ಹೊಸ ವರ್ಷಾಚರಣೆಗೆ ಕಾಫಿನಾಡಿನತ್ತ ಪ್ರವಾಸಿಗರ ದಂಡು: ಹೋಂ ಸ್ಟೇ, ರೆಸಾರ್ಟ್ ಹೌಸ್‌ಫುಲ್!
ಹೊಸ ವರ್ಷದ ಆಗಮನಕ್ಕೆ ಎರಡು ದಿನ ಬಾಕಿ ಇದೆ.ಪ್ರಕೃತಿಯ ನಡುವೆ ಸುಂದರ ಪರಿಸರದಲ್ಲಿ ನ್ಯೂ ಈಯರ್ ಸೆಲೆಬ್ರೆಷನ್ ಮಾಡಿಕೊಳ್ಳಲು ಪ್ರವಾಸಿಗರು ಸಿದ್ದತೆಯಲ್ಲಿದ್ದು ಕಾಫಿ ನಾಡಿನತ್ತ ಮುಖ ಮಾಡ್ತಾ ಇದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.30): ಹೊಸ ವರ್ಷದ ಆಗಮನಕ್ಕೆ ಎರಡು ದಿನ ಬಾಕಿ ಇದೆ.ಪ್ರಕೃತಿಯ ನಡುವೆ ಸುಂದರ ಪರಿಸರದಲ್ಲಿ ನ್ಯೂ ಈಯರ್ ಸೆಲೆಬ್ರೆಷನ್ ಮಾಡಿಕೊಳ್ಳಲು ಪ್ರವಾಸಿಗರು ಸಿದ್ದತೆಯಲ್ಲಿದ್ದು ಕಾಫಿ ನಾಡಿನತ್ತ ಮುಖ ಮಾಡ್ತಾ ಇದ್ದಾರೆ. ಬರೋ ಪ್ರವಾಸಿಗರನ್ನ ಪುಲ್ ಖುಷ್ ಏಜಾಂಯ್ ಮೂಡ್ ನತ್ತ ತೆಲಿಸಲು ಹೊಂಸ್ಟೇ ರೇಸಾರ್ಟ್ ಮಾಲೀಕರು ತಯಾರಿ ನಡೆಸ್ತಾ ಇದ್ದಾರೆ
ಪ್ರಕೃತಿ ಸೌಂದರ್ಯ ಸವಿಯಲು ಸಜ್ಜು: ಕಾಫಿ ನಾಡು ಚಿಕ್ಕಮಗಳೂರು ಅಂದ್ರೆ ಮೊದಲೇ ಪ್ರವಾಸಿಗರಿಗಂತೂ ಸ್ವರ್ಗ ಸರಿ.. ಇಲ್ಲಿನ ಗಿರಿಶ್ರೇಣಿಗಳ ಆ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯೋಕಂತೂ ಮುಗಿ ಬಿಳ್ತಾರೇ.ಉತ್ತಮ ಮಳೆಯಿಂದ ಪ್ರಕೃತಿ ಯಸೊಬಗು.ಮಧುವಣಗಿತ್ತಿಯಂತಿರೋ ಕಾಡುಮೇಡಿನ ಸೌಂದರ್ಯ ದ ಸ್ಚಚ್ಚಂದ ಗಾಳಿಯ ನಡುವೇ ಆ 12 ಗಂಟೆ ಕತ್ತಲಿನಲ್ಲಿ ಸಮಯದ ಹೊಸ ವರ್ಷದ ಆ ಕ್ಷಣವನ್ನ ಬರಮಾಡಿಕೊಳ್ಳಲು ಮುಂದಾಗಿದ್ದಾರೆ..ಈಗಾಗಲೇ ಜಿಲ್ಲೆಗೆ ಪ್ರವಾಸಿಗರ ದಂಡೇ ಅಗಮಿಸ್ತಾ ಇದ್ದಾರೆ.
