ಭಾರತೀಯ ಪ್ರವಾಸಿಗಳನ್ನು ಆಕರ್ಷಿಸಲು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ವಿಶೇಷ ಕಾರ್ಯತಂತ್ರ
ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈ ವರ್ಷ ತನ್ನ ದೇಶಕ್ಕೆ ಬರುವ ಭಾರತೀಯರ ಸಂಖ್ಯೆಯನ್ನು ಶೇ.64ರಷ್ಟು ಹೆಚ್ಚಿಸಲು ಸಾಕಷ್ಟು ಕಾರ್ಯತಂತ್ರ ರೂಪಿಸಿದೆ.
ಕೋವಿಡ್ ನಿಯಮಾವಳಿಗಳು ಬದಿಗೆ ಸರಿದು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಭಾರತದಲ್ಲಿ ನಿರ್ಬಂಧ ತೆರವಾಗುತ್ತಿದ್ದಂತೆಯೇ ಈ ಸಂದರ್ಭದ ಸಂಪೂರ್ಣ ಲಾಭ ಪಡೆಯಲು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ(South Africa Tourism) ಸಿದ್ಧವಾಗಿದೆ. ಈ ವರ್ಷ ಶೇ.64ರಷ್ಟು ಭಾರತೀಯ ಪ್ರವಾಸಿಗರ(Indian tourists) ಸಂಖ್ಯೆ ಹೆಚ್ಚಿಸಿಕೊಳ್ಳುವ ಗುರಿ ಹಾಕಿಕೊಂಡಿರುವ ದ.ಆಫ್ರಿಕಾ ಪ್ರವಾಸೋದ್ಯಮವು ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯತಂತ್ರಗಳನ್ನು ರಚಿಸಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಮಂಡಳಿಯು ತಾನು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆ(long term investment) ಮಾಡುವ ಆಸಕ್ತಿ ಪ್ರದರ್ಶಿಸಿತು.
ಈ ವರ್ಷ ಭಾರತದ ಪ್ರಮುಖ ನಗರಗಳಾದ ಮುಂಬೈ(Mumbai), ದೆಹಲಿ, ಬೆಂಗಳೂರು(bengaluru) ಮತ್ತುಅಹಮದಾಬಾದ್‍ಗೆ ಪ್ರಯಾಣಿಸಿರುವ 36 ಸದಸ್ಯರ ದಕ್ಷಿಣ ಆಫ್ರಿಕಾದ ವ್ಯಾಪಾರ ನಿಯೋಗವು ಪ್ರವಾಸೋದ್ಯಮ ಮಂಡಳಿಯ ಉದ್ದೇಶಗಳನ್ನು ಪ್ರಚಾರಪಡಿಸುತ್ತಿದೆ. ದಕ್ಷಿಣ ಆಫ್ರಿಕಾ ಹಾಗೂ ಅಲ್ಲಿನ ಉತ್ಪನ್ನಗಳ ಬಗ್ಗೆ ಭಾರತೀಯ ಗ್ರಾಹಕರಿಗೆ ಆಸಕ್ತಿ ಮೂಡಿಸಲು ತಯಾರಾಗಿರುವ ದ.ಆಫ್ರಿಕಾ ಪ್ರವಾಸೋದ್ಯಮವು ಭಾರತದ ಪ್ರವಾಸಿ ಯೋಜನೆ ಕಂಪನಿಗಳು, ವಸತಿ ಸಂಸ್ಥೆಗಳು ಮುಂತಾದವರ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಆಸಕ್ತಿ ಪ್ರದರ್ಶಿಸಿತು.
ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅಗ್ರ-3 ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸಾಂಕ್ರಾಮಿಕದ ಅಡಚಣೆಗೆ ಮುನ್ನ ಭಾರತವು ದಕ್ಷಿಣ ಆಫ್ರಿಕಾಕ್ಕೆ 8 ನೇ ಅತಿದೊಡ್ಡ ಅಂತರರಾಷ್ಟ್ರೀಯ ಮೂಲ ಮಾರುಕಟ್ಟೆಯಾಗಿ ಸೇವೆ ಸಲ್ಲಿಸಿದೆ. ಈ ವರ್ಷವೂ ದೇಶವು 10 ಅಗ್ರಸ್ಥಾನಗಳಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಪುಣೆ ದಕ್ಷಿಣ ಆಫ್ರಿಕಾಕ್ಕೆ ಅಗ್ರ ಭಾರತೀಯ ಮೂಲದ ಮಾರುಕಟ್ಟೆಗಳಾಗಿ ಮುಂದುವರೆದಿವೆ.
ಬೆಂಗಳೂರಲ್ಲಿ ಆಫ್ರಿಕಾ ಪ್ರಯಾಣಿಕರು ಹೆಚ್ಚು
ದಕ್ಷಿಣ ಆಫ್ರಿಕಾಕ್ಕೆ ಬೆಂಗಳೂರಿನಿಂದ ಒಟ್ಟು 9% ಭಾರತೀಯ ಪ್ರವಾಸಿಗರು ಪ್ರಯಾಣಿಸುತ್ತಾರೆ. ಈ ಮೂಲಕ ಭಾರತದಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದ ಅಗ್ರ-3 ಮೂಲ ಮಾರುಕಟ್ಟೆಗಳಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಬೆಂಗಳೂರಿಂದ ಹೊರಡುವವರಲ್ಲಿ ಶೇ.47 ಮಂದಿ ಪ್ರವಾಸದ ಏಕೈಕ ಉದ್ದೇಶ ಹೊಂದಿದ್ದರೆ, ಶೇ.43ರಷ್ಟು ಜನರು ವ್ಯಾಪಾರ, ಉದ್ದಿಮೆಯ ಉದ್ದೇಶಕ್ಕೆ ಆಫ್ರಿಕಾಕ್ಕೆ ತೆರಳುತ್ತಾರೆ. ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಬೆಂಗಳೂರಿಗರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಮಯವಾಗಿದೆ.
ಮಹಿಳಾ ದಿನದಂದು ರೊಚ್ಚಿಗೆದ್ದ ನಾರಿಯರು... ಕ್ಷಮೆಯಾಚಿಸಿದ ಫ್ಲಿಪ್‌ಕಾರ್ಟ್
ಭಾರತ ಆಫ್ರಿಕಾ ನಡುವೆ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಗಮ್ಯಸ್ಥಾನಕ್ಕೆ ಪ್ರಯಾಣವನ್ನು ಸುಗಮಗೊಳಿಸುವುದು ಈ ವರ್ಷದ ಆಸಕ್ತಿಯ ಪ್ರಮುಖ ಕ್ಷೇತ್ರವಾಗಿದೆ ಎಂದು ದ.ಆಫ್ರಿಕಾ ಪ್ರವಾಸೋದ್ಯಮ ಮಂಡಳಿಯು ಒತ್ತಿ ಹೇಳಿದೆ. ಭಾರತೀಯ ಪ್ರಯಾಣಿಕರಿಗೆ ಮುಕ್ತವಾಗಿರುವ ಈ ತಾಣವು ಆದ್ಯತೆಯ ಮೇರೆಗೆ ಪ್ರವಾಸಿ ವೀಸಾ(tourist visa)ಗಳನ್ನು ನೀಡುತ್ತಿದೆ. ಪ್ರಸ್ತುತ ಎಮಿರೇಟ್ಸ್, ಎತಿಹಾದ್, ಕತಾರ್‍ಏರ್‍ವೇಸ್, ಏರ್ ಅರೇಬಿಯಾ, ಇಥಿಯೋಪಿಯನ್ ಏರ್ ಲೈನ್ಸ್, ಕೀನ್ಯಾ ಏರ್ ವೇಸ್ ಮತ್ತು ಏರ್ ಮಾರಿಷಸ್ ಸೇರಿದಂತೆ ಹಲವಾರು ಸ್ಟಾಪ್-ಓವರ್ ವಿಮಾನಗಳು ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಹಾರುತ್ತವೆ. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವವರು ಮೂಲ ದೇಶದಿಂದ ದಕ್ಷಿಣ ಆಫ್ರಿಕಾಕ್ಕೆ ನಿರ್ಗಮಿಸುವ ಸಮಯದಿಂದ 72 ಗಂಟೆಗಳಿಗಿಂತ ಹಳೆಯದಲ್ಲದ ನೆಗೆಟಿವ್ PCR (ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಯ ವರದಿಯನ್ನು ತೋರಿಸಬೇಕಿದೆ.
