Asianet Suvarna News Asianet Suvarna News

ಭಾರತೀಯ ಪ್ರವಾಸಿಗರಿಗೆ 5 ವರ್ಷ ಅವಧಿಯ ವೀಸಾ ಸೌಲಭ್ಯ ಕಲ್ಪಿಸಿದ ದುಬೈ;ವರ್ಷದಲ್ಲಿ180 ದಿನ ನೆಲೆಸಲು ಅವಕಾಶ

ದುಬೈ ಸರ್ಕಾರ ಭಾರತೀಯ ಪ್ರವಾಸಿಗರಿಗೆ  5 ವರ್ಷ ಅವಧಿಯ ಬಹು-ಪ್ರವೇಶ ವೀಸಾ ಸೌಲಭ್ಯ ಕಲ್ಪಿಸಿದೆ. ಒಂದು ವರ್ಷದಲ್ಲಿ ಗರಿಷ್ಠ ಒಟ್ಟು 180 ದಿನಗಳ ಕಾಲ ದುಬೈಯಲ್ಲಿರಲು ಈ ವೀಸಾ ಅವಕಾಶ ನೀಡುತ್ತದೆ. 
 

Dubai allows five year multiple entry visa for Indian tourists key facts you need to know anu
Author
First Published Feb 26, 2024, 5:38 PM IST

ದುಬೈ (ಫೆ.26): ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ದುಬೈ ಐದು ವರ್ಷಗಳ ಅವಧಿಯ  ಬಹು -ಪ್ರವೇಶ ವೀಸಾ ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ಭಾರತ ಹಾಗೂ ದುಬೈ ನಡುವಿನ ಪ್ರಯಾಣವನ್ನು ಉತ್ತೇಜಿಸಲು ದುಬೈ ಮುಂದಾಗಿದೆ.  ಈ ವೀಸಾವನ್ನು ಅರ್ಜಿ ಸ್ವೀಕರಿಸಿದ ಕೇವಲ ಎರಡರಿಂದ ಐದು ಕೆಲಸದ ದಿನಗಳ ಅವಧಿಯಲ್ಲಿ ಪಡೆಯಬಹುದಾಗಿದೆ. ಈ ವೀಸಾ ದುಬೈಯಲ್ಲಿ 90 ದಿನಗಳ ಕಾಲ ನೆಲೆಸಲು ಅವಕಾಶ ಕಲ್ಪಿಸುತ್ತದೆ. ಆ ಬಳಿಕ ಮತ್ತೆ 90 ದಿನಗಳ ಕಾಲ ವಿಸ್ತರಿಸಲು ಅವಕಾಶವಿದೆ. ಈ ಮೂಲಕ ಒಂದು ವರ್ಷದಲ್ಲಿ ಗರಿಷ್ಠ ಒಟ್ಟು 180 ದಿನಗಳ ಕಾಲ ದುಬೈಯಲ್ಲಿರಲು ಈ ವೀಸಾ ಅವಕಾಶ ನೀಡುತ್ತದೆ. 2023ರ ಜನವರಿ ಹಾಗೂ ಡಿಸೆಂಬರ್ ನಡುವೆ ದುಬೈಗೆ ದಾಖಲೆಯ 2.46 ಶತಕೋಟಿ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತದಿಂದ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ದುಬೈ ಈ ವಿಶೇಷ ವೀಸಾ ಪರಿಚಯಿಸಿದೆ.

2022ರಲ್ಲಿ ದುಬೈಗೆ 1.84 ಶತಕೋಟಿ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರು. ಇನ್ನು 2019ರಲ್ಲಿ 1.97 ಶತಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. 2023ರಲ್ಲಿ ಇದು ದಾಖಲೆಯ  2.46 ಶತಕೋಟಿ ಮುಟ್ಟಿರೋದನ್ನು ಗಮನಿಸಿದ ದುಬೈ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಇಲಾಖೆ (ಡಿಇಟಿ), ಬಹು -ಪ್ರವೇಶ ವೀಸಾ ಸೌಲಭ್ಯದ ಮೂಲಕ ಇನ್ನಷ್ಟು ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮುಂದಾಗಿದೆ. ಈ ವೀಸಾದಿಂದ ದುಬೈಗೆ ಉದ್ಯಮ ಹಾಗೂ ಪ್ರವಾಸ ಈ ಎರಡೂ ಉದ್ದೇಶದಿಂದ ಭೇಟಿ ನೀಡುವವರಿಗೆ ನೆರವಾಗಲಿದೆ.

