Indonesia: ಈ ಟೂರಿಸ್ಟ್‌ ತಾಣದಲ್ಲಿ ವಿವಾಹಪೂರ್ವ ಲೈಂಗಿಕತೆ ಅಪರಾಧ, ಪ್ರವಾಸಿಗರಿಗೂ ಅನ್ವಯ!

ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷ್ಯಾ ಪ್ರವಾಸಿಗರ ಹಾಟ್‌ ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ. ಇದೀಗ ಈ ದೇಶದಲ್ಲಿ “ವಿವಾಹಪೂರ್ಣ ಲೈಂಗಿಕತೆ ಅಪರಾಧʼ ಎನ್ನುವ ಕಾನೂನು ಜಾರಿಗೊಳಿಸಲಾಗಿದ್ದು, ಜಗತ್ತಿನ ಹಲವು ದೇಶಗಳಿಂದ ಭಾರೀ ಅಸಮಾಧಾನ, ವಿರೋಧ ವ್ಯಕ್ತವಾಗಿದೆ. 

Indonesia Ban On Pre Marriage Sex Applicable To Tourists

ಪ್ರವಾಸಿ ತಾಣಗಳೆಂದರೆ ಎಲ್ಲ ರೀತಿಯ ಜನರೂ ಬರುತ್ತಾರೆ. ಮದುವೆಯಾದವರು, ಆಗದವರು, ವಯಸ್ಸಾದವರು, ಪಾಲಕರ ಜತೆ ಮಕ್ಕಳು, ಹರೆಯದ ಹುಡುಗಾಟದಲ್ಲಿರುವವರು, ಪ್ರವಾಸಕ್ಕೆಂದೇ ಜೋಡಿಯಾಗಿ ಬಂದವರು, ಪ್ರಣಯಿಗಳು, ಬಂಧನಕ್ಕೆ ಸಿಲುಕದೇ ಹನಿಮೂನ್‌ ಮಾಡುವವರು… ಹೀಗೆ ಎಲ್ಲ ರೀತಿಯ ಜನರೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅವರು ಯಾರು, ಎಲ್ಲಿಂದ ಬಂದವರು, ವಿವಾಹವಾಗಿರುವ ಜೋಡಿಯಾ ಎಂದೆಲ್ಲ ಯಾರೂ ವಿಚಾರಿಸಲು ಬರುವುದಿಲ್ಲ. ಹಾಗೆ ವಿಚಾರಿಸಿದರೆ ಅಂತಹ ಸ್ಥಳಗಳಿಗೆ ಪ್ರವಾಸಿಗಳು ಭೇಟಿ ನೀಡುವುದನ್ನು ಕಡಿಮೆ ಮಾಡಬಹುದು. ವಿಶ್ವದಲ್ಲಿ ಹಲವು ಖ್ಯಾತ ಟೂರಿಸ್ಟ್‌ ಸ್ಥಳಗಳಿವೆ. ಅಲ್ಲಿಗೆ ಜಗತ್ತಿನ ಎಲ್ಲ ಭಾಗಗಳಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲಿ ಜಾರಿಗೊಳಿಸುವ ಕಾನೂನು ಪ್ರವಾಸಿಗರಿಗೂ ಅನುಕೂಲವಾಗುವಂತಿದ್ದರೆ ಹೆಚ್ಚು ಅನುಕೂಲ. ಆದರೆ, ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾ ಇತ್ತೀಚೆಗೆ ಜಾರಿಗೆ ತಂದಿರುವ ಕಾನೂನೊಂದು ಸ್ಥಳೀಯರು ಸೇರಿದಂತೆ ಹಲವು ರಾಷ್ಟ್ರಗಳ ಪ್ರವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದೆಂದರೆ, ವಿವಾಹವಾಗದ ಜೋಡಿಗಳ ದೈಹಿಕ ಸಂಬಂಧ ಅಲ್ಲೀಗ ಅಪರಾಧ. ಇಂಡೋನೇಷ್ಯಾ ಸಂಸತ್ತಿನಲ್ಲಿ ಇತ್ತೀಚೆಗಷ್ಟೇ “ಮದುವೆಗೆ ಮುಂಚಿನ ಸೆಕ್ಸ್‌ʼ ಅನ್ನು ನಿಷೇಧಿಸಿರುವ ನಿಯಮಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾನೂನು ಸ್ಥಳೀಯರಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಅನ್ವಯಿಸಲಾಗಿದ್ದು, ಬಹಳಷ್ಟು ದೇಶಗಳು ಇದಕ್ಕೆ ತೀವ್ರ ಅಸಮಾಧಾನ ಸೂಚಿಸಿವೆ.

 
ಇಂಡೋನೇಷ್ಯಾ (Indonesia)… ಅತ್ಯದ್ಭುತ ದ್ವೀಪ ರಾಷ್ಟ್ರ (Island Nation). ಏಷ್ಯಾ  ವಲಯದ ಬಹುಮುಖ್ಯ ಪ್ರವಾಸಿ  ತಾಣಗಳನ್ನು ಹೊಂದಿರುವ ದೇಶ. ಬಾಲಿ (Bali)ಯಂತಹ ನೈಸರ್ಗಿಕ ಸೌಂದರ್ಯದ ದ್ವೀಪವನ್ನು ಒಳಗೊಂಡಿದೆ. ವಿಶ್ವ ಪಯಣಿಗರು ಈ ದ್ವೀಪಗಳಿಗೆ ಸದಾಕಾಲ ಭೇಟಿ ನೀಡುತ್ತಾರೆ. ಜಾಗತಿಕ ಸೂಚ್ಯಂಕದಲ್ಲಿ ಈ ರಾಷ್ಟ್ರ 32ನೇ ಸ್ಥಾನದಲ್ಲಿದೆ. ಇಲ್ಲಿ ಪ್ರವಾಸೋದ್ಯಮದಿಂದ (Tourism) ದೇಶದ ಆದಾಯ ಹೆಚ್ಚಿದೆ, ಇದೇ ಸ್ಥಳೀಯರ ಉದ್ಯೋಗದ ಮೂಲವಾಗಿದೆ. ಇಂತಹ ಪ್ರದೇಶದಲ್ಲಿ ಇಂಥದ್ದೊಂದು ಕಾನೂನು (Act) ಜಾರಿಗೊಳಿಸಿರುವುದು ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

 
ವಿವಾಹವಾಗದೆ ಸೆಕ್ಸ್‌ (Pre Marriage Sex) ಮಾಡುವವರು ಸೇರಿದಂತೆ, ವಿವಾಹೇತರ ಬಾಹ್ಯ ಸಂಬಂಧ ಹೊಂದಿರುವ ಎಲ್ಲರನ್ನೂ ಅಪರಾಧಿಗಳು ಎಂದು ಈ ಕಾನೂನು ಪರಿಗಣಿಸುತ್ತದೆ. ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ವಿಚಾರಣೆ ನಡೆಸಿ  ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ವಿವಾದಾಸ್ಪದ ಕಾನೂನಿನ ವಿರುದ್ಧ ಸ್ವತಃ ಇಂಡೋನೇಷ್ಯಾದಲ್ಲೇ ಅಪಸ್ವರ ಕೇಳಿಬಂದಿದೆ. 

ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಹಿತ ನೀಡೋ ಈ ಪ್ಲೇಸ್‌ಗಳಿಗೆ ಜೀವನದಲ್ಲಿ ಒಮ್ಮೆ ವಿಸಿಟ್ ಮಾಡಿ!

