ಹೊಸ ವರ್ಷಾಚರಣೆ: ಇಂದು, ನಾಳೆ ಪ್ರವಾಸಿ ತಾಣಗಳಿಗೆ ಹೋಗ್ಬೇಡಿ!

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್‌ಗೆ ಇತ್ತೀಚೆಗೆ ಕೋಲಾರದಿಂದ ಶಾಲ ಮಕ್ಕಳು ಪ್ರವಾಸಕ್ಕೆ ತರಳಿದ್ದಾಗ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದರು. ಅಂದಿನಿಂದ ಸಾರ್ವಜನಿಕರಿಗೆ ಸಮುದ್ರ ತೀರಕ್ಕೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಹೊಸ ವರ್ಷಾಚರಣೆಗೂ ಮುಂದುವರೆಯಲಿದೆ.

Prohibition in tourist spots in Karnataka on Dec 31st and Jan 1st due to New Year 2025 grg

ಬೆಂಗಳೂರು(ಡಿ.31):  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರ ಸೇರಿದಂತೆ ವಿವಿಧ ಜಿಲ್ಲೆಯ ಕೆಲವು ಕಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಯಮ ಮೀರಿ ಮೋಜು, ಮಸ್ತಿಯಲ್ಲಿ ತೊಡಗಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಡಿ.31ರ ಬೆಳಗ್ಗೆ 6 ಗಂಟೆಯಿಂದ ಜ.1ರ ರಾತ್ರಿ 8 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರು, ಬಲಮುರಿ, ಎಡ ಮುರಿಗೆ ನಿರ್ಬಂಧ ಹೇರಲಾಗಿದೆ. ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶ, ಕಾವೇರಿ ತೀರದಲ್ಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ, ಗಂಜಾಂನ ಸಂಗಮ್, ಗೋಸಾಯಿ ಘಾಟ್ ಹಾಗೂ ಕಾರೇಕುರ ಬಳಿಯ ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ತಹಸೀಲ್ದಾರ್‌ ಪರಶುರಾಮ್ ಸತ್ತಿಗೇರಿ ಆದೇಶಿಸಿದ್ದಾರೆ. 
ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯನಂದಿ ಗಿರಿಧಾಮದಲ್ಲೂ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ.ಡಿ.31 ಸಂಜೆ 6 ರಿಂದ ಜ.1 ಬೆಳಗ್ಗೆ 7ರವರಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಹೊಸ ವರ್ಷಾಚರಣೆಗೆ ಕಾಫಿನಾಡಿನತ್ತ ಪ್ರವಾಸಿಗರ ದಂಡು: ಹೋಂ ಸ್ಟೇ, ರೆಸಾರ್ಟ್ ಹೌಸ್‌ಫುಲ್!

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಝರಿ ಫಾಲ್ಸ್ ಹೊನ್ನಮ್ಮನಹಳ್ಳಿ, ಗಾಳಿ ಕೆರೆ, ಹಿರೇಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ಬಲ್ಲಾಳರಾಯನ ದುರ್ಗಾ, ರಾಣಿ ಝರಿ, ಬಂಡಾಜೆ ಫಾಲ್ಸ್, ಕುಡಿಗೆ ಫಾಲ್ಸ್, ಕ್ಯಾತನಮಕ್ಕಿ, ರುದ್ರಪಾದ, ಕೆಮ್ಮಣ್ಣಗುಂಡಿ, ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್ ಸೇರಿ ವಿವಿಧೆಡೆ ಡಿ.31ರ ಸಂಜೆ 6 ಗಂಟೆಯಿಂದ ಜನವರಿ1ರ ಬೆಳಗ್ಗೆ 6 ಗಂಟೆವರೆಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್‌ಗೆ ಇತ್ತೀಚೆಗೆ ಕೋಲಾರದಿಂದ ಶಾಲ ಮಕ್ಕಳು ಪ್ರವಾಸಕ್ಕೆ ತರಳಿದ್ದಾಗ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದರು. ಅಂದಿನಿಂದ ಸಾರ್ವಜನಿಕರಿಗೆ ಸಮುದ್ರ ತೀರಕ್ಕೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಹೊಸ ವರ್ಷಾಚರಣೆಗೂ ಮುಂದುವರೆಯಲಿದೆ.

