ಮೊನ್ನೆ ಸೆಲೆಬ್ರಿಟಿಯೊಬ್ಬರು ಮಾತಾಡ್ತಾ ಒಂದು ವಿಷ್ಯ ಹೇಳಿದ್ರು- 'ಕೋವಿಡ್ ಟೈಮ್ ನಲ್ಲಿ ಹೊರಗೆ ಹೋಗಲೇ ಬಾರದು ಅನ್ನೋದೆಲ್ಲ ಮುಗೀತು, ಆದ್ರೆ ಅಲ್ಲಿ ನೀವೆಷ್ಟು ಮುಂಜಾಗ್ರತೆ ವಹಿಸ್ತೀರಾ ಅಷ್ಟೂ ಕೋವಿಡ್ ಬರೋ ಸಾಧ್ಯತೆ ಕಡಿಮೆ.' ನೀವು ಕರಾವಳಿ ಕಡೆಗೆ ಹೋದರೆ ಅಲ್ಲಿ ಕೋವಿಡ್ ಕೇಸ್‌ಗಳಿವೆ. ಆದರೆ ಒಂದಿಷ್ಟು ಪ್ರಿಕಾಶನ್ಸ್ ತಗೊಂಡ್ರೆ ಭಯ ಕಡಿಮೆ. ಕರಾವಳಿಯೇ ಏಕೆ ಅಂದರೆ ಇನ್ನೊಂದು ವಾರದಲ್ಲಿ ಮಳೆಯ ಅಬ್ಬರ ಕಡಿಮೆ ಆಗಿರುತ್ತೆ. ಕೂಲ್‌ನೆಸ್ ವಾತಾವರಣವಿಡೀ ತುಂಬಿಕೊಂಡಿರುತ್ತೆ. ನೀವು ಮನಸೋ ಇಚ್ಛೆ ಬೀಚ್‌ನಲ್ಲಿ ಆಟ ಆಡಬಹುದು. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಝಳ ಕೊಂಚ ಇರಬಹುದು, ಆದರೆ ಬೆಳಗ್ಗೆ, ಸಂಜೆಗಳಲ್ಲಿ ಕರಾವಳಿ ತೀರ ಅದ್ಭುತ ಅನುಭವ ಕಟ್ಟಿಕೊಡಬಹುದು. ಅದೇ ನೆಕ್ಸ್ಟ್‌ ಸೀಸನ್ ಅಂದರೆ ಜನವರಿ ನಂತರ ಇಲ್ಲಿಗೆ ಹೋದರೆ ಸೆಕೆ ವಿಪರೀತ. ನೀರಾಟದಿಂದ ಆಚೆ ಬಂದಾಗ ನಿಮ್ಮ ಮೈಯಿಂದಲೂ ಬೆವರು ನೀರು ಹರಿಯೋದಕ್ಕೆ ಶುರುವಾಗುತ್ತೆ.

ಗೋಕರ್ಣದ ಸಾಲು ಬೀಚ್‌ಗಳು
ಒಂದೇ ಸಮುದ್ರ, ಆದರೆ ಹಲವು ತೀರಗಳು, ಅದ್ಭುತ ನೋಟ. ಗೋಕರ್ಣ ಕಡಲ ಕಿನಾರೆ ಇಷ್ಟವಾಗೋದಕ್ಕೆ ಕಾರಣಗಳು ಹಲವು. ಇನ್ನೊಂದೆರಡು ವಾರ ಬಿಟ್ಟು ಈ ಕಡೆ ಪ್ರಯಾಣ ಹೋದರೆ ನೀವು ಬೀಚ್ ವಾಕ್ ನ ಎನ್ ಜಾಯ್ ಮಾಡಬಹುದು. ಸಾಮಾನ್ಯವಾಗಿ ಬೀಚ್ ಟ್ರೆಕ್ಕಿಂಗ್ ಮಾಡುವವರು ಕುಮಟಾದ ನಿರ್ವಾಣ ಬೀಚ್ ನಿಂದ ಟ್ರೆಕ್ಕಿಂಗ್ ಶುರು ಮಾಡ್ತಾರೆ. ಚಿಕ್ಕ ಟ್ರೆಕ್ ಆದರೆ ಓಂ ಬೀಚ್ಗೆ ಬಂದು ಅಲ್ಲಿಂದ ಹಾಫ್‌ಮೂನ್ ಬೀಚ್, ಪ್ಯಾರಡೈಸ್ ಬೀಚ್‌ಗೆ ತನಕ ಹೋಗಿ ಬೋಟ್ ಮೂಲಕ ವಾಪಾಸಾಗಬಹುದು. ಲಾಂಗ್ ಬೀಚ್ ಟ್ರೆಕ್ ಅಂದರೆ ನಿರ್ವಾಣ ಬೀಚ್‌ನಿಂದ ಗೋಕರ್ಣದ ಬೀಚ್ ವರೆಗೂ ನಡೆಯಬಹುದು. ಕಡಲ ದಾರಿಯಲ್ಲಿ ಟ್ರೆಕ್ ಮಾಡುತ್ತಾ, ಅಲ್ಲಲ್ಲಿ ಸುಮುದ್ರಕ್ಕಿಳಿದು ಮುಳುಗು ಹಾಕುತ್ತಾ ಮುಂದೆ ಹೋಗ್ತಿದ್ರೆ... ಆ ಖುಷಿಯನ್ನು ಪದಗಳಲ್ಲಿ ಹೇಗೆ ಹೇಳೋದು?

