ಬಾತ್ ರೂಮಿಲ್ಲ, ಕಿಚನ್ ಇಲ್ಲ.. ತಿಂಗಳಿಗೆ ಅಪಾರ್ಟಮೆಂಟ್ ಬಾಡಿಗೆ ಒಂದು ಲಕ್ಷ!
ಜಗತ್ತಿನಲ್ಲಿ ಅಚ್ಚರಿಯುಂಟು ಮಾಡುವ ಜಾಗಗಳಿವೆ. ಹಾಗೆಯೇ ಹೊಟೇಲ್, ಅಪಾರ್ಟ್ಮೆಂಟ್ ಗಳ ವಿನ್ಯಾಸ ಹುಬ್ಬೇರಿಸುವಂತೆ ಮಾಡುತ್ತೆ. ನ್ಯೂಯಾರ್ಕ್ ನಲ್ಲಿರುವ ಅಪಾರ್ಟ್ಮೆಂಟ್ ವಿನ್ಯಾಸ ಹಾಗೂ ಬಾಡಿಗೆ ಈಗ ಸುದ್ದಿ ಮಾಡಿದೆ.
ಮನೆ ಬಾಡಿಗೆ ಈಗ ದುಬಾರಿ ಆಗಿದೆ. ಸಿಂಗಲ್ ಬೆಡ್ ರೂಮ್ ಮನೆಗಳಿಗೂ ಹತ್ತು – ಹನ್ನೆರಡು ಸಾವಿರ ರೂಪಾಯಿ ಬಾಡಿಗೆ ನೀಡುವ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಇನ್ನು ಚಿಕ್ಕ ಒಂದು ಹಾಲ್ ಗೆ ಆರರಿಂದ ಹತ್ತು ಸಾವಿರ ರೂಪಾಯಿ ಬಾಡಿಗೆ ವಿಧಿಸುವವರಿದ್ದಾರೆ. ನಮ್ಮಲ್ಲೇ ಹೀಗಾದ್ರೆ ಇನ್ನು ಅಮೆರಿಕಾದ ನ್ಯೂಯಾರ್ಕ್ ಸಿಟಿಗಳಲ್ಲಿ ಒಂದು ಮನೆಯ ಬಾಡಿಗೆ ಎಷ್ಟಿರಬೇಡ. ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ ಅಪಾರ್ಟ್ಮೆಂಟ್ ನಲ್ಲಿ ಉಳಿದುಕೊಳ್ಳುವವರಿದ್ದಾರೆ. ಬಾಡಿಗೆಗೆ ತಕ್ಕಂತೆ ನಾವು ಮನೆಯಲ್ಲ ಸೌಕರ್ಯ ಇರಬೇಕು ಎಂದು ಬಯಸ್ತೇವೆ. ಬರಿ ಒಂದು ಬೆಡ್ ರೂಮ್ ಇದ್ರೆ ಒಂದು ದರ, ಮೂರು ರೂಮಿದ್ರೆ ಒಂದು ಬಾಡಿಗೆ, ಎರಡು ಬೆಡ್ ರೂಮ್, ಕಿಚನ್, ಹಾಲ್ ಸೇರಿದಂತೆ ಯುಟಿಲಿಟಿ, ಪಾರ್ಕ್ ಸೌಲಭ್ಯಗಳಿದ್ರೆ ಮತ್ತೊಂದು ರೇಟ್ ಫಿಕ್ಸ್ ಆಗಿರುತ್ತದೆ. ಏನೂ ಇಲ್ಲದ ಬರಿ ಒಂದು ಹಾಲ್ ಗೆ ನಾವು ಅತ್ಯಂತ ಕಡಿಮೆ ಬಾಡಿಗೆ ನೀಡಲು ಬಯಸ್ತೇವೆ. ಅನೇಕ ಕಡೆ ವಿದ್ಯಾರ್ಥಿಗಳಿಗಾಗಿ ಇಂಥ ಮನೆ ಇರುತ್ತದೆ. ಅಲ್ಲಿ ಕಿಚನ್ ಆಗ್ಲಿ, ಪ್ರತೇಕ ರೂಮ್ ಆಗ್ಲಿ ಇರೋದಿಲ್ಲ. ಒಂದು ಸಣ್ಣ ಹಾಲ್ ಮತ್ತೆ ಟಾಯ್ಲೆಟ್, ಬಾತ್ ರೂಮ್ ಇರುತ್ತದೆ. ಆದ್ರೆ ನ್ಯೂಯಾರ್ಕ್ ನ ಅಪಾರ್ಟ್ಮೆಂಟ್ ಈ ಸಾಮಾನ್ಯ ಹಾಲ್ ಗಿಂತಲೂ ಭಿನ್ನವಾಗಿದೆ. ಅದ್ರ ಬೆಲೆ ಕೇಳಿದ್ರೆ ಮಾತ್ರ ತಲೆ ತಿರುಗುತ್ತೆ.
