ಶಕ್ತಿಯಿದ್ದಾಗ ದುಡಿದಿದ್ದಾಯ್ತು, ನಿವೃತ್ತಿ ನಂತ್ರವಾದ್ರೂ ನೆಮ್ಮದಿ ಬೇಕು, ಜಂಜಾಟದಿಂದ ಮುಕ್ತಿಬೇಕು, ವೃದ್ಧರಿಗೆ ಎಲ್ಲ ಸೌಲಭ್ಯ ಸುಲಭವಾಗಿ ಸಿಗ್ಬೇಕು ಎನ್ನುವವರಿಗೆ ಕೆಲ ದೇಶಗಳು ಹೇಳಿ ಮಾಡಿಸಿದಂತಿವೆ. ನಿವೃತ್ತಿ ಬದುಕಿಗೆ ಯಾವ ದೇಶ ಬೆಸ್ಟ್ ಗೊತ್ತಾ?
ಹಳ್ಳಿಗಳಲ್ಲಿರುವ ಜಮೀನು ಮಾರಿ ಪಟ್ಟಣ ಸೇರೋದು ಹಳೆ ಟ್ರೆಂಡ್ ಆಯ್ತು. ಈಗೇನಿದ್ರೂ ಜನರ ಕಣ್ಣು ಫಾರೆನ್ ಮೇಲಿದೆ. ಅನೇಕರು ವಿದ್ಯೆ ಕಲಿಯೋ ನೆಪದಲ್ಲಿಯೇ ವಿದೇಶ ಸೇರ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಕೆಲ್ಸ ಅಂತ ವಿದೇಶಕ್ಕೆ ಹೋದವರು ವಾಪಸ್ ಆಗ್ತಿಲ್ಲ. ಇನ್ನೊಂದಿಷ್ಟು ಮಂದಿ ಇಲ್ಲೇ ಕಲಿತು, ಇಲ್ಲೇ ಕೆಲ್ಸ ಮಾಡಿ ನಿವೃತ್ತಿಯ ನೆಮ್ಮದಿ ಜೀವನಕ್ಕೆ ವಿದೇಶಕ್ಕೆ ವಲಸೆ ಹೋಗ್ತಿದ್ದಾರೆ. ನೀವೂ ನಿವೃತ್ತಿ ನಂತ್ರ ಫಾರೆನ್ ನಲ್ಲಿ ಸೆಟಲ್ ಆಗ್ಬೇಕು ಎನ್ನುವ ಐಡಿಯಾದಲ್ಲಿದ್ರೆ ಮೊದ್ಲು ಒಂದಿಷ್ಟು ರಿಸರ್ಚ್ ಮಾಡಿ. ನಿವೃತ್ತಿ ಬದುಕಿಗೆ ಯಾವ ದೇಶ ಬೆಸ್ಟ್ ಅನ್ನೋದ್ರ ಮಾಹಿತಿ ಇಲ್ಲಿದೆ.
ನಿವೃತ್ತಿ ನಂತ್ರದ ಜೀವನಕ್ಕೆ ಈ ದೇಶ ಬೆಸ್ಟ್
ಗ್ರೀಸ್ : ನೀವು ನಿವೃತ್ತಿಯ ನಂತರ ವಿದೇಶದಲ್ಲಿ ನೆಲೆಸಲು ಯೋಚಿಸುತ್ತಿದ್ದರೆ, ಗ್ರೀಸ್ ಉತ್ತಮ ಆಯ್ಕೆ. ಮಾಸಿಕ ನಿಯತಕಾಲಿಕೆ ಮತ್ತು ವೆಬ್ಸೈಟ್ ಇಂಟರ್ನ್ಯಾಷನಲ್ ಲಿವಿಂಗ್ನ ವಾರ್ಷಿಕ ಜಾಗತಿಕ ನಿವೃತ್ತಿ ಸೂಚ್ಯಂಕದ ಪ್ರಕಾರ, 2026 ರಲ್ಲಿ ನಿವೃತ್ತಿಯ ನಂತರ ವಾಸಿಸಲು ಗ್ರೀಸ್ ಅತ್ಯುತ್ತಮ ದೇಶವಾಗಿದೆ. ಆರಾಮವಾಗಿ ಸಿಗುವ ಮನೆ, ಕೈಗೆಟಗುವ ಲೈಫ್ಸ್ಟೈಲ್ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯಿಂದಾಗಿ ಗ್ರೀಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್
ಜೀವನ ವೆಚ್ಚ, ಆರೋಗ್ಯ ಸೇವೆಯ ಗುಣಮಟ್ಟ, ಅತ್ಯುತ್ತಮ ವಸತಿ ಆಯ್ಕೆಗಳು, ವೀಸಾ ನಿಯಮಗಳು, ಹವಾಮಾನ ಪರಿಸ್ಥಿತಿ ಸೇರಿದಂತೆ ಅನೇಕ ವಿಷ್ಯಗಳನ್ನು ಪರಿಗಣಿಸಿ ಸಂಭಾವ್ಯ ನಿವೃತ್ತಿ ತಾಣಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ವರದಿ ಪ್ರಕಾರ, ಪ್ರವಾಸಿಗರು ಗ್ರೀಸ್ನ ಕೈಗೆಟುಕುವ ಜೀವನಶೈಲಿ ಮತ್ತು ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಂತಹ ಆಧುನಿಕ ಸೌಲಭ್ಯಗಳಿಗೆ ಆಕರ್ಷಿತರಾಗಿದ್ದಾರೆ. ಅನೇಕ ವರ್ಷಗಳಿಂದ, ಪೋರ್ಚುಗಲ್ ಮತ್ತು ಸ್ಪೇನ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದವು. ಆದ್ರೆ ಇತ್ತೀಚಿನ ವೀಸಾ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳು ನಿವೃತ್ತರನ್ನು ಬೇರೆಡೆ ನೋಡುವಂತೆ ಮಾಡುತ್ತಿವೆ. ಗ್ರೀಸ್, ನಿವೃತ್ತಿ ಹೊಂದಿದ ಜನರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಡ್ತಿದೆ.
ಪನಾಮ : ವೀಸಾ/ನಿವೃತ್ತಿದಾರರ ಪ್ರಯೋಜನಗಳ ವಿಭಾಗದಲ್ಲಿ ಪನಾಮ ಮುಂಚೂಣಿಯಲ್ಲಿದೆ. ಇದು ಬಹಳ ಹಿಂದಿನಿಂದಲೂ ಅಮೆರಿಕಾ ನಿವೃತ್ತರನ್ನು ತನ್ನತ್ತ ಸೆಳೆಯುತ್ತಿದೆ. ಶೇಕಡಾ 50 ರಷ್ಟು ಮನರಂಜನೆಯ ರಿಯಾಯಿತಿ, ಶೇಕಡಾ 30 ರಷ್ಟು ಸಾರಿಗೆ ರಿಯಾಯಿತಿ, ಶೇಕಡಾ 25ರಷ್ಟು ವಿಮಾನ ದರದ ರಿಯಾಯಿತಿ, ವೈದ್ಯಕೀಯ ಬಿಲ್ಗಳ ಮೇಲೆ ಶೇಕಡಾ15ರಷ್ಟು ರಿಯಾಯಿತಿ ನಿವೃತ್ತರನ್ನು ಆಕರ್ಷಿಸುತ್ತಿದೆ.
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಕೋಸ್ಟಾ ರಿಕಾ : ತನ್ನ ಹವಾಮಾನದಿಂದಾಗಿ ಕೋಸ್ಟಾರಿಕಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದೇಶವು ತನ್ನ ಕಾಲು ಭಾಗದಷ್ಟು ಭೂಮಿಯನ್ನು ಮಳೆಕಾಡಾಗಿ ಸಂರಕ್ಷಿಸುತ್ತದೆ. ನವೀಕರಿಸಬಹುದಾದ ಮೂಲಗಳಿಂದ ಶೇಕಡಾ 99 ರಷ್ಟು ಶಕ್ತಿಯನ್ನು ಪಡೆಯುತ್ತದೆ. ಇದರ ನಿಕೋಯಾ ಪರ್ಯಾಯ ದ್ವೀಪವು ವಿಶ್ವದ ಐದು ನೀಲಿ ವಲಯಗಳಲ್ಲಿ ಒಂದಾಗಿದೆ. ಇಲ್ಲಿನ ನಿವಾಸಿಗಳು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ನಿವೃತ್ತಿಯ ನಂತರ ಈ ದೇಶದಲ್ಲಿ ವಾಸಿಸುವುದು ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಫ್ರಾನ್ಸ್ : ಪಟ್ಟಿಯಲ್ಲಿ ಫ್ರಾನ್ಸ್ ಕೂಡ ಸ್ಥಾನ ಪಡೆದಿದೆ. ಅತ್ಯುತ್ತಮ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಫ್ರಾನ್ಸ್ ಉತ್ತಮವಾಗಿದೆ. ಆರೋಗ್ಯದ ದೃಷ್ಟಿಯಿಂದ ಫ್ರಾನ್ಸ್ 97 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಫ್ರೆಂಚ್ ಶಾಸಕರು ವಿದೇಶಿ ಪಿಂಚಣಿದಾರರಿಗೆ ಉಚಿತ ಆರೋಗ್ಯ ರಕ್ಷಣೆ ನೀಡದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದ್ವೇಳೆ ಈ ಬಗ್ಗೆ ಕಠಿಣ ನಿರ್ಧಾರ ಹೊರಗೆ ಬಂದ್ರೂ ಫ್ರಾನ್ಸ್ ನಿವೃತ್ತರಿಗೆ ಉತ್ತಮ ಸ್ಥಳವಾಗಿಯೇ ಉಳಿಯಲಿದೆ. ಹವಾಮಾನ, ಸಂಸ್ಕೃತಿ ಮತ್ತು ಪಾಕಪದ್ಧತಿಗೆ ಹೆಸರುವಾಸಿಯಾಗಿದೆ.

