Travel Tips: ಭೂತಾನ್ ಪ್ರವಾಸಕ್ಕೆ ಹೋದಾಗ ಈ ಖಾದ್ಯ ತಿನ್ನದೆ ಬರ್ಬೇಡಿ
ಪ್ರವಾಸಕ್ಕೆ ಹೋದ್ಮೇಲೆ ಅಲ್ಲಿನ ಪ್ರತಿಯೊಂದು ಕ್ಷಣವನ್ನು ಸವಿಯಬೇಕು. ಅಲ್ಲಿನ ಉಡುಗೆ, ಸಂಪ್ರದಾಯಗಳನ್ನು ಅರಿಯುವ ಜೊತೆಗೆ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳುವ ಮೂಲಕ ಅಲ್ಲಿನ ಅಡುಗೆ ರುಚಿ ನೋಡಿ ಬರ್ತೇಕು. ಆಗ್ಲೇ ಪ್ರವಾಸ ಸಾರ್ಥಕವಾದಂತೆ.
ವಿಶ್ವದ ಪ್ರತಿಯೊಂದು ದೇಶ, ರಾಜ್ಯವು ತನ್ನದೇ ಆದ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿ ರಾಜ್ಯಕ್ಕೂ ತನ್ನದೆ ಆದ ಸಾಂಪ್ರದಾಯಿಕ ಉಡುಗೆ, ಸಂಸ್ಕೃತಿ ಮತ್ತು ಆಹಾರವಿದೆ. ಜನರ ಉಡುಗೆ, ಮಾತು, ಆಹಾರವನ್ನು ನೋಡಿ ನಾವು ಸುಲಭವಾಗಿ ಅವರು ಯಾವ ರಾಜ್ಯ, ದೇಶದವರು ಎಂಬುದನ್ನು ಗುರುತಿಸಬಹುದು. ನಮ್ಮಲ್ಲಿ ಸಾಕಷ್ಟು ಬಗೆಯ ಆಹಾರಗಳು ಲಭ್ಯವಿದೆ. ಸಿಹಿ, ಖಾರ, ಹುಳಿ, ಸಸ್ಯಹಾರ, ಮಾಂಸಹಾರ, ಸೀ ಫುಡ್ ಹೀಗೆ ಬೇರೆ ಬೇರೆ ರುಚಿಯ, ಬಾಯಿ ಚಪ್ಪರಿಸಿ ತಿನ್ನುವಂತಹ ಅಡುಗೆ ನಮ್ಮಲ್ಲಿ ಸಿಗುತ್ತದೆ. ಪ್ರತಿ ದೇಶವೂ ತನ್ನದೇ ಆದ ಆಹಾರ ಪದ್ಧತಿಯನ್ನು ಹೊಂದಿದೆ. ತುಂಬಾ ರುಚಿಕರ ಖಾದ್ಯಗಳು ಸಿಗುವ ಪ್ರದೇಶಗಳ ಪಟ್ಟಿಯಲ್ಲಿ ಭೂತಾನ್ ಕೂಡ ಒಂದಾಗಿದೆ. ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಭೂತಾನ್ ಆಹಾರವನ್ನು ಸೇವನೆ ಮಾಡಿದ ಜನರು ಮತ್ತೆ ಮತ್ತೆ ಆ ಆಹಾರ ತಿನ್ನಲು ಇಷ್ಟಪಡ್ತಾರೆ. ಭೂತಾನ್ ನಲ್ಲಿ ಹೊಟ್ಟೆ ಮಾತ್ರವಲ್ಲದೆ ಮನಸ್ಸನ್ನು ಸೆಳೆಯುವ ಕೆಲ ಸಾಂಪ್ರದಾಯಿಕ ಅಡುಗೆಗಳಿವೆ. ನಾವಿಂದು ಭೂತಾನ್ ಸಾಂಪ್ರದಾಯಿಕ ಅಡುಗೆ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಭೂತಾನ್ ಸಾಂಪ್ರದಾಯಿಕ ಅಡುಗೆಗಳು :
ಎಮಾ ದತ್ಶಿ (Ema Datshi) : ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರ ಮಾತ್ರ ವೀಕ್ಷಣೆ ಮಾಡಿ, ದೋಸೆ, ಇಡ್ಲಿಗೆ ಹುಡುಕಾಟ ನಡೆಸಿದ್ರೆ ಹೇಗೆ? ಯಾವ ರಾಜ್ಯಕ್ಕೆ ಹೋಗಿರ್ತೀರೋ ಅಥವಾ ಯಾವ ದೇಶಕ್ಕೆ ಹೋಗಿರ್ತೀರೋ ಆ ಊರಿನ ಸಾಂಪ್ರದಾಯಿಕ ಅಡುಗೆಯ ರುಚಿಯನ್ನು ನೀವು ನೋಡ್ಬೇಬೇಕು. ಭೂತಾನ್‌ನ ಸಾಂಪ್ರದಾಯಿಕ ಆಹಾರ ಎಂದಾಗ ಮೊದಲು ಬರುವುದು ಎಮಾ ದತ್ಶಿ ಹೆಸರು. ಟೊಮೆಟೊ, ಕೆಂಪು ಮೆಣಸಿನಕಾಯಿ ಮತ್ತು ಚೀಸ್‌ನಿಂದ ಮಾಡಿದ ತಿಂಡಿ ಈ ಎಮಾ ದತ್ಶಿ. ಭೂತಾನ್ ಗೆ ಭೇಟಿ ನೀಡಿದ್ರೆ ನೀವು ಈ ಆಹಾರದ ರುಚಿ ನೋಡಲು ಮರೆಯಬೇಡಿ. ಭೂತಾನ್‌ನ ಸ್ಥಳೀಯ ಪ್ರದೇಶದಲ್ಲಿ ನಿಮಗೆ ಇದು ಸಿಗುತ್ತದೆ.
ರೈಲಲ್ಲಿ ಈ ಮೂರು ವಸ್ತು ಕೊಂಡೊಯ್ದರೆ ಜೈಲು ಗ್ಯಾರಂಟಿ
ಸಸ್ಯಹಾರಿಗಳಿಗೆ ಕೇವಾ ದತ್ಶಿ (Keva Datshi) : ಭೂತಾನ್ ಗೆ ಹೋದ ನೀವು ಸಸ್ಯಹಾರಿಗಳಾಗಿದ್ದರೆ ಏನಪ್ಪ ತಿನ್ನೋದು ಅಂತಾ ಆಲೋಚನೆ ಮಾಡ್ಬೇಕಾಗಿಲ್ಲ. ಕೇವಾ ದತ್ಶಿ ಸಸ್ಯಹಾರಿ ಆಹಾರ. ಆಲೂಗಡ್ಡೆ ಮತ್ತು ಚೀಸ್ ನಿಂದ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಶುಂಠಿಯನ್ನು ಹೆಚ್ಚು ಬಳಸಲಾಗುತ್ತದೆ. ಕೇವಾ ದತ್ಶಿ ತಿಂದ್ರೆ ನೀವು ನಿಮ್ಮಿಷ್ಟದ ಆಹಾರದ ರುಚಿ ಮರೀತಿರಿ. ಯಾಕೆಂದ್ರೆ ಕೇವಾ ದತ್ಶಿ ತುಂಬಾ ಟೇಸ್ಟಿಯಾಗಿರುತ್ತದೆ. ಸಸ್ಯಹಾರಿ ಆಗಿರಿ ಇಲ್ಲ ಮಾಂಸಹಾರಿ, ಭೂತಾನ್ ಗೆ ಹೋದೋದು ಕೇವಾ ದತ್ಶಿ ಟ್ರೈ ಮಾಡಿ.
ಝೋ ಶುಂಗೋ (Zow Shungo) ರುಚಿ ನೋಡಿ : ಸಸ್ಯಾಹಾರಿಗಳಿಗೆ ಮತ್ತೊಂದು ರುಚಿಕರವಾದ ಭೂತಾನ್ ಸಾಂಪ್ರದಾಯಿ ಭಕ್ಷ್ಯವೆಂದರೆ ಝೋ ಶುಂಗೋ. ಈ ಖಾದ್ಯದ ಹೆಸರು ವಿಚಿತ್ರವಾಗಿದೆ. ಆದರೆ ರುಚಿಯ ವಿಷ್ಯಕ್ಕೆ ಬಂದ್ರೆ ತುಂಬ ಅದ್ಭುತವಾಗಿದೆ. ಅಕ್ಕಿ ಮತ್ತು ತರಕಾರಿಗಳಿಂದ ಮಾಡಿದ ಝೋ ಶುಂಗೋ ತಿನ್ನಲು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು. ಭೂತಾನ್ ಜನರು ಇದನ್ನು ಪ್ರತಿದಿನ ಸೇವನೆ ಮಾಡ್ತಾರೆ. ನೀವು ಇಲ್ಲಿನ ಹೊಟೇಲ್ ಗಳಲ್ಲಿ ಆರಾಮವಾಗಿ ರುಚಿ ನೋಡಬಹುದು.
ಕಡಿಮೆ ಬಜೆಟ್ ನಲ್ಲಿ ಫಾರಿನ್ ಟ್ರಿಪ್ ಮಾಡಲು ಬಯಸಿದ್ರೆ… ಇದು ನಿಮಗಾಗಿ!
ಮಾಂಸಹಾರಿಗಳಿಗೆ ಜುಮಾ : ಮಾಂಸಹಾರಿಗಳಿಗೆ ಇಲ್ಲಿ ಸಾಕಷ್ಟು ರುಚಿಕರ ಆಹಾರ ಲಭ್ಯವಿದೆ. ಭೂತಾನ್‌ನಲ್ಲಿ ಸಿಗುವ ಮಾಂಸಾಹಾರಿ ಖಾದ್ಯಗಳಲ್ಲಿ ಜುಮಾ ಕೂಡ ಒಂದು. ಇದು ಚೈನೀಸ್ ಆಹಾರವನ್ನು ಹೋಲುತ್ತದೆ. ಮಾಂಸ, ಅಕ್ಕಿ ಮತ್ತು ಮೆಣಸಿನಕಾಯಿಯಿಂದ ತಯಾರಿಸಿದ ಆಹಾರವಾಗಿದೆ. ಭೂತಾನ್ ಗೆ ಹೋದ್ರೆ ಜುಮಾ ರುಚಿ ನೋಡದೆ ಬರಬೇಡಿ. ಹಾಗೆ ಬಂದ್ರೆ ನೀವು ದೊಡ್ಡದನ್ನು ಮಿಸ್ ಮಾಡಿಕೊಂಡಂತೆ.