Asianet Suvarna News Asianet Suvarna News

ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶದ ಪಟ್ಟಿ ಬಿಡುಗಡೆ, ಭಾರತಕ್ಕೆ ಎಷ್ಟನೇ ಸ್ಥಾನ?

ವರ್ಲ್ಡ್ ಎಕನಾಮಿಕ್ ಫೋರಮ್ ಇದೀಗ ಪ್ರವಾಸೋದ್ಯಮ ಪಟ್ಟಿ ಬಿಡುಗಡೆ ಮಾಡಿದೆ. ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತಕ್ಕೆ ಎಷ್ಟನೇ ಸ್ಥಾನ?
 

WEF release Global Tourism index USA leads top of table India on 39th position ckm
Author
First Published May 28, 2024, 8:13 PM IST

ನವದೆಹಲಿ(ಮೇ.28) ಪ್ರವಾಸೋದ್ಯಮ ಆಯಾ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಲವು ದೇಶಗಳು ಪ್ರವಾಸೋದ್ಯಮದ ಮೇಲೆ ಬೆಳೆದು ನಿಂತಿದೆ. ಇದೀಗ ವರ್ಲ್ಡ್ ಎಕಾನಮಿಕ್ ಫೋರಮ್ ವಿಶ್ವದ ಟಾಪ್ ಪ್ರವಾಸೋದ್ಯಮ ದೇಶಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. 2023ರಲ್ಲಿ ಅಮೆರಿಕ 80 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ನಂಬರ್ 1 ಎನಿಸಿಕೊಂಡಿದೆ.

119 ದೇಶಗಳಲ್ಲಿ ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ. ದೇಶಗಳಲ್ಲಿನ ಪ್ರವಾಸೋದ್ಯಮ ತಾಣಗಳು, ಪ್ರವಾಸಿಗರ ಭೇಟಿ, ಅವರ ಪ್ರತಿಕ್ರಿಯೆ, ಆತಿಥ್ಯ, ಶುಚಿತ್ವ ಸೇರಿದಂತೆ ಹಲವು ಮಾನದಂಡಗಳ ಮೂಲಕ ವಿಶ್ವದ ಟಾಪ್ ಪ್ರವಾಸೋದ್ಯಮ ದೇಶಗಳ ಪಟ್ಟಿ ತಯಾರಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡರೆ, 70 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿರುವ ಸ್ಪೇನ್ 2ನೇ ಸ್ಥಾನದಲ್ಲಿದೆ.

ಮಂಜು ಮುಸುಕಿದ ಮಂಜಿನ ನಗರಿ ಮಡಿಕೇರಿ; ಕೂರ್ಗ್‌ ಪ್ರವಾಸಕ್ಕಿದು ಸುಸಮಯ

ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಚೀನಾ, ಇಟಲಿ, ಸ್ವಿಟ್ಜರ್‌ಲೆಂಡ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2021ರಲ್ಲಿ 50ನೇ ಸ್ಥಾನದಲ್ಲಿದ್ದ ಸೌದಿ ಅರೇಬಿಯಾ ಇದೀಗ 41ನೇ ಸ್ಥಾನಕ್ಕೇರಿದೆ. ಉಜಬೇಕಿಸ್ತಾನ 94ರಿಂದ 78 ಸ್ಥಾನಕ್ಕೇರಿದೆ. 119 ರಾಷ್ಟ್ರಗಳ ಪೈಕಿ ಭಾರತ 39ನೇ ಸ್ಥಾನದಲ್ಲಿದೆ.

2024ರಲ್ಲಿ ಬಿಡುಗಡೆಯಾದಿರುವ ವಿಶ್ವದ ಪ್ರವಾಸೋದ್ಯಮ ದೇಶಗಳ ಪೈಕಿ ಭಾರತ 39ನೇ ಸ್ಥಾನದಲ್ಲಿದೆ. 2021ರಲ್ಲಿ ಭಾರತ 54ನೇ ಸ್ಥಾನದಲ್ಲಿತ್ತು. ಆದರೆ ಭಾರತದಲ್ಲಿನ ಪ್ರವಾಸೋದ್ಯಮ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣ ಭಾರತ ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರ ಜೊತೆಗೆ ಹಲವು ಪ್ರವಾಸಿ ತಾಣಗಳು ವಿಶ್ವಮಟ್ಟದಲ್ಲಿ ಭಾರಿ ಸಂಚಲನ ಸಷ್ಟಿಸಿದೆ. ಪ್ರಮುಖವಾಗಿ ಪ್ರಧಾನಿ ಮೋದಿ ಭೇಟಿ ಬಳಿಕ ಲಕ್ಷದ್ವೀಪಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತ ಬಹುತೇಕ ಎಲ್ಲಾ ವಿವಿಧದ ನೈಸರ್ಗಿಕ ಸೌಂದರ್ಯ ಹೊಂದಿದೆ. ಜೊತೆಗೆ ವಿಶ್ವ ವಿಖ್ಯಾತ ಪಾರಪಂರಿಕ ತಾಣಗಳನ್ನೂ ಹೊಂದಿದೆ. ದೇವಸ್ಥಾನ, ಐತಿಹಾಸಿಕ ಸ್ಥಳಗಳ ಮೂಲಕ ಭಾರತ 39ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಭಾರತದ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಅನ್ನೋ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರತ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದೆ. ಇದರ ಜೊತೆಗೆ ಶುಚಿತ್ವಕ್ಕೂ ಪ್ರಾಮುಖ್ಯತ್ತೆ ನೀಡುತ್ತಿರುವುದೇ ಈ ಬದಲಾವಣೆಗೆ ಕಾರಣವಾಗಿದೆ.

ಉತ್ತಮ ಮಳೆಗೆ ಜೀವಕಳೆ ಪಡೆದ ಕಾವೇರಿ: ಚುರುಕುಗೊಂಡ ಕೊಡಗು ಪ್ರವಾಸೋದ್ಯಮ
 

Latest Videos
Follow Us:
Download App:
  • android
  • ios