ವಿಮಾನ ಲೇಟ್ : ಸಿಟ್ಟಿಗೆದ್ದ ಜನ ಬೈದಾಡಿದ್ರೂ ತಾಳ್ಮೆ ವಹಿಸಿದ ಗಗನಸಖಿಗೆ ವ್ಯಾಪಕ ಶ್ಲಾಘನೆ

ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ವಿಳಂಬವಾಗಿದ್ದಕ್ಕೆ ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಳಂಬದ ಬಗ್ಗೆ ಮಾಹಿತಿ ನೀಡದ್ದಕ್ಕೆ ಪ್ರಯಾಣಿಕರು ಗರಂ ಆಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: Indigo Passengers Scream at female Ground Staff Amid Flight Delay internet likes her patience

ವಿಮಾನ ವಿಳಂಬವಾದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಿಲ್ಲ ಎಂದು ಇಂಡಿಗೋ ವಿಮಾನದ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಎನ್ನಲಾಗುತ್ತಿದ್ದು, ವಿಮಾನ ವಿಳಂಬವಾದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಹಲವು ಗಂಟೆಗಳ ಕಾಲ ಕಾದು ಕಾದು ಸುಸ್ತಾದ ಪ್ರಯಾಣಿಕರು ವಿಮಾನದ ಸಿಬ್ಬಂದಿ ವಿರುದ್ಧ ಸಿಟ್ಟಿನಿಂದ ಕೂಗಾಡಿದ್ದು, ಪ್ರಯಾಣಿಕರ ಸಿಟ್ಟಿಗ ಕ್ಯಾಬಿನ್ ಸಿಬ್ಬಂದಿ ತತ್ತರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ, ಪ್ರಯಾಣಿಕರ ಗುಂಪೊಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ನಲ್ಲಿರುವ ಇಂಡಿಗೋ ಸ್ಟಾಪ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬೋರ್ಡಿಂಗ್ ಗೇಟ್ ಬಳಿ ನಿಂತಿದ್ದ ಮಹಿಳಾ ಸಿಬ್ಬಂದಿ ಮೇಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಗಂಟೆಗಳ ಕಾಲ ಕಾದರೂ ವಿಮಾನದ ಸಿಬ್ಬಂದಿ ವಿಮಾನ ವಿಳಂಬವಾಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಯಾಣಿಕರ ಪಿತ್ತ ನೆತ್ತಿಗೇರಿದೆ. 

ಕಳೆದ ಐದು ಗಂಟೆಗಳಿಂದ ಪುಟ್ಟ ಮಕ್ಕಳ ಜೊತೆ ಇಲ್ಲಿ ಕಾಯುತ್ತಿದ್ದೇವೆ ನೀವೇನು ಮಾಡುತ್ತಿದ್ದೀರಿ ಎಂದು ಕೌಂಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರನ್ನು ವ್ಯಕ್ತಿಯೊಬ್ಬರು ಕೇಳಿದ್ದಾರೆ. ಈ ವೇಳೆ ಕಾದು ಸುಸ್ತಾಗಿ ಸಿಟ್ಟಿಗೆದ್ದಿದ್ದ ಇನ್ನು ಅನೇಕ ಪ್ರಯಾಣಿಕರು ಅಲ್ಲಿ ಸೇರಿದ್ದು, ಒಬ್ಬರಾದ ಮೇಲೊಬ್ಬರಂತೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಸುಮ್ಮನೆ ಇಲ್ಲಿ ಟೈಮ್‌ಪಾಸ್ ಮಾಡ್ತಿದ್ದೀರಾ? ಇದೆಲ್ಲಾ ಕೆಲಸ ಮಾಡಲ್ಲ, ಇಲ್ಲಿ ಎಲ್ಲಾ ವಿಮಾನಗಳು ಟೇಕಾಫ್ ಆಗುತ್ತಿವೆ. ಈ ವಿಮಾನವೊಂದು ಮಾತ್ರ ಟೇಕಾಫ್ ಆಗ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. 

ಆದರೆ ಈ ಎಲ್ಲ ಆಕ್ರೋಶಕ್ಕೂ ಇಂಡಿಗೋ ಮಹಿಳಾ ಸಿಬ್ಬಂದಿ ತಾಳ್ಮೆ ಕಳೆದುಕೊಳ್ಳದೇ ಶಾಂತವಾಗಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಡಿಗೋ ವಿಮಾನ ವಿಳಂಬವಾದಾಗ ಪ್ರಯಾಣಿಕರಿಗೆ ಮೊದಲೇ ಮಾಹಿತಿ ನೀಡಬೇಕು, ಪ್ರಯಾಣಿಕರು ಕೂಡ ಹೀಗೆ ಹಾರಾಡುವುದು ಸರಿಯಲ್ಲ ಎಂದು ವೀಡಿಯೋ ನೋಡುಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಯಾಣಿಕರ ತೀವ್ರ ಆಕ್ರೋಶದ ನಡುವೆಯೂ ತಾಳ್ಮೆ ವಹಿಸಿದ ಇಂಡಿಗೋದ ಗ್ರೌಂಡ್ ಸ್ಟಾಪ್‌ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನದ ಸಿಬ್ಬಂದಿಯಾಗುವುದು ಸುಲಭದ ಮಾತಲ್ಲ, ತರಬೇತಿಯ ವೇಳೆಯೇ ಅವರಿಗೆ ಪ್ರಯಾಣಿಕರು ಹೊಡೆದರು ಅವರನ್ನು ಶಾಂತವಾಗಿ ಹ್ಯಾಂಡಲ್ ಮಾಡುವ ಗುಣ ರೂಢಿಸಿಕೊಳ್ಳಲು ಕಲಿಸಲಾಗುತ್ತದೆ. ಹೀಗಾಗಿ ಇಲ್ಲಿ ವಿಮಾನ ಸಿಬ್ಬಂದಿ ಅಂತಹ ಆತಂಕದ ಸ್ಥಿತಿಯಲ್ಲೂ ಶಾಂತಚಿತ್ತದಿಂದ ವರ್ತಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಮುಂಬೈನಿಂದ ದೋಹಾಗೆ ಹೊರಟಿದ್ದ ಇಂಡಿಗೋ ವಿಮಾನವೊಂದನ್ನು 5 ಗಂಟೆಗೂ ಹೆಚ್ಚು ಕಾಲ ಕಾಯಿಸಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಆದರೆ ಆ ಘಟನೆಯದ್ದೋ ಅಥವಾ ಹೊಸ ಘಟನೆಯದ್ದೋ ಗೊತ್ತಿಲ್ಲ, ಈ  ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

 

Latest Videos
Follow Us:
Download App:
  • android
  • ios