682 ಕೋಚ್, 8 ಇಂಜಿನ್; ವಿಶ್ವದ ಅತಿ ಉದ್ದದ ರೈಲು ಎಲ್ಲಿಂದ ಎಲ್ಲಿಗೆ ಹೋಗುತ್ತೆ? ಇಲ್ಲಿದೆ ಡಿಟೈಲ್ಸ್ 

World Longest Train: ವಿಶ್ವದ ಅತಿ ಉದ್ದದ ರೈಲು 682 ಕೋಚ್‌ಗಳು ಮತ್ತು 8 ಇಂಜಿನ್‌ಗಳನ್ನು ಹೊಂದಿದೆ. ರೈಲು 7.8 ಕಿ.ಮೀ ಉದ್ದವಾಗಿದ್ದು, 1 ಲಕ್ಷ ಟನ್ ತೂಕವನ್ನು ಹೊಂದಿದೆ.

The Australian BHP Iron Ore World Longest Train 682 Coach with 4 Diesel  AC6000CW  engines mrq

World Longest Train: ನೀವು ರೈಲು ಪ್ರಯಾಣ ಮಾಡುತ್ತಿದ್ದರೆ ಗೂಡ್ಸ್ ಟ್ರೈನ್ ಗಮನಿಸಿರುತ್ತೀರಿ. ಸಾಮನ್ಯವಾಗಿ ಗೂಡ್ಸ್ ರೈಲಗಳು 30 ರಿಂದ 40 ಡಬ್ಬಿಗಳನ್ನು (ಕೋಚ್) ಹೊಂದಿರುತ್ತವೆ. ಇದನ್ನು ಕಂಡು ನಾವು ಅಬ್ಬಾ ಎಷ್ಟು ಉದ್ದದ ರೈಲು ಎಂದು ಹೇಳಿರುತ್ತೀರಿ. ಆದ್ರೆ  ಇಂದು ನಿಮಗೆ ವಿಶ್ವದ ಅತಿ ಉದ್ದದ ರೈಲಿನ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ರೈಲು ಬರೋಬ್ಬರಿ 682 ಕೋಚ್‌ಗಳನ್ನು ಹೊಂದಿದ್ದು, ಇವುಗಳನ್ನು ಎಳೆಯಲು 8 ಇಂಜಿನ್‌ಗಳನ್ನು ಬಳಸಲಾಗುತ್ತದೆ. ಈ ರೈಲು ನಿಮ್ಮ ಮುಂದೆ ಹಾದು ಹೋದ್ರೆ ಕೋಚ್ ಸಂಖ್ಯೆ ಎಣಿಸುವಾಗ ನೀವು ಖಂಡಿತ ಗೊಂದಲಕ್ಕೊಳಗಾಗುತ್ತೀರಿ. ಕಾರಣ ಈ ರೈಲಿನ ಉದ್ದ ಬರೋಬ್ಬರಿ 7.8 ಕಿಲೋ ಮೀಟರ್ ಆಗಿದೆ. 

2001ರಲ್ಲಿ 'ಆಸ್ಟ್ರೇಲಿಯನ್ BHP ಐರನ್ ಓರ್' (The Australian BHP Iron Ore) ಎಂಬ ಹೆಸರಿನ ರೈಲು ಚಲಿಸಲು ಪ್ರಾರಂಭಿಸಿತು. ಇದರ ಉದ್ದ 7.353 ಕಿ.ಮೀ. ಆಗಿದ್ದು, ಆಸ್ಟ್ರೇಲಿಯಾ ಪಿಲ್ಬರಾ ಎಂಬ ಪ್ರದೇಶದಲ್ಲಿ ಚಲಿಸುತ್ತಿದೆ. ಇದು ವಿಶ್ವದ ಅತಿ ಉದ್ದದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  682 ಕೋಚ್‌ಗಳನ್ನು ಎಳೆಯಲು ಒಟ್ಟು 8 ಜನರಲ್ ಎಲೆಕ್ಟ್ರಿಕ್ AC6000CW ಡೀಸೆಲ್ ಲೋಕೋಮೋಟಿವ್‌ಗಳನ್ನು ಬಳಕೆ ಮಾಡಲಾಗುತ್ತದೆ. 

