Business Ideas : ಯುಟ್ಯೂಬ್ ಚಾನೆಲ್ ಪ್ರಸಿದ್ಧಿಗೆ ಹೀಗೆ ಮಾಡಿ

ಇದು ಯುಟ್ಯೂಬ್ ಯುಗ ಸ್ವಾಮಿ. ಅವನು ಇದ್ರಲ್ಲೇ ಲಕ್ಷ ಗಳಸ್ತಾನಂತೆ. ನೋಡೋಣ ಅಂತಾ ನಾನು ಶುರು ಮಾಡಿದ್ರೆ ನೆಟ್ಟಗೆ ಸಾವಿರ ಸಬ್ಸ್ಕ್ರೈಬರ್ ಆಗ್ಲಿಲ್ಲ ಎನ್ನುವವರಿದ್ದಾರೆ. ಯುಟ್ಯೂಬ್ ಚಾನೆಲ್ ಶುರು ಮಾಡಿದ್ರೆ ಸಾಲದು,ಕೆಲವೊಂದು ಟ್ರಿಕ್ಸ್ ಗೊತ್ತಿರಬೇಕು.
 

Secrets To popularize YouTube Channel to get more views

ಮನೆಯಲ್ಲಿ ಕುಳಿತು ಸುಲಭವಾಗಿ ಹಣ (Money)ಗಳಿಸುವ ವಿಧಾನ ಯಾವುದು ಅಂತಾ ಕೇಳಿದ್ರೆ ಎಲ್ಲರ ಬಾಯಿಂದ ಬರೋದು ಯೂಟ್ಯೂಬ್ ಚಾನೆಲ್. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಯುಟ್ಯೂಬ್ ಚಾನೆಲ್ (Youtube Channel) ಹೊಂದಿದ್ದಾರೆ. ನಾಯಿ ಕೊಡೆಯಂತೆ ಯುಟ್ಯೂಬ್ ಚಾನೆಲ್ ಹುಟ್ಟಿಕೊಂಡಿದೆ ಎಂದ್ರೂ ತಪ್ಪಾಗಲಾರದು. ಅಡುಗೆ, ಮೇಕಪ್,ಡ್ರಾಮಾ, ಹೆಲ್ತ್, ತಂತ್ರಜ್ಞಾನ,ವ್ಯಾಪಾರ ಹೀಗೆ ಎಲ್ಲ ವಿಭಾಗದಲ್ಲೂ ನಾವು ಯುಟ್ಯೂಬ್ ಚಾನೆಲ್ ನೋಡ್ಬಹುದು. ಯುಟ್ಯೂಬ್ ಚಾನೆಲ್ ಮಾಡಿ ಹಣ ಗಳಿಸ್ತಾ ಇದ್ದಾನೆ ಎಂಬ ಮಾತು ಕೇಳುತ್ತಿದ್ದಂತೆ ಮನಸ್ಸು ಎದ್ದು ಕುಳಿತುಕೊಳ್ಳುತ್ತದೆ. ಆರಾಮಾಗಿ ಹಣ ಗಳಿಸುವ ಅವಕಾಶವಿದೆ ಅಂದ್ಮೇಲೆ ನಾವ್ಯಾಕೆ ಟ್ರೈ ಮಾಡ್ಬಾರದು ಅಂತಾ ಮತ್ತೊಂದಿಷ್ಟು ಮಂದಿ ಚಾನೆಲ್ ಶುರು ಮಾಡ್ತಾರೆ. ಯಾವುದೇ ಪೂರ್ವ ತಯಾರಿಯಿಲ್ಲದೆ ಮಾಡುವ ಚಾನೆಲ್ ಗಳು ಕೆಲವೇ ದಿನಗಳಲ್ಲಿ ಮೂಲೆ ಸೇರುತ್ತವೆ. `ನಾವು ಚಾನೆಲ್ ಶುರು ಮಾಡಿದ್ದೇವೆ. ಆದ್ರೆ ಅವರಷ್ಟು ಸಬ್ಸ್ಕ್ರೈಬ್ ನಮಗೇಕಿಲ್ಲ?’ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹೌದು,ಅನೇಕರ ಚಾನೆಲ್ ಗೆ ಕೋಟ್ಯಾಂತರ ಸಬ್ಸ್ಕ್ರೈಬ್ ಇರುತ್ತೆ. ಮತ್ತೆ ಕೆಲವರು ಚೆನ್ನಾಗಿರುವ ವಿಷ್ಯ ನೀಡಿದ್ರೂ ನೂರು ಸಬ್ಸ್ಕ್ರೈಬ್ ಆಗೋದು ಕಷ್ಟ. ಅಂಥವರಿಗೆ ಇಂದು ಒಂದಿಷ್ಟು ಸಲಹೆಯನ್ನು ನೀಡ್ತೇವೆ.

