Traveling Tips: ಜಂಗಲ್ ಸಫಾರಿ ವೇಳೆ ಇದು ನೆನಪಿರಲಿ
ಕಾಡು ಸುತ್ತೋದು ಅನೇಕರಿಗೆ ಇಷ್ಟ. ಭಾರತದಲ್ಲಿ ಸಾಕಷ್ಟು ಕಾಡುಗಳಿವೆ. ಜನರಿಗೆ ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಅನೇಕ ಉದ್ಯಾನವನಗಳು ಕಲ್ಪಿಸಿಕೊಟ್ಟಿವೆ. ಪ್ರಾಣಿ ನೋಡುವ ಉತ್ಸಾಹದಲ್ಲಿ ಜನರು ಮೈಮರೆತರೆ ಆಪತ್ತು ನಿಶ್ಚಿತ.
ಜಂಗಲ್ ಸಫಾರಿ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಕಾಡು ಪ್ರಾಣಿಗಳನ್ನು ಟಿವಿಯಲ್ಲಿ ನೋಡುವ ಬದಲು ಎದುರಿಗೆ ನೋಡುವುದ್ರ ಮಜಾವೇ ಬೇರೆ. ಜಂಗಲ್ ಸಫಾರಿಗೆ ಭಾರತ ಅತ್ಯುತ್ತಮ ದೇಶ. ಪೂರ್ವ ಭಾರತದಿಂದ ಪಶ್ಚಿಮ ಭಾರತ ಮತ್ತು ಉತ್ತರ ಭಾರತದಿಂದ ದಕ್ಷಿಣ ಭಾರತ ಎಲ್ಲ ಕಡೆ ಅನೇಕ ರಾಷ್ಟ್ರೀಯ ಉದ್ಯಾನವನಗಳಿವೆ. ಅಲ್ಲಿಗೆ ಪ್ರತಿದಿನ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಬಂದು ಹೋಗ್ತಾರೆ.
ನಾಗರಹೊಳೆ (Nagarhole) ನ್ಯಾಷನಲ್ ಪಾರ್ಕ್, ಬಂಡಿಪುರ, ರಣಥಂಬೋರ್ ರಾಷ್ಟ್ರೀಯ ಉದ್ಯಾನವ (Park) ನ, ಗಿರ್ ರಾಷ್ಟ್ರೀಯ ಉದ್ಯಾನವನ ಹೀಗೆ ಭಾರತದಲ್ಲಿ ಸಾಕಷ್ಟು ರಾಷ್ಟ್ರೀಯ ಉದ್ಯಾನವನಗಳಿದ್ದು ಎಲ್ಲರೂ ಅಲ್ಲಿಗೆ ಭೇಟಿ ನೀಡಿ, ಪ್ರಾಣಿಗಳನ್ನು ನೋಡಲು ಬಯಸ್ತಾರೆ. ಆದರೆ ಕಾಡಿನಲ್ಲಿ ಸಫಾರಿ ಬೆಳೆಸುವ ವೇಳೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವೆಂದ್ರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ. ನಾವಿಂದು ಜಂಗಲ್ ಸಫಾರಿ ವೇಳೆ ಏನೆಲ್ಲ ನಿಯಮ ಪಾಲನೆ ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಜಂಗಲ್ ಸಫಾರಿ (Jungle Safari ) ವೇಳೆ ಈ ನಿಯಮ ಪಾಲನೆ ಮಾಡಿ :
ಧರಿಸುವ ಬಟ್ಟೆ ಬಗ್ಗೆ ಗಮನವಿರಲಿ : ಅರೇ.. ಬಟ್ಟೆಗೂ, ಸಫಾರಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದ್ರೆ ಸಂಬಂಧವಿದೆ. ಜಂಗಲ್ ಸಫಾರಿ ವೇಳೆ ನೀವು ವರ್ಣರಂಜಿತ ಡ್ರೆಸ್ ಧರಿಸಬಾರದು. ನೀವು ಕಾಡಿಗೆ ಹೋಗುವ ಮುನ್ನ ಪರಿಸರಕ್ಕೆ ಹತ್ತಿರವಾದ ಹಸಿರು, ಕಂದು ಬಣ್ಣಗಳ ಬಟ್ಟೆಗಳನ್ನು ಧರಿಸುವುದು ಸರಿ ಎಂದು ಹೇಳಲಾಗುತ್ತದೆ. ಕಾಡಿನ ಪರಿಸರಕ್ಕೆ ತಕ್ಕಂತೆ ಬಟ್ಟೆ ಧರಿಸಿ ಜಂಗಲ್ ಸಫಾರಿಗೆ ಹೋದ್ರೆ ಒಳ್ಳೆಯದು.
