Asianet Suvarna News Asianet Suvarna News

ಜಗತ್ತಿನ ಅತಿದೊಡ್ಡ ಐಷಾರಾಮಿ ಹಡಗಿನ ಮೊದಲ ಪಯಣ ಶುರು; ಇದು ಐಕಾನ್ ಆಫ್ ದ ಸೀಸ್

ರಾಯಲ್ ಕೆರಿಬಿಯನ್ ಸಂಸ್ಥೆಗೆ ಸೇರಿರುವ ವಿಶ್ವದ ಬೃಹತ್ ನೌಕೆ “ಐಕಾನ್ ಆಫ್ ದ ಸೀಸ್’ ತನ್ನ ಮೊದಲ ಪ್ರಯಾಣ ಆರಂಭಿಸಿದೆ. ನೌಕಾ ಇತಿಹಾಸದಲ್ಲಿ ಅತ್ಯಂತ ಐಷಾರಾಮಿ ಹಡಗು ಎನ್ನುವ ಪ್ರಸಿದ್ಧಿ ಹೊಂದಿದ್ದ ಟೈಟಾನಿಕ್ ಗಿಂತ ಇದು ಐದು ಪಟ್ಟು ವಿಸ್ತಾರವಾಗಿದೆ. 
 

The Biggest ship of world Icon of the Seas bigins its first journey sum
Author
First Published Jan 28, 2024, 12:46 PM IST | Last Updated Jan 28, 2024, 12:46 PM IST

ಐಷಾರಾಮಿ ಬೃಹತ್ ಹಡಗುಗಳ ವಿಚಾರ ಬಂದಾಗಲೆಲ್ಲ ಎಲ್ಲರಿಗೂ ನೆನಪಿಗೆ ಬರುವ ಹೆಸರು ಟೈಟಾನಿಕ್. ಟೈಟಾನಿಕ್ ಗಿಂತ ದೊಡ್ಡದು ಅಥವಾ ಸಣ್ಣದು ಎನ್ನುವ ಹೋಲಿಕೆ ಮಾಡುವುದು ಸಾಮಾನ್ಯ. ಇದೀಗ, ವಿಶ್ವದ ಬೃಹತ್ ಐಷಾರಾಮಿ ಹಡಗು ಎನಿಸಿಕೊಂಡಿರುವ “ಐಕಾನ್ ಆಫ್ ದ ಸೀಸ್’ ಇಂದು ತನ್ನ ಮೊಟ್ಟಮೊದಲ ಪಯಣ ಆರಂಭಿಸಿದೆ. ಮಿಯಾಮಿ ಬಂದರಿನಿಂದ ಮೊದಲ ಪ್ರಯಾಣ ಕೈಗೊಂಡಿರುವ ಐಕಾನ್ ಆಫ್ ದ ಸೀಸ್, ದಕ್ಷಿಣ ಫ್ಲೋರಿಡಾದ ದ್ವೀಪವೊಂದರಲ್ಲಿ ಏಳು ದಿನಗಳ ಕಾಲ ತಂಗಲಿದೆ. ಇಡೀ ವಿಶ್ವದ ನೌಕಾ ಆಸಕ್ತ ಪ್ರಯಾಣಿಕರ ಚಿತ್ತ ಈಗ ರಾಯಲ್ ಕೆರಿಬಿಯನ್ ಗೆ ಸೇರಿರುವ ಈ ಹಡಗಿನತ್ತಲೇ ನೆಟ್ಟಿದೆ. ಇತ್ತೀಚೆಗಷ್ಟೇ ಫುಟ್ ಬಾಲ್ ತಾರೆ ಲಿಯೋನೆಲ್ ಮೆಸ್ಸಿ ತಮ್ಮ ಮಿಯಾಮಿ ಟೀಮ್ ಮೇಟ್ ಗಳೊಂದಿಗೆ ಹಡಗಿನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಶ್ವದಲ್ಲೇ ಅತ್ಯಂತ ಐಷಾರಾಮಿ ಎನಿಸಿರುವ ಈ ಹಡಗಿನ ವೈಶಿಷ್ಟ್ಯಗಳು ಒಂದೆರಡಲ್ಲ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಹಡಗಿನ ಕುರಿತು ಮೊದಲ ಮಾಹಿತಿ ಹೊರಬಂದಿತ್ತು. ಬೃಹತ್ ಹಡಗು ಪಯಣಕ್ಕೆ ಸಿದ್ಧವಾಗಿದ್ದು, ಬುಕಿಂಗ್ ಆರಂಭವಾಗಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು, ಕೆಲವೇ ದಿನಗಳಲ್ಲಿ ಇಡೀ ಶಿಪ್ ಬುಕ್ ಆಗಿದ್ದೂ ಸಹ ಸುದ್ದಿಯಾಗಿತ್ತು. 

