ಈ ಹೋಟೆಲ್‌ನಲ್ಲಿ ಸಿಗೋದು ಬರೀ ಅವಮಾನ, ಚುಚ್ಚುಮಾತು! ಆದ್ರೂ ಜನ ಯಾಕೆ ಹೋಗ್ತಾರೆ?

ಲಂಡನ್ ನಲ್ಲಿರುವ ಕರೇನ್ ಹೋಟೆಲ್ ತನ್ನ ಅತಿಥಿಗಳಿಗೆ ಅವಮಾನ ಮಾಡುತ್ತದೆ. ಪದೇ ಪದೆ ಅವರನ್ನು ಕುಗ್ಗಿಸುವಂತಹ ನಡವಳಿಕೆ ತೋರುತ್ತದೆ. ಕಂಫರ್ಟ್ ನಿಂದ ಹೊರತಾದ ಅನ್ವೇಷಣೆ ಮಾಡಬಯಸುವ ಮಂದಿಗೆ ಇದೊಂದು ಸಾಹಸಮಯ ತಾಣವಾಗಿದೆ. 

This hotel is famous for embrassment to guests in london sum

ಹೋಟೆಲ್ ಗೆ ಹೋದಾಗ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು ಎಂದು ಬಹುತೇಕ ಎಲ್ಲರೂ ಬಯಸುತ್ತಾರೆ. ಯಾವುದಾದರೂ ವ್ಯವಸ್ಥೆಯಲ್ಲಿ ಚೂರೇ ಚೂರು ಏರುಪೇರಾದರೂ ಆಕಾಶ ಭೂಮಿ ಒಂದಾಗುವಂತೆ ಕಿರುಚಾಡುವವರಿದ್ದಾರೆ. “ಹಣ ಪಡೆದುಕೊಳ್ಳುವುದು ಯಾಕೆ?’ ಎಂದು ಪ್ರಶ್ನಿಸಿ ಹೋಟೆಲ್ ನವರ ಮಾನಮರ್ಯಾದೆಯನ್ನು ಪಣಕ್ಕಿಡುವವರಂತೆ ವರ್ತಿಸುವವರಿದ್ದಾರೆ. ಅದರಲ್ಲೂ ಐಷಾರಾಮಿ ಹೋಟೆಲುಗಳ ಮಜವೇ ಬೇರೆ. ಎಲ್ಲಿ ಎಲ್ಲವೂ ರಾಯಲ್ ಆಗಿರಬೇಕು. ಎಲ್ಲವೂ ನೀಟಾಗಿ, ಶುದ್ಧವಾಗಿ, ಪಿನ್ ಬಿದ್ದರೂ ಸಪ್ಪಳ ಕೇಳಿಸುವಷ್ಟು ಸ್ತಬ್ಧವಾಗಿರಬೇಕು ಎಂದು ಬಯಸುವವರಿದ್ದಾರೆ. ಹೆಚ್ಚು ಗಲಾಟೆ ಬಯಸದ ಜನವಂತೂ ಐಷಾರಾಮಿ ಹೋಟೆಲುಗಳ ಗಾಳಿಯೂ ಒಳಗೆ ನುಸುಳದ ಮರದ ಬೃಹತ್ ಬಾಗಿಲುಗಳ ಕೋಣೆಯನ್ನು ಸೇರಿಕೊಂಡುಬಿಡುತ್ತಾರೆ. ಅಂತಹ ಲಕ್ಸುರಿ ಸ್ಥಳದಲ್ಲಿ ಪದೇ ಪದೆ ನಿಮಗೆ ಇನ್ಸಲ್ಟ್ ಆಗುತ್ತಿದ್ದರೆ ಏನು ಮಾಡುತ್ತೀರಿ? ಎಲ್ಲೋ ಒಮ್ಮೆ ಅಂತಹ ಅನುಭವವಾದರೂ ಪುನಃ ಈ ಜನ್ಮದಲ್ಲಿ ಆ ಹೋಟೆಲ್ ಗೆ ಹೋಗಲ್ಲ ಎಂದು ನಿರ್ಧರಿಸುವ ಜನ ಹೆಚ್ಚು. ಆದರೆ, ಬ್ರಿಟನ್ನಿನಲ್ಲಿರುವ ಈ ಹೋಟೆಲ್ ಮಾತ್ರ ವಿಭಿನ್ನ, ಅವಮಾನಪಡಿಸಿಕೊಳ್ಳಲೆಂದೇ ಜನ ಇಲ್ಲಿಗೆ ಆಗಮಿಸುತ್ತಾರೆ ಎಂದರೆ ಅಚ್ಚರಿಯಾಗಬಹುದು.