ಸಂಪರ್ಕ ಮತ್ತು ಮೌಲ್ಯದ ಭವಿಷ್ಯದ ಹಂತಗಳನ್ನು ಬಹಿರಂಗಪಡಿಸುತ್ತಾ, ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮದ MEISEAನ ಹಬ್-ಹೆಡ್ ನೆಲಿಸ್ವಾ ನ್ಕಾನಿ ಅವರು, 'ಮುಂಬರುವ ತಿಂಗಳುಗಳಲ್ಲಿ ನಾವು ಭಾರತದಲ್ಲಿ ಇ-ವೀಸಾಗಳನ್ನು ಪ್ರಾರಂಭ ಮಾಡುವ ಹಾದಿಯಲ್ಲಿದ್ದೇವೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ಮೌಲ್ಯಾಧಾರಿತ ಪ್ರಯಾಣದ ಅಗತ್ಯದ ಬಗ್ಗೆಯೂ ನಾವು ಜಾಗೃತರಾಗಿದ್ದೇವೆ ಮತ್ತು ಖರ್ಚು ಮಾಡಿದ ಪ್ರತಿ ರೂಪಾಯಿಯು ಗರಿಷ್ಠ ಲಾಭವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಆತ್ಮವಿಶ್ವಾಸದ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಭಾರತದ ಮಾರುಕಟ್ಟೆಗೆ ಸಬ್ಸಿಡಿ ದರಗಳಿಗಾಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ರಯಾಣದ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನೋಡುತ್ತಿದ್ದೇವೆ' ಎಂದಿದ್ದಾರೆ.
Business Ideas : ಯುಟ್ಯೂಬ್ ಚಾನೆಲ್ ಪ್ರಸಿದ್ಧಿಗೆ ಹೀಗೆ ಮಾಡಿ
ಭಾರತೀಯ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಒಟಿಟಿ ಸೇರಿದಂತೆ ವಿವಿಧ ಚಲನಚಿತ್ರ ಮಾಧ್ಯಮಗಳನ್ನು ಬಳಸಿಕೊಳ್ಳುವತ್ತಲೂ ಹೆಜ್ಜೆ ಇಟ್ಟಿದೆ. ಭಾರತೀಯ ಗ್ರಾಹಕರು ಮತ್ತು ಕಾರ್ಪೊರೇಟ್‍ಗಳಿಗೆ ದಕ್ಷಿಣ ಆಫ್ರಿಕಾದ ದೃಶ್ಯಗಳು, ವಿಚಾರಗಳು ಮತ್ತು ಅಭಿರುಚಿಗಳನ್ನು ಪರಿಚಯಿಸುವ ಮೂಲಕ ಹಲವಾರು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ದಕ್ಷಿಣ ಆಫ್ರಿಕಾದ ನೃತ್ಯ ತಂಡಗಳ ಪ್ರದರ್ಶನಗಳು, ಅಲ್ಲಿನ ದೇಶೀಯ ಸಂಗೀತ, ದಕ್ಷಿಣ ಆಫ್ರಿಕಾದ ಬಾಣಸಿಗರು ತಯಾರಿಸಿದ ರುಚಿಕರವಾದ ಆಹಾರ ಮತ್ತು ವಿವಿಧ ಸಾಂಸ್ಕೃತಿಕವಾಗಿ ತಲ್ಲೀನಗೊಳಿಸುವ ಚಟುವಟಿಕೆಗಳೊಂದಿಗೆ, ದಕ್ಷಿಣ ಆಫ್ರಿಕಾವು ಭಾರತೀಯ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ.