ಉಡುಪಿಯಲ್ಲಿ ನವೀಕೃತ ಶ್ರೀ ಕೃಷ್ಣ ಛತ್ರ ಲೋಕಾರ್ಪಣೆ
ಉಡುಪಿಯಲ್ಲಿ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ ನವೀಕೃತ ಶ್ರೀ ಕೃಷ್ಣ ಛತ್ರವನ್ನು ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಿದರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಭಕ್ತರ ನೆರವಿನೊಂದಿಗೆ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ ನವೀಕೃತ ಶ್ರೀ ಕೃಷ್ಣ ಛತ್ರವನ್ನು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಿದರು. ಈ ಛತ್ರವು 1966 ರಲ್ಲಿ ಆಗಿನ ಶ್ರೀಶೀರೂರು ಮಠಾಧೀಶರಿಂದ ನಿರ್ಮಸಲ್ಪಟ್ಟು ಪ್ರಸ್ತುತ ಶಿಥಿಲಗೊಂಡಿತ್ತು .ಇದೀಗ ಸಮಾರು 3.5 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಿಸಲಾಗಿದೆ .
ಇದರಲ್ಲಿ ಕೆಳ ಅಂತಸ್ತಿನಲ್ಲಿ ಅತೀ ಗಣ್ಯರಿಗೆ ವಿಶ್ರಾಂತಿ ಒಂದು ಸುಸಜ್ಜಿತ ಕೋಣೆ ಕಲಾವಿದರಿಗೆ ವಿಶಾಲವಾದ ಗ್ರೀನ್ ರೂಮ್ , ಪತ್ರಿಕೆ, ಮಾಧ್ಯಮದವರಿಗೆ ವಿಶ್ರಾಂತಿ ಕೋಣೆ , ಮೇಲಿನ ಎರಡು ಮಹಡಿಗಳಲ್ಲಿ ಮಠದ ಸಿಬ್ಬಂದಿಗಳಿಗೆ 24 ಕೋಣೆಗಳು (Rooms) ಸಾಕಷ್ಟು ಸಂಖ್ಯೆಯಲ್ಲಿ ಸ್ನಾನಗೃಹ ಶೌಚಗೃಹಗಳನ್ನು ನಿರ್ಮಿಸಲಾಗಿದೆ.
Udupi: 40 ಅಡಿ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಯೂರು, ಅದಮಾರು ಕಿರಿಯ , ಶೀರೂರು ಶ್ರೀಪಾದರು ಉಪಸ್ಥಿತರಿದ್ದರು .ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದ ಇಂಜಿನಿಯರ್ ಯುಕೆ ರಾಘವೇಂದ್ರ ರಾವ್ , ಆರ್ಕಿಟೆಕ್ಟ್ ರಾಜೇಂದ್ರಮಯ್ಯ , ಗುತ್ತಿಗೆದಾರ ಗಂಗಾಧರ ರಾವ್ , ಇಲೆಕ್ಟ್ರಿಕಲ್ ಗುತ್ತಿಗೆದಾರರ ವೆಂಕಟಕೃಷ್ಣ ಐತಾಳ್ ದಾನಿ ಎಂ ಎಂ ಭಟ್ , ವಾದಿರಾಜ ಆಚಾರ್ಯ ಮೊದಲಾದವರನ್ನು ಶ್ರೀಪಾದರು ಸಂಮಾನಿಸಿದರು . ಬಿ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ (Programme) ನಿರ್ವಹಿಸಿದರು .
ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು . ರಾಘವೇಂದ್ರ ರಾವ್ ಪ್ರಸ್ತಾವಿಸಿದರು . ರಾಘವೇಂದ್ರ ಉಪಾಧ್ಯಾಯ ಪ್ರಾರ್ಥನೆಗೈದರು . ದಿವಾನರಾದ ವರದರಾಜ ಭಟ್ , ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ , ರವಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು . ಮಠದ ಪುರೋಹಿತರು ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು.
ಉಡುಪಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಣೆ: ಪುತ್ತಿಗೆ ಶ್ರೀ
ಉಡುಪಿಯ ವರಂಗ ಕುರಿತ ಮಹೀಂದ್ರಾ ಟ್ವೀಟ್ ಗೆ ಕರಾವಳಿಗರ ಸಂತಸ
ಉಡುಪಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಈ ಹಿಂದೆ ಉದ್ಯಮ ಆನಂದ್ ಮಹೀಂದ್ರಾ ಮಾಡಿದ್ದ ಟ್ವುಟ್ ವೈರಲ್ ಆಗಿತ್ತು. ಉಡುಪಿ ಜಿಲ್ಲೆಯ ವರಂಗ ಯಾರಿಗೆ ಗೊತ್ತಿಲ್ಲ ಹೇಳಿ, ಸೋಶಿಯಲ್ ಮೀಡಿಯಾ ಬಂದ ಮೇಲಂತೂ ವಿಶ್ವಾದ್ಯಂತ ಈ ಕ್ಷೇತ್ರ ಫೇಮಸ್ ಆಗಿ ಬಿಟ್ಟಿದೆ. ಇಲ್ಲಿನ ಸುಂದರ ಲೊಕೇಶನ್ ನೂರಾರು ಸಿನಿಮಾಗಳಲ್ಲಿ ಚಿತ್ರೀಕರಣಗೊಂಡಿದೆ. ಇಂತಹ ಸುಂದರ ಪ್ರದೇಶ ಈಗ ದೇಶದ ಅತ್ಯುನ್ನತ ಉದ್ಯಮಪತಿಗಳಲ್ಲಿ ಒಬ್ಬರಾದ ಆನಂದ ಮಹೀಂದ್ರಾ ಅವರ ಕಣ್ಮನೆ ಸೆಳೆದಿದೆ. ವರಂಗದ ಕುರಿತು ಟ್ವೀಟ್ ಮಾಡುವ ಮೂಲಕ ದೇಶದ ಪ್ರಮುಖ ಹತ್ತು ಸುಂದರ ಪ್ರದೇಶಗಳ ಪಟ್ಟಿಯಲ್ಲಿ ಹಂಚಿಕೊಂಡಿದ್ದು ಇದು ಜನರ ಮೆಚ್ಚುಗೆ ಪಾತ್ರವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಾಣಸಿಗುವ ಜೈನ ಧರ್ಮೀಯರ ಅತ್ಯಂತ ಪವಿತ್ರವಾದ ಸ್ಥಳ ವರಂಗ. ವರಂಗ ರಾಜನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಳವನ್ನು ವರ್ಗ ಎಂದು ಕರೆಯಲಾಗುತ್ತಿತ್ತು ಎನ್ನಲಾಗುತ್ತದೆ. ಇಲ್ಲಿ ವಿಶೇಷವಾಗಿ ಮೂರು ಬಸದಿಗಳು ಇದ್ದು ಮೂರು ಬಸದಿಗಳು ಜನಾಕರ್ಷಣೀಯ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು. ವರಂಗದ ಪ್ರಮುಖ ಆಕರ್ಷಣೆಗಳೆಂದರೆ ನೇಮಿನಾಥ ಬಸದಿ, ಚಂದ್ರನಾಥ ಬಸದಿ ಮತ್ತು ಕೆರೆ ಬಸದಿ ಈ ಮೂರು ಬಸದಿಗಳು ಪ್ರವಾಸಿಗರನ್ನ ಹಲವು ವರ್ಷಗಳಿಂದ ತನ್ನತ್ತ ಸಳೆಯುತ್ತಿದೆ. ಆಗುಂಬೆಯ ತಟದಲ್ಲಿರುವ ಹೆಬ್ರಿಯಿಂದ ಕಾರ್ಕಳಕ್ಕೆ ತೆರಳುವ ಮಾರ್ಗದಲ್ಲಿ ವರಂಗ ಕ್ಷೇತ್ರ ಕಾಣ ಸಿಗುತ್ತದೆ. ಇಲ್ಲಿನ ಕೆರೆಯ ಮಧ್ಯದಲ್ಲಿರುವ ಕೆರೆ ಬಸದಿ ದೇವಸ್ಥಾನಕ್ಕೆ ದೋಣಿಯ ಮೂಲಕ ಸಾಗಿ ಅಲ್ಲಿನ ಪ್ರಕೃತಿ ವೀಕ್ಷಣೆ ಮಾಡುವುದು ಒಂದು ಅಧ್ಬುತ ಅನುಭವ ಎನ್ನಬಹುದು.