Asianet Suvarna News Asianet Suvarna News

Suri Tribe : ಸೌಂದರ್ಯ ಹೆಚ್ಚಿಸೋಕೆ ಇದೆಂಥ ಕೆಲಸ ಮಾಡ್ತಾರೆ ಈ ಹುಡುಗಿಯರು!

ಬುಡಗಟ್ಟು ಜನಾಂಗದ ಪದ್ಧತಿಗಳು ಭಿನ್ನವಾಗಿರುತ್ತವೆ. ಕೆಲವೊಂದು ಅಪಾಯಕಾರಿ ಕೆಲಸವನ್ನೂ ಅವರು ಆಸಕ್ತಿಯಿಂದ ಮಾಡ್ತಾರೆ. ಮದುವೆ ಬೇಗ ಆಗ್ಬೇಕು, ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಈ ಹುಡುಗಿಯರು ಮಾಡೋ ಕೆಲಸ ನೋಡಿದ್ರೆ ಅಚ್ಚರಿಯಾಗುತ್ತೆ. 
 

Ethiopian Suri Tribe Girls Stretch Mouth Using Lip Plates roo
Author
First Published Jan 19, 2024, 3:31 PM IST

ಪ್ರಪಂಚದ ಪ್ರತಿಯೊಬ್ಬ ಮಹಿಳೆ ಸುಂದರವಾಗಿ ಕಾಣಲು ಬಯಸ್ತಾಳೆ. ಸುಂದರವಾಗಿ ಕಾಣೋದು ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಮಹಿಳೆಯರು ನಂಬುತ್ತಾರೆ. ತನ್ನ ಅಂದ ಹೆಚ್ಚಿಸಿಕೊಳ್ಳಲು ಮಹಿಳೆ ನಾನಾ ಪ್ರಯತ್ನಗಳನ್ನು ನಿರಂತರವಾಗಿ ಮಾಡ್ತಿರುತ್ತಾಳೆ. ಈ ಸಮಯದಲ್ಲಿ ಸಾಕಷ್ಟು ನೋವು ತಿನ್ನುವ ಮಹಿಳೆಯರಿದ್ದಾರೆ. ಸೌಂದರ್ಯ ಹಾಗೂ ಮಹಿಳೆ ಅನಾದಿ ಕಾಲದಿಂದಲೂ ಒಂದು ನಾಣ್ಯದ ಎರಡು ಮುಖಗಳು. ಈಗ ಮಾತ್ರವಲ್ಲ ಪುರಾತನ ಕಾಲದಿಂದಲೂ ಮಹಿಳೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಕಾಲ ಬದಲಾದಂತೆ ಆಕೆ ಬಳಸುವ ವಸ್ತುಗಳಲ್ಲಿ ಬದಲಾವಣೆ ಆಗಿದೆ. ಆಗ ಮಣ್ಣು, ನೈಸರ್ಗಿಕವಾಗಿ ಸಿಗುವ ಗಿಡ – ಮರಗಳ ರಸಗಳನ್ನು ಮೈ, ಮುಖಕ್ಕೆ ಹಚ್ಚಿಕೊಳ್ತಿದ್ದರೆ ಈಗ ಕಾಸ್ಮೆಟಿಕ್ ಸರ್ಜರಿ ಮೂಲಕ ಸೌಂದರ್ಯವನ್ನು ಮಹಿಳೆಯರು ಹೆಚ್ಚಿಸಿಕೊಳ್ತಿದ್ದಾರೆ. ಜಗತ್ತು ಎಷ್ಟೇ ಮುಂದುವರೆದಿರಲಿ, ದೂರ ದೂರದ ಊರಿಗೆ ಎಲ್ಲ ಸೌಲಭ್ಯ ಲಭ್ಯವಿರಲಿ, ಕೆಲ ಬುಡಕಟ್ಟು ಜನಾಂಗದ ಪದ್ಧತಿ ಮಾತ್ರ ಬದಲಾಗಿಲ್ಲ. ಕೆಲ ಬುಡಕಟ್ಟು ಜನಾಂಗದವರು ಈಗ್ಲೂ ತಮ್ಮ ಹಳೆ ಪದ್ಧತಿಯನ್ನು ನಂಬಿ ನಡೆಯುತ್ತಿದ್ದಾರೆ. ಅದ್ರಲ್ಲಿ ಇಥಿಯೋಪಿಯಾದ ಸೂರಿ ಬುಡಕಟ್ಟಿನ ಜನರು ಸೇರಿದ್ದಾರೆ.

