ಇಲ್ಲಿ ಉಚಿತವಾಗಿ ಸಿಗ್ತಿದೆ ಚೋಲಾ ಭಾತುರೆ : ಮಾಲ್ಡೀವ್ಸ್ ಕ್ಯಾನ್ಸಲ್ಡ್ ಟಿಕೆಟ್ ತೋರಿಸಬೇಕು!
ಉಚಿತ ಅಂದಾಗ ನಾವು, ನೀವ್ಯಾರು ಅದನ್ನು ಬಿಡೋದಿಲ್ಲ. ಅದ್ರಲ್ಲೂ ಆಹಾರ ಫ್ರೀ ಅಂದಾಗ ಕಿವಿ ನೆಟ್ಟಗಾಗುತ್ತೆ. ನೀವೂ ಉಚಿತವಾಗಿ ಚೋಲಾ ಭಾತುರ ತಿನ್ನಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ?
ಪಂಜಾಬಿನ ಚೋಲೆ ಭಾತುರೆ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ತುಂಬಾ ರುಚಿಕರ ಖಾದ್ಯಗಳಲ್ಲಿ ಚೋಲೆ ಭಾತುರೆ ಒಂದು. ಆದ್ರೆ ಇದನ್ನು ಎಲ್ಲ ದಿನ ಮಾಡಿ ತಿನ್ನೋಕೆ ಆಗಲ್ಲ. ಹಾಗೆ ಎಲ್ಲರ ಮನೆಯಲ್ಲೂ ಇದನ್ನು ಮಾಡೋದಿಲ್ಲ. ನಿಮಗೆ ಚೋಲೆ ಭಾತುರೆ ಇಷ್ಟ ಅಂದ್ರೆ ಉಚಿತವಾಗಿ ಇದನ್ನು ತಿನ್ನುವ ಅವಕಾಶವೊಂದಿದೆ.
ಭಾರತ (India ) –ಮಾಲ್ಡೀವ್ಸ್ (Maldives) ವಿವಾದ ನಿಮಗೆ ಗೊತ್ತೇ ಇದೆ. ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನ ಮಾಡಿದ ನಂತ್ರ ದ್ವೀಪದ ಮೂವರು ಸಚಿವರು ಅಮಾನತುಗೊಂಡಿದ್ದಾರೆ. ಆದ್ರೆ ಭಾರತೀಯರಿಗೆ ಇದ್ರಿಂದ ತೃಪ್ತಿಯಾಗಿಲ್ಲ. ಮಾಲ್ಡೀವ್ಸ್ ಪ್ರವಾಸದಿಂದ ದೂರವಿರುವ ನಿರ್ಧಾರವನ್ನು ಅನೇಕರು ತೆಗೆದುಕೊಂಡಿದ್ದಾರೆ. ಮಾಲ್ಡಿವ್ಸ್ ಗಿಂತ ನಮ್ಮ ಭಾರತದಲ್ಲೇ ಸುಂದರ ಪ್ರವಾಸಿ ತಾಣಗಳಿವೆ. ಅದ್ರಲ್ಲಿ ಲಕ್ಷದ್ವೀಪ ಕೂಡ ಒಂದು. ಮೋದಿ ಫೋಟೋ ಶೂಟ್ ಗೆ ಅಕರ್ಷಿತರಾದ ಅನೇಕ ಭಾರತೀಯರು ಮಾಲ್ಡೀವ್ಸ್ ಬದಲು ಲಕ್ಷ ದ್ವೀಪಕ್ಕೆ ಪ್ರಯಾಣ ಬೆಳೆಸುವ ಮನಸ್ಸು ಮಾಡಿದ್ದಾರೆ. ಇದೇ ಕಾರಣಕ್ಕೆ ಮಾಲ್ಡಿವ್ಸ್ ವಿಮಾನ ಟಿಕೆಟ್ ರದ್ದಾಗ್ತಿದೆ. ಕೆಲ ಸೆಲೆಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿರೋದಾಗಿ ಹೇಳಿಕೊಂಡಿದ್ದಾರೆ.
ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು
ಚೋಲೆ ಭಾತುರೆ ವಿಷ್ಯ ಹೇಳ್ತಾ ಮಾಲ್ಡೀವ್ಸ್ ವಿಷ್ಯ ಏಕೆ ಬಂತು ಅಂತಾ ನೀವು ಪ್ರಶ್ನೆ ಮಾಡ್ಬಹದು. ಚೋಲೆ ಭಾತುರೆ ಹಾಗೂ ಮಾಲ್ಡೀವ್ಸ್ ಗೆ ಸಂಬಂಧ ಇದೆ. ನೀವು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ್ದರೆ, ಲಕ್ಷ ದ್ವೀಪಕ್ಕೆ ಪ್ರವಾಸ ಹೊರಟಿದ್ದರೆ ನಿಮಗೆ ಈ ಉಚಿತ ಚೋಲೆ ಭಾತುರೆ ತಿನ್ನುವ ಅವಕಾಶ ಸಿಗುತ್ತದೆ.
