ರಾತ್ರಿ ಇಡೀ ತೆರೆದಿರುತ್ತೆ ಈ ಮಾರ್ಕೆಟ್! ಇಂದೋರ್‌ಗೆ ಹೋದ್ರೆ ಮಿಸ್ ಮಾಡದೇ ವಿಸಿಟ್ ಮಾಡಿ!

ರಾತ್ರಿಯಾಯ್ತು ಅಂದ್ರೆ ಎಲ್ಲ ಮಾರ್ಕೆಟ್ ಬಂದ್ ಆಗುತ್ತೆ. ಜನರೆಲ್ಲ ಮನೆಗೆ ಹೋಗ್ತಾರೆ. ಆದ್ರೆ ಇಲ್ಲೊಂದು ಮಾರ್ಕೆಟ್ ಭಿನ್ನವಾಗಿದೆ. ರಾತ್ರಿಯಾದ್ರೆ ಇಲ್ಲಿಗೆ ಬರೋ ಜನರು ಹೆಚ್ಚಾಗ್ತಾರೆ. ರಾತ್ರಿಯಿಂದ ಬೆಳಗಿನವರೆಗೆ ಈ ಮಾರ್ಕೆಟ್ ಗಿಜಿಗುಡುತ್ತಿರುತ್ತದೆ. 
 

Safara Bazar Indore Late Night Market

ಪ್ರವಾಸಿ ತಾಣಕ್ಕೆ ಹೋದ್ಮೇಲೆ ಅಲ್ಲಿನ ಪ್ರಸಿದ್ಧ ಸ್ಥಳಗಳನ್ನು ಮಾತ್ರ ನಾವು ವೀಕ್ಷಿಸೋದಿಲ್ಲ. ಸುತ್ತಮುತ್ತಲ ಪ್ರದೇಶದ ಜೊತೆ ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡ್ತೇವೆ. ಅಲ್ಲಿನ ಸ್ಥಳೀಯ ಆಹಾರಗಳ ರುಚಿ ನೋಡ್ತೇವೆ. ಅಲ್ಲಿನ ವಸ್ತುಗಳು, ಬಟ್ಟೆಗಳನ್ನು ಖರೀದಿ ಮಾಡ್ತೇವೆ. 

ಪ್ರತಿಯೊಂದು ಪ್ರವಾಸಿ (Tourist) ಸ್ಥಳಗಳು ಭಿನ್ನವಾಗಿರುತ್ತದೆ. ಒಂದೊಂದು ಸ್ಥಳ ಒಂದೊಂದು ವಿಶೇಷತೆ ಹೊಂದಿರುತ್ತದೆ. ಸ್ಥಳಗಳನ್ನು ಸರಿಯಾಗಿ ನೋಡ್ಬೇಕು, ರಾತ್ರಿ (Night) ಯಾದ್ರೆ ತೊಂದರೆ ಅಂತಾ ನಾವು ಬೆಳಿಗ್ಗೆ ಬೇಗ ಎದ್ದು, ಸ್ಥಳ ವೀಕ್ಷಣೆಗೆ ಹೋಗ್ತೇವೆ. ಬಹುತೇಕ ಮಾರ್ಕೆಟ್ (Market) ರಾತ್ರಿ 11 ಗಂಟೆಯೊಳಗೆ ಮುಚ್ಚುತ್ವೆ. ಹಾಗಾಗಿ ಅಷ್ಟರಲ್ಲೇ ನಮ್ಮ ಶಾಪಿಂಗ್ ಮುಗಿಸಬೇಕಾಗುತ್ತದೆ. ಆದ್ರೆ ರಾತ್ರಿಯಾದಂತೆ ನಮ್ಮ ದೇಶದ ಮಾರುಕಟ್ಟೆಯೊಂದು ತೆರೆದುಕೊಳ್ಳುತ್ತದೆ. ರಾತ್ರಿ ತೆರೆದಿರುವ ಮಾರುಕಟ್ಟೆ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.  

