ಸಾಯೋ ತಿಗಣೆ, ಜಿರಳೆಗೂ ಶ್ರದ್ಧಾಂಜಲಿ ಸಲ್ಲಿಸುತ್ತೆ ಈ ಕಂಪನಿ!
ಗೌರವಾನ್ವಿತ ವ್ಯಕ್ತಿ ಸಾವನ್ನಪ್ಪಿದಾಗ ಶ್ರದ್ಧಾಂಜಲಿ ನೀಡಲಾಗುತ್ತದೆ. ಸೈನಿಕರು, ಉನ್ನತ ಹುದ್ದೆಯಲ್ಲಿರುವವರಿಗೆ ವಿಶೇಷ ಗೌರವ ಸಲ್ಲುತ್ತದೆ. ಆದ್ರೆ ಪ್ರತಿ ದಿನ ಸಾವನ್ನಪ್ಪುವ ಕೀಟಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಂಪನಿ ಒಂದಿದೆ. ಅದ್ರ ಉದ್ದೇಶವೇನು ಗೊತ್ತಾ?
ದೇಶ ಸೇವೆ ಮಾಡುವ ಸಮಯದಲ್ಲಿ ಅಥವಾ ಯುದ್ಧದ ಸಂದರ್ಭದಲ್ಲಿ ಮಡಿದರೆ ಅಥವಾ ಉದಾತ್ತ ಉದ್ದೇಶಕ್ಕೆ ಹುತಾತ್ಮರಾದಾಗ ಅವರ ಅಂತ್ಯ ಸಂಸ್ಕಾರವನ್ನು ಗೌರವಪೂರ್ವಕವಾಗಿ ಮಾಡಲಾಗುತ್ತದೆ. ಮನುಷ್ಯನ ಅಂತ್ಯ ಸಂಸ್ಕಾರದ ವೇಳೆ ಗೌರವಪೂರ್ವಕ ಶ್ರದ್ಧಾಂಜಲಿ ಸಿಗೋದು ಕಾಮನ್. ಮನುಷ್ಯ ಮಾತ್ರ ಬಲಿದಾನ ಮಾಡೋದಿಲ್ಲ, ಬೇರೆ ಬೇರೆ ಕಾರ್ಯದ ಸಮಯದಲ್ಲಿ ಪ್ರಾಣಿ, ಕೀಟಗಳು ಕೂಡ ತಮ್ಮ ಜೀವವನ್ನು ಬಲಿದಾನ ಮಾಡುತ್ತವೆ ಎಂಬ ವಿಷ್ಯವನ್ನು ಕಂಪನಿಯೊಂದು ಅರಿತಿದೆ. ಕೀಟಗಳು ಸತ್ತಾಗ್ಲೂ ಮನುಷ್ಯರಿಗೆ ನೀಡುವಂತೆ ಶ್ರದ್ಧಾಂಜಲಿ ನೀಡಲಾಗುತ್ತದೆ. ಪ್ರತಿ ವರ್ಷ ಈ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತದೆ.
ಪ್ರತಿ ದಿನ ನಮ್ಮ ಕಾಲಿಗೆ ಸಿಕ್ಕಿ ಅಥವಾ ವಾಹನಕ್ಕೆ ಸಿಕ್ಕಿ ಅನೇಕ ಕೀಟ (Insect) ಗಳು ಸಾವನ್ನಪ್ಪಿರುತ್ತವೆ. ನಾವೇ ಪ್ರತಿ ದಿನ ಜಿರಳೆ, ಸೊಳ್ಳೆ ಸೇರಿದಂತೆ ಅನೇಕ ಕೀಟಗಳ ಹತ್ಯೆ ಮಾಡ್ತೇವೆ. ಆದ್ರೆ ನಮಗೆ ಅದ್ರ ಸಾವಿಂದ ಯಾವುದೇ ನೋವಾಗೋದಿಲ್ಲ. ನಷ್ಟಕ್ಕಿಂತ ಲಾಭವೇ ಹೆಚ್ಚಾಗಿರೋದ್ರಿಂದ ನಾವು ಅದ್ರ ಬಗ್