Asianet Suvarna News Asianet Suvarna News

September Travel Tips: ಮಳೆ ನಿಂತಿಲ್ಲ, ಆಫ್ ಸೀಸನ್, ಬೋರ್ ಆಗಿದ್ದರೆ ಇಲ್ಲಿಗೆ ವಿಸಿಟ್ ಮಾಡಿ

ಸೆಪ್ಟೆಂಬರ್ ನಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದರೆ ಇದನ್ನು ಓದಿ. ಯಾಕೆಂದ್ರೆ ಕೆಲವೊಂದು ಸ್ಥಳಗಳನ್ನು ಸೆಪ್ಟೆಂಬರ್ ನಲ್ಲಿ ನೋಡಿದ್ರೆ ಚೆಂದ. ಅಲ್ಲಿನ ಹವಾಮಾನ ಪ್ರವಾಸಕ್ಕೆ ಯೋಗ್ಯವಾಗಿರುವುದಲ್ಲದೆ ಸೌಂದರ್ಯ ದುಪ್ಪಟ್ಟಾಗಿರುತ್ತದೆ.
 

Places To Visit In September hotels would give concession too
Author
First Published Sep 1, 2022, 4:57 PM IST

ಭಾರತ ಪ್ರವಾಸಿಗರ ಸ್ವರ್ಗ. ಭಾರತದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಅನೇಕ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಅನೇಕ ಪ್ರಸಿದ್ಧ ಐತಿಹಾಸಿಕ ಸ್ಥಳಗಳಿ ಪ್ರವಾಸಿಗರನ್ನು ಸೆಳೆಯುತ್ತವೆ. ಹಾಗೆಯೇ ಪ್ರಕೃತಿ ಮಾತೆಯ ಸೌಂದರ್ಯ ಪ್ರವಾಸಿಗರ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಸರಿಯಾದ ಋತುವಿನಲ್ಲಿ ಸರಿಯಾದ ಸ್ಥಳ ವೀಕ್ಷಣೆ ಮಾಡಿದ್ರೆ ಪ್ರವಾಸದ ಮೋಜು ಡಬಲ್ ಆಗೋದ್ರಲ್ಲಿ ಸಂಶಯವಿಲ್ಲ. ಬೇಸಿಗೆ ಹೆಚ್ಚಿರುವ ಪ್ರದೇಶಕ್ಕೆ ಮೇನಲ್ಲಿ ಹೋದ್ರೆ ಬಿಸಿಲ ಝಳಕ್ಕೆ ಪ್ರವಾಸಿಗ ಹೈರಾಣವಾಗ್ತಾನೆ. ಅದೇ ಸ್ಥಳಕ್ಕೆ ಚಳಿಗಾಲದಲ್ಲಿ ಹೋದ್ರೆ ಯಾವುದೇ ತೊಂದರೆಯಿಲ್ಲದೆ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಂಡು ಬರಬಹುದು. ಮಳೆ ಕಡಿಮೆಯಾಗುವ ಈ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ಬಹುದು. ತುಂಬಾ ಮಳೆ, ತುಂಬಾ ಚಳಿ,  ತುಂಬಾ ಬಿಸಿ ಯಾವುದೂ ಇಲ್ಲದ ಋತು ಇದು. ಈ ಸಮಯದಲ್ಲಿ ಭಾರತದ ಕೆಲ ಪ್ರವಾಸಿ ತಾಣಕ್ಕೆ ನೀವು ಅಗತ್ಯವಾಗಿ ಹೋಗ್ಬೇಕು. 

ಸೆಪ್ಟೆಂಬರ್ (September) ನಲ್ಲಿ ಪ್ರವಾಸ (Trip) ಕ್ಕೆ ಸೂಕ್ತ ಈ ಸ್ಥಳ :

ಉತ್ತರಾಖಂಡದ ಅಲ್ಮೋರಾ (Almora) : ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಕ್ಕೆ ಹೋಗೋದು ಕಷ್ಟ. ಆದ್ರೆ ಸೆಪ್ಟೆಂಬರ್ ನಲ್ಲಿ ಮಳೆ ಕಡಿಮೆಯಾಗಿರುತ್ತೆ. ನೀವು ಆರಾಮವಾಗಿ ಗಿರಿಧಾಮಗಳಿಗೆ ಭೇಟಿ ನೀಡಬಹುದು.  ಉತ್ತರಾಖಂಡದ ಅಲ್ಮೋರಾ, ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಹೋಗಲು ಸೂಕ್ತ ಸ್ಥಳ. ಅಲ್ಮೋರಾ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದು. ನಂದಾ ದೇವಿ ದೇವಸ್ಥಾನ, ಚಿಟೈ ದೇವಸ್ಥಾನ, ಪಾತಾಳ ದೇವಿ ದೇವಸ್ಥಾನ, ಮಾಲ್ ರಸ್ತೆ ಮತ್ತು ಚಾಂದ್ ರಾಜವಂಶದ ಮಲ್ಲ ಮಹಲ್, ಅಲ್ಮೋರಾ ಮೃಗಾಲಯ ಸೇರಿದಂತೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಬಹುದು. ಕೆಲವು ಐತಿಹಾಸಿಕ ಸ್ಥಳಗಳು ನಿಮ್ಮನ್ನು ಸೂರೆಗೊಳ್ಳುವುದ್ರಲ್ಲಿ ಸಂಶಯವಿಲ್ಲ. ಅಲ್ಮೋರಾದಲ್ಲಿ ಅನೇಕ ದೇವಾಲಯಗಳಿವೆ. ಅದ್ರಲ್ಲಿ ಕಟರ್ಮಾಲ್ ಪ್ರಸಿದ್ಧಿ ಪಡೆದಿದೆ. ಇದು ದೇಶದ ಎರಡನೇ ಪ್ರಮುಖ ಸೂರ್ಯ ದೇವಾಲಯವಾಗಿದೆ. ಅಲ್ಮೋರಾಕ್ಕೆ ಹೋದವರು ಇದನ್ನು ನೋಡದೆ ಬರಬೇಡಿ.