ಭಾರತೀಯ ಪ್ರವಾಸಿಗರಿಗೆ 5 ವರ್ಷ ಅವಧಿಯ ವೀಸಾ ಸೌಲಭ್ಯ ಕಲ್ಪಿಸಿದ ದುಬೈ;ವರ್ಷದಲ್ಲಿ180 ದಿನ ನೆಲೆಸಲು ಅವಕಾಶ
ರಿಯಾಲ್ಟರ್ ಓಮರ್ ಲ್ಯಾಬಾಕ್ ಅವರು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಒಂದು ವೀಡಿಯೊ (Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೀವು ಅಪಾರ್ಟ್ಮೆಂಟ್ (Apartment) ನ ಸಂಪೂರ್ಣ ಚಿತ್ರಣವನ್ನು ನೋಡ್ಬಹುದು. ಓಮರ್ ಲ್ಯಾಬಾಕ್, ವಿಡಿಯೋದಲ್ಲಿ ಮೊದಲು ಒಂದು ಮನೆಯೊಳಗೆ ಹೋಗೋದನ್ನು ನಾವು ನೋಡ್ಬಹುದು. ಅದು ಮನೆಯಲ್ಲ, ಚಿಕ್ಕ ರೂಮ್. ಅದನ್ನೇ ಅವರು ಅಪಾರ್ಟ್ಮೆಂಟ್ ಎನ್ನುತ್ತಿದ್ದಾರೆ. ಅದ್ರಲ್ಲಿ ಎರಡು ಕಬೋರ್ಡ್ ಬಿಟ್ರೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ. ಕಿಚನ್ ಆಗ್ಲಿ, ರೂಮ್ ಆಗ್ಲಿ, ಹಾಲ್ ಆಗ್ಲಿ ಇಲ್ಲ. ಬರೀ ಇಷ್ಟೇ ಅಲ್ಲ ಈ ಮನೆಗೆ ಒಂದು ಬಾತ್ ರೂಮ್, ಟಾಯ್ಲೆಟ್ ಕೂಡ ಇಲ್ಲ. ಮನೆಯಿಂದ ಹೊರ ಬೀಳ್ತಿದ್ದಂತೆ ಹೊಟೇಲ್ ರೂಮಿನಂತೆ ಒಂದಿಷ್ಟು ರೂಮುಗಳನ್ನು ನೀವು ನೋಡ್ಬಹುದು. ಅದೇ ಸಾಲಿನಲ್ಲಿ ಮುಂದೆ ಹೋಗ್ತಿದ್ದಂತೆ ನಿಮಗೆ ಶೌಚಾಲಯ ಕಾಣಿಸುತ್ತೆ. ಇದು ಸಾರ್ವಜನಿಕ ಶೌಚಾಲಯ ಇದ್ದಂತಿದೆ. ಅಪಾರ್ಟ್ಮೆಂಟ್ ನಲ್ಲಿರುವ ಎಲ್ಲರೂ ಇದೇ ಶೌಚಾಲಯ ಹಾಗೂ ಬಾತ್ ರೂಮ್ ಬಳಕೆ ಮಾಡ್ತಾರಾ ಎಂಬುದನ್ನು ಅವರು ಹೇಳಿಲ್ಲ. ಟಾಯ್ಲೆಟ್ ಹಾಗೂ ಬಾತ್ ರೂಮ್ ನೋಡಲು ವ್ಯವಸ್ಥಿತವಾಗಿದೆ.
ಓಮರ್ ಲ್ಯಾಬಾಕ್ ಪ್ರಕಾರ, ಈ ಅಪಾರ್ಟ್ಮೆಂಟ್ ಗೆ ಒಂದು ತಿಂಗಳಿಗೆ 1200 ಡಾಲರ್ ಅಂದ್ರೆ ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಇದೆ. ನ್ಯೂಯಾರ್ಕ್ ನಲ್ಲಿ ಇದು ಅತ್ಯಂತ ಕಡಿಮೆ ಬಾಡಿಗೆ ಇರುವ ಅಪಾರ್ಟ್ಮೆಂಟ್. ವಿದ್ಯಾರ್ಥಿಗಳು ಅಥವಾ ಕೆಲಸಕ್ಕೆ ಬರುವವರು ಈ ಅಪಾರ್ಟ್ಮೆಂಟ್ ನಲ್ಲಿ ಉಳಿಯಬಹುದು ಎನ್ನುತ್ತಾರೆ ಓಮರ್ ಲ್ಯಾಬಾಕ್.
ಈ ಹೋಟೆಲ್‌ನಲ್ಲಿ ಸಿಗೋದು ಬರೀ ಅವಮಾನ, ಚುಚ್ಚುಮಾತು! ಆದ್ರೂ ಜನ ಯಾಕೆ ಹೋಗ್ತಾರೆ?
ಓಮರ್ ಲ್ಯಾಬಾಕ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಜನರು ಈ ರೂಮ್ ಹಾಗೂ ಅದ್ರ ಬೆಲೆ ಕೇಳಿ ದಂಗಾಗಿದ್ದಾರೆ. ಇದು ಅಪಾರ್ಟ್ಮೆಂಟ್ ಆಗಲು ಸಾಧ್ಯವೇ ಇಲ್ಲ. ಅದನ್ನು ಮಾಲೀಕ ಅಪಾರ್ಟ್ಮೆಂಟ್ ಎಂದಿದ್ದರೆ ಆತನ ವಿರುದ್ಧ ದೂರು ನೀಡಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಜೈಲಿನ ಸೆಲ್ ನಲ್ಲೂ ಪ್ರತ್ಯೇಕ ಶೌಚಾಲಯವಿರುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.