ಚಾರ್ಮ್ ಕಳೆದುಕೊಂಡ ಗೋವಾ,ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆ! ಟೂರಿಸ್ಟ್‌ಗಳು ಯಾಕೆ ಬೇರೆಡೆ ಹೋಗ್ತಾರೆ?

ನ್ಯೂಇಯರ್‌ ಸೆಲೆಬ್ರೆಷನ್‌: ಬೆಂಗ್ಳೂರಲ್ಲಿ 1000 ಕೋಟಿ ಹೊಸ ವರ್ಷ ವಹಿವಾಟು?

ಬೆಂಗಳೂರು:  ಸಂಭ್ರಮಾಚರಣೆ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದ್ದು, ಡಿ.31 ಹಾಗೂ ಜ.1 ಎರಡೂ ದಿನ ಸೇರಿ ಬರೋಬ್ಬರಿ 1 ಸಾವಿರ ಕೋಟಿ ರು. ವಹಿವಾಟನ್ನು ನಗರದ ಆತಿಥ್ಯ ಉದ್ಯಮ ನಿರೀಕ್ಷೆ ಮಾಡಿದೆ. ಈಗಾಗಲೇ ನಗರದಲ್ಲಿ ಶೇ.80ರಷ್ಟು ಹೋಟೆಲ್, ಪಬ್, ರೆಸ್ಟೋರೆಂಟ್‌ಗಳ ಮುಂಗಡ ಬುಕ್ಕಿಂಗ್ ಹಾಗೂ ಟೇಬಲ್ ಬುಕ್ಕಿಂಗ್ ಆಗಿದೆ. ಹಾಗೆಯೇ ದರಗಳು ಕೂಡ ಶೇ. 10-20 ರಷ್ಟು ಅಧಿಕವಾಗಿವೆ. ಅಂತಿಮ ಕ್ಷಣಗಳಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

ಪಾರ್ಟಿ ಪ್ರಿಯರ ನೆಚ್ಚಿನ ನಗರಿ, ಪಬ್ ಕ್ಯಾಪಿಟಲ್ ಎಂದೂ ಹೆಸರಾಗಿರುವ ಬೆಂಗಳೂರು ಹೊಸ ವರ್ಷ ಆಚರಣೆಗೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶ ಸೇರಿ ದೇಶದ ನಾನಾ ಭಾಗಗಳಿಂದ ಬರುವ ಜನರು ಇಲ್ಲಿ ಅದ್ದೂರಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ನಗರದ ವಿವಿಧ ದರ್ಜೆಯ ಸ್ಟಾರ್ ಹೋಟೆಲ್, ಐಷಾರಾಮಿ ಹೊಟೆಲ್ ಬಗೆ ಬಗೆಯ ಕಾರ್ಯಕ್ರಮ ಆಯೋಜಿಸಿವೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಪೀಟ್ ಸೇರಿ ಇಂದಿರಾನಗರ, ಕೋರಮಂಗಲ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರ ಟೆಕ್ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಇದಲ್ಲದೆ ಕನಕಪುರ ರಸ್ತೆ, ಔಟರ್ ರಿಂಗ್ ರೋಡ್ ಸೇರಿ ನಗರದ ಹೊರವಲಯದ ಹೋಟೆಲ್, ಗೆಸ್ಟ್ ಹೌಸ್, ಹೋಂ ಸ್ಟೇ ಸೇರಿ ಇತರೆಡೆ ಖಾಸಗಿ ಪಾರ್ಟಿಗಳು ಜೋರಾಗಿ ನಡೆಯಲಿವೆ. 

Latest Videos
Follow Us:
Download App:
  • android
  • ios