ಹೌದು, ಇದೊಂಥರ ವಿಚಿತ್ರ ಅನುಭವ (Weird Experience) ನೀಡುವ ಹೋಟೆಲ್. ಇಲ್ಲಿನ ರಿಸೆಪ್ಷನಿಸ್ಟ್ ನಿಂದ ಹಿಡಿದು ಎಲ್ಲ ಸಿಬ್ಬಂದಿಯೂ ನಿಮಗೆ ಪದೇ ಪದೆ ಇನ್ಸಲ್ಟ್ (Insult) ಮಾಡುತ್ತಲೇ ಇರುತ್ತಾರೆ. ಇದನ್ನೊಂದು ಜೀವನದ ಅನ್ವೇಷಣೆಯಾಗಿ, ಸಾಹಸಮಯ (Adventurous) ಚಟುವಟಿಕೆಯನ್ನಾಗಿ ಪರಿಗಣಿಸಲೆಂದೇ ಜನ ಇಲ್ಲಿಗೆ ಆಗಮಿಸುತ್ತಾರೆ! ಸಾಮಾನ್ಯವಾಗಿ ಅವಮಾನ ಮಾಡಿಸಿಕೊಳ್ಳುವುದೆಂದರೆ ಯಾರಿಗೂ ಆಗದು. ಯಾವುದೇ ಮನುಷ್ಯರು ಇದನ್ನು ಲೈಕ್ (Like) ಮಾಡುವುದಿಲ್ಲ. ಅವಮಾನಕ್ಕೆ ತುತ್ತಾಗುವುದು ಜೀವನದ ಅತಿ ಕೆಟ್ಟ ಕ್ಷಣವೆಂದೇ ಎಲ್ಲರೂ ಪರಿಗಣಿಸುತ್ತಾರೆ. ಆದರೆ, ಈ ಹೋಟೆಲಿನಲ್ಲಿ (Hotel) ಮಾತ್ರ ದುಬಾರಿ ಹಣ ತೆತ್ತು ಅವಮಾನ ಮಾಡಿಸಿಕೊಳ್ಳುವುದರಲ್ಲಿ ಮಜಾ ಕಾಣುತ್ತಾರೆ. 

ಇದು ಲಂಡನ್ ನಲ್ಲಿರುವ ದುಬಾರಿ ಹೋಟೆಲ್ ಗಳಲ್ಲಿ ಒಂದು. ಒಂದು ರಾತ್ರಿಗೆ 20 ಸಾವಿರ ರೂಪಾಯಿ ನೀಡಬೇಕು. ವಿಶ್ವದ ವಿಚಿತ್ರ ಹೋಟೆಲ್ ಗಳಲ್ಲಿ ಸ್ಥಾನ ಪಡೆದಿರುವ ಇದರ ಹೆಸರು ಕರೇನ್ ಹೋಟೆಲ್. ಅವಮಾನಭರಿತ ಅನುಭವಗಳನ್ನೇ ಇಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ. ಅಗತ್ಯದ ಯಾವುದಾದರೂ ವಸ್ತುಗಳನ್ನು ಪೂರೈಸಲು ಸಹ ಇಲ್ಲಿ ವಿಚಿತ್ರದ ಮಾತುಗಳನ್ನು ಹೇಳಲಾಗುತ್ತದೆ. ಕುಡಿಯುವ ನೀರು ಕೇಳಿದರೆ, “ಸಿಂಕ್ ನಿಂದಲೇ ತೆಗೆದುಕೊಂಡು ಕುಡಿಯಿರಿ’ ಎನ್ನಲಾಗುತ್ತದೆ. ಟೀ ಕಾಯಿಸಿಕೊಳ್ಳುವ ಕುರಿತು ವಿಚಾರಿಸಿದರೆ, “ನಿಮಗೆ ಅಷ್ಟೂ ಗೊತ್ತಾಗಲ್ವ, ನಿಮ್ಮ ಕಲ್ಪನೆಯನ್ನು ಬಳಕೆ ಮಾಡಿ’ ಎಂಬಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. 

