Asianet Suvarna News Asianet Suvarna News

ಈ ಊರಿನವರನ್ನು ಮದ್ವೆಯಾಗ್ಬೇಕಂದ್ರೆ ಮಾಂಸಾಹಾರ ಸೇವಿಸಬಾರದು, ಮದ್ಯ ವರ್ಜಿಸಬೇಕು!

ಚಟವಿಲ್ಲದ ವ್ಯಕ್ತಿ ಸಿಗೋದು ಕಷ್ಟ. ಮದ್ಯ, ಸಿಗರೇಟ್, ಗುಟ್ಕಾ ಸೇರಿದಂತೆ ಯಾವ ಚಟವೂ ಇಲ್ಲದ ವ್ಯಕ್ತಿ, ಅದ್ರಲ್ಲೂ ಸಸ್ಯಹಾರಿ ನಿಮ್ಮ ಮಗಳಿಗೆ ಗಂಡನಾಕ್ಮೇಕು ಅಂದ್ರೆ ಇಲ್ಲಿಗೆ ಹೋಗಿ. 
 

People Do Not Marry Into Drug Addicts and non vegitatian Families in Vaishali district of Bihar india roo
Author
First Published Dec 20, 2023, 3:26 PM IST

ಮಾಂಸಹಾರ ಮತ್ತು ಸಸ್ಯಹಾರದಲ್ಲಿ ಯಾವುದು ಒಳ್ಳೆಯದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸಸ್ಯಹಾರಿಗಳು ತಮ್ಮದು ಬೆಸ್ಟ್ ಅಂದ್ರೆ ಮಾಂಸಹಾರಿಗಳು ತಮ್ಮ ಆಹಾರ ಅತ್ಯುತ್ತಮ ಎನ್ನುತ್ತಾರೆ. ಈಗಿನ ದಿನಗಳಲ್ಲಿ  ಸಸ್ಯಹಾರಕ್ಕೆ ಕಟ್ಟು ಬೀಳುವವರು ಬಹಳ ಕಡಿಮೆ. ಸಸ್ಯಹಾರಿ ಕುಟುಂಬದಿಂದ ಬಂದ ಅನೇಕ ಯುವಕರು ಮಾಂಸಹಾರ ಸೇವನೆ ಮಾಡ್ತಿದ್ದಾರೆ. ಹಾಗೆಯೇ ಅವರ ಜೀವನ ಶೈಲಿ ಬದಲಾಗಿದೆ. ಮಾಂಸಹಾರದ ಜೊತೆ ಮದ್ಯಪಾನ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಸಣ್ಣ ವಯಸ್ಸಿನಲ್ಲೇ ಈ ವ್ಯಸನಕ್ಕೆ ಬಲಿಯಾಗುವ ಅನೇಕರನ್ನು ನಾವು ನೋಡ್ಬಹುದು. ಯಾವುದೇ ಚಟವಿಲ್ಲದ ವ್ಯಕ್ತಿ ಸಿಗೋದು ನಿಮಗೆ ಬಹಳ ಅಪರೂಪ. ಮದ್ಯಪಾನ, ಸಿಗರೇಟು, ಗುಟ್ಕಾ, ಜೂಜು ಸೇರಿದಂತೆ ಒಂದಲ್ಲ ಒಂದು ವ್ಯಸನಕ್ಕೆ ಈಗಿನ ಯುವಜನತೆ ಒಳಗಾಗ್ತಿದೆ. ಅದನ್ನು ಫ್ಯಾಷನ್ ಎಂದುಕೊಂಡವರು ಅನೇಕ ಮಂದಿ. ಕೆಲವರು ಅವರ ಸ್ನೇಹಿತರು ಅಥವಾ ಸುತ್ತಮುತ್ತಲಿನವರ ಪ್ರಭಾವಕ್ಕೆ ಒಳಗಾಗಿ ಇಂಥ ಚಟಕ್ಕೆ ಬಲಿಯಾಗ್ತಾರೆ. ಆದರೆ ಯಾವುದೇ ಚಟವಿಲ್ಲದ ಗ್ರಾಮವೊಂದಿದೆ ಅಂದ್ರೆ ನೀವು ನಂಬ್ಲೇಬೇಕು. ಗ್ರಾಮದ ಯಾವುದೇ ವ್ಯಕ್ತಿ ಕದ್ದು ವ್ಯವಹಾರ ನಡೆಸೋದಿಲ್ಲ. ಹಾಗಂತ ಅಲ್ಲಿನ ಜನಸಂಖ್ಯೆ ಕಡಿಮೆ ಏನಿಲ್ಲ. ಅನೇಕಾನೇಕ ವರ್ಷಗಳಿಂದ ಕಟ್ಟುನಿಟ್ಟಾಗಿ ಕೆಲ ನಿಯಮ ಪಾಲನೆ ಮಾಡಿಕೊಂಡು ಬರ್ತಿರುವ ಜನರು, ಮುಂದಿನ ಪೀಳಿಗೆಗೂ ಇದನ್ನು ಕಲಿಸಿದ್ದಾರೆ.

ಬಿಹಾರ (Bihar) ದಲ್ಲಿ ಮದ್ಯಪಾನಿಗಳ (Drunkards) ಸಂಖ್ಯೆ ಹೆಚ್ಚಾಗಿದೆ. ಮಾಂಸಹಾರ ಸೇವನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಆದ್ರೆ ವೈಶಾಲಿ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಕುಶ್ವಾಹ ಟೋಲಾ ಸಂಪೂರ್ಣ ಭಿನ್ನವಾಗಿದೆ. ಇಲ್ಲಿನ ಜನರು ಮಾಂಸಹಾರ ಸೇವನೆ ಮಾಡೋದಿಲ್ಲ. ಮದ್ಯ (Alcohol ) ಸೇವನೆಯಿಂದ ಸಂಪೂರ್ಣ ದೂರವಿದ್ದಾರೆ. ಇಲ್ಲಿ ಮದುವೆ ಕೂಡ ಕೆಲ ಷರತ್ತಿನಲ್ಲೇ ನಡೆಯುತ್ತದೆ.

ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು! ಮಂದಿರ ಉದ್ಘಾಟನೆ ಬಳಿಕ 100 ದಿನ ಸಂಚಾರ

ಕುಶ್ವಾಹ ಟೋಲಾ (Kushwaha Tola) ಹಳ್ಳಿಯಲ್ಲಿ ಕುಶವಾಹ ಜಾತಿಗೆ ಸೇರಿದ ಜನರು ವಾಸವಾಗಿದ್ದಾರೆ. ಸುಮಾರು ಐದುನೂರು ಮಂದಿ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಹಲವು ದಶಕಗಳಿಂದ ಇಲ್ಲಿನ ಜನರು ಮದ್ಯಪಾನ ಮಾಡೋದಿಲ್ಲ. ಹಾಗೆಯೇ ಮಾಂಸಹಾರ ಸೇವನೆ ಮಾಡೋದಿಲ್ಲ. ಬರೀ ಮಾಂಸಹಾರ ತಿನ್ನೋದಲ್ಲ, ಅವರು ಅದಕ್ಕೆ ಬಳಸುವ ಪ್ರಾಣಿಗಳ ಸಾಕಣೆ ಕೂಡ ಮಾಡೋದಿಲ್ಲ. ನೀವು ಇಲ್ಲಿನ ಮನೆಗಳಲ್ಲಿ ಕೋಳಿ, ಮೇಕೆ, ಮೀನುಗಳನ್ನು ನೋಡಲು ಸಾಧ್ಯವಿಲ್ಲ. ಹಣ್ಣು ಹಾಗೂ ತರಕಾರಿ ಬೆಳೆದು ಇವರು ಜೀವನ ನಡೆಸುತ್ತಾರೆ. ಇಲ್ಲಿನ ಅಂಗಡಿಯಲ್ಲಿ ನಿಮಗೆ ಯಾವುದೇ ಅಮಲಿನ ಪದಾರ್ಥ ಸಿಗೋದಿಲ್ಲ. ಸಿಗರೇಟು, ಗುಟ್ಕಾ, ಆಲ್ಕೋಹಾಲ್, ಪಾನ್ ಎಲ್ಲವೂ ಇಲ್ಲಿ ಬ್ಯಾನ್. 

ಮದುವೆಗೆ ಈ ಷರತ್ತು : ಇಲ್ಲಿ ಮದುವೆ ಮಾಡುವ ಮುನ್ನ ಷರತ್ತು ವಿಧಿಸಲಾಗುತ್ತದೆ. ಮನೆಗೆ ಬಂದ ಅಳಿಯ ಅಥವಾ ಸೊಸೆ ಮದ್ಯಪಾನ ಮಾಡಬಾರದು. ಮಾಂಸ ಸೇವನೆ ಮಾಡಬಾರದು. ಈಗಾಗಲೇ ಅವರು ಮದ್ಯಪಾನ ಅಥವಾ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರೆ, ಅಂಥ ಕುಟುಂಬದಿಂದ ಬಂದವರಾಗಿದ್ದರೆ ಅವರಿಗೆ ಹೆಣ್ಣು ನೀಡೋದಿಲ್ಲ. ಹಾಗೆಯೇ ಅಂಥ ಕುಟುಂಬದಿಂದ ಸೊಸೆಯನ್ನೂ ತರೋದಿಲ್ಲ. ಮದುವೆಗೆ ಮೊದಲೇ ಷರತ್ತು ವಿಧಿಸಲಾಗುತ್ತದೆ. ನಂತ್ರವೂ ಈ ಬಗ್ಗೆ ಪರಿಶೀಲನೆ ನಡೆಯುತ್ತದೆ. ಮದ್ಯಪಾನ ಮಾಡುವ ಅಥವಾ ಮಾಂಸ ಸೇವನೆ ಮಾಡುವವರ ಜೊತೆ ಲೈಂಗಿಕ ಸಂಬಂಧ ಬೆಳೆಸುವುದು ಇಲ್ಲಿ ನಿಷಿದ್ಧ.

New Year 2024 : ಹೊಸ ವರ್ಷಕ್ಕೆ ರೆಡಿಯಾದ ಬುರ್ಜ್ ಖಲೀಫಾ, ರೂಮ್ ರೆಂಟ್ ಕೇಳಿದ್ರಾ?

ಬರೀ ಹಿರಿಯರು ಮಾತ್ರವಲ್ಲ ಯುವಕರು ಕೂಡ ತಲೆಮಾರುಗಳಿಂದ ನಡೆದು ಬಂದ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ಸ್ನೇಹ ಬೆಳೆಸುವ ಮುನ್ನ ಕೂಡ ಅವರು ನೂರು ಬಾರಿ ಆಲೋಚನೆ ಮಾಡ್ತಾರೆ. ವ್ಯಸನದಿಂದ ದೂರವಿರುವ ಹಾಗೂ ಸಸ್ಯಹಾರಿಗಳ ಜೊತೆ ಮಾತ್ರ ಇವರ ಸ್ನೇಹ ಸಂಬಂಧವಿರುತ್ತದೆ. 
 

Follow Us:
Download App:
  • android
  • ios