ಪಶ್ಚಿಮ ಬಂಗಾಳದ ಕಾಲಿಂಪಾಂಗ್ (Kalimpong) : ಸೆಪ್ಟೆಂಬರ್‌ನಲ್ಲಿ ಪ್ರವಾಸದ ಪ್ಲಾನ್ ಮಾಡಿದ್ದರೆ ಕಾಲಿಂಪಾಂಗ್ ಗೆ ಹೋಗ್ಬಹುದು. ಇದು ವಿಶಿಷ್ಟವಾದ ಗಿರಿಧಾಮ. ಪೂರ್ವ ಭಾರತದ ಜನಪ್ರಿಯ ಪ್ರವಾಸಿ ತಾಣದಲ್ಲಿ ಇದು ಪ್ರಸಿದ್ಧಿ ಪಡೆದಿದೆ. ಈ ಋತುವಿನಲ್ಲಿ ಕಾಲಿಂಪಾಂಗ್ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ವಿಸ್ತಾರವಾದ ಚಹಾ ತೋಟಗಳು ನಿಮ್ಮನ್ನು ಸೆಳೆಯುತ್ತವೆ. ಕಾಲಿಂಪಾಂಗ್‌ನಲ್ಲಿ ಲೆಪ್ಚಾ ಮ್ಯೂಸಿಯಂ, ಮೇಕ್ ಫರ್ಲೇನ್ ಚರ್ಚ್, ಡಾ. ಗ್ರಹಾಂ ಹೋಮ್, ಡಿಯೋಲೊ ಹಿಲ್, ಮೊರನ್ ಹೌಸ್, ಸೋಂಗಾ ಗುಂಬಾ ಮತ್ತು ಡರ್ಪಿನ್ ಮಠ ಸೇರಿದಂತೆ ಅನೇಕ ಪ್ರದೇಶಗಳನ್ನು ವೀಕ್ಷಣೆ ಮಾಡ್ಬಹುದು.

Travel Tips : ಮೊದಲ ಬಾರಿ ವಿಮಾನ ಏರ್ತಿದ್ರೆ ನಿಮಗೊಂದಿಷ್ಟು ಕಿವಿ ಮಾತು

ತಮಿಳುನಾಡಿನ ಪುದುಚೇರಿ (Puducherry) : ಸೆಪ್ಟೆಂಬರ್ ನಲ್ಲಿ ಪ್ರವಾಸಕ್ಕೆ ಹೋಗಲು ತಮಿಳುನಾಡಿನ ಪುದುಚೇರಿ ಕೂಡ ಒಳ್ಳೆಯ ಪ್ರದೇಶ. ಸುಂದರವಾದ ಮತ್ತು ಪ್ರಶಾಂತವಾದ ಸಮುದ್ರ, ಸುಂದರವಾದ ಕೆಫೆ ಇಲ್ಲಿನ ಆಕರ್ಷಣೆ.  ಪ್ಯಾರಡೈಸ್ ಬೀಚ್, ಅರಬಿಂದೋ ಆಶ್ರಮ, ಆರೋವಿಲ್ಲೆ ಸ್ಥಳಗಳಿಗೆ ನೀವು ಭೇಟಿ ನೀಡ್ಬಹುದು.

Travel Tips : ಮಾಡೋ ಟೂರ್ ಚೆಂದ ಇರ್ಬೇಕಂದ್ರೆ ಪ್ಲ್ಯಾನ್ ಹೀಗಿರಲಿ

ಗುಜರಾತ್ ನ ದಮನ್ ದಿಯು (Daman Diu) : ಗುಜರಾತ್‌ನ ದಮನ್ ಮತ್ತು ದಿಯುಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರವಾಸ ಕೈಗೊಳ್ಳಿ. ಇದು ಅತ್ಯಂತ ಸುಂದರ ದ್ವೀಪ. ಇಲ್ಲಿನ ಕಡಲ ತೀರದಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ. ದಮನ್ ಮತ್ತು ದಿಯು ಗುಜರಾತಿ ಮತ್ತು ಪೋರ್ಚುಗೀಸ್ ಸಂಸ್ಕೃತಿಗಳ ಮಿಶ್ರಣ. ನೈದಾ ಗುಹೆಗಳು, ದಿಯು ಮ್ಯೂಸಿಯಂ (Diu Musium), ಝಂಪಾ ಗೇಟ್‌ವೇ, ದಿಯು ಫೋರ್ಟ್ (Diu Port), ಪಾನಿಕೋಟಾ ಫೋರ್ಟ್, ಸೇಂಟ್ ಫ್ರಾನ್ಸಿಸ್ ಚರ್ಚ್, ಗಂಗೇಶ್ವರ ದೇವಸ್ಥಾನ (Gangeshwara Temple) ಸೇರಿದಂತೆ ಅನೇಕ ಪ್ರದೇಶಗಳನ್ನು ಕಣ್ತುಂಬಿಕೊಂಡು ಬರಬಹುದು. 

Follow Us:
Download App:
  • android
  • ios