಿಂದ ಜ್ವರ, ಎದೆ ನೋವು, ತೂಕ ನಷ್ಟ, ದೌರ್ಬಲ್ಯ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೋಕಾ ಎಲೆ ಧೂಳನ್ನು ಫಿಲ್ಟರ್ ಮಾಡುತ್ತದೆ ಎನ್ನುವ ಕಾರಣಕ್ಕೆ ಇಲ್ಲಿನ ಜನರು ಕೋಕಾ ಎಲೆಗಳನ್ನು ಜಗಿಯುತ್ತಾರೆ.