ಟಿಕೆಟ್, ಪಾಸ್ಪೋರ್ಟ್, ವೀಸಾ ಇಲ್ಲದೆ ರಷ್ಯಾದಿಂದ ಅಮೆರಿಕಕ್ಕೆ ಬಂದ!
ಜಗತ್ತಿನಲ್ಲಿ ವಿಚಿತ್ರ ಜನರಿರ್ತಾರೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ದಾಖಲೆ ಇಲ್ಲದೆ ಹೋದ್ರೆ ಜೈಲಿನಲ್ಲಿ ಕಂಬಿ ಎಣಿಸ್ಬೇಕು ಎಂಬುದು ಗೊತ್ತಿದ್ರೂ ಅದೇ ತಪ್ಪು ಮಾಡ್ತಾರೆ. ಈ ವ್ಯಕ್ತಿ ಕೂಡ ಈಗ ಜೈಲು ಸೇರಿದ್ದಾನೆ. ಕಾರಣ ಇಲ್ಲಿದೆ.
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗ್ಬೇಕೆಂದ್ರೆ ವೀಸಾ, ಪಾಸ್ಪೋರ್ಟ್, ಟಿಕೆಟ್ ಸೇರಿದಂತೆ ಅನೇಕ ದಾಖಲೆಗಳು ಅಗತ್ಯವಿದೆ. ಗಡಿಯನ್ನು ದಾಟಿ ಬೇರೆ ದೇಶಕ್ಕೆ ನುಸುಳುವುದು ಸುಲಭವಲ್ಲ. ಹಾಗೆ ವೀಸಾ, ಪಾಸ್ಪೋರ್ಟ್ ಇಲ್ಲದೆ ಟಿಕೆಟ್ ಇಲ್ಲದೆ ವಿಮಾನದಲ್ಲಿ ಪ್ರಯಾಣ ಮಾಡಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ಸಿಕ್ಕಿಬಿದ್ದಾಗ ಕಠಿಣ ಕಾನೂನನ್ನು ಎದುರಿಸಬೇಕಾಗುತ್ತದೆ. ಆದ್ರೆ ಈ ವ್ಯಕ್ತಿ ರಷ್ಯಾ ಹಾಗೂ ಅಮೆರಿಕಾ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ.
ನ್ಯಾಯಾಲಯ (Court) ದ ದಾಖಲೆಗಳ ಪ್ರಕಾರ, ರಷ್ಯಾದ ವ್ಯಕ್ತಿಯೊಬ್ಬ ಕಳೆದ ತಿಂಗಳು ಕೋಪನ್‌ಹೇಗನ್‌ನಿಂದ ಯುಎಸ್‌ಎ (USA) ಯ ಲಾಸ್ ಏಂಜಲೀಸ್‌ಗೆ ಪಾಸ್ಪೋರ್ಟ್, ವೀಸಾ, ಟಿಕೆಟ್ ಸೇರಿದಂತೆ ಯಾವುದೇ ದಾಖಲೆ (Record) ಇಲ್ಲದೆ ಹೋಗಿದ್ದಾನೆ. ಈ ವಿಷ್ಯ ತಿಳಿದ ಅಧಿಕಾರಿಗಳು ಕಂಗಾಲಾಗಿದ್ದಾರೆ.
8 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನಗರ ಭೂತಗಳ ಸಿಟಿ ಆಗಿದ್ದು ಹೇಗೆ?
ರಷ್ಯಾ-ಇಸ್ರೇಲಿ ಪ್ರಜೆ ಸೆರ್ಗೆಯ್ ವ್ಲಾಡಿಮಿರೊವಿಚ್ ಒಚಿಗಾವಾ ಈ ಕೆಲಸ ಮಾಡಿದ ವ್ಯಕ್ತಿ. ಆತ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್‌ನಲ್ಲಿ ಕೋಪನ್‌ಹೇಗನ್‌ನಿಂದ ಪ್ರಯಾಣ ಮಾಡಿದ್ದಾನೆ. ಘಟನೆ ನವೆಂಬರ್ 4 ರಂದು ಮಧ್ಯಾಹ್ನ 1 ಗಂಟೆಗೆ ನಡೆದಿದೆ. ಆತ ಟಿಕೆಟ್ ಇಲ್ಲದೆ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಇಳಿದಿದ್ದಾನೆ.
