ಓಡಿಹೋದ ಪ್ರೇಮಿಗಳಿಗೆ ಆಶ್ರಯ ನೀಡುವ ವಿಶೇಷ ದೇವಾಲಯ

ಭಾರತದಲ್ಲಿ ಮೊದಲಿನಿಂದಲೂ ಆರೇಂಜ್ಡ್‌ ಮ್ಯಾರೇಜ್‌ಗೆ (Arrange Marriage) ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹಲವು ಕುಟುಂಬಗಳು ಇವತ್ತಿಗೂ ಲವ್‌ ಮ್ಯಾರೇಜ್‌ (Love marriage) ಎಂದರೆ ಮೂಗು ಮುರಿಯುತ್ತಾರೆ. ಮಗ, ಮಗಳು ಪ್ರೀತಿಸಿದವನೊಂದಿಗೆ ಮದುವೆ (Marrige) ಮಾಡಿಕೊಡಲು ನಿರಾಕರಿಸುತ್ತಾರೆ. ಹೀಗಾದಾಗ ಪ್ರೇಮಿಗಳು (Lovers) ಮನೆ ಬಿಟ್ಟು ಓಡಿ ಬರುತ್ತಾರೆ. ಇಂಥಾ ಪ್ರೇಮಿಗಳಿಗೆ ಆಶ್ರಯ ನೀಡಲೆಂದೇ ಒಂದು ದೇವಾಲಯ (Temple)ವಿದೆ. ಅದ್ಯಾವುದು ಗೊತ್ತಾ ?

Shungchul Mahadev, Such A Temple Where Lovers Rejected From Home Get Refuge Vin

ಅನೇಕ ಜೋಡಿಗಳು ತಮ್ಮ ಪ್ರೀತಿ (Love)ಯನ್ನು ಪಡೆಯಲು ತಮ್ಮ ಪೋಷಕರನ್ನು, ಊರನ್ನು ಬಿಟ್ಟು ಓಡಿಹೋಗುತ್ತಾರೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಇಂಥಾ ಪ್ರೇಮಿ (Lovers)ಗಳಿಗೆ ದೂರದ ಸಂಬಂಧಿಕರು, ಸ್ನೇಹಿತರು ಆಶ್ರಯ ನೀಡುತ್ತಾರೆ. ಆದರೆ ಕೆಲವೊಬ್ಬರು ಸಮಾಜದ ಭಯದಿಂದ ಪ್ರೇಮಿಗಳನ್ನು ದೂರವೇ ಇಡುತ್ತಾರೆ.  ಅಂತಹ ದಂಪತಿಗಳಿಗೆ, ಹಿಮಾಚಲದಲ್ಲಿರುವ ಶಾಂಗ್ಚುಲ್ ಮಹಾದೇವ್ ದೇವಾಲಯವು 9Shungchul Mahadev Temple0 ಸುರಕ್ಷಿತ ಸ್ಥಳವಾಗಿದೆ, ಇದು ಅಂತಹ ಪ್ರೇಮಿಗಳನ್ನು ರಕ್ಷಿಸುತ್ತದೆ.

ಹಿಮಾಚಲ ಪ್ರದೇಶವು (Himachal Pradesh) ತನ್ನ ನೈಸರ್ಗಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿನ ಶತಮಾನಗಳ ಹಳೆಯ ಸಂಪ್ರದಾಯಗಳ ಬಗ್ಗೆ ನಿಮಗೆ ತಿಳಿದಿದೆಯೇ. ಇಂದು ನಾವು ನಿಮಗೆ ಹೇಳಲಿರುವುದು  ಹಿಮಾಚಲದ ಕುಲುವಿನ ಶಾಂಗರ್ ಗ್ರಾಮದಲ್ಲಿ ಇರುವ ಹಳೆಯ ಶಿವ ದೇವಾಲಯವಾದ ಶುಂಗ್ಚುಲ್ ಮಹಾದೇವ್ ದೇಗುಲದ ಬಗ್ಗೆ. 

ಪ್ರೇಮಿಗಳಿಗೆ ಆಶ್ರಯ ನೀಡುವ ಶಿವನ ದೇವಾಲಯ
ಹಿಮಾಚಲ ಪ್ರದೇಶದಲ್ಲಿ ಅನೇಕ ಹಳೆಯ ದೇವಾಲಯಗಳಿವೆ ಮತ್ತು ಪ್ರತಿಯೊಂದು ದೇವಾಲಯವೂ ತನ್ನದೇ ಆದ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಇವುಗಳಲ್ಲಿ ಶುಂಗ್ಚುಲ್ ಮಹಾದೇವ ದೇವಾಲಯವೂ ಒಂದು. ಈದೇವಾಲಯದ ಸುತ್ತಲಿನ ಮೈದಾನವು ದಟ್ಟವಾದ ಪೈನ್ ಮರಗಳಿಂದ ಆವೃತವಾಗಿದೆ. ದೇವಾಲಯದ ಇತಿಹಾಸವು ಮಹಾಭಾರತ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಮನೆಯಿಂದ ತಿರಸ್ಕರಿಸಲ್ಪಟ್ಟ ಪ್ರೇಮಿಗಳು ಈ ದೇವಾಲಯದಲ್ಲಿ ಆಶ್ರಯ ಪಡೆಯುತ್ತಾರೆ. ಶಿವನು ಪ್ರೇಮಿಗಳನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ. ಇಲ್ಲಿ ಪ್ರೇಮಿಗಳು ಸಮಾಜದ ಕಟ್ಟಳೆಗಳನ್ನು ಮುರಿದು ಮದುವೆಯಾಗುತ್ತಾರೆ. ಪ್ರೇಮಿಗಳಿಗೆ ಆಶ್ರಯ ನೀಡಬೇಕೆನ್ನುವ ಶಿವನ ಆಜ್ಞೆಯನ್ನು ಊರಿನ ಜನರು ಪಾಲಿಸುತ್ತಾರೆ.

Travel Tips : ಪಾಸ್ಪೋರ್ಟ್ ಚಿಂತೆ ಬಿಡಿ.. ಈ ಸುಂದರ ದ್ವೀಪಕ್ಕೊಮ್ಮೆ ಭೇಟಿ ನೀಡಿ

ಪ್ರೇಮಿಗಳನ್ನು ಅತಿಥಿಗಳಾಗಿ ಸ್ವಾಗತಿಸುವ ಗ್ರಾಮಸ್ಥರು
ಇಲ್ಲಿನ ಜನರು ಪ್ರೇಮಿಗಳನ್ನು ಅತಿಥಿಗಳಾಗಿ ಸ್ವಾಗತಿಸುತ್ತಾರೆ. ಕುಲುವಿನ ಶಾಂಗಡ್ ಗ್ರಾಮದ ಈ ಹಳೆಯ ಸಂಪ್ರದಾಯವನ್ನು ಇಂದಿಗೂ ಈ ಗ್ರಾಮದ ಜನರು ಚೆನ್ನಾಗಿ ಅನುಸರಿಸುತ್ತಿದ್ದಾರೆ. ಹಳ್ಳಿಯಲ್ಲಿರುವ ಶಾಂಗಚುಲ್ ಮಹಾದೇವ ದೇವಸ್ಥಾನದ ಮಿತಿಗೆ ಪ್ರೇಮಿಗಳು ಬಂದರೆ, ಅವರನ್ನು ರಕ್ಷಿಸುವುದು ಊರ ಜನರ ಕರ್ತವ್ಯ ಎಂದು ಹೇಳಲಾಗುತ್ತದೆ.

ಶಸ್ತ್ರಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ
ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಶಂಗಡ ಗ್ರಾಮದ ಜನರು ಶಿವನ ಅಪ್ಪಣೆಯಂತೆ ಇಂದಿಗೂ ಪಾಲಿಸಿಕೊಂಡು ಬಂದಿದ್ದು, ಪ್ರೇಮಿಗಳನ್ನು ರಕ್ಷಿಸುವುದೇ ಧರ್ಮವೆಂದು ಪರಿಗಣಿಸಿದ್ದಾರೆ. ಪ್ರೇಮಿಗಳ ಎರಡೂ ಪಕ್ಷಗಳ ಕುಟುಂಬ ಸದಸ್ಯರು ರಾಜಿಯಾಗದಿದ್ದಾಗ, ಪ್ರೇಮಿಗಳ ಜೀವನ ಮತ್ತು ಆಹಾರ ಇತ್ಯಾದಿಗಳ ಸಂಪೂರ್ಣ ಜವಾಬ್ದಾರಿಯನ್ನು ಈ ಗ್ರಾಮದ ಜನರು ತೆಗೆದುಕೊಳ್ಳುತ್ತಾರೆ. ಆಯುಧಗಳೊಂದಿಗೆ ಯಾರೂ ಈ ಗ್ರಾಮವನ್ನು ಪ್ರವೇಶಿಸುವಂತಿಲ್ಲ. ಇಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ.

ಜಾತಿ ಬೇಧ ಮಾಡುವುದಿಲ್ಲ
ಪ್ರೀತಿಗೆ ಜಾತಿ ನೋಡುವುದಿಲ್ಲ ಎಂಬ ನಾಣ್ಣುಡಿ ಈ ದೇವಸ್ಥಾನಕ್ಕೆ ನಿಜವಾಗಿದೆ. ಇಲ್ಲಿ ಜಾತಿ ಧರ್ಮ ಇತ್ಯಾದಿ ನೋಡುವುದಿಲ್ಲ, ಯಾರೇ ದೇವರ ಆಶ್ರಯಕ್ಕೆ ಬಂದರೂ ಗ್ರಾಮಸ್ಥರೇ ರಕ್ಷಣೆ ಮಾಡುತ್ತಾರೆ. ಇಲ್ಲಿಗೆ ಒಮ್ಮೆ ಪ್ರೀತಿಯ ಜೋಡಿ ಬಂದರೆ ಪೊಲೀಸರೂ ಅಡ್ಡಿಪಡಿಸುವಂತಿಲ್ಲ. ಪ್ರತಿಯೊಬ್ಬರೂ ಈ ಸಂಪ್ರದಾಯವನ್ನು ಅನುಸರಿಸಬೇಕಾಗುತ್ತದೆ.

Photography Tips : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಮದ್ಯ, ಸಿಗರೇಟ್ ನಿಷೇಧ
ಶುಂಗ್ಚುಲ್ ಮಹಾದೇವ್ ದೇವಾಲಯಕ್ಕೆ ಬರುವ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಇಲ್ಲಿಗೆ ಮದ್ಯ, ಸಿಗರೇಟು, ಚರ್ಮದ ಸಾಮಾನುಗಳೊಂದಿಗೆ ಯಾರೂ ಹೋಗುವಂತಿಲ್ಲ. ಇಲ್ಲಿ ಕುದುರೆಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಇಲ್ಲಿ ಯಾರೂ ಜಗಳವಾಡುವಂತಿಲ್ಲ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವಂತಿಲ್ಲ.

ದೇವಾಲಯದ ಇತಿಹಾಸವೇನು ?
ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಗ್ರಾಮದಲ್ಲಿ ಸ್ವಲ್ಪ ಸಮಯ ಕಳೆದರು. ನಂತರ ಕೌರವರು ಅವರನ್ನು ಹಿಂಬಾಲಿಸಿ ಅವರಿಗೆ ಹಾನಿ ಮಾಡುವ ಉದ್ದೇಶದಿಂದ ಈ ಗ್ರಾಮಕ್ಕೆ ಬಂದರು, ಆದರೆ ಶಿವನು ಪಾಂಡವರನ್ನು ರಕ್ಷಿಸಿದನು ಮತ್ತು ಈ ದೇವಾಲಯದ ಮಿತಿಗೆ ಬರುವವರನ್ನು ದೇವರೇ ರಕ್ಷಿಸುತ್ತಾನೆ ಎಂದು ಹೇಳಿದನು ಮತ್ತು ಅಂದಿನಿಂದ ಈ ಸಂಪ್ರದಾಯವು ಮುಂದುವರಿಯುತ್ತದೆ. ಈ ಪುರಾತನ ದೇವಾಲಯದ ಪುನರ್ನಿರ್ಮಾಣದ ನಂತರವೂ ಇಲ್ಲಿನ ಜನರ ನಂಬಿಕೆ ಅಚಲವಾಗಿದೆ. ಪ್ರತಿ ವರ್ಷ ಸಾವಿರಾರು ಜನರು ವಿಶೇಷವಾಗಿ ಪ್ರೇಮಿಗಳು ಶಿವನ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ನೀವೂ ಕೂಡ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದರೆ ಖಂಡಿತ ಈ ದೇವಾಲಯಕ್ಕೆ ಭೇಟಿ ನೀಡಿ.

Latest Videos
Follow Us:
Download App:
  • android
  • ios