Badshahs New Song: ಮಿಲ್ಕಿ ಬ್ಯೂಟಿ ಹಾಟ್‌ ಡ್ಯಾನ್ಸ್‌ಗೆ ಸಮಂತಾ ಫುಲ್‌ ಮಾರ್ಕ್ಸ್‌ !

ಒಳ್ಳೆಯ ವಿಷ್ಯದ ಆಯ್ಕೆ : 2016ರ ಸಮಯದಲ್ಲಿ ಯುಟ್ಯೂಬ್ ಚಾನೆಲ್ ಸಂಖ್ಯೆ ತುಂಬಾ ಕಡಿಮೆಯಿತ್ತು. ಆಗ ನೀವು ಸುಲಭವಾಗಿ ಜನರನ್ನು ತಲುಪಬಹುದಿತ್ತು. ಆದ್ರೀಗ ಹಾಗಲ್ಲ. ಒಂದೇ ವಿಷ್ಯದ ಮೇಲೆ ಸಾವಿರಾರು ಚಾನೆಲ್ ಗಳಿವೆ. ಒಂದು ರೆಸಿಪಿ ಸರ್ಚ್ ಮಾಡಿದ್ರೆ ನೂರಾರು ಲಿಂಕ್ ನಿಮಗೆ ತೋರಿಸುತ್ತದೆ. ಹಾಗಾಗಿ ಯುಟ್ಯೂಬ್ ಚಾನೆಲ್ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಸ್ವಲ್ಪ ರಿಸರ್ಚ್ ಮಾಡಿ. ಟ್ರೆಂಡಿ ಟಾಪಿಕ್ ಆಯ್ಕೆ ಮಾಡಿಕೊಳ್ಳಿ. ಟ್ರೆಂಡಿ ಟಾಪಿಕ್ ಗಳಿಗೆ ಹೆಚ್ಚಿನ ವ್ಯೂವ್ ಸಿಗುತ್ತದೆ ನಿಜ. ಆದ್ರೆ ಪ್ರತಿ ಬಾರಿ ಈ ವಿಷ್ಯ ನಿಮಗೆ ಸಿಗುವುದಿಲ್ಲ. ಹಾಗಾಗಿ ಪಬ್ಲಿಕ್ ಇಂಟರೆಸ್ಟ್ ಟಾಪಿಕ್ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮದು ನ್ಯೂಸ್ ಚಾನೆಲ್ ಅಲ್ಲವೆಂದಾದ್ರೆ ಎಂದಿಗೂ ನ್ಯೂಸ್ ಮೇಲೆ ವಿಡಿಯೋ ಮಾಡ್ಬೇಡಿ. ನ್ಯೂಸ್ ಗಳು ಕೆಲವೇ ನಿಮಿಷದಲ್ಲಿ ಡೆಡ್ ಆಗುತ್ವೆ. ಕ್ಷಣ ಕ್ಷಣಕ್ಕೂ ನ್ಯೂಸ್ ಬದಲಾಗ್ತಿರುವ ಕಾರಣ ಜನರು ಅದನ್ನು ಎರಡು ದಿನಗಳ ನಂತ್ರ ನೋಡುವುದಿಲ್ಲ. ಹಾಗಾಗಿ ಸದಾ ಉಪಯೋಗಕ್ಕೆ ಬರುವ ವಿಷ್ಯವನ್ನು ಆಯ್ಕೆ ಮಾಡಿ. ಇನ್ನು ಐದಾರು ವರ್ಷಗಳ ನಂತ್ರ ನಿಮ್ಮ ವಿಡಿಯೋ ನೋಡಿದ್ರೂ ಜನರಿಗೆ ಅದು ಇಷ್ಟವಾಗ್ಬೇಕು, ಅಂತ ವಿಷ್ಯ ಆಯ್ಕೆ ಮಾಡಿಕೊಳ್ಳಿ. 

