ಸೋಲೋ ಬೈಕ್ ರೈಡ್ ಮಾಡೋದಾದ್ರೆ ಈ 9 ತಾಣಗಳನ್ನು ಮಿಸ್ ಮಾಡಲೇಬೇಡಿ
ನೀವು ಬೈಕ್ ರೈಡರ್ ಆಗಿದ್ದು, ಸೋಲೋ ಬೈಕ್ ರೈಡಿಂಗ್ ಮಾಡೋದಕ್ಕೆ ಬೆಸ್ಟ್ ತಾಣಗಳನ್ನು ಹುಡುಕುತ್ತಿದ್ದರೆ, ಭಾರತದ ಅದ್ಭುತ ರೋಡ್ ಗಳ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ. ಈ ರಸ್ತೆಗಳನ್ನು ನೀವು ಬೈಕ್ ರೈಡ್ ಮಾಡಿದ್ರೆ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಅನುಭವಗಳ ವಿಶಿಷ್ಟ ಮಿಶ್ರಣವನ್ನು ನೀಡುತ್ತವೆ.
ಮನಾಲಿಯಿಂದ ಲೇಹ್ ಹೆದ್ದಾರಿ (Manali to Lay Highway)
ಮನಾಲಿಯಿಂದ ಲೇಹ್ ಗೆ 427 ಕಿ.ಮೀ ದೂರವಿದೆ. ಇಲ್ಲಿಂದ ನೀವು ರೋಹ್ಟಾಂಗ್ ಮತ್ತು ಖರ್ದುಂಗ್ ಲಾ ಪಾಸ್ ಸೇರಿದಂತೆ ಚಾಲೆಂಜಿಂಗ್ ಬೈಕ್ ರೈಡ್ ಮಾಡಬಹುದು. ಈ ಮಾರ್ಗದಲ್ಲಿ ಹಿಮಾಲಯ ಮತ್ತು ಹೆಮಿಸ್ ನಂತಹ ಪ್ರಶಾಂತ ಸ್ಥಳಗಳ ಅದ್ಭುತ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು.
ಮುಂಬೈನಿಂದ ತಿರುವನಂತಪುರಕ್ಕೆ (Konkan Coastal)
ಈ 1600 ಕಿ.ಮೀ ಕರಾವಳಿ ಪ್ರಯಾಣವು ಸುಂದರವಾದ ಕಡಲತೀರಗಳು ಮತ್ತು ಮೀನುಗಾರಿಕೆ ಮಾಡುವ ಹಳ್ಳಿಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ನೀವು ಸ್ಥಳೀಯ ಸೀ ಫುಡ್ ಗಳ ವೈವಿಧ್ಯಗಳನ್ನು ಎಂಜಾಯ್ ಮಾಡಬಹುದು ಮತ್ತು ಪಶ್ಚಿಮ ಘಟ್ಟಗಳ ಹಚ್ಚ ಹಸಿರನ್ನು ಕಣ್ತುಂಬಿಸಿಕೊಳ್ಳಬಹುದು.
ಗುವಾಹಟಿಯಿಂದ ತವಾಂಗ್
433 ಕಿ.ಮೀ ದೂರವನ್ನು ಕ್ರಮಿಸುವ ಈ ಮಾರ್ಗ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ವೈವಿಧ್ಯಮಯ ತಾಣಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ. ಈ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಸೆಲಾ ಪಾಸ್ ನ ಭವ್ಯವಾದ ಸೌಂದರ್ಯವು ನಿಮ್ಮ ಮನಸೂರೆಗೊಳಿಸೋದು ಖಚಿತ.
ಚೆನ್ನೈನಿಂದ ಕನ್ಯಾಕುಮಾರಿ (Chennai to Kanyakumari)
ಭಾರತದ ಆಗ್ನೇಯ ಕರಾವಳಿಯಲ್ಲಿ 700 ಕಿ.ಮೀ ಪ್ರಯಾಣಿಸಿದ್ರೆ, ನೀವು ಪ್ರಾಚೀನ ದೇವಾಲಯಗಳು ಮತ್ತು ಪ್ರಶಾಂತ ಕಡಲತೀರಗಳನ್ನು ಎಕ್ಸ್ ಪ್ಲೋರ್ ಮಾಡಬಹುದು. ಇಲ್ಲಿನ ಪ್ರತಿಯೊಂದು ಮಾರ್ಗಗಳು ಅದ್ಭುತವಾಗಿದೆ ಮತ್ತು ರಾಮೇಶ್ವರಂನಂತಹ ಸಾಂಸ್ಕೃತಿಕ ತಾಣಗಳು ಮನಮೋಹಕವಾಗಿವೆ.