ಸಫಾರಿಗೆ ಹೋಗುವಾಗ ಯಾವ ವಾಹನ ಬೆಸ್ಟ್ : ನೀವು ನಡೆದಾಡಿ ಕಾಡು ಸುತ್ತಲು ಸಾಧ್ಯವಿಲ್ಲ. ಜಂಗಲ್ ಸಫಾರಿಗೆ ವಾಹನ ಬೇಕು. ವೈಯಕ್ತಿಕ ವಾಹನದಲ್ಲಿ ಕಾಡಿನೊಳಗೆ ಹೋಗುವಂತಿಲ್ಲ. ಪ್ರತಿಯೊಂದು ರಾಷ್ಟ್ರೀಯ ಉದ್ಯಾನವನಗಳಲ್ಲೂ ಇದಕ್ಕಾಗಿಯೇ ವಾಹನದ ವ್ಯವಸ್ಥೆ ಇರುತ್ತದೆ. ಆ ವಾಹನದಲ್ಲಿಯೇ ನೀವು ಪ್ರಯಾಣ ಬೆಳೆಸಬೇಕು. ಹಾಗೆಯೇ ಸಫಾರಿ ಸಮಯದಲ್ಲಿ ಯಾವುದೇ ಪ್ರಯಾಣಿಕರು ವಾಹನದಿಂದ ಹೊರಬರಲು ಅನುಮತಿಸಲಾಗುವುದಿಲ್ಲ. ಪ್ರಾಣಿಗಳ ಛಾಯಾಚಿತ್ರಕ್ಕಾಗಿ ಅನೇಕ ಜನರು ಕಾರಿನಿಂದ ಕೆಳಗಿಳಿಯುತ್ತಾರೆ. ಯಾವುದೇ ಕಾರಣಕ್ಕೂ ವಾಹನದಿಂದ ಇಳಿಯಬೇಡಿ. ಸಫಾರಿಗಾಗಿ ಹೆಚ್ಚಾಗಿ ತೆರೆದ ವಾಹನಗಳನ್ನು ಬಳಸಲಾಗುತ್ತದೆ.
TRAVEL TIPS: ಭಾರತದ ಈ ಸ್ಥಳಗಳಿಗೆ ಫ್ಯಾಮಿಲಿ ಜೊತೆ ತಪ್ಪಿಯೂ ಭೇಟಿ ನೀಡ್ಬೇಡಿ
ಇದರ ಬಗ್ಗೆ ಇರಲಿ ಗಮನ : ಪ್ರವಾಸ ಅಂದ್ಮೇಲೆ ಕ್ಯಾಮರಾ ಇರ್ಲೇಬೇಕು. ನಾವೆಲ್ಲ ಕ್ಯಾಮರಾ ಹಿಡಿದೇ ಜಂಗಲ್ ಸಫಾರಿಗೆ ಹೋಗ್ತೆವೆ. ಜಂಗಲ್ ಸಫಾರಿ ವೇಳೆ ನೀವು ಫೋಟೋ ತೆಗೆಯಬಹುದು. ಆದ್ರೆ ಯಾವುದೇ ಕಾರಣಕ್ಕೂ ಫ್ಲ್ಯಾಷ್ ಬಳಸಬಾರದು. ಹಾಗೆಯೇ ನೀವು ಯಾವುದೇ ರೀತಿಯ ಆಯುಧವನ್ನು ಕಾಡಿಗೆ ತೆಗೆದುಕೊಂಡು ಹೋಗಬಾರದು. ನಿಮ್ಮ ಬಳಿ ಯಾವುದೇ ಆಯುಧವಿದ್ರೂ ಅದಕ್ಕೆ ದಂಡ ವಿಧಿಸಲಾಗುತ್ತದೆ.
ಐಡಿ ಕಾರ್ಡ್ ಇಟ್ಟುಕೊಳ್ಳಿ : ಜಂಗಲ್ ಸಫಾರಿಗೆ ಹೋಗುವ ಮೊದಲು, ನಿಮ್ಮೊಂದಿಗೆ ಐಡಿ ಕಾರ್ಡ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ನಿಮ್ಮ ಬಳಿ ಯಾವುದೇ ರೀತಿಯ ಗುರುತಿನ ಚೀಟಿ ಇಲ್ಲದಿದ್ದರೆ ಜಂಗಲ್ ಸಫಾರಿಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ. ಹಾಗಾಗಿ ನೀವು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕಾಗುತ್ತದೆ.
Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು
ಈ ವಿಷಯಗಳನ್ನು ನೆನಪಿನಲ್ಲಿಡಿ : ಕಾಡಿನಲ್ಲಿ ಕೂಗಾಡಬಾರದು. ತಿಂದ ಆಹಾರ ಪೊಟ್ಟಣಗಳನ್ನು ಎಸೆಯಬಾರದು. ಚಿಕ್ಕ ಮಕ್ಕಳು ಜೊತೆಗಿದ್ದರೆ ಅವರನ್ನು ಹೆಚ್ಚು ಜಾಗೃತಿಯಿಂದ ನೋಡಿಕೊಳ್ಳಬೇಕು. ಪ್ರಾಣಿಗಳನ್ನು ಕೆಣಕುವ ಪ್ರಯತ್ನ ನಡೆಸಬಾರದು. ಸಫಾರಿ ಮಾಡುವ ಪ್ರತಿ ಕ್ಷಣವೂ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಆಯಾ ರಾಷ್ಟ್ರೀಯ ಉದ್ಯಾನವನದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.