ಹೇಗೆ ಪತ್ತೆಯಾಯ್ತು ಪ್ರಕರಣ? : ಒಚಿಗಾವಾ ಲಾಸ್ ಏಂಜಿಲೀಸ್ ವಿಮಾನ ನಿಲ್ದಾಣಕ್ಕೆನೋ ಬಂದಿಳಿದಿದ್ದಾನೆ. ಆದ್ರೆ ಅಲ್ಲಿಂದ ಹೊರಗೆ ಹೋಗುವಾಗ ಸಿಕ್ಕಿ ಬಿದ್ದಿದ್ದಾನೆ. ಒಚಿಗಾವಾ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಚೆಕ್‌ಪಾಯಿಂಟ್‌ಗೆ ಆಗಮಿಸಿದ್ದಾನೆ. ಇಲ್ಲಿ ಸಿಬಿಪಿ ಅಧಿಕಾರಿಗಳು ಆತನ ಹೆಸರು ಆ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಇಲ್ಲದಿರುವುದನ್ನು ಪತ್ತೆ ಮಾಡಿದ್ದಾರೆ. ಇನ್ನಷ್ಟು ಪರಿಶೀಲನೆ ನಡೆಸಿದಾಗ ಯಾವುದೇ ಇತರ ಅಂತರಾಷ್ಟ್ರೀಯ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲೂ ಆತನ ಹೆಸರಿಲ್ಲ ಎನ್ನುವುದು ಗೊತ್ತಾಗಿದೆ.
ಪ್ರಯಾಣದ ವೇಳೆ ಸೀಟ್ ಬದಲಿಸಿದ್ದ ಒಚಿಗಾವಾ : ವಿಮಾನ ಸಿಬ್ಬಂದಿ ಪ್ರಕಾರ, ಇವೆರಲ್ಲರೂ ಆತನನ್ನು ವಿಮಾನದಲ್ಲಿಯೇ ನೋಡಿದ್ದರು. ಆತ ಪ್ರಯಾಣದುದ್ದಕ್ಕೂ ತನ್ನ ಸೀಟ್ ಬದಲಿಸುತ್ತಲೇ ಇದ್ದ. ಫುಡ್ ಸೇವೆಯ ಸಮಯದಲ್ಲಿ ಎರಡು ಪ್ಯಾಕೆಟ್ ಆಹಾರ ಕೇಳಿದ್ದಾನೆ. ಕ್ಯಾಬಿನ್ ಸಿಬ್ಬಂದಿಯೊಬ್ಬರ ಚಾಕೊಲೇಟ್ ಅನ್ನು ಕಸಿದುಕೊಂಡು ತಿನ್ನಲು ಪ್ರಯತ್ನಿಸಿದ್ದ. ಒಚಿಗಾವಾ ತಮ್ಮ ಬೋರ್ಡಿಂಗ್ ಪಾಸ್ ನೀಡಿರಲಿಲ್ಲವಂತೆ. ವಿಮಾನ ಪ್ರಯಾಣದ ವೇಳೆ ಎಲ್ಲ ಪ್ರಯಾಣಿಕರ ಜೊತೆ ಮಾತನಾಡಲು ಪ್ರಯತ್ನಿಸುತ್ತಿದ್ದ ಒಚಿಗಾವಾ, ಎಲ್ಲರನ್ನೂ ವೀಕ್ಷಿಸುತ್ತಿದ್ದ ಎಂದು ವಿಮಾನ ಸಿಬ್ಬಂದಿ ಹೇಳಿದ್ದಾರೆ.