ಮಾಲ್ಡೀವ್ಸ್‌ನಲ್ಲಿ ಮೌನಿ ರಾಯ್: ಇಲ್ನೋಡಿ ಫೋಟೋಸ್ 

ಅಪ್ಸರಕೊಂಡ, ಕಾಸರಕೋಡ ಕರಾವಳಿ
ಈ ಬೀಚ್‌ ಮೇಲ್ನೋಟಕ್ಕೆ ಅಪ್ಸರೆಯಂತೆ ತುಂಬ ಸೌಂದರ್ಯದಿಂದ ಕಂಗೊಳಿಸಿದರೂ ನೀರಿಗಿಳಿದರೆ ಭಲೇ ಅಪಾಯ. ಇಲ್ಲಿ ಈಜಲು ಹೋಗಿ ನೀರು ಪಾಲಾದವರೆಷ್ಟೋ. ತೀರದಲ್ಲೇ ಕುಳಿತು ಈ ಬೀಚ್‌ಅನ್ನು ಎನ್‌ಜಾಯ್‌ ಮಾಡಬಹುದು. ಇದರ ಹಿಂಭಾಗ ಬೆಟ್ಟವಿದೆ. ಆಸಕ್ತರು ಬೆಟ್ಟವೇರಬಹುದು. ಅದೇ ರೀತಿ ಸ್ವಲ್ಪ ದೂರದಲ್ಲಿ ಕಾಸರಕೋಡದ ಸುಂದರ ಕಡಲದಂಡೆ ಇದೆ. ಅಲ್ಲಿಗೂ ವಿಸಿಟ್ ಮಾಡಬಹುದು. ಇದು ಇಕೋ ಬೀಚ್ ಅಂತ ಫೇಮಸ್. ಬೀಚ್ ದಾರಿಯುದ್ದಕ್ಕೂ ಮರ, ಕಲಾಕೃತಿಗಳು ಗಮನ ಸೆಳೆಯುತ್ತವೆ. ಮಕ್ಕಳಾಟಕ್ಕೂ ಇಲ್ಲಿ ಅವಕಾಶ ಇದೆ.ಹೊನ್ನಾವರದ ಆಸುಪಾಸಿನಲ್ಲಿರುವ ಬೀಚ್‌ಗಳಿವು. 

ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ! 

ತಿಲ್ಮತಿ ಬೀಚ್
ತಿಲ ಅಂದರೆ ಎಳ್ಳು. ಆ ಎಳ್ಳಿನ ಕಾಳಿನಂತೆ ಇಲ್ಲಿಯ ಮರಳು. ಕಪ್ಪು ಮರಳಿನ ಅಪರೂಪದ ಈ ಬೀಚ್ ಕಾರವಾರಕ್ಕೆ ಸಮೀಪದಲ್ಲೇ ಇದೆ. ಇಲ್ಲಿಗೆ ನೇರ ದಾರಿಯಿಲ್ಲ. ಟ್ರೆಕ್ಕಿಂಗ್ ಮೂಲಕ ಈ ಜನ ಸಂದಣಿಯಿಲ್ಲದ ಕೂಲ್ ಬೀಚ್ ತಲುಪಬಹುದು. ಕೇಔಲ ಒಂದೂವರೆ ಕಿಮೀಗಳ ಟ್ರೆಕ್ಕಿಂಗ್ ಅಷ್ಟೇ. ಆದರೆ ಆ ಅನುಭವ ಬಹು ಕಾಲ ನೆನಪುಳಿಯುವಂಥಾದ್ದು. 

ವನ್ಯಜೀವಿ ಸಂರಕ್ಷಣ ಅಭಿಯಾನ: ಕಾವೇರಿ ವನ್ಯಜೀವಿಧಾಮದಲ್ಲೊಂದು ಸುತ್ತು 

ಪಡುಕರೆ ಕಡಲ ತೀರ
ಜನ ಸಂದಣಿ ಇಲ್ಲದ, ಮಕ್ಕಳಾಟಕ್ಕೆ ಬೆಸ್ಟ್ ಜಾಗ ಇದು. ಇಲ್ಲಿನ ಸೂರ್ಯಾಸ್ತ ಭಲೇ ಸೊಗಸು. ನಾನಾ ನಮೂನೆಯ ಚಿಪ್ಪುಗಳನ್ನು ಆರಿಸುತ್ತಾ, ಮರಳಲ್ಲಿ ಆಟ ಆಡುತ್ತಾ, ಸಮುದ್ರಕ್ಕಿಳಿದು ನೀರಾಟ ಆಡುತ್ತಾ ಸಖತ್ ಮಜಾ ಮಾಡಬಹುದು. ಹೆಚ್ಚು ಆಳವಿಲ್ಲದ ಸಮುದ್ರ ಮಕ್ಕಳಾಟದ ಖುಷಿ ಹೆಚ್ಚಿಸುತ್ತದೆ. ಈ ಕಡಲ ತೀರದುದ್ದಕ್ಕೂ ಮೀನುಗಾರರ ಮನೆಗಳ ಸಾಲು, ಇನ್ನೊಂದು ಬದಿ ನದಿ, ಕಾಂಡ್ಲಾ ಕಾಡು. ಬಹಳ ಸೊಗಸಿನ ಪ್ರಯಾಣದ ಅನುಭವ.