Udupi: ಪಡುಕೆರೆ ಬೀಚ್‌ಗೆ ಸಂಜೆ ನಂತರ ಪ್ರವಾಸಿಗರಿಗೆ ನೋ ಎಂಟ್ರಿ: ಸ್ಥಳೀಯರ ನಿರ್ಧಾರ
ಕರಾವಳಿ ಜಿಲ್ಲೆಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ, ಅದರಲ್ಲೂ ವಿಶೇಷವಾಗಿ ಕಡಲ ತೀರದ ಪ್ರದೇಶಗಳಿಗೆ ಸಾವಿರಾರು ಜನ ಭೇಟಿ ಕೊಡುತ್ತಿದ್ದಾರೆ, ಉಡುಪಿಯ ಪಡುಕೆರೆ ಬೀಚ್ ಹೆಚ್ಚು ಜನ ವಸತಿ ಇರುವ ಪ್ರದೇಶ, ತಡರಾತ್ರಿವರಿಗೂ ಇಲ್ಲಿ ಪ್ರವಾಸಿಗರು ಬರುವುದರಿಂದ ಬೇಸತ್ತ ಸ್ಥಳೀಯರು ಇದೀಗ ನೋ ಎಂಟ್ರಿ ಬೋರ್ಡ್ ಹಾಕಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಅ.29): ಕರಾವಳಿ ಜಿಲ್ಲೆಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ, ಅದರಲ್ಲೂ ವಿಶೇಷವಾಗಿ ಕಡಲ ತೀರದ ಪ್ರದೇಶಗಳಿಗೆ ಸಾವಿರಾರು ಜನ ಭೇಟಿ ಕೊಡುತ್ತಿದ್ದಾರೆ, ಉಡುಪಿಯ ಪಡುಕೆರೆ ಬೀಚ್ ಹೆಚ್ಚು ಜನ ವಸತಿ ಇರುವ ಪ್ರದೇಶ, ತಡರಾತ್ರಿವರಿಗೂ ಇಲ್ಲಿ ಪ್ರವಾಸಿಗರು ಬರುವುದರಿಂದ ಬೇಸತ್ತ ಸ್ಥಳೀಯರು ಇದೀಗ ನೋ ಎಂಟ್ರಿ ಬೋರ್ಡ್ ಹಾಕಿದ್ದಾರೆ. ನಗರದ ಮಲ್ಪೆ ಕಡಲ ತೀರದ ಪಡುಕೆರೆಯಿಂದ ಮಟ್ಟುವರೆಗೆ ಸ್ಥಳೀಯ ಮೀನುಗಾರ ನಿವಾಸಿಗಳು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ನಿರ್ಭಂದ ಹೇರಿ 8 ಕಡೆಗಳಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಈ ವಿಚಾರದ ಕುರಿತಾಗಿ ಮಲ್ಪೆ ಪೋಲಿಸರು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಭಾಗದಲ್ಲಿ ರಾತ್ರಿ 1 ಗಂಟೆಯವರೆಗೂ ಪ್ರವಾಸಿಗರು ತಿರುಗುತ್ತಾರೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಓಡಾಟ ಮಾಡುವ ಪ್ರವಾಸಿಗರಿಂದಾಗಿ ಮಹಿಳೆಯರು, ಮಕ್ಕಳು ಓಡಾಡಲು ಕಷ್ಟವಾಗುತ್ತಿದೆ ಎಂದು ಲೋಕಲ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರ ಸಮುದಾಯ ಮುಂಜಾನೆ ಮೂರು ನಾಲ್ಕು ಗಂಟೆಗೆಲ್ಲ ಕೆಲಸಕ್ಕೆ ಎಂದು ಮನೆಯಿಂದ ಹೊರಡುತ್ತಾರೆ. ಮುಂಜಾನೆ ಕೆಲಸಕ್ಕೆ ಹೋಗುವಾಗಲೂ ಸೇತುವೆ ಬಳಿ ಅಪರಿಚಿತರು ನಿಂತುಕೊಂಡಿರುತ್ತಾರೆ.
ಉಡುಪಿ: ಆಕಾಶದಲ್ಲಿ ಚಲಿಸುವ ನಕ್ಷತ್ರ ಕಂಡು ಬೆಚ್ಚಿಬಿದ್ದ ಜನ..!
ರಾತ್ರಿ ಭಜನಾ ಮಂದಿರ ಗೇಟ್ ತೆಗೆದು ಒಳಗೆ ಪ್ರವೇಶಿಸುತ್ತಾರೆ ಎಂದು ಜನರ ದೂರಿದ್ದಾರೆ. ನಮ್ಮದೇ ಊರಿನಲ್ಲಿ ನಮಗೆ ಓಡಾಡಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಈ ಭಾಗದಲ್ಲಿ ಅನಧಿಕೃತ ಹೋಮ್ ಸ್ಟೇ ಗಳು ತಲೆ ಎತ್ತುತ್ತಿದೆ. ಶನೇಶ್ವರ ದೇವಸ್ಥಾನದ ಬಳಿ ಒಬ್ಬರೇ ತಿರುಗಾಡಲು ಭಯವಾಗುತ್ತದೆ. ಪ್ರವಾಸಿಗರ ಸೋಗಿನಲ್ಲಿ ಬಂದು ಗಾಂಜಾ ಸೇರಿದಂತೆ ಅನಧಿಕೃತ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬ ಆರೋಪವು ಕೇಳಿಬಂದಿದೆ. ಈಗಾಗಲೇ ಪೊಲೀಸರ ಜೊತೆಗೂ ಮಾತುಕತೆ ನಡೆಸಲಾಗಿದೆ. ವಾರಾಂತ್ಯದಲ್ಲಿ, ರಾತ್ರಿ ಹೊಯ್ಸಳ ಗಸ್ತು ತಿರುಗುತ್ತದೆ.
ಅನಾಥೆಯ ಬಾಳಿಗೆ ಬೆಳಕಾದ ಜಿಲ್ಲಾಡಳಿತ, ಇಲ್ಲಿ ಜಿಲ್ಲಾಧಿಕಾರಿಯೇ ಬಂಧು- ಶಾಸಕರೇ ಅಣ್ಣ
ಸಿಬ್ಬಂದಿಗಳಿಂದ ಗಸ್ತು ಮಾಡಿಸಲಾಗುತ್ತಿದೆ. ಅನಧಿಕೃತ ಕೆಲಸದಲ್ಲಿ ತೊಡಗಿದ್ದರೇ ನಾವು ಪ್ರಶ್ನಿಸುತ್ತೇವೆ. ಡೆಲ್ಟಾ ಪಾಯಿಂಟ್, ಕೋಡಿಬೇಂಗ್ರೆಯಲ್ಲೂ ಅಕ್ರಮ ಚಟುವಟಿಕೆಗಳು ಜಾಸ್ತಿ ಇದೆ, ಎಲ್ಲಾ ಅಕ್ರಮಗಳಿಗೂ ಕಡಿವಾಣ ಹಾಕುವ ಭರವಸೆ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕೆಯನ್ನು ನಂಬಿ ಬದುಕು ನಡೆಸುವ ಕರಾವಳಿ ತೀರದ ಸಮುದಾಯ ಇದೀಗ ಪ್ರವಾಸಿಗರ ದುರ್ವರ್ತನೆಯಿಂದ ರೋಸಿ ಹೋಗಿದ್ದಾರೆ. ಪೊಲೀಸರ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕದಿದ್ದರೆ ಪೊಲೀಸರು ಮತ್ತು ಪ್ರವಾಸಿಗರ ನಡುವೆ ಸಂಘರ್ಷ ಉಂಟಾಗುವ ಅಪಾಯವಿದೆ.