ಫಾರಿನ್ ಟ್ರಿಪ್ ಆಸೆ ಈಡೇರಿಸಿಕೊಳ್ಳಲ್ಲೊಂದು ಅವಕಾಶ, ಐಲ್ಯಾಂಡ್ ಟ್ರಿಪ್ ಉಚಿತ! ಶ್, ಇದು ಬ್ಲೈಂಡ್ ಡೇಟ್!
ಆರಂಭದಲ್ಲಿ ಸುಳ್ಳು ಹೇಳಿದ ಒಚಿಗಾವೊ : ಸಿಬಿಪಿ ಅಧಿಕಾರಿಗಳು ಪಾಸ್‌ಪೋರ್ಟ್ ಕೇಳಿದಾಗ ಅದನ್ನು ವಿಮಾನದಲ್ಲಿ ಬಿಟ್ಟು ಬಂದಿರುವುದಾಗಿ ಆತ ಸುಳ್ಳು ಹೇಳಿದ್ದ. ಆದ್ರೆ ವಿಮಾನದಲ್ಲಿ ಯಾವುದೇ ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ವಾಸ್ತವವಾಗಿ ಒಚಿಗಾವೊ ಬಳಿ ಪಾಸ್ಪೋರ್ಟ್ ಇರಲೇ ಇಲ್ಲ. ರಷ್ಯನ್ ಮತ್ತು ಇಸ್ರೇಲಿ ಗುರುತಿನ ಚೀಟಿಯೊಂದು ಆತನ ಬಳಿ ಇತ್ತು. ಫೋನ್ ನಲ್ಲಿ ಪಾಸ್ಪೋರ್ಟ್ ನ ಫೋಟೋ ಒಂದಿತ್ತು. ಅದ್ರಲ್ಲಿ ಡೇಟ್ ಆಫ್ ಬರ್ತ್, ಹೆಸರು ಹಾಗೂ ಪಾಸ್ಪೋರ್ಟ್ ನಂಬರ್ ಇತ್ತು. ಆದ್ರೆ ಒಚಿಗಾವೊ ಫೋಟೋ ಇರಲಿಲ್ಲ.
ಒಚಿಗಾವೊ ಪ್ರಕಾರ ಆತ ಮೂರು ದಿನಗಳಿಂದ ನಿದ್ರೆ ಮಾಡಿರಲಿಲ್ಲ. ಹಾಗಾಗಿ ಏನಾಗ್ತಿದೆ ಎನ್ನುವುದು ಆತನಿಗೆ ಗೊತ್ತಾಗ್ತಿರಲಿಲ್ಲ. ನಾನು ಕೋಪನ್ ಹ್ಯಾಗನ್ ಗೆ ಹೇಗೆ ಬಂದೆ ಎನ್ನುವುದೇ ನನಗೆ ಗೊತ್ತಿಲ್ಲ ಎಂದಿದ್ದಾನೆ. ನನ್ನ ಬಳಿ ಅಮೆರಿಕಾಕ್ಕೆ ಬರಲು ಟಿಕೆಟ್ ಇತ್ತು ಎನ್ನಿಸುತ್ತಿದೆ. ಆದ್ರೆ ನೆನಪಿಗೆ ಬರ್ತಿಲ್ಲ. ನಾನು ಕೋಪನ್ ಹ್ಯಾಗನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಂದಿಲ್ಲ. ಆದ್ರೆ ನನಗೆ ಯಾವುದು ನೆನಪಿಲ್ಲ ಎಂದಿದ್ದಾನೆ. ಒಚಿಗಾವಾ ತಾನು ನಿರಪರಾಧಿ ಎನ್ನುತ್ತಿದ್ದಾನೆ. ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಆತನನ್ನು ಬಂಧಿಸಿಡಲಾಗಿದೆ.