ದುಬೈನಲ್ಲಿ ಸೋನು ಸೂದ್​ಗೆ ಕಾದಿತ್ತು ಅಚ್ಚರಿ! ಹೋಟೆಲ್​ ಬಿಲ್​ ಪಾವತಿಸಿ ಟೇಬಲ್​ ಮೇಲೆ ಬರೆದಿತ್ತೊಂದು ಬರಹ...

ಪದೇ ಪದೆ ಚುರುಕಾಗಿ, ಮಾತುಮಾತಿಗೂ ಗ್ರಾಹಕರಿಗೆ ಏನಾದರೊಂದು ಚುಚ್ಚು ನುಡಿಯಲೆಂದೇ ಇಲ್ಲಿ ನುರಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ರಿಸೆಪ್ಷನಿಸ್ಟ್ ನಿಂದ ಹಿಡಿದು ಪ್ರತಿ ಸಿಬ್ಬಂದಿಯ ಮಾತಿನ ಚುರುಕುತನ, ವಿನೋದ (Fun), ಚುಚ್ಚು ನುಡಿಯುವ ಸಾಮರ್ಥ್ಯ, ಅತಿಥಿಗಳನ್ನು ಕುಗ್ಗಿಸುವಂತಹ ಮಾತನಾಡುವ ಕಲೆಯನ್ನು (Skill) ಪರಿಗಣಿಸಿ ನೇಮಿಸಿಕೊಳ್ಳಲಾಗುತ್ತದೆ. ಅಂದ ಹಾಗೆ ಈ ಕರೇನ್ ಹೋಟೆಲ್ ಕಳೆದ ತಿಂಗಳಷ್ಟೇ ಓಪನ್ ಆಗಿದೆ. ಆದರೆ, ಕೆಲವೇ ಸಮಯದಲ್ಲಿ ಎಷ್ಟು ಜನಪ್ರಿಯಗೊಂಡಿದೆ ಎಂದರೆ, ಇಲ್ಲಿನ ರೂಮುಗಳು ಹಲವು ತಿಂಗಳಿಗೆ ಈಗಲೇ ಬುಕ್ (Book) ಆಗಿವೆ. ಆಸ್ಟ್ರೇಲಿಯಾದಲ್ಲಿ ಇಂಥದ್ದೇ ರೆಸ್ಟೋರೆಂಟ್ ತೆರೆದಿದ್ದ ಈ ಸಂಸ್ಥೆ ಅಲ್ಲಿನ ಜನಪ್ರಿಯತೆಯಿಂದ ಪ್ರೇರಣೆ ಪಡೆದು ಲಂಡನ್ ನಲ್ಲೂ ಹೋಟೆಲ್ ತೆರೆದಿದೆ. ಕೆಟ್ಟ (Bad) ಅವಮಾನಕರ ಅನುಭವಗಳ ಹೊರತಾಗಿಯೂ ಗ್ರಾಹಕರು ಈ ಹೋಟೆಲನ್ನು ಆಯ್ಕೆ ಮಾಡುವುದು ವಿಚಿತ್ರ ಎನಿಸುತ್ತದೆ. 

ಕಾಶ್ಮೀರದಿಂದ ಪಂಜಾಬ್‌ಗೆ ಚಲಿಸಿದ ಚಾಲಕ ರಹಿತ ರೈಲು, ತಂತ್ರಜ್ಞಾನವಲ್ಲ ಹ್ಯಾಂಡ್ ಬ್ರೇಕ್ ಮರೆತ ಚಾಲಕ!

ಗ್ರಾಹಕರೊಬ್ಬರು, “ನಾನು ಅತಿ ಸೂಕ್ಷ್ಮತೆ (Sensitive) ಹೊಂದಿದ್ದೇವೆ. ಸಮಾಜದಲ್ಲಿ ನಾಲ್ಕು ಜನರ ಎದುರು ಭಯ (Fear) ಅನುಭವಿಸುತ್ತೇನೆ. ಮತ್ತೊಬ್ಬರ ಮಾತುಗಳ ಬಗ್ಗೆ ಹಿಂಜರಿಕೆ ಹೊಂದಿದ್ದೇನೆ. ಹೀಗಾಗಿ, ನನ್ನ ಭಯಕ್ಕೆ ಮುಖಾಮುಖಿಯಾಗಲು ಇಲ್ಲಿಗೆ ಬಂದಿದ್ದೆ’ ಎಂದು ಹೇಳಿರುವುದು ಈಗ ಸಾಕಷ್ಟು ವೈರಲ್ ಆಗಿದೆ. 

Latest Videos
Follow Us:
Download App:
  • android
  • ios