ರಾತ್ರಿ ತೆರೆಯುವ ಮಾರುಕಟ್ಟೆ ಯಾವುದು ಗೊತ್ತಾ? : ಇಂದೋರ್ (Indore) ನ ಮಾರುಕಟ್ಟೆ ರಾತ್ರಿಯಾದಂತೆ ತೆರೆದುಕೊಳ್ಳುವ ಮಾರ್ಕೆಟ್ ಆಗಿದೆ. ಇಂದೋರ್ ಬೀದಿ ಬದಿಯ ಆಹಾರಕ್ಕೆ ಸಾಕಷ್ಟು ಪ್ರಸಿದ್ಧವಾಗಿದೆ.  ನೀವು ಇಂದೋರ್‌ಗೆ ಭೇಟಿ ನೀಡುವ ಪ್ಲಾನ್ ನಲ್ಲಿದ್ದರೆ ಅಲ್ಲಿಯ ಸ್ಥಳೀಯ ಆಹಾರ (Food) ತಿನ್ನದೆ ಬರಬೇಡಿ. ಇಂದೋರ್ ನಲ್ಲಿ ಬೀದಿ ಬದಿಯ ಆಹಾರಕ್ಕೆ ಸರಾಫಾ ಬಜಾರ್‌ (Sarafa Bazar) ಪ್ರಸಿದ್ಧವಾಗಿದೆ. ರಾಜವಾಡದ ಹಿಂಭಾಗದಲ್ಲಿ ಈ ಮಾರುಕಟ್ಟೆಯಿದೆ.  ಸಾಮಾನ್ಯವಾಗಿ ಮಾರುಕಟ್ಟೆಗಳು ಬೆಳಿಗ್ಗೆ ತೆರೆದಿರುತ್ತವೆ. ಆದರೆ ಇಂದೋರ್‌ನ ಬುಲಿಯನ್ ಮಾರುಕಟ್ಟೆ ರಾತ್ರಿ 9 ಗಂಟೆಗೆ ತೆರೆಯುತ್ತದೆ. ಇಂದೋರ್‌ನ ಸರಾಫಾ ಬಜಾರ್ ಬೀದಿ ಆಹಾರ ಮಾರುಕಟ್ಟೆಯಾಗಿದ್ದು, ಇದು ಬೆಳಿಗ್ಗೆ 4 ಗಂಟೆಯವರೆಗೆ ತೆರೆದಿರುತ್ತದೆ.   ಮಧ್ಯರಾತ್ರಿ ಇಲ್ಲಿ ಸಾಕಷ್ಟು ಜನಸಂದಣಿಯು ಇಲ್ಲಿ ಕಂಡುಬರುತ್ತದೆ. ಆಹಾರ ಪ್ರಿಯರು ರಾತ್ರಿಯಲ್ಲಿ ಇಂದೋರ್‌ನ ಸರಾಫಾ ಬಜಾರ್‌ಗೆ ಭೇಟಿ ನೀಡುತ್ತಾರೆ.  

ಈ ದೇವಾಲಯಗಳ ಆ್ಯಪ್ ಮೂಲಕ ನೀವು ವರ್ಚುಯಲ್ ದರ್ಶನ ಪಡೀಬಹುದು!

ಇಲ್ಲಿ ಸಿಗುತ್ತೆ ಸಸ್ಯಾಹಾರ : ಈ ಮಾರುಕಟ್ಟೆ ವಿಶೇಷವೆಂದರೆ ಇಲ್ಲಿ ಸಸ್ಯಾಹಾರಿ (Vegetarian) ಖಾದ್ಯಗಳು ಸಿಗುತ್ತವೆ. ಇಂದೋರ್‌ನ ಬುಲಿಯನ್ ಮಾರುಕಟ್ಟೆಯಲ್ಲಿ ಮಾಂಸಾಹಾರಿ ಲಭ್ಯವಿಲ್ಲ. ಈ ಸ್ಥಳವು ಸಸ್ಯಾಹಾರಿಗಳಿಗೆ ಉತ್ತಮ. ಇಲ್ಲಿ ನಿಮಗೆ ಸಸ್ಯಾಹಾರಿ ತಿಂಡಿಗಳು, ಚಾಟ್, ಸಿಹಿತಿಂಡಿಗಳು ಸಿಗುತ್ತವೆ. ಇದಲ್ಲದೆ ನೀವು ರಾಜಸ್ಥಾನಿ, ಗುಜರಾತಿ ಮತ್ತು ಮಹಾರಾಷ್ಟ್ರದ ಪಾಕಪದ್ಧತಿಯನ್ನು ಸಹ ಆನಂದಿಸಬಹುದು.

