Asianet Suvarna News Asianet Suvarna News

ಕಣ್ಮನ ಸೆಳೆಯುತ್ತಿದೆ ಇರ್ಪು ಜಲಪಾತದ ಸೌಂದರ್ಯ: ಇದೇ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ!

ಕೊಡಗು ಎಂದರೆ ಪ್ರಕೃತಿಯ ತಾಣ, ಹಚ್ಚ ಹಸಿರಿನ ಗಿರಿ ವನಗಳ ಮಲೆಗಳ ನಡುವೆ ಬೆಳ್ನೊರೆಯಂತೆ ಧುಮ್ಮಿಕ್ಕುವ ಜಲರಾಶಿಗಳು. ಬೆಟ್ಟಗಳ ತುದಿಯಿಂದ ಧರೆಗಿಳಿದು ಬರುವ ಗಿರಿಕನ್ಯೆಯಂತೆ ಭಾಸವಾಗುವ ಜಲಪಾತಗಳು. 

tourists restricted to iruppu falls in kodagu gvd
Author
First Published Aug 3, 2024, 6:14 PM IST | Last Updated Aug 5, 2024, 1:52 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಆ.03): ಕೊಡಗು ಎಂದರೆ ಪ್ರಕೃತಿಯ ತಾಣ, ಹಚ್ಚ ಹಸಿರಿನ ಗಿರಿ ವನಗಳ ಮಲೆಗಳ ನಡುವೆ ಬೆಳ್ನೊರೆಯಂತೆ ಧುಮ್ಮಿಕ್ಕುವ ಜಲರಾಶಿಗಳು. ಬೆಟ್ಟಗಳ ತುದಿಯಿಂದ ಧರೆಗಿಳಿದು ಬರುವ ಗಿರಿಕನ್ಯೆಯಂತೆ ಭಾಸವಾಗುವ ಜಲಪಾತಗಳು. ಅದರಲ್ಲೂ ಮಳೆಗಾಲದಲ್ಲಿ ಕೊಡಗಿನ ಸೌಂದರ್ಯವನ್ನು ನೋಡುವುದೇ ಒಂದು ಮಹಾದಾನಂದ. ಅಂತಹ ಸುಂದರ ಪ್ರಾಕೃತಿಕ ಸೌಂದರ್ಯದ ನಡುವೆ ಭೋರ್ಗರೆದು ಧುಮ್ಮಿಕುತ್ತಿದೆ ಇರ್ಪು ಜಲಪಾತ. ಹೌದು ಪೊನ್ನಂಪೇಟೆ ತಾಲ್ಲೂಕಿನ ಕುರ್ಚಿ ಗ್ರಾಮದಲ್ಲಿ ಇರುವ ಇರ್ಪು ಜಲಪಾತ ಬೋರ್ಗರೆದು ಹರಿಯುತ್ತಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದೆ. 

ಸುತ್ತಲೂ ಮುಗಿಲು ಮುಟ್ಟುವಂತಹ ಹಸಿರ ಬೆಟ್ಟ ಗುಡ್ಡಗಳೇ ಇದ್ದು, ಎರಡು ಬೆಟ್ಟಗಳ ನಡುವಿನಲ್ಲಿ ಮುಗಿಲಿನಿಂದ ವರುಣನೇ ಹಾಲು ಸುರಿಯುತ್ತಿದ್ದಾನೇನೋ ಎನ್ನುವಂತೆ ಬಾಸವಾಗುವ ಇರ್ಪು ಜಲಪಾತವೇ ಲಕ್ಷ್ಮಣತೀರ್ಥ ನದಿಯ ಉಗಮಸ್ಥಾನ ಎಂತಲೂ ಹೇಳಾಗುತ್ತದೆ. ಅದರಲ್ಲೂ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಳೆಯ ಆರ್ಭಟಕ್ಕೆ ಇರ್ಪು ಜಲಪಾತ ಗಿರಿಕನ್ಯೆಯಾಗಿ ನವಿಲು ನರ್ತಿಸಿದಂತೆ ಕಾಣಿಸುತ್ತಿದೆ. ಹೀಗೆ ಜಲಪಾತ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಆದರೆ ಅಪಾಯದ ಮಟ್ಟಮೀರಿ ಧುಮ್ಮಿಕುತ್ತಿದೆ. ಹೀಗಾಗಿಯೇ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. 

