Travel Tips : ಗಿಜಿಗಿಜಿ ಜೀವನಕ್ಕೆ ಶಾಂತಿ ಬೇಕೆಂದ್ರೆ ಇಲ್ಲಿಗೆ ಹೋಗಿ

ಪ್ರವಾಸಕ್ಕೆ ಹೋಗ್ಬೇಕು, ಆದ್ರೆ ಎಲ್ಲಿಗೆ ಹೋಗ್ಬೇಕು ಎಂಬುದು ಅನೇಕರಿಗೆ ತಿಳಿಯೋದಿಲ್ಲ. ಪ್ರವಾಸಿ ತಾಣದಲ್ಲಿ ಗಲಾಟೆ ಇರ್ಬಾರದು, ಯಾವುದೇ ಒತ್ತಡ ಇರ್ಬಾರದು, ಮನಸ್ಸು ಪ್ರಶಾಂತಗೊಳ್ಬೇಕು, ಹೊಸ ಚೈತನ್ಯ ಬೇಕು ಎನ್ನುವವರು ಇದನ್ನೋದಿ.
 

Visit These Buddhist Monasteries Around Ladakh

ಹಬ್ಬದ ಋತು ಶುರುವಾಗಿದೆ. ಒಂದಾದ್ಮೇಲೆ ಒಂದು ಹಬ್ಬ ಬರುವ ಕಾರಣ ಕಚೇರಿಗಳಿಗೆ ರಜಾ. ಮಕ್ಕಳಿಗೆ ರಜಾ. ಇದೇ ಕಾರಣಕ್ಕೆ ಜನರು ಪ್ರವಾಸಕ್ಕೆ ಪ್ಲಾನ್ ಮಾಡ್ತಿದ್ದಾರೆ. ಜನರು ವಿಹಾರ ತಾಣಗಳು, ಗಿರಿಧಾಮಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಬಯಸ್ತಾರೆ. ಕೆಲವರಿಗೆ ಗಿಜಿಗುಡುವ ಪ್ರವಾಸಿ ತಾಣಗಳಿಗೆ ಹೋಗಲು ಮನಸ್ಸಿರುವುದಿಲ್ಲ. ಕೊರೊನಾ ಭಯ ಕೂಡ ಇರುವ ಕಾರಣ ಜನರು ಹೆಚ್ಚು ಜನಜಂಗುಳಿ ಇರುವ, ಗಲಾಟೆಯಿರುವ ಪ್ರವಾಸಿ ತಾಣದ ಬದಲು ಶಾಂತವಾಗಿರುವ ಪ್ರದೇಶವನ್ನು ಆಯ್ಕೆ ಮಾಡ್ತಿದ್ದಾರೆ. ಶಾಂತವಾದ ವಾತಾವರಣ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇಂದಿನ ಕಾಲದಲ್ಲಿ ಶಾಂತಿಯಿಂದ ಕೂಡಿದ ಗಮ್ಯಸ್ಥಾನವನ್ನು ಕಂಡುಹಿಡಿಯುವುದು ಕಷ್ಟ. ಭಾರತದಲ್ಲಿ ಅನೇಕ ಅತ್ಯುತ್ತಮ ಮಠಗಳಿವೆ.ಅಲ್ಲಿ ಆಧ್ಯಾತ್ಮಿಕ ಶಾಂತಿ ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮನ್ನು ನೀವು ಅರಿಯಲು ಈ ಜಾಗ ಸಹಕಾರಿ.  ಶಾಂತವಾದ ಪರಿಸರ, ಸುಂದರ ಪ್ರದೇಶ, ಶಾಂತಿ ಮತ್ತು ವಿಶ್ರಾಂತಿ ಸ್ಥಳಗಳಿಗೆ ಹೋಗಲು ಬಯಸಿದರೆ  ನೀವು ಲಡಾಖ್ ಸುತ್ತಮುತ್ತಲಿನ  ಬೌದ್ಧ ಮಠಗಳಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳಬಹುದು. ಲಡಾಖ್ ನಲ್ಲಿ ಗಮನ ಸೆಳೆಯುವ ಬೌದ್ಧ ಮಠಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.

ಲಡಾಖ್ (Ladakh) ನಲ್ಲಿದೆ ಪ್ರಸಿದ್ಧ ಮಠ (Math) : 

ಕೀ ಮಠ : ಹಿಮಾಚಲ ಪ್ರದೇಶ (Himachal Pradesh) ದ ಲಾಹೌಲ್ ಸ್ಪಿತಿಯಲ್ಲಿರುವ ಅತಿ ದೊಡ್ಡ ಮಠ ಇದಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 4,166 ಮೀಟರ್. ಒಂದು ಸಾವಿರ ವರ್ಷಗಳಷ್ಟು ಹಳೆಯದಾಗಿರುವುದೇ ಈ ಮಠದ ದೊಡ್ಡ ವೈಶಿಷ್ಟ್ಯ. ಇದರ ಹೊರತಾಗಿಯೂ  ಈ ಮಠವು ಇಂದಿಗೂ ಬಹಳ ಸುಂದರವಾಗಿದೆ. ಮಠವನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಪ್ರಾಚೀನ ವರ್ಣಚಿತ್ರಗಳು ಮತ್ತು ಬೌದ್ಧ ಕಲೆಗಳು ಇಂದಿಗೂ ಮಠದಲ್ಲಿ ಲಭ್ಯವಿದೆ. ಈ ಮಠದಲ್ಲಿ ಪ್ರತಿ ವರ್ಷ 300 ಲಾಮಾಗಳಿಗೆ ಧಾರ್ಮಿಕ ಜ್ಞಾನ ನೀಡಲಾಗುತ್ತದೆ. ಶಾಂತಿ ಮತ್ತು ವಿಶ್ರಾಂತಿಯನ್ನು ಹುಡುಕುತ್ತಿದ್ದರೆ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.    