ರಾಯಲ್ ಕೆರಿಬಿಯನ್ ಸಂಸ್ಥೆಗೆ ಸೇರಿರುವ ಐಕಾನ್ ಆಫ್ ದ ಸೀಸ್ (Icon of the Seas) ಹಡಗು (Ship), ಬರೋಬ್ಬರಿ 1200 ಅಡಿಗಳಷ್ಟು ಎತ್ತರವಾಗಿದೆ. ಈ ಸಂಸ್ಥೆಯ ಸಿಇಒ ಹಾಗೂ ಅಧ್ಯಕ್ಷ (President) ಜೇಸ್ ಲಿಬರ್ಟಿ ಅವರ ಪ್ರಕಾರ, ಈ ನೌಕೆ 50 ವರ್ಷಗಳ ಕನಸುಗಳ (Dream) ಸಾಕ್ಷಾತ್ಕಾರವಾಗಿದೆ. ಬರೋಬ್ಬರಿ 50 ವರ್ಷಗಳ ಕನಸು, ಅನ್ವೇಷಣೆ, ಹೊಸತನಗಳೊಂದಿಗೆ ಇದನ್ನು ನಿರ್ಮಿಸಲಾಗಿದೆ. ವಿಶ್ವದ (World) ಅತ್ಯುತ್ತಮ ನೌಕಾವಿಹಾರ (Voyage) ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದೂ ಅವರು ಕಳೆದ ವಾರವಷ್ಟೇ ಹೇಳಿದ್ದರು. 

ನೌಕೆಯಲ್ಲಿ ಎಲ್ಲ ವಯೋಮಾನದವರಿಗೂ ಸರಿಸಮಾನವಾದ ಸೌಲಭ್ಯ (Facility) ಕಲ್ಪಿಸಿರುವುದು ವಿಶೇಷ. ನೌಕಾವಿಹಾರದ ಅತ್ಯುನ್ನತ ಕನಸುಗಳನ್ನು ಇದು ಪೂರೈಸುತ್ತದೆ. 2022ರ ಅಕ್ಟೋಬರ್ ನಲ್ಲಿ ನೌಕೆಯನ್ನು ಮೊದಲ ಬಾರಿ ಅನಾವರಣಗೊಳಿಸಲಾಗಿತ್ತು. ಆಗ ಅದು ಒಂದೇ ದಿನದಲ್ಲಿ ಅಧಿಕ ಬುಕಿಂಗ್ (Booking) ಆಗಿ ದಾಖಲೆಯನ್ನೂ ನಿರ್ಮಿಸಿತ್ತು.

ಸೋಲೋ ಬೈಕ್ ರೈಡ್ ಮಾಡೋದಾದ್ರೆ ಈ 9 ತಾಣಗಳನ್ನು ಮಿಸ್ ಮಾಡಲೇಬೇಡಿ

ರಾಯಲ್ ಕೆರಿಬಿಯನ್ ಸಂಸ್ಥೆಯ 53 ವರ್ಷಗಳ ಇತಿಹಾಸದಲ್ಲೇ ಅಧಿಕ ಸಂಖ್ಯೆಯ ಬುಕಿಂಗ್ ಒಂದೇ ದಿನದಲ್ಲಿ ಆಗಿದ್ದವು ಎಂದರೆ, ಈ ನೌಕೆಯಲ್ಲಿ ವಿಹರಿಸಬೇಕೆಂದು ಕನಸು ಕಂಡವರ ಸಂಖ್ಯೆ ಎಷ್ಟಿದ್ದಿತು ಎಂದು ಅಂದಾಜಿಸಬಹುದು.

