ಟಿಕೆಟ್ ಇಲ್ಲದೆ ರೈಲು ಹತ್ತಿದ್ದ ಪ್ರಯಾಣಿಕರೊಬ್ಬರು ಶೌಚಾಲಯದೊಳಗೆ ಹೋಗಿ ಲಾಕ್‌ ಮಾಡಿಕೊಂಡಿದ್ದಾರೆ. ನಂತರ, ಬೀಡಿ ಹೊತ್ತಿಸಿದ ಬಳಿಕ ಫೈರ್‌ ಅಲಾರಂ ಹೊಡೆದುಕೊಂಡು ರೈಲು ನಿಂತುಕೊಂಡಿದೆ. 

ಹೈದರಾಬಾದ್ (ಆಗಸ್ಟ್‌ 10, 2023): ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತೆ ಸುದ್ದಿಯಲ್ಲಿದೆ. ಅದರೆ, ಈ ಬಾರಿ ಪ್ರಯಾಣದ ವೇಗ, ಕಲ್ಲು ದಾಳಿ ಅಥವಾ ಎಮ್ಮೆ, ದನಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾಗಿಲ್ಲ. ಪ್ರಯಾಣದ ಸಮಯದಲ್ಲಿ ಬೀಡಿ ಸೇದಿದ ಪ್ರಯಾಣಿಕರೊಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲದೆ, ಟಿಕೆಟ್‌ ಇಲ್ಲದೆ ಆ ವ್ಯಕ್ತಿ ವಂದೇ ಭಾರತ್‌ ರೈಲು ಹತ್ತಿದ್ದರು ಎಂದೂ ತಿಳಿದುಬಂದಿದೆ.

ಆಂಧ್ರಪ್ರದೇಶದ ತಿರುಪತಿಯಿಂದ ತೆಲಂಗಾಣದ ಸಿಕಂದರಾಬಾದ್‌ಗೆ ಹೊರಟಿದ್ದ ರೈಲು ಆಗಷ್ಟೇ ಗುಡೂರು ದಾಟಿತ್ತು ಮತ್ತು ಗಮ್ಯಸ್ಥಾನವು ಇನ್ನೂ ಎಂಟು ಗಂಟೆಗಳಿಗಿಂತ ಹೆಚ್ಚು ದೂರವಿತ್ತು . ಅ ವೇಳೆ, ಸರಿಯಾದ ಟಿಕೆಟ್ ಇಲ್ಲದೆ ರೈಲು ಹತ್ತಿದ್ದ ಪ್ರಯಾಣಿಕರೊಬ್ಬರು ಶೌಚಾಲಯದೊಳಗೆ ಹೋಗಿ ಲಾಕ್‌ ಮಾಡಿಕೊಂಡಿದ್ದರು. ಅವರು ಉಚಿತವಾಗಿ ಪ್ರಯಾಣ ಮಾಡ್ಬೋದಿತ್ತು. ಅದರೆ, ಬೀಡಿ ಎಳೆದು ತಗ್ಲಾಕ್ಕೊಂಡಿದ್ದಾರೆ. ರೈಲಿನಲ್ಲಿ ಧೂಮಪಾನ ನಿಷೇದವಿದ್ದರೂ ಅನೇಕರು ಬಾಗಿಲ ಬಳಿ ಅಥವಾ ಟಾಯ್ಲೆಟ್‌ ಒಳಗೆ ಸೇದುತ್ತಾರೆ. ಅದೇ ರೀತಿ, ವಂದೇ ಭಾರತ್‌ ರೈಲಲ್ಲಿ ಬೀಡಿ ಸೇದಲು ಹೋಗಿ ಇವರು ಸಿಕ್ಕಿಹಾಕಿಕೊಂಡಿದ್ದಾರೆ. 

ಇದನ್ನು ಓದಿ: Vande Bharat Express: ಕೇಸರಿ ಬಣ್ಣದ ಐಷಾರಾಮಿ ರೈಲಿನಲ್ಲಿ ಕಾಣಲಿದೆ ಈ 10 ಬದಲಾವಣೆಗಳು