ಪ್ರಧಾನಿ ಮೋದಿಗೆ ಭಾರತಕ್ಕೆ ಗೌರವ : ಬುರ್ಜ್ ಖಲೀಫಾದಲ್ಲಿ ವಿಶೇಷ ಪದಗಳ ಲೈಟಿಂಗ್ಸ್‌ ಅಲಂಕಾರ

ಭಾರತದ ಜೊತೆಗಿನ ದುಬೈ ಬಾಂಧವ್ಯವನ್ನು ಪ್ರಶಂಸಿಸಿದ ದುಬೈ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಇಲಾಖೆ (ಡಿಇಟಿ) ಪ್ರಾದೇಶಿಕ ಮುಖ್ಯಸ್ಥ ಅಲಿ ಹಬೀಬ್, 2023ರಲ್ಲಿ ಭಾರತದಿಂದ ದುಬೈಗೆ ಭೇಟಿ ನೀಡಿದವರ ಸಂಖ್ಯೆ ಅಸಾಧಾರಣವಾದದ್ದು, ಇದು ದುಬೈ ಪ್ರವಾಸೋದ್ಯಮ ವಲಯದಲ್ಲಿ ದಾಖಲೆಯ ನಿರ್ವಹಣೆ ತೋರಲು ನೆರವು ನೀಡಿದೆ ಎಂದು ಹೇಳಿದ್ದಾರೆ.

ವರದಿಗಳ ಅನ್ವಯ 2023ರಲ್ಲಿ ದುಬೈಗೆ ಭೇಟಿ ನೀಡಿದ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 17.15 ಶತಕೋಟಿ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಮೂಲಕ ದಾಖಲೆ ಸೃಷ್ಟಿಯಾಗಿದೆ. 2022ರಲ್ಲಿ 14.36 ಶತಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಅಂದರೆ 2022ಕ್ಕೆ ಹೋಲಿಸಿದರೆ 2023ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಪ್ರಮಾಣದಲ್ಲಿ ಶೇ.19.4ರಷ್ಟು ಏರಿಕೆಯಾಗಿದೆ. ದುಬೈಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಪ್ರಮಾಣದಲ್ಲಿ ಶೇ.34ರಷ್ಟು ಪ್ರಗತಿ ಕಂಡುಬಂದಿದೆ. ಇದು 2023ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲು ಮಹತ್ವದ ಕೊಡುಗೆ ನೀಡಿದೆ. 

ದುಬೈಯನ್ನು ಉದ್ಯಮ, ಹೂಡಿಕೆ ಹಾಗೂ ಪ್ರವಾಸೋದ್ಯಮದ ಮಹತ್ವದ ಕೇಂದ್ರವ್ನಾಗಿ ಮಾಡುವ ಅಲ್ಲಿನ ಸರ್ಕಾರದ D33 ಗುರಿ ಸಾಧಿಸಲು ಭಾರತ ಮಹತ್ವದ ನೆರವು ನೀಡುತ್ತಿದೆ. ಹೀಗಾಗಿ ಐದು ವರ್ಷಗಳ ಬಹು ಪ್ರವೇಶದ ವೀಸಾ ಭಾರತದ ಜೊತೆಗಿನ ಒಪ್ಪಂದಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ನೆರವು ನೀಡಲಿದೆ. ಅಲ್ಲದೆ, ಇದು ಭಾರತೀಯ ಪ್ರವಾಸಿಗರಿಗೆ ಉತ್ತಮ ಅನುಭವಗಳನ್ನು ಹೆಚ್ಚಿಸಿಕೊಳ್ಳಲು ನೆರವು ನೀಡೋದು ಮಾತ್ರವಲ್ಲ, ಬದಲಿಗೆ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಹಭಾಗಿತ್ವವನ್ನು ಕೂಡ ಹೆಚ್ಚಿಸುವ ನಿರೀಕ್ಷೆಯಿದೆ. 

'ಯುಎಇ ನನ್ನ ಮತ್ತೊಂದು ಮನೆಯ ರೀತಿ..' ದೇವಸ್ಥಾನ ಉದ್ಘಾಟನೆಗೂ ಮುನ್ನ ಮೋದಿ ಮಾತು!

ದುಬೈಗೆ ಭಾರತೀಯ ಪ್ರವಾಸಿಗರು ಅಲ್ಲಿನ ಸಂಸ್ಕೃತಿಯ ಅನುಭವ ಪಡೆಯಲು, ಅಲ್ಲಿನ ಸುಂದರ ತಾಣಗಳನ್ನು ನೋಡಲು, ಉದ್ಯಮಕ್ಕಾಗಿ, ದುಬಾರಿ ಶಾಪಿಂಗ್  ಹೀಗೆ ನಾನಾ ಉದ್ದೇಶಗಳಿಗೆ ಭೇಟಿ ನೀಡುತ್ತಾರೆ.  


 

Follow Us:
Download App:
  • android
  • ios