ಅಷ್ಟಕ್ಕೂ ಏನಿದೆ?
ಐಕಾನ್ ಆಫ್ ದ ಸೀಸ್ ಹೆಸರಿಗೆ ತಕ್ಕಂತೆಯೇ ಇದೆ. ನೌಕೆಯಲ್ಲಿ 8 ಕಟ್ಟಡಗಳಿವೆ. 20 ಡೆಕ್ (Deck) ಗಳಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮನೋರಂಜನೆಗೆಂದು ಅಮ್ಯೂಸ್ ಮೆಂಟ್ ಪಾರ್ಕ್ ಗಳೂ (Amusement Park) ಇವೆ ಎಂದರೆ ಅಚ್ಚರಿಯಾಗಬೇಕು. ವಿಶ್ವದ ಹಡಗುಗಳ ಪೈಕಿ ಅತಿ ದೊಡ್ಡ ವಾಟರ್ ಫಾರ್ಕ್ (Water Park) ಇದರಲ್ಲೇ ಇದೆ! ಬರೋಬ್ಬರಿ 6 ವಾಟರ್ ಸ್ಲೈಡ್ ಗಳಿವೆ, 7 ಈಜುಕೊಳಗಳಿವೆ. ಐಸ್ ಮೇಲೆ ಸ್ಕೇಟ್ (Skate) ಮಾಡಬಹುದಾದ ಪ್ರದೇಶವಿದೆ. ಥಿಯೇಟರ್, 40ಕ್ಕೂ ಅಧಿಕ ರೆಸ್ಟೋರೆಂಟ್ ಗಳಿವೆ. ಬಾರ್ (Bar) ಗಳಿವೆ, ಉದ್ದನೆಯ, ಶಾಂತವಾದ ಲಾಂಜ್ ಗಳಿವೆ. ಕುಟುಂಬಗಳ ವೀಕ್ಷಣೆಗೆ ಸಮುದ್ರ (Sea) ಪ್ರಾಣಿಗಳ ಪಾರ್ಕ್ ಇದೆ. ಒಮ್ಮೆ ಈ ಬೃಹತ್ ನೌಕೆ 7,600 ಗರಿಷ್ಠ ಪ್ರಯಾಣಿಕರನ್ನು (Passengers) ಹೊತ್ತೊಯ್ಯಬಲ್ಲದು. ಐಷಾರಾಮಿ (Luxury) ನೌಕೆಯಲ್ಲಿ ಹೆಜ್ಜೆಹೆಜ್ಜೆಗೂ ಪರಿಚಾರಕರು, ಸೇವೆ ಸಲ್ಲಿಸುವವರು ಬೇಕಾಗುತ್ತಾರೆ. ಹೀಗಾಗಿ, ಇಲ್ಲಿನ ಸಿಬ್ಬಂದಿ (Crew) ಸಂಖ್ಯೆಯೇ 2350. ಬರೋಬ್ಬರಿ 365 ಮೀಟರ್ ಉದ್ದವಿರುವ ಈ ನೌಕೆ 250,800 ಟನ್ ತೂಗುತ್ತದೆ. 

ನಿಮಗೆ ಗೊತ್ತೇ? ವಿಮಾನ 2 ಗಂಟೆ ತಡವಾದರೆ ಊಟ, 24 ಗಂಟೆ ತಡವಾದರೆ ವಸತಿ ಕೊಡಬೇಕು!

ಸಂಗೀತ ಕಾರ್ಯಕ್ರಮ ಮತ್ತು ವಿವಿಧ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತದೆ. 900 ದಿನಗಳಲ್ಲಿ ಈ ಬೃಹತ್ ಹಡಗನ್ನು ನಿರ್ಮಿಸಲಾಗಿದ್ದು, ಫಿನ್ ಲ್ಯಾಂಡಿನ ಮೆಯೆರ್ ತುರ್ಕು ಶಿಪ್ ಯಾರ್ಡ್ ನಲ್ಲಿ ನಿರ್ಮಿಸಲಾಗಿದ್ದು, ಕಳೆದ ವರ್ಷ ರಾಯಲ್ ಕೆರಿಬಿಯನ್ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. 1912ರಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ನಾಶವಾದ ಟೈಟಾನಿಕ್ (Titanic) ಹಡಗಿಗಿಂತ ಇದು 5 ಪಟ್ಟು ದೊಡ್ಡದಾಗಿದೆ. 

Latest Videos
Follow Us:
Download App:
  • android
  • ios