ಆಸ್ಟ್ರೇಲಿಯಾದ ಯಾಂಡಿ ಮೈನ್‌ನಿಂದ ಪೋರ್ಟ್ ಹೆಡ್‌ಲ್ಯಾಂಡ್ ಬೀಚ್‌ಗೆ ಚಲಿಸುವ BHP ಐರನ್ ಓರ್ ರೈಲು 275 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. 275 ಕಿಲೋಮೀಟರ್ ದೂರ ಕ್ರಮಿಸಲು 10 ಗಂಟೆ ಸಮಯ ತೆಗೆದುಕೊಳ್ಳುತ್ತದೆ. 82,000 ಟನ್ ಕಬ್ಬಿಣದ ಅದಿರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 24 ಐಫೆಲ್ ಟವರ್‌ಗಳಷ್ಟು ಉದ್ದವಾಗಿದೆ. ಈ ರೈಲು 1 ಲಕ್ಷ ಟನ್ ತೂಕವನ್ನು ಹೊಂದಿದೆ.  ಕಬ್ಬಿಣದ ಅದಿರು ಸಾಗಿಸುವ ಉದ್ದೇಶದಿಂದಲೇ ಈ ರೈಲನ್ನು ವಿನ್ಯಾಸಗೊಳಿಸಲಾಗಿದ್ದು, ಇದನ್ನು ಮೌಂಟ್ ನ್ಯೂಮನ್ ರೈಲ್ವೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಈ ಬಣ್ಣದ ಬೋಗಿಗಳು ಇನ್ನು ನೆನಪು ಮಾತ್ರ, ಯಾಕೆ ಈ ಬದಲಾವಣೆ? ರೈಲ್ವೆಯಿಂದ ಮಹತ್ವದ ನಿರ್ಧಾರ ಪ್ರಕಟ

ಇಂದಿಗೂ BHP ಐರನ್ ಓರ್ ರೈಲು  ಓಡುತ್ತಿದ್ದು, ಕೋಚ್‌ಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಸದ್ಯ 270 ಕೋಚ್ ಹೊಂದಿರುವ ಈ ರೈಲನ್ನು ಎಳೆಯುಲು 4 ಡೀಸೆಲ್ ಇಂಜಿನ್ ಬಳಸಲಾಗುತ್ತಿದೆ.  ಈ ರೈಲು ಸುಮಾರು 38,000 ಟನ್ ಕಬ್ಬಿಣದ ಅದಿರನ್ನು ತುಂಬಿಕೊಂಡು ಚಲಿಸುತ್ತದೆ.

60 ವ್ಯಾಗನ್‌ಗಳನ್ನು ಹೊಂದಿದ್ದ 7.3 ಕಿ.ಮೀ ಉದ್ದದ ರೈಲಿನ ದಾಖಲೆ ದಕ್ಷಿಣ ಆಫ್ರಿಕಾದ ಹೆಸರಿನಲ್ಲಿತ್ತು. ಈ ದಾಖಲೆಯನ್ನು BHP ಐರನ್ ಓರ್ ರೈಲು ಬ್ರೇಕ್ ಮಾಡಿ ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಭಾರತದಲ್ಲಿ  295 ಕೋಚ್‌ವುಳ್ಳ 3.5 ಕಿ.ಮೀ ಉದ್ದದ ರೈಲು ಛತ್ತೀಸ್‌ಗಢದ ಕೊರ್ಬಾದಿಂದ ನಾಗ್ಪುರದ ರಾಜನಂದಗಾಂವ್‌ಗೆ ಹೋಗುತ್ತದೆ.   27 ಸಾವಿರ ಟನ್ ಕಲ್ಲಿದ್ದಲು ತುಂಬಿಕೊಂಡು  11.20 ಗಂಟೆ ಈ ರೈಲು ಕ್ರಮಿಸುತ್ತದೆ.

ಇದನ್ನೂ ಓದಿ:ರೈಲುಗಳ ಮೇಲ್ಭಾಗದಲ್ಲಿ ವೃತ್ತಾಕಾರದ ಮುಚ್ಚಳ ಯಾಕಿರುತ್ತೆ?

Latest Videos
Follow Us:
Download App:
  • android
  • ios