ರಷ್ಯಾದಲ್ಲಿ MCDONALD'S, STARBUCKS, COCA-COLA, PEPSICO ವ್ಯವಹಾರ ಸ್ಥಗಿತ!

ರಿಸರ್ಚ್ ಮುಖ್ಯ : ಅನೇಕರು ಆತುರದಲ್ಲಿ ವಿಡಿಯೋ ಸಿದ್ಧಪಡಿಸ್ತಾರೆ. ಆದ್ರೆ ಆ ವಿಡಿಯೋದಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಇದ್ರಿಂದಾಗಿ ಕಮೆಂಟ್ ಬಾಕ್ಸ್ ತುಂಬುತ್ತದೆ. ನಿಮಗೆ ವಿಡಿಯೋ ಸರಿಪಡಿಸಲು ಸಾಧ್ಯವಾಗುವುದಿಲ್ಲ. ವಿಡಿಯೋ ಡಿಲಿಟ್ ಮಾಡಿ ಎಡಿಟ್ ಮಾಡಬೇಕು. ಈಗಾಗಲೇ ಆ ವಿಡಿಯೋಕ್ಕೆ ಹೆಚ್ಚಿನ ವ್ಯೂವ್ಸ್ ಬಂದಿದ್ದರೆ ಡಿಲಿಟ್ ಮಾಡಲೂ ಆಗುವುದಿಲ್ಲ. ಹಾಗಾಗಿ ವಿಡಿಯೋ ಮಾಡುವ ಮೊದಲೇ ನೀವು ಯಾವ ವಿಷ್ಯ ಆಯ್ದುಕೊಂಡಿದ್ದೀರಿ ಎಂಬುದನ್ನು ಸರಿಯಾಗಿ ನೋಡಿ. ನಂತ್ರ ಅದ್ರ ಬಗ್ಗೆ ಏನು ಹೇಳಲು ಬಯಸಿದ್ದೀರಿ ಎಂಬುದನ್ನು ಬರೆದುಕೊಳ್ಳಿ. ಒಂದರ ಬದಲು ನಾಲ್ಕೈದು ವೆಬ್ಸೈಟ್ ನಲ್ಲಿ ನೀವು ಪಡೆದ ಮಾಹಿತಿ ಚೆಕ್ ಮಾಡಿ. ನಂತ್ರ ಸರಳ ಭಾಷೆಯಲ್ಲಿ ವಿವರಿಸಿ.

ಧ್ವನಿ ಕ್ವಾಲಿಟಿ : ವಿಡಿಯೋ ಮಾಡುವ ಮೊದಲು ನೀವು ಸ್ಕ್ರಿಪ್ಟ್ ಬರೆದುಕೊಳ್ಳಬೇಕು. ಯಾವ ವಿಷ್ಯದ ನಂತ್ರ ಯಾವ ವಿಷ್ಯ ಹೇಳಬೇಕು ಎಂಬುದನ್ನು ಬರೆದುಕೊಳ್ಳಬೇಕು. ನಂತ್ರ ಧ್ವನಿ ಬಗ್ಗೆ ಮಹತ್ವ ನೀಡಿ. ನೀವು ನೀಡುವ ವಾಯ್ಸ್ ಸ್ಪಷ್ಟವಾಗಿರಬೇಕು. ಹಾಗೆ ಹೊರಗಿನ ಶಬ್ಧ ಬರದಂತೆ ನೋಡಿಕೊಳ್ಳಬೇಕು. 

