Asianet Suvarna News Asianet Suvarna News

ಸ್ವಚ್ಛ ಸುಂದರ ಗ್ರಾಮ ನಮ್ಮಲ್ಲೂ ಇದೆ… ಒಮ್ಮೆ ಭೇಟಿ ನೀಡಿ

 ಪ್ರವಾಸ ಎಂದಾಗ ವಿದೇಶದ ಬಗ್ಗೆ ಆಲೋಚನೆ ಮಾಡೋರೇ ಹೆಚ್ಚು. ಆದ್ರೆ ಭಾರತದಲ್ಲೂ ಶಾಂತ ಹಾಗೂ ಸ್ವಚ್ಛ ಹಳ್ಳಿಗಳ ಸಂಖ್ಯೆ ಸಾಕಷ್ಟಿದೆ. ಕೂಲ್ ಪ್ಲೇಸಿನಲ್ಲಿ ರಜೆ ಮಜಾ ಸಿಗ್ಬೇಕು ಅಂದ್ರೆ ನೀವು ಈ ಸ್ಥಳಕ್ಕೆ ಭೇಟಿ ನೀಡ್ಬಹುದು.  
 

Top Five Cleanest Villages In India must visit once in lifetime roo
Author
First Published Jan 8, 2024, 4:31 PM IST

ದಿನ ಬೆಳಗಾದರೆ ತಮ್ಮ ತಮ್ಮ ಕೆಲಸಗಳಿಗೆ ತೆರಳುವವರು ರಜಾದಿನಗಳನ್ನು ಪ್ರಶಾಂತ ವಾತಾರವಣದಲ್ಲಿ ಕಳೆಯಲು ಬಯಸುತ್ತಾರೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಹನ, ಧೂಳು ಹಾಗೂ ಹೊಗೆಗಳಿಂದ ವಾತಾವರಣ ಹೆಚ್ಚು ಕಲುಷಿತವಾಗಿರುತ್ತದೆ. ಇದರಿಂದಾಗಿ ಜನ ಮನೆಯಿಂದ ಹೊರಬೀಳಲು ಹೆದರುವಂತ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಅನೇಕ ಮಂದಿ ಬಿಡುವಿನ ಸಮಯವನ್ನು ಅಥವಾ ರಜಾದಿನಗಳನ್ನು ಹಳ್ಳಿಗಳಲ್ಲಿ ಅಥವಾ ಜನಸಂಪರ್ಕ ಕಡಿಮೆ ಇರುವ ಸ್ಥಳಗಳಲ್ಲಿ ಕಳೆಯಲು ಇಷ್ಟಪಡುತ್ತಾರೆ.

ಕಾಂಕ್ರೀಟ್ ಕಾಡಿನಲ್ಲಿ ವಾಸಮಾಡುವ ಜನರಿಗೆ ಆ ಜೀವನ ಬೇಸರವೆನಿಸುತ್ತದೆ. ಅಂತವರು ಸ್ವಚ್ಛ (Clean) ವಾದ ವಾತಾವರಣ ಹಾಗೂ ಶುದ್ಧ ಗಾಳಿಯನ್ನು ಬಯಸುವುದು ಸಹಜ. ಹೀಗೆ ತಮ್ಮ ಬಿಡುವಿನ ದಿನಗಳನ್ನು ಸುಂದರ, ಸ್ವಚ್ಛ ವಾತಾವರಣ (environment) ದಲ್ಲಿ ಕಳೆಯಬೇಕು ಎಂದು ಬಯಸುವವರು ವಿದೇಶಗಳಿಗೇ ಹೋಗಬೇಕೆಂದಿಲ್ಲ. ಭಾರತ (India) ದಲ್ಲಿಯೂ ಅಂತಹ ಸುಂದರವಾದ ಹಾಗೂ ಸ್ವಚ್ಛವಾದ ಕೆಲವು ಹಳ್ಳಿಗಳಿವೆ. ಈ ಹಳ್ಳಿಗಳು ತಮ್ಮ ಸುಂದರತೆ ಹಾಗೂ ಸ್ವಚ್ಛತೆಯಿಂದಲೇ ಪ್ರಖ್ಯಾತಿ ಪಡೆದಿವೆ.

ಹೊಗಳದಿದ್ದರೂ, ತೆಗಳಬೇಡಿ, ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!

ಮಾವ್ಲಿನ್ನಾಂಗ್ : ಮಾವ್ಲಿನ್ನಾಂಗ್ ಅನ್ನು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂದು ಕರೆಯಲಾಗುತ್ತದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ಗ್ರಾಮವು 2003 ರಲ್ಲಿ ಡಿಸ್ಕವರ್ ಇಂಡಿಯಾದಿಂದ ಏಷ್ಯಾದ ಸ್ವಚ್ಛ ಗ್ರಾಮ ಎಂಬ ಬಿರುದಿಗೆ ಪಾತ್ರವಾಗಿದೆ. ಮಾವ್ಲಿನ್ನಾಂಗ್ ಗ್ರಾಮದಲ್ಲಿರುವ ಎಲ್ಲ 95 ಮನೆಗಳಲ್ಲೂ ಕಸವನ್ನು ಸಂಗ್ರಹಿಸುವುದಕ್ಕಾಗಿ ಬಿದಿರಿನಿಂದ ಮಾಡಿದ ಕಸದ ಬುಟ್ಟಿಯನ್ನು ಬಳಸಲಾಗುತ್ತದೆ. ನಂತರ ಈ ಕಸವನ್ನು ಹೊಂಡದಲ್ಲಿ ಹಾಕಿ ಗೊಬ್ಬರ ತಯಾರಿಸಲಾಗುತ್ತದೆ. ಈ ಹಳ್ಳಿಯಲ್ಲಿ ಎಲ್ಲರೂ ವಿದ್ಯಾವಂತರೇ ಆಗಿದ್ದಾರೆ. ಹಳ್ಳಿಯ ವಾತಾವರಣ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಇಲ್ಲಿ ಸುಲಭವಾಗಿ ರಿಸೈಕಲ್ ಮಾಡಲು ಆಗದೇ ಇರುವಂತಹ ಪ್ಲಾಸ್ಟಿಕ್ ಅನ್ನು ಹಾಗೂ ಧೂಮಪಾನವನ್ನು ಕೂಡ ನಿಷೇಧಿಸಲಾಗಿದೆ. ಹಾಗೊಮ್ಮೆ ಇಲ್ಲಿ ಯಾರಾದರೂ ಧೂಮಪಾನ ಮಾಡದಿರೆ ಅವರಿಗೆ ದಂಡ ವಿಧಿಸಲಾಗುತ್ತದೆ.