ತುಟಿ (Lip) ಯಿಂದ ನಿರ್ಧಾರವಾಗುತ್ತೆ ಹುಡುಗಿ ಸೌಂದರ್ಯ (Beauty) : ಈಗಿನ ಮಹಿಳೆಯರು ಚೆಂದದ ಕೆಂಪು ತುಟಿಯನ್ನು ಬಯಸ್ತಾರೆ. ಹಾಗಾಗಿ ಅದಕ್ಕೆ ಒಂದಿಷ್ಟು ಲಿಪ್ಸ್ಟಿಕ್ ಹಚ್ಚಿಕೊಳ್ತಾರೆ. ಆದ್ರೆ ಇಥಿಯೋಪಿಯಾ (Ethiopia) ದ ಸೂರಿ ಬುಡಕಟ್ಟಿನ ಮಹಿಳೆಯರ ಸೌಂದರ್ಯದ ಸಂಕೇತ ಭಿನ್ನವಾಗಿದೆ. ಅವರು ಅಗಲವಾದ ತುಟಿಯನ್ನು ಸೌಂದರ್ಯದ ಸಂಕೇತವೆಂದು ಭಾವಿಸ್ತಾರೆ. ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿಯೊಂದು ಎಲ್ಲರನ್ನು ಅಚ್ಚರಿಗೊಳಿಸುತ್ತದೆ.

ಆಸ್ಪತ್ರೆ ಸೇರಿದ್ದ ಉರ್ಫಿಗೆ ಇದೇನಾಯ್ತು? ಲಕ್ಷಗಟ್ಟಲೆ ಲೈಕ್ಸ್ ಪಡೆದ ಈ ಹೊಸ ಅವತಾರದಲ್ಲಿ ಅಂಥದ್ದೇನಿದೆ?

ಹೆಣ್ಣು ಮಕ್ಕಳು ದೊಡ್ಡವರಾಗ್ತಿದ್ದಂತೆ ಈ ಜಾತಿಯ ಜನರು ಅವರ ಕೆಳ ತುಟಿಯ ಬಳಿ ಇರುವ ಎರಡು ಹಲ್ಲುಗಳನ್ನು ತೆಗೆಯುತ್ತಾರೆ. ನಂತ್ರ  ಕೆಳಗಿನ ತುಟಿಗೆ ಸಣ್ಣ ಹೋಲ್ ಮಾಡ್ತಾರೆ. ಅದಕ್ಕೆ ಸುಮಾರು 16 ಇಂಚು ಅಗಲದ ಮರದ ಅಥವಾ ಜೇಡಿಮಣ್ಣಿನ ತುಂಡನ್ನು ಅಂಟಿಸಿಕೊಳ್ತಾರೆ. ವಯಸ್ಸಿಗೆ ತಕ್ಕಂತೆ ಇದು ದೊಡ್ಡದಾಗ್ತಾ ಹೋಗುತ್ತದೆ. ತುಟಿಗೆ ಮಣ್ಣಿನ ಅಥವಾ ಮರದ ದೊಡ್ಡ ತುಂಡು ಹಾಗ್ತಿದ್ದಂತೆ ತುಟಿ ಕೂಡ ದೊಡ್ಡದಾಗುತ್ತದೆ. ಹುಡುಗಿಯ ಬಾಯಿಗೆ ಎಷ್ಟು ದೊಡ್ಡ ತುಂಡು ಹಾಕಲಾಗಿದ್ಯೋ ಅದ್ರ ಮೇಲೆ ಆಕೆ ಸೌಂದರ್ಯ ನಿರ್ಧಾರವಾಗುತ್ತದೆ. ಆಕೆ ತುಟಿಗೆ ಹಾಕಿರುವ ತಟ್ಟೆ ದೊಡ್ಡದಾಗಿದ್ದರೆ ಆಕೆ ಮನೆಯವರಿಗೆ ಖುಷಿ. ಎಲ್ಲರೂ ಇದನ್ನು ಮೆಚ್ಚಿಕೊಳ್ತಾರೆ. ಯಾಕೆಂದ್ರೆ ಅವರು ಹೆಚ್ಚಿನ ವಧುದಕ್ಷಿಣೆಯನ್ನು ಕೇಳ್ಬಹುದು.