100 ವರ್ಷಗಳ ಇತಿಹಾಸ : ಈ ಮಾರುಕಟ್ಟೆ 100 ವರ್ಷಗಳಷ್ಟು ಹಳೆಯದಾಗಿದೆ. ಆ ಕಾಲದ ಬುಲಿಯನ್ ವ್ಯಾಪಾರಿಗಳು ಈ ರಾತ್ರಿ ಮಾರುಕಟ್ಟೆ ತೆರೆಯುವಂತೆ ಪ್ರೋತ್ಸಾಹಿಸಿದ್ದರು. ಅಲ್ಲಿಂದ ರಾತ್ರಿ ವ್ಯಾಪಾರ ನಡೆಯುತ್ತ ಬಂದಿದೆ. ಅತಿ ಕಡಿಮೆ ಹಣಕ್ಕೆ ನೀವು ರುಚಿಕರವಾದ ತಿನಿಸುಗಳನ್ನು ಸವಿಯಬಹುದು. ನಿಮ್ಮ ಬಜೆಟ್ ಕಡಿಮೆಯಿದ್ರೂ ನೀವು ಸಾಕಷ್ಟು ಖಾದ್ಯಗಳ ರುಚಿ ನೋಡ್ಬಹುದು. 

ಇಲ್ಲಿದೆ ಸಾಕಷ್ಟು ಪ್ರವಾಸಿ ತಾಣ : ಸರಾಫಾ ಬಜಾರ್‌ ನಲ್ಲಿ ಬರೀ ಆಹಾರದ ರುಚಿ ಮಾತ್ರ ಸವಿಯೋದಲ್ಲ, ಭೇಟಿ ನೀಡಲು ಅನೇಕ ಪ್ರವಾಸಿ ಸ್ಥಳಗಳಿವೆ. ರಾಜವಾಡ, ಶೀಶ್ ಮಹಲ್, ಲಾಲ್ ಬಾಗ್ ಅರಮನೆ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ನೀವು ಭೇಟಿ ನೀಡಬಹುದು.

ದಿನಕ್ಕೆರಡು ಬಾರಿ ಅದೃಶ್ಯವಾಗಿ ಪ್ರತ್ಯಕ್ಷವಾಗುವ ಶಿವ ದೇವಾಲಯ!

ಬುಲಿಯನ್ ಮಾರುಕಟ್ಟೆಗೆ ತಲುಪೋದು ಹೇಗೆ? : ಇಂದೋರ್‌ ನಿಂದ ನೀವು ಬುಲಿಯನ್ ಮಾರುಕಟ್ಟೆಗೆ ಆರಾಮವಾಗಿ ಪ್ರಯಾಣ ಬೆಳೆಸಬಹುದು. ನಿಮಗೆ ಟ್ಯಾಕ್ಸಿ, ಕ್ಯಾಬ್, ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ಸೌಲಭ್ಯ ಲಭ್ಯವಿದೆ. ನೀವು ಕಡಿಮೆ ಹಣದಲ್ಲಿ ಇಂಧೋರ್ ನಿಂದ ಬುಲಿಯನ್ ಮಾರುಕಟ್ಟೆಗೆ ತಲುಪಬಹುದಾಗಿದೆ. ರಾಜವಾಡದಲ್ಲಿ ಪಾರ್ಕಿಂಗ್ ಸ್ಥಳವೂ ಇದೆ. ಅಲ್ಲಿ ನಿಮಗೆ ಖಾಸಗಿ ವಾಹನವನ್ನು ನಿಲ್ಲಿಸಲು ಅವಕಾಶವದೆ. ಅಲ್ಲಿಂದ ನೀವು ಕಾಲ್ನಡಿಗೆಯಲ್ಲಿ ಮಾರುಕಟ್ಟೆ ತಲುಪಬಹುದಾಗಿದೆ. 
 

Latest Videos
Follow Us:
Download App:
  • android
  • ios