ಆಸ್ಟ್ರೇಲಿಯಾದಲ್ಲೂ (Australia) ವಿರೋಧ!
ಇಂಡೋನೇಷ್ಯಾದಲ್ಲಿ ಜಾರಿಗೆ ತರಲಾದ ಕಾನೂನಿಗೂ ಆಸ್ಟ್ರೇಲಿಯಾಕ್ಕೂ ಏನು ಸಂಬಂಧ ಅನಿಸಬಹುದು. ಬಾಲಿ ದ್ವೀಪಕ್ಕೆ ಆಸ್ಟ್ರೇಲಿಯಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅವರ ಫೇವರಿಟ್‌ ಟೂರಿಸ್ಟ್‌ ಸ್ಪಾಟ್‌  ಬಾಲಿ. ಪ್ರತಿವರ್ಷ ಬಾಲಿಗೆ ಭೇಟಿ ನೀಡುವ ಆಸ್ಟ್ರೇಲಿಗರ ಸಂಖ್ಯೆ ಅಪಾರ. ತಮ್ಮಲ್ಲಿ ಇರದ ಇಂತಹ ಕಟ್ಟುಪಾಡುಗಳು  ಪ್ರವಾಸದ ಸ್ಥಳದಲ್ಲಿರುವುದು ಸರಿಯಲ್ಲ ಎನ್ನುವುದು ಅವರ ವಾದ. ಅಷ್ಟೇ ಅಲ್ಲ, ಬಾಲಿ ದ್ವೀಪದಲ್ಲಿ ಮದುವೆಯಾಗುವ ಜೋಡಿಗಳ ಸಂಖ್ಯೆಯೂ ಅಪಾರ. 

ಕಾನೂನಿಂದ ಯಾವ ಸಮಸ್ಯೆಯೂ ಇಲ್ಲ!
ವಿವಾಹಪೂರ್ವ ಲೈಂಗಿಕತೆ ಅಪರಾಧ  ಎಂದು ಪರಿಗಣಿಸಿದರೂ ಪ್ರವಾಸಿಗರಿಗೆ ಅದರಿಂದ ಯಾವುದೇ ತೊಂದರೆ ಇಲ್ಲ ಎನ್ನುವುದು ಹಲವರ ಅಭಿಪ್ರಾಯ. ಏಕೆಂದರೆ, ಅನೈತಿಕ ಕ್ರಿಯೆ ನಡೆಸಿರುವವರು ಅಪರಾಧಿಗಳು ಎಂದು ಸಾಬೀತಾಗಲು ಅವರ ವಿರುದ್ಧ ಮನೆಯವರು, ಪತಿ ಅಥವಾ ಪತ್ನಿ, ಮಕ್ಕಳು, ಹಿರಿಯರು ಹೀಗೆ ಯಾರಾದರೊಬ್ಬರು ಪ್ರಕರಣ  ದಾಖಲಿಸಬೇಕು. 

Travel Tips: ಭಾರತದ ಈ ಸ್ಥಳಗಳಿಗೆ ಫ್ಯಾಮಿಲಿ ಜೊತೆ ತಪ್ಪಿಯೂ ಭೇಟಿ ನೀಡ್ಬೇಡಿ

ಇಂಡೋನೇಷ್ಯಾ ಫೇವರಿಟ್‌ ಯಾಕೆ?
ಇಂಡೋನೇಷ್ಯಾ ಮುಸ್ಲಿಂ (Muslim Counrtry) ಬಾಹುಳ್ಯದ ರಾಷ್ಟ್ರವಾಗಿದ್ದರೂ ಎಲ್ಲ ಸಂಸ್ಕೃತಿಯ, ಧರ್ಮದ (Religion) ಜನ ಇಲ್ಲಿ ಸ್ವತಂತ್ರರಾಗಿ ಜೀವಿಸುವ ಅವಕಾಶವಿದೆ. ಇದರಿಂದಾಗಿಯೇ ಉದಾತ್ತ ಮನೋಭಾವದ ಮುಸ್ಲಿಂ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹೀಗಾಗಿಯೇ ಇದು ಪ್ರವಾಸಿಗರ ಹಾಟ್‌ ಸ್ಪಾಟ್‌ (Hotspot) ಆಗಿದೆ.

 

Latest Videos
Follow Us:
Download App:
  • android
  • ios