ದೊಡ್ಡ ತುಟಿ ಹುಡುಗಿಗೆ ಸಿಗುತ್ತೆ ಎಷ್ಟು ವಧುದಕ್ಷಿಣೆ? : ಒಂದ್ವೇಳೆ ಹುಡುಗಿ ತುಟಿ ಹೆಚ್ಚು ದೊಡ್ಡದಾಗಿದ್ದರೆ ಆಕೆ ತಂದೆ ವರನಿಂದ 60 ಹಸುಗಳನ್ನು ವರದಕ್ಷಿಣೆಯಾಗಿ ಕೇಳುತ್ತಾನೆ. ಅದೇ ತುಟಿ ಸಣ್ಣದಾಗಿದ್ದರೆ ಆತ 40 ಹಸುಗಳನ್ನು ವರದಕ್ಷಿಣೆಯಾಗಿ ಕೇಳುತ್ತಾನೆ. ಇಲ್ಲಿನ ಮಹಿಳೆಯರ ಅಲಂಕಾರ ಕೂಡ ವಿಚಿತ್ರವಾಗಿದೆ. ತಮ್ಮ ದೇಹಕ್ಕೆ ಪೇಂಟ್ ಮಾಡಿಕೊಳ್ಳುವ ಜನರು ತಮ್ಮನ್ನು ತಾವು ಆದಿವಾಸಿ ಜನಾಂಗದ ಕಲಾವಿದರೆಂದು ಭಾವಿಸ್ತಾರೆ. 

ಆಮೀರ್ ಖಾನ್ ಮಗಳ ರಿಸೆಪ್ಷನಲ್ಲಿ ಕತ್ರೀನಾ ಹೀಗೆ ಮಾಡಿರೋದು ಸರೀನಾ ಅಂತಿದ್ದಾರೆ ಫ್ಯಾಷನ್ ಪ್ರಿಯರು!

ಸೂರಿ ಇಥಿಯೋಪಿಯಾದ ನೈಋತ್ಯ ಭಾಗದಲ್ಲಿ ವಾಸಿಸುವ ಒಂದು ಸಣ್ಣ ಬುಡಕಟ್ಟು. ಈ ಬುಡಕಟ್ಟು ಜನಾಂಗವನ್ನು ಸುರ್ಮಾ ಎಂದೂ ಕರೆಯುತ್ತಾರೆ. ಈ ಬುಡಕಟ್ಟಿನ ಮುಖ್ಯ ಕೆಲಸವೆಂದರೆ ಪ್ರಾಣಿ ಮೇಯಿಸುವುದು. ಸೂರಿ ಜನರು ನಿಲೋ-ಸಹಾರನ್ ಭಾಷೆಯನ್ನು ಮಾತನಾಡುತ್ತಾರೆ. ಇಥಿಯೋಪಿಯಾದ ಮುರ್ಸಿ ಮತ್ತು ಮಿಯೆನ್ ಬುಡಕಟ್ಟುಗಳಿಗೆ ಸಂಬಂಧಿಸಿದ್ದವರಾಗಿದ್ದಾರೆ. ಈ ಬುಡಕಟ್ಟಿನ ಜನರು ಡೋಂಗಾ ಎಂಬ ಹೋರಾಟದಲ್ಲಿ ಭಾಗವಹಿಸುತ್ತಾರೆ. ಈ ಯುದ್ಧವು ಕೋಲುಗಳಲ್ಲಿ ನಡೆಯುತ್ತದೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಅನೇಕ ಬಾರಿ ಸಾವು ಸಂಭವಿಸುತ್ತದೆ. ನಾನು ಶಕ್ತಿಶಾಲಿ ಎಂದು ಮಹಿಳೆಯರಿಗೆ ತೋರಿಸಲು ಈ ಯುದ್ಧದಲ್ಲಿ ಪುರುಷರು ಪಾಲ್ಗೊಳ್ಳುತ್ತಾರೆ. 
 

Follow Us:
Download App:
  • android
  • ios