ನಾಕೋ ಕಣಿವೆ : ನಾಕೋ ಕಣಿವೆ ಹಿಮಾಚಲ ಪ್ರದೇಶದಲ್ಲಿರುವ ಗ್ರಾಮವಾಗಿದೆ. ಇದು ಸ್ಪಿತಿ ಕಣಿವೆಯಲ್ಲಿದೆ ಮತ್ತು ಟಿಬೆಟಿಯನ್ ಗಡಿಗೆ ಹತ್ತಿರದಲ್ಲಿದೆ. ಬಹಳ ಶಾಂತಿಯುತವಾಗಿರುವ ಈ ಗ್ರಾಮದಲ್ಲಿ ಬೌದ್ಧರಿಗೆ ಸಮರ್ಪಿತವಾದ ಪುರಾತನ ಮಠ ಸಂಕೀರ್ಣ ಇದೆ. ಇದು ಬೌದ್ಧ ಲಾಮಾಗಳಿಂದ ನಡೆಸಲ್ಪಡುವ ನಾಲ್ಕು ಹಳೆಯ ದೇವಾಲಯಗಳ ಸಮೂಹವಾಗಿದೆ. ಇಲ್ಲಿನ ದೇವಾಲಯಗಳ ಗೋಡೆಗಳ ಮೇಲೆ ಸುಂದರವಾದ ವರ್ಣಚಿತ್ರಗಳನ್ನು ಕಾಣಬಹುದು. ನಾಕೋ ಕಣಿವೆ ಕೂಡ ಸುಂದರತೆಗೆ ಹಾಗೂ ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಶಾಂತ ವಾತಾವರಣ ಬೇಕು ಎನ್ನುವವರು ನೀವಾಗಿದ್ದರೆ ನಾಕೋ ಕಣಿವೆಗೆ ಬರಬಹುದು.

ಖೋನೋಮಾ : ಈ ಹಳ್ಳಿ ನ್ಯಾಗಾಲ್ಯಾಂಡ್ ನ ರಾಜಧಾನಿ ಕೋಹಿಮಾದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಖೋನೋಮಾ ಸಮುದಾಯ ಸಂರಕ್ಷಣಾ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಸುಮಾರು 700 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಗ್ರಾಮ 3000 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಎಲ್ಲೆಂದರಲ್ಲಿ ಹಚ್ಚ ಹಸಿರಿನ ಕಾಡುಗಳು ಮತ್ತು ಭತ್ತದ ಗದ್ದೆಗಳನ್ನು ಕಾಣಬಹುದು.

ಈ ರೈಲು ಏರೋಪ್ಲೇನ್‌ಗಿಂತ ವೇಗವಾಗಿ ಓಡಬಲ್ಲದು!

ಇಡುಕ್ಕಿ : ಇಡುಕ್ಕಿ ಕೇರಳದ ಒಂದು ಸುಂದರ ಹಳ್ಳಿಯಾಗಿದ್ದು, ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಹೆಸರುವಾಸಿ. ಇಲ್ಲಿ ಶಾಂತಿಯುತವಾದ ಪರಿಸರವನ್ನೂ ಕಾಣಬಹುದು. ಪ್ರಕೃತಿ ಪ್ರಿಯರಿಗೆ ಇದು ಸ್ವರ್ಗಕ್ಕೆ ಸಮನಾಗಿದೆ. ಇಲ್ಲಿ ಅಂಕುಡೊಂಕಾದ ರಸ್ತೆಗಳು, ಶಾಂತವಾದ ಹಸಿರು ಕಾಡುಗಳು, ಹರಿಯುವ ಜಲಪಾತ ಹಾಗೂ ಸ್ವಚ್ಛವಾದ ಸರೋವರಗಳನ್ನು ನೋಡಬಹುದು

ಝೀರೋ : ಅರುಣಾಚಲಪ್ರದೇಶದ ಝೀರೋದ ಸುಂದರ ಕಣಿವೆಗಳು ಹಾಗೂ ಸ್ವಚ್ಛತೆ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಝೀರೋವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಇಲ್ಲಿ ದೇವದಾರು ಹಾಗೂ ಬಿದಿರುಗಳಿಂದ ಕೂಡಿದ ಬೆಟ್ಟವನ್ನು ಕಾಣಬಹುದು.
 

Latest Videos
Follow Us:
Download App:
  • android
  • ios