ಭೂಕುಸಿತಕ್ಕೆ ಶಾಶ್ವತ ಪರಿಹಾರಕ್ಕಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ಮರುಚಿಂತನೆ: ಸಿಎಂ ಸಿದ್ದರಾಮಯ್ಯ

ಅಪಾಯವನ್ನು ಲೆಕ್ಕಿಸದೆ ಜಲಪಾತಕ್ಕೆ ಪ್ರವಾಸಿಗರು ಇಳಿದು ಸಂಭ್ರಮಿಸುತ್ತಾರೆ. ಇದನ್ನು ಮನಗಂಡಿರುವ ಅರಣ್ಯ ಇಲಾಖೆ ಪ್ರವಾಸಿಗರ ಹಿತದೃಷ್ಟಿಯಿಂದ ಇದೇ ಆಗಸ್ಟ್ 27 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ 27 ರಷ್ಟರಲ್ಲಿ ಮಳೆ ಕಡಿಮೆಯಾದಲ್ಲಿ ಆ ಬಳಿಕ ಪ್ರವಾಸಿಗರಿಗೆ ಈ ಜಲಾಶಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಮಳೆ ಜಾಸ್ತಿಯಾಗಿ ಇದೇ ರೀತಿ ಮುಂದುವರೆದಿದ್ದಲ್ಲಿ ಜಲಾಶಯಕ್ಕೆ ಪ್ರವಾಸಿಗರ ನಿರ್ಬಂಧ ಇನ್ನಷ್ಟು ದಿನಗಳ ಕಾಲ ಮುಂದಕ್ಕೆ ಹೋಗಲಿದೆ. 

ಕೊಡಗಿನಲ್ಲಿ ಸಹಜವಾಗಿ ಮಳೆಗಾಲ ಶುರುವಾಯಿತ್ತೆಂದರೆ ಸಾಕಷ್ಟು ಜಲಾಶಯಗಳು ರೂಪು ತಳೆದು ಹರಿದು ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಂತಹ ಮಳೆಗಾಲದಲ್ಲಿ ಕೊಡಗಿನ ಪ್ರವಾಸಿ ತಾಣವನ್ನು ನೋಡಿ ಕಣ್ತುಂಬಿಕೊಳ್ಳಲು ಕೊಡಗಿಗೆ ತಂಡೋಪ ತಂಡವಾಗಿ ಬರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಮೈಮರೆತು ಮನಸ್ಸೋ ಇಚ್ಛೆ ವರ್ತಿಸಿಬಿಡುತ್ತಾರೆ. ಇದರಿಂದ ಅಪಾಯ ಎದುರಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. 

ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಡ್ರೆಸ್‌ನಲ್ಲಿ ನಟಿ ಸಮಂತಾ: ಬಾಲಿವುಡ್ ಡಿಸೈನರ್‌ಗಳ ಮೇಲೆ ಸಿಟ್ಟಾಗಿದ್ಯಾಕೆ?

ಹೀಗಾಗಿಯೇ ಭಾರೀ ಪ್ರಮಾಣದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತದ ನೀರಿನಲ್ಲಿ ಏನಾದರೂ ಅಪಾಯಗಳು ಎದುರಾಗಬಹುದೆಂದು ತೀವ್ರ ಮಳೆಗಾಲ ಮುಗಿಯುವವರೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರಿಗೆ ಹೇರಿರುವ ನಿರ್ಬಂಧವನ್ನು ತೆರವು ಮಾಡಿದ ಬಳಿಕ ನೀವು ಆಗಮಿಸಿ ಇಂತಹ ಸಹಜ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ನದಿ ಹಳ್ಳ ಕೊಳ್ಳ ಜಲಪಾತಗಳು ಬೋರ್ಗರೆದು ತುಂಬಿ ಹರಿಯುತ್ತಿದ್ದು ಕೊಡಗಿನ ಪ್ರಕೃತಿಯ ತಾಣವನ್ನು ಇನ್ನಷ್ಟು ಹೆಚ್ಚಿಸಿದೆ. 

Latest Videos
Follow Us:
Download App:
  • android
  • ios