ಎಲ್ಲಿ ಸಿಗ್ತಿದೆ ಉಚಿತ ಚೋಲೆ ಭಾತುರೆ : ನೋಯ್ಡಾದ ರೆಸ್ಟೊರೆಂಟ್ ಒಂದು ಈ ಡ್ರೂಲಿಂಗ್ ಆಫರ್ ನೀಡ್ತಿದೆ. ವಿಜಯ್ ಮಿಶ್ರಾ ಅವರ ರೆಸ್ಟೋರೆಂಟ್ ಈ ಆಫರ್ ನೀಡ್ತಿದೆ. , #BoycottMaldives ಅಭಿಯಾನ ವಿಜಯ್ ಅವರ ಗಮನ ಸೆಳೆಯಿತು. ತಾನೂ ಏನಾದ್ರೂ ಮಾಡ್ಬೇಕು ಎಂದುಕೊಂಡ ಅವರು, ಮಾಲ್ಡೀವ್ಸ್ ಟಿಕೆಟ್ ರದ್ದು ಮಾಡಿದ ಹಾಗೂ ಲಕ್ಷ ದ್ವೀಪಕ್ಕೆ ಪ್ರವಾಸಕ್ಕೆ ಹೋಗುವವರಿಗೆ ಚೋಲೆ ಭಾತುರೆ ಉಚಿತವಾಗಿ ನೀಡುವ ಘೋಷಣೆ ಮಾಡಿದ್ರು.
ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ವಿಜಯ್ ಮಿಶ್ರಾ ಅವರ ರೆಸ್ಟೋರೆಂಟ್ ಇದೆ. ಈ ಯೋಜನೆ ಶುರು ಮಾಡಿ ಒಂದು ವಾರ ಕಳೆದಿದೆ. ಈವರೆಗೆ ಹತ್ತು ಮಂದಿ ಉಚಿತವಾಗಿ ಚೋಲಾ ಭಾತುರಾ ಸೇವನೆ ಮಾಡಿದ್ದಾರಂತೆ. ನೀವೂ ಮಾಲ್ಡೀವ್ಸ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಈ ಅವಕಾಶದ ಲಾಭ ಪಡೆಯಬಹುದು ಅಂತಾ ವಿಜಯ್ ಮಿಶ್ರಾ ಹೇಳ್ತಾರೆ.
ವಿಜಯ್ ಮಿಶ್ರಾ ಹೊಟೇಲ್ ನಲ್ಲಿ ಉಚಿತವಾಗಿ ಚೋಲಾ ಭಾತುರಾ ಸೇವನೆ ಮಾಡಿದವರು ಫುಲ್ ಖುಷಿಯಾಗಿದ್ದಾರೆ. ಅವರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ ಮೇಲೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಮಿಶ್ರಾಗೆ ಬಂದಿದೆ. ಇದೇ ಕಾರಣಕ್ಕೆ ಜನವರಿ ಅಂತ್ಯದವರೆಗೆ ರೆಸ್ಟೋರೆಂಟ್ ನಲ್ಲಿ ಚೋಲಾ ಭಾತುರಾವನ್ನು ಉಚಿತವಾಗಿ ನೀಡೋದಾಗಿ ಹೇಳಿದ್ದಾರೆ. ಇದು ನನ್ನ ವ್ಯಾಪಾರವನ್ನು ಮಾತ್ರ ಹೆಚ್ಚಿಸೋದಿಲ್ಲ, ದೇಶದ ಪ್ರವಾಸೋಧ್ಯಮಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಿದೆ ಎಂದು ವಿಜಯ್ ಮಿಶ್ರಾ ಹೇಳಿದ್ದಾರೆ.
Suri Tribe : ಸೌಂದರ್ಯ ಹೆಚ್ಚಿಸೋಕೆ ಇದೆಂಥ ಕೆಲಸ ಮಾಡ್ತಾರೆ ಈ ಹುಡುಗಿಯರು!
ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಸರಿಯಾಗಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಮೊಹಮ್ಮದ್ ಮುಯಿಝು, ತಮ್ಮ ಚುನಾವಣಾ ಭರವಸೆಯಲ್ಲಿ ಹೇಳಿದಂತೆ ಭಾರತೀಯ ಸೇನಾ ಸಿಬ್ಬಂದಿಯನ್ನು ವಾಪಸ್ ಕಳುಹಿಸುವ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಮಾರ್ಚ್ ಹದಿನೈದರ ಒಳಗೆ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಮಾಲ್ಡೀವ್ವ್ಸ್ ಅಧ್ಯಕ್ಷರು ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.