ವಿಡಿಯೋ ಕ್ವಾಲಿಟಿ : ವಾಯ್ಸ್ ಜೊತೆ ವಿಡಿಯೋ ಕ್ವಾಲಿಟಿ ಕೂಡ ಬಹಳ ಮುಖ್ಯ. ಬ್ಲರ್ ಆಗಿರುವ ವಿಡಿಯೋವನ್ನು ಜನರು ನೋಡುವುದಿಲ್ಲ. ಹಾಗಾಗಿ ವಿಡಿಯೋ ಸ್ಪಷ್ಟವಾಗಿರಬೇಕು. ಜೊತೆಗೆ ಅತಿಯಾದ ಎಡಿಟ್ ಗೆ ಕೈ ಹಾಕ್ಬೇಡಿ. ಇದು ನೋಡಲು ಸರಳವೆನ್ನಿಸುವುದಿಲ್ಲ. ಹಾಗಾಗಿ ಆದಷ್ಟು ಚೆಂದದ ವಿಡಿಯೋ ನೀಡಲು ಪ್ರಯತ್ನಿಸಿ. ವಿಡಿಯೋ ಅಥವಾ ಫೋಟೋ ಡೌನ್ಲೋಡ್ ಮಾಡುವುದಿದ್ದರೆ ಕಾಪಿ ರೈಟಿಂಗ್ ಆಗದಂತೆ ಗಮನ ಹರಿಸಿ.

Ukraine Crisis: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಶಾಕ್ ಕೊಟ್ಟ ಉಕ್ರೇನ್ ಯುದ್ಧ!

ಮೂರು ನಿಮಿಷದ ವಿಡಿಯೋ : ಯುಟ್ಯೂಬ್ ಚಾನೆಲ್ ಹೆಚ್ಚಾಗ್ತಿದ್ದಂತೆ ಯುಟ್ಯೂಬ್ ನಿಯಮಗಳೂ ಬದಲಾಗ್ತಿರುತ್ತವೆ. ಇದನ್ನು ತಿಳಿಯಬೇಕು. ಮೂರು ನಿಮಿಷದ ವಿಡಿಯೋ ಮಾಡುವುದು ಅನಿವಾರ್ಯವಾಗಿದೆ. ಹಾಗಂತ ನೀವು 8-10 ನಿಮಿಷದ ವಿಡಿಯೋ ಮಾಡಿದ್ರೆ ಜನರಿಗೆ ಬೋರ್ ಆಗ್ಬಹುದು. ಹಾಗಾಗಿ 4-6 ನಿಮಿಷದ ವಿಡಿಯೋ ನೀವು ಮಾಡುವುದು ಒಳ್ಳೆಯದು. ಹಾಗೆಯೇ ಮಾರ್ಕೆಟಿಂಗ್ ಬಹಳ ಮುಖ್ಯ. ನೀವು ಹೆಚ್ಚು ಹೆಚ್ಚು ಪ್ರಚಾರ ಮಾಡಿದ್ರೆ ನಿಮ್ಮ ಚಾನೆಲ್ ಹೆಚ್ಚು ಪ್ರಸಿದ್ಧೀ ಪಡೆಯುತ್ತದೆ. ಇದ್ರ ಜೊತೆಗೆ ನಿರಂತರತೆ ಮುಖ್ಯ. ಒಂದು ವಿಡಿಯೋ ಮಾಡಿ ವರ್ಷವಾದ್ಮೇಲೆ ಇನ್ನೊಂದು ವಿಡಿಯೋ ಮಾಡಿದ್ರೆ ಪ್ರಯೋಜನವಿಲ್ಲ. ಅತಿ ಹೆಚ್ಚು ವ್ಯೂವ್ ಹಾಗೂ ಸಬ್ಸ್ಕ್ರೈಬ್ ಆಗ್ತಿದ್ದಂತೆ ನಿಮ್ಮ ಖಾತೆಗೆ ಹಣ ಬರಲು ಶುರುವಾಗುತ್ತದೆ. 
 

Latest Videos
Follow Us:
Download App:
  • android
  • ios