ಕಪ್ಪು ಬಣ್ಣದ ಸೂಟ್ ಕೇಸ್ ಪ್ರವಾಸಕ್ಕೆ ಸೂಕ್ತವಲ್ಲ; ಇದ್ರಲ್ಲೇನಿದೆ ಅಂತದ್ದು..?

ಬಣ್ಣ ಬಣ್ಣದ ಬಟ್ಟೆ, ವಸ್ತುಗಳಿಗಿಂತ ಬಹುತೇಕರಿಗೆ ಕಪ್ಪು ಇಲ್ಲವೆ ಬಿಳಿ ಬಣ್ಣ ಹೆಚ್ಚು ಆಪ್ತವಾಗಿರುತ್ತದೆ. ಅದೇ ಕಾರಣಕ್ಕೆ ತಮ್ಮ ಟ್ರ್ಯಾವೆಲ್ ಬ್ಯಾಗ್ ಬಣ್ಣವನ್ನೂ ಕಪ್ಪಿಗೆ ಬದಲಿಸಿಕೊಂಡಿರ್ತಾರೆ. ಆದ್ರೆ ಇದ್ರ ಬಗ್ಗೆ ತಜ್ಞರು ಹೇಳೋದೇನು?

Warning Security Expert To Avoid Travelling With Black Color Suitcase Uk roo

ಪ್ರವಾಸಕ್ಕೆ ಹೋಗುವಾಗ ಇಲ್ಲವೆ ಕೆಲಸದ ನಿಮಿತ್ತ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಬೆಳೆಸುವಾಗ ಸೂಟ್ ಕೇಸ್, ಟ್ರಾವೆಲ್ ಬ್ಯಾಗ್ ನಮಗೆ ಕಂಫರ್ಟ್ ಫೀಲ್ ನೀಡುತ್ತೆ. ವಿಮಾನದಲ್ಲಿ ಪ್ರಯಾಣಿಸುವ ಬಹುತೇಕರು ಸೂಟ್ ಕೇಸ್ ಅಥವಾ ಟ್ರಾವೆಲ್ ಬ್ಯಾಗ್ ಬಳಸ್ತಾರೆ. ನಿಮ್ಮ ಬಳಿಯೂ ಟ್ರಾವೆಲ್ ಬ್ಯಾಗ್ ಕಲೆಕ್ಷನ್ ಇರಬಹುದು. ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಬೆಳೆಸುವಾಗ ಬ್ಯಾಗ್ ಗೆ ಆದ ಕೊಳೆ ಕಾಣಿಸಬಾರದು ಎನ್ನುವ ಕಾರಣಕ್ಕೆ ಬಹುತೇಕರು ಕಪ್ಪು ಬಣ್ಣದ ಟಾವೆಲ್ ಬ್ಯಾಗ್ ಬಳಸ್ತಾರೆ. ಎಲ್ಲ ಡ್ರೆಸ್ ಗೆ ಇದು ಮ್ಯಾಚ್ ಆಗುತ್ತೆ ಅನ್ನೋದು ಇನ್ನೊಂದು ಕಾರಣ. ಕೆಲವರು ಬಳಿ ಕಪ್ಪು ಬಣ್ಣದ ನಾನಾ ಸೂಟ್ ಕೇಸ್, ಬ್ಯಾಗ್ ಗಳನ್ನು ನೀವು ನೋಡ್ಬಹುದು. ವಿಮಾನ ಪ್ರಯಾಣದ ಸಮಯದಲ್ಲಿ ನೀವು ಕಪ್ಪು ಬ್ಯಾಗ್ ಅಥವಾ ಕಪ್ಪು ಸೂಟ್ ಗೇಸ್ ಬಳಸದಿರುವುದು ಒಳ್ಳೆಯದು. ಕಪ್ಪು ಸೂಟ್ ಗೇಸ್ ಬಳಸಿದ್ರೆ ಏನಾಗುತ್ತೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇದೆ.

ಸೆಕ್ಯೂರಿಟಿ (Security) ಟ್ರಾವೆಲ್ ತಜ್ಞ ಜಾನಿ ಜೆಟ್, ಜನರಿಗೆ ಕಪ್ಪು ಬಣ್ಣದ ಸೂಟ್ ಕೇಸ್ ಬಳಸದಂತೆ ಸಲಹೆ ನೀಡಿದ್ದಾರೆ. ಜಾನ್ ಜೆಟ್ (John Jett)  ಬ್ರಿಟನ್‌ ನಿವಾಸಿಯಾಗಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಅವರು ಇದ್ರ ಬಗ್ಗೆ ಬರೆದಿದ್ದಾರೆ. ಕಪ್ಪು ಬಣ್ಣದ ಸೂಟ್ ಕೇಸ (Suit Case) ನ್ನು ಬಹುತೇಕ ಪ್ರಯಾಣಿಕರು ಬಳಸ್ತಾರೆ. ಇದ್ರಿಂದ ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಬಣ್ಣ, ಡಿಸೈನ್ ಒಂದೇ ಇರುವ ಕಾರಣ, ನಿಮ್ಮ ಬ್ಯಾಗ್ ಪತ್ತೆ ಮಾಡೋದು ಕಷ್ಟ ಎಂಬುದು ಅವರ ಅಭಿಪ್ರಾಯ. 

ಸೂರ್ಯೋದಕ್ಕೂ ಮುನ್ನ ಎದ್ದು ಈ ಜನ ಪೂರ್ತಿ ಗ್ರಾಮ ಸುತ್ತುತ್ತಾರೆ; ಯಾಕೆ ಗೊತ್ತಾ?

ಕಪ್ಪು ಬಣ್ಣದ ಸೂಟ್ಕೇಸ್ ಜೊತೆ ನೀವು ಪ್ರಯಾಣ ಮಾಡ್ತಿದ್ದರೆ ನಿಮ್ಮ ಸೂಟ್ ಕೇಸ್ ಕಳ್ಳತನವಾಗುವ ಅಥವಾ ಕಳೆದುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಸೂಟ್ ಕೇಸನ್ನು ಪತ್ತೆ ಮಾಡೋದು ನಿಮಗೆ ಕಠಿಣವಾಗುತ್ತದೆ ಎನ್ನುತ್ತಾರೆ ಅವರು. ನಿಮಗೆ ವಿಚಿತ್ರ ಎನ್ನಿಸಿದ್ರೂ ಇದು ಸತ್ಯ ಎಂದ ಜಾನಿ ಜೆಟ್, ಸೂಟ್‌ಕೇಸ್‌ನ ಬಣ್ಣವು ನಿಮ್ಮ ಪ್ರಯಾಣದ ಅನುಭವದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. 

ದೇಶದ ಮೊದಲ ಚರ್ಚ್, ಮಸೀದಿ ಎಲ್ಲಿದೆ? ಏನಿವುಗಳ ವಿಶೇಷತೆ?

ಗಾಢ ಬಣ್ಣದ ಮತ್ತು ಕಪ್ಪು ಬಣ್ಣದ ಸೂಟ್‌ಕೇಸ್‌ಗಳನ್ನು ಬಳಸಬೇಡಿ ಎಂದು ಜಾನಿ ಜೆಟ್, ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಒಂದ್ವೇಳೆ ನಿಮ್ಮ ಸೂಟ್ ಕೇಸ್ ಬಣ್ಣ ಕಪ್ಪಲ್ಲದೆ ಬೇರೆ ಬಣ್ಣದ್ದಾಗಿದ್ದಲ್ಲಿ ಅದನ್ನು ಹುಡುಕುವುದು ಸುಲಭ ಎನ್ನುತ್ತಾರೆ ವಿಮಾನ ನಿಲ್ದಾಣದ ಲಗೇಜ್ ಸೆಕ್ಷನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ. ಕೊನೆಯಲ್ಲಿ ನೀವು ಬ್ಯಾಗ್ ಎಲ್ಲಿ ನೋಡಿದ್ದಿರಿ, ಅದರ ಬಣ್ಣ ಯಾವುದು ಅಂತಾ ಹೇಳಿದ್ರೂ ಪೊಲೀಸರು ಪತ್ತೆ ಮಾಡ್ತಾರೆ. ಅದೇ ಕಪ್ಪು ಬಣ್ಣದ್ದಾಗಿದ್ದರೆ, ಅನೇಕರ ಬಳಿ ಇದೇ ಬಣ್ಣದ ಸೂಟ್ ಕೇಸ್ ಇರುವ ಕಾರಣ ಪತ್ತೆ ಮಾಡೋದು ಕಠಿಣವಾಗುತ್ತೆ. 

ಒಂದ್ವೇಳೆ ನಿಮ್ಮ ಬಳಿ ಈಗಾಗಲೇ ಕಪ್ಪು ಬಣ್ಣದ ಸೂಟ್ ಕೇಸ್ ಇದ್ದಲ್ಲಿ ಅದಕ್ಕೆ ಗುರುತು ಮಾಡಿ. ಟ್ಯಾಗ್ ಹಾಕಿ ಎನ್ನುತ್ತಾರೆ ಜಾನಿ ಜೆಟ್. ಅನೇಕರು ಕಪ್ಪು ಬಣ್ಣದ ಟ್ರಾವೆಲ್ ಬ್ಯಾಗ್ ಬಳಸ್ತಾರೆ. ಅವರಿಗೆ ವಿಮಾನದಿಂದ ಕೆಳಗಿಳಿದಾಗ ತಮ್ಮ ಬ್ಯಾಗ್ ಗುರುತಿಸಲು ತುಂಬಾ ಸಮಯ ಹಿಡಿಯುತ್ತದೆ. ನೀವು ಯಾವುದೇ ಬ್ರ್ಯಾಂಡ್ ನ ಸೂಟ್ ಕೇಸ್ ಖರೀದಿ ಮಾಡಿ, ಆದ್ರೆ ಕಪ್ಪು ಬಣ್ಣದ ಸೂಟ್ ಕೇಸ್ ಖರೀದಿ ಮಾಡಬೇಡಿ ಎನ್ನುತ್ತಾರೆ ಜಾನಿ ಜೆಟ್. 

ಕೆಲ ದಿನಗಳ ಹಿಂದೆ ಜರ್ಮನ್ ವಿಮಾನ ನಿಲ್ದಾಣದಲ್ಲೂ, ಜನರಿಗೆ ಬಣ್ಣ ಬಣ್ಣದ ಸೂಟ್ ಕೇಸ್ ತರುವಂತೆ ಸೂಚನೆ ನೀಡಲಾಗಿತ್ತು. ಇದ್ರಿಂದ ಸಮಯ ಉಳಿಯುತ್ತದೆ ಎಂಬುದು ವಿಮಾನ ಸಿಬ್ಬಂದಿ ಅಭಿಪ್ರಾಯವಾಗಿತ್ತು. 

Latest Videos
Follow Us:
Download App:
  • android
  • ios