ಹೊಂಸ್ಟೇ ರೇಸಾರ್ಟ್ ಗಳ ಬಹುತೇಕ ಶೇಕಾಡ 99 ರಷ್ಟು ಭರ್ತಿಯಾಗಿದೆ.ರಾಜ್ಯ ಮಾತ್ರ ಹೊರರಾಜ್ಯಗಳಿಂದ ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಲಿದ್ದು 10-15 ದಿನ ಕೆಲವರು ತಿಂಗಳ ಹಿಂದೆಯೇ ಹೋಂ ಸ್ಟೇ, ರೆಸಾರ್ಟ್ ಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ಕೊನೆ ಕ್ಷಣದಲ್ಲಿ ರೂಮ್ ಬುಕ್ ಮಾಡಲು ಮುಂದಾಗುವ ಪ್ರವಾಸಿಗರಿಗೆ ನಿರಾಸೆ ಆಗುತ್ತಿದೆ.ಏಕೆಂದರೆ ದುಪ್ಪಟ್ಟು ಹಣ ನೀಡ್ತೀನಿ ಅಂದ್ರು ಹೋಂ ಸ್ಟೇ ,ರೆಸಾರ್ಟ್ ನಲ್ಲಿ ಕೊಠಡಿ ಸಿಗುತ್ತಿಲ್ಲ. ಜಿಲ್ಲೆಯಲ್ಲಿರುವ 800ಕ್ಕೂಹೆಚ್ಚುಹೋಂ ಸ್ಟೇ, 20ಕ್ಕೂ ಹೆಚ್ಚು ರೆಸಾರ್ಟ್ ಗಳು ಆಲ್ ಮೋಸ್ಟ್ ಬುಕ್ ಆಗಿದೆ.
ಚಿಕ್ಕಮಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ಗೌಡ್ತಿಯರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ
ಹೋಂ ಸ್ಟೇ ರೆಸಾರ್ಟ್ ನಲ್ಲಿ ಸಿದ್ದತೆ: ಇನ್ನೂ ಹೊಂಸ್ಟೇ ರೇಸಾರ್ಟ್ ಗಳಲ್ಲಿಯೂ ಪ್ರವಾಸಿಗರು ಜಾಲಿ ಮೂಡ್ ನಲ್ಲಿ ಸೆಲೆಬ್ರೇಷನ್ ಗೆ ಸಿದ್ದತೆ ಮಾಡಿಕೊಳ್ತಾ ಇದ್ದಾರೆ..ಈಗಾಗಲೇ ಲೈಟ್ಟಿಂಗ್ಸ್ ಗಳನ್ನ ಹಾಕಿ ಕಲರ್ ಪುಲ್ ಮಾಡಲಾಗ್ತಿದೆ. ರಾತ್ರಿ ಡಿಜೆ , ಫೈರ್ ಕ್ಯಾಂಪ್, ಸ್ವಿಮ್ಮಿಂಗ್ ಪುಲ್ ಎಲ್ಲವೂ ರೆಡಿಯಾಗ್ತಿದೆ..ಇನ್ನೂ ಪುಡ್ ವೈರೈಟಿ ವೈರೈಟಿಯಲ್ಲಿ ಸಸ್ಯಹಾರಿಗಳಿಗೆ ಪ್ರತ್ಯೇಕ..ಮಾಂಸಾಹಾರ ಪ್ರತ್ಯೇಕ ಮಾಡಲಾಗುತ್ತಿದೆ..ಈ ಬಾರಿ ಮದ್ಯದ ಲೈಸನ್ಸ್ ಒಂದು ದಿನಕ್ಕೆ ಅವಕಾಶ ನೀಡಲಾಗಿದ್ದು ಕೆಲವರು ಅದನ್ನ ಪಡೆದಿದ್ದಾರೆ.ಒಟ್ಟಾರೆ ಹೊಸ ವರುಷದ ಸಂಭ್ರಮ ಕ್ಕೆ ಸಾಕ್ಷಿಯಾಗಲು ಕಾಫಿ ನಾಡಿನ ಹೊಂಸ್ಟೇ ರೇಸಾರ್ಟ್ ರೆಡಿಯಾಗ್ತಿದ್ದಾರೆ. ಆನ್ ಲೈನ್ ನಲ್ಲಿ ಬುಕ್ಕ್ ಮಾಡಿರೋ ಟೂರಿಸ್ಟ್ ಸಿಲಿಕಾನ್ ಸಿಟಿ ಸೇರಿದಂತೆ ಹೊರರಾಜ್ಯದಿಂದಲೂ ಅಗಮಿಸೋ ಪ್ಲಾನ್ ಮೂಡ್ ನಲ್ಲಿದ್ದಾರೆ.