ಜೈಪುರದಿಂದ ಜೈಸಲ್ಮೇರ್ (Jaipur to Jaisalmair)
ಜೈಪುರದಿಂದ ಜೈಸಲ್ಮೇರ್ ಗೆ ಹೋಗುವ 560 ಕಿ.ಮೀ ಮಾರ್ಗದಲ್ಲಿ, ರಾಜಸ್ಥಾನದ ಮರುಭೂಮಿ ಅಂದವನ್ನು ಕಣ್ತುಂಬಿಕೊಳ್ಳಬಹುದು. ಐತಿಹಾಸಿಕ ಕೋಟೆಗಳು ಮತ್ತು ಥಾರ್ ಮರುಭೂಮಿಯ ಸೌಂದರ್ಯವು ಈ ರೋಡ್ ಟ್ರಿಪ್ಪನ್ನು ಅವಿಸ್ಮರಣೀಯವಾಗಿಸುತ್ತೆ.
ಅಹಮದಾಬಾದ್ ನಿಂದ ಕಚ್
ಅಹಮದಾಬಾದ್ ನಿಂದ ರನ್ ಆಫ್ ಕಚ್ ಗೆ 388 ಕಿ.ಮೀ ಪ್ರಯಾಣವು ಗುಜರಾತ್ ನ ಸಾಂಸ್ಕೃತಿಕ ತಾಣಗಳ (Cultural Spots) ಮೂಲಕ ಸಾಗುವ ಅಂದವೇ ಚೆಂದ. ಕಛ್ ನ ಬಿಳಿ ಉಪ್ಪು ಮರುಭೂಮಿಯ ಬದಿಯಲ್ಲಿ ಚಂದ್ರನ ಬೆಳಕಿನಲ್ಲಿ ರೈಡ್ ಮಾಡೋದೆ ಒಂದು ಅದ್ಭುತ.
bike riders
ಶಿಮ್ಲಾದಿಂದ ಸ್ಪಿಟಿ ಕಣಿವೆ (Shimla to Spliti Valley)
ಶಿಮ್ಲಾದಿಂದ ಸ್ಪಿಟಿ ಕಣಿವೆಯವರೆಗೆ 418 ಕಿ.ಮೀ.ಗಿಂತಲೂ ಹೆಚ್ಚು ದೂರ ಸಾಗಿ ಕಿನ್ನೌರ್ ಕಣಿವೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸಾಗಬಹುದು. ಸ್ಪಿಟಿಯ ಒರಟಾದ ಭೂಪ್ರದೇಶವು ಸವಾಲಿನ ಮತ್ತು ವಿಸ್ಮಯಕಾರಿ ಜರ್ನಿಯಾಗೋದು ಖಚಿತ.
ಕೊಲ್ಕತ್ತಾದಿಂದ ದಿಘಾ
ಕೋಲ್ಕತ್ತಾದಿಂದ 180 ಕಿ.ಮೀ ಸವಾರಿ ಮಾಡಿ, ಕಡಲತೀರದ ಪಟ್ಟಣವಾದ ದಿಘಾವನ್ನು ತಲುಪಬಹುದು. ಈ ಮಾರ್ಗವು ನಗರ ಗದ್ದಲದಿಂದ ದೂರವಿದೆ, ಬಂಗಾಳಕೊಲ್ಲಿಯ ಪ್ರಶಾಂತ ತೀರದಲ್ಲಿ ಕಡಲ ಸೌಂದರ್ಯ ಸವೆಯುತ್ತಾ ಸಾಗಬಹುದು.
ಬೆ೦ಗಳೂರಿನಿ೦ದ ಊಟಿಗೆ (Bangalore to OOty)
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಬೆಂಗಳೂರಿನಿಂದ ಊಟಿಗೆ 270 ಕಿ.ಮೀ ದೂರ ಸಾಗುವಾಗ ನೀವು ವನ್ಯಜೀವಿ ವೀಕ್ಷಣೆ ಮತ್ತು ಅದ್ಭುತ ಅಷ್ಟೇ ಚಾಲೆಂಜಿಂಗ್ ಆಗಿರುವ ಪರ್ವತ ರಸ್ತೆಗಳನ್ನು ದಾಟಿ ಸಾಗಬೇಕು. ಊಟಿಯ ತಂಪಾದ ಹವಾಮಾನವು ಬೈಕ್ ರೈಡಿಂಗ್ ಮಾಡೋದಕ್ಕೆ ಬೆಸ್ಟ್ ಆಯ್ಕೆಯಾಗಿದೆ.