Scroll to load tweet…

ವಂದೇಭಾರತ್‌ ರೈಲಿನಲ್ಲಿ ಅಳವಡಿಸಲಾದ ಫೈರ್ ಅಲಾರಂಗಳ ಬಗ್ಗೆ ತಿಳಿಯದೆ, ಅವರು ಟಾಯ್ಲೆಟ್‌ ಒಳಗೆ ಬೀಡಿ ಹತ್ತಿಸಿದ್ದಾರೆ. ತಕ್ಷಣವೇ ಫೈರ್‌ ಅಲಾರಂ ಹೊಡೆದುಕೊಳ್ಳಲು ಪ್ರಾರಂಭಿಸಿದ್ದು, ಮತ್ತು ಸ್ವಯಂಚಾಲಿತ ಅಗ್ನಿಶಾಮಕವು ಕೆಲಸ ಮಾಡಿದ್ದು, ಕಂಪಾರ್ಟ್‌ಮೆಂಟ್‌ ಮೂಲಕ ಏರೋಸಾಲ್ ಅನ್ನು ಸಿಂಪಡಿಸಿದೆ. ಇದರಿಂದ ಪ್ರಯಾಣಿಕರು ಗಾಬರಿಯಾಗಿದ್ದು, ಮತ್ತು ರೈಲು ಸಿಬ್ಬಂದಿಯನ್ನು ಎಚ್ಚರಿಸಲು ಅವರು ಕಂಪಾರ್ಟ್‌ಮೆಂಟ್‌ನಲ್ಲಿ ಎಮರ್ಜೆನ್ಸಿ ಫೋನ್ ಬಳಸಿದ್ದಾರೆ. ನಂತರ, ಮನುಬುಲು ನಿಲ್ದಾಣದ ಬಳಿ ವಂದೇಭಾರತ್‌ ರೈಲು ನಿಂತಿದೆ ಎಂದೂ ತಿಳಿದುಬಂದಿದೆ.

ತಕ್ಷಣ ರೈಲ್ವೆ ಪೊಲೀಸ್‌ ಸಿಬ್ಬಂದಿ ಅಗ್ನಿಶಾಮಕ ಯಂತ್ರದೊಂದಿಗೆ ಕಾರ್ಯಾಚರಣೆ ನಡೆಸಿ ಶೌಚಾಲಯದ ಕಿಟಕಿ ಗಾಜು ಒಡೆದಿದ್ದಾರೆ. ಒಳಗೆ ಅವರು ಪ್ರಯಾಣಿಕ ಇರುವುದನ್ನು ಕಂಡುಕೊಂಡರು, ಹಾಗೂ, ಬೀಡಿ ಸೇದಿದ್ದಕ್ಕೆ ರೈಲನ್ನು ನಿಲ್ಲಿಸಲು ಕಾರಣವಾಯಿತು ಎಂದು ಕಂಡುಕೊಂಡಿದ್ದಾರೆ. ಬಳಿಕ, ಪೂರ್ಣ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಹಾಗೂ, ಧೂಮಪಾನ ಮಾಡಿದ ಅ ಪ್ರಯಾಣಿಕನನ್ನು ಮುಂದಿನ ಕ್ರಮಕ್ಕಾಗಿ ನೆಲ್ಲೂರಿನಲ್ಲಿ ಬಂಧಿಸಲಾಯಿತು ಮತ್ತು ರೈಲು ತನ್ನ ಪ್ರಯಾಣವನ್ನು ಪುನಾರಂಭಿಸಿತು ಎಂದು ತಿಳಿದುಬಂದಿದೆ. ಆತನ ವಿರುದ್ಧ ರೈಲ್ವೆ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ವರದಿಯಾಗಿದೆ.

ಇದ ಓದಿ: ಬರಲಿದೆ ಪ್ರಯಾಣಿಕರು, ಸರಕು ಒಟ್ಟಿಗೆ ಹೊತ್ತೊಯ್ಯುವ ಟ್ರೈನ್‌: ಡಬ್ಬಲ್‌ ಡೆಕ್ಕರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭ

ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರೈಲಿನ ಹೊಗೆ ತುಂಬಿದ ಕ್ಯಾಬಿನ್ ಜನರನ್ನು ರೈಲಿನಿಂದ ಸ್ಥಳಾಂತರಿಸುವುದನ್ನು ಕಾಣಬಹುದು. ಆ ಬೋಗಿಯ ಒಳಗೆ ಏರೋಸಾಲ್‌ನ ಕಣಗಳನ್ನು ಮತ್ತು ಚೂರುಚೂರಾದ ಕಿಟಕಿಯನ್ನು ನೋಡಬಹುದಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದು, "ಅನಧಿಕೃತ ಪ್ರಯಾಣಿಕರೊಬ್ಬರು ತಿರುಪತಿಯಿಂದ ರೈಲು ಹತ್ತಿದರು ಮತ್ತು C-13 ಕೋಚ್‌ನ ಟಾಯ್ಲೆಟ್‌ನೊಳಗೆ ಲಾಕ್‌ ಮಾಡಿಕೊಂಡಿದ್ದಾರೆ. ಅವರು ಶೌಚಾಲಯದೊಳಗೆ ಧೂಮಪಾನ ಮಾಡಿದರು, ಇದರ ಪರಿಣಾಮವಾಗಿ ಶೌಚಾಲಯದೊಳಗೆ ಏರೋಸಾಲ್ ಅಗ್ನಿಶಾಮಕವನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಯಿತು" ಎಂದು ವಿಜಯವಾಡ ವಿಭಾಗದ ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿ ( SCR) ವಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಯಿಂದ ಸುಮಾರು ಅರ್ಧ ಗಂಟೆ ಕಾಲ ರೈಲು ನಿಂತಿತ್ತು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಸಾವನ್‌ ಮಾಸದಲ್ಲಿ ಹಲಾಲ್‌ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್‌ ಟೀ’’ ವಿವಾದ?