ತಬೋ ಮಠ : ಈ ಮಠವನ್ನು ಭಾರತದ ಪ್ರಾಚೀನ ಮಠಗಳಲ್ಲಿ ಒಂದು ಎಂದು  ಪರಿಗಣಿಸಲಾಗಿದೆ. ಈ ಮಠವು ಸ್ಪಿತಿ ನದಿಯ ದಡದಲ್ಲಿದೆ. ಈ ಮಠವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮಠವನ್ನು 996 ರಲ್ಲಿ ಲೋಚವಾ ರಿಂಗ್ಚೆನ್ ಜಾಂಗ್ಪೋ ಸ್ಥಾಪಿಸಿದರು. ಈ ಮಠವು ಸಹ ಸಾವಿರ ವರ್ಷಗಳಷ್ಟು ಹಳೆಯದಾಗಿದೆ. ತಬೋ ಮಠದಲ್ಲಿ ಒಟ್ಟು 9 ದೇವಾಲಯಗಳಿವೆ. ಇವುಗಳಲ್ಲಿ 3 ದೇವಾಲಯಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳಲ್ಲಿ ಚುಕ್ಲಖಂಡ ದೇವಾಲಯದಲ್ಲಿ ಬುದ್ಧನ ಸಂಪೂರ್ಣ ಜೀವನವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ: ಭಾರತದ ಅತ್ಯಂತ ಸುಂದರವಾದ ಸಣ್ಣ ಪಟ್ಟಣಗಳು

ಲಮಯೂರು ಮಠ :  ಈ ಮಠವು ಕಾಶ್ಮೀರದ ಲೇಹ್‌ನಿಂದ ಕೇವಲ 127 ಕಿಮೀ ದೂರದಲ್ಲಿರುವ ಲಾಮಯೂರು ಗ್ರಾಮದಲ್ಲಿದೆ. ಮಠಕ್ಕೆ ಈ ಗ್ರಾಮದ ಹೆಸರಿಡಲಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ 3,510 ಮೀಟರ್. ಲಮಯೂರು ಗ್ರಾಮವು ತನ್ನ ಪ್ರಾಕೃತಿಕ ಸೌಂದರ್ಯಕ್ಕಾಗಿ ಮೂನ್‌ಲ್ಯಾಂಡ್ ಎಂದೂ ಕರೆಯಲ್ಪಡುತ್ತದೆ. ಈ ಮಠವನ್ನು 11 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು. ಇದು ಲಡಾಖ್‌ನಲ್ಲಿರುವ ಅತ್ಯಂತ ಹಳೆಯ ಮಠವಾಗಿದೆ.

ಬರೀ ಲಡಾಖ್ ಮಾತ್ರವಲ್ಲ ನೀವು ಭಾರತದ ಬೇರೆ ಬೇರೆ ಪ್ರದೇಶದಲ್ಲಿ ಸಾಕಷ್ಟು ಸುಂದರ ಮಠಗಳನ್ನು ನೋಡಬಹುದು. ಲಡಾಖ್ ಸಾಧ್ಯವಿಲ್ಲವೆಂದಾದ್ರೆ ನೀವು ಸಿಕ್ಕಿಂ ಗೆ ಭೇಟಿ ನೀಡ್ಬಹುದು. 

ಇದನ್ನೂ ಓದಿ: ಮಳೆಯಲ್ಲಿ ಕಣ್ಮನ ಸೆಳೆಯುತ್ತಿದೆ ಹಂಪಿಯ ಸ್ಮಾರಕಗಳ ಸೊಬಗು

ರುಮ್ಟೆಕ್ ಮಠ : ಸಿಕ್ಕಿಂನಲ್ಲಿರುವ ಅತ್ಯಂತ ಸುಂದರವಾದ ಮತ್ತು ದೊಡ್ಡ ಮಠಗಳಲ್ಲಿ ಒಂದಾದ ರುಮ್ಟೆಕ್ ಮಠವು 12 ನೇ ಶತಮಾನದಲ್ಲಿ ನಿರ್ಮಿಸಲಾಗದ ಮಠ. 3 ಅಂತಸ್ತಿನ ಮಠವು ವಿವಿಧ ತಂಗ್ಕಾ ವರ್ಣಚಿತ್ರಗಳು, ಅಪರೂಪದ ಬೌದ್ಧ ಕಲಾಕೃತಿಗಳು, ಭಗವಾನ್ ಬುದ್ಧನ 1001 ಚಿಕಣಿ ಚಿನ್ನದ ಮಾದರಿಗಳು ಮತ್ತು ಅನೇಕ ಆಕರ್ಷಕ ವಸ್ತುಗಳನ್ನು ಹೊಂದಿದೆ.  

Latest Videos
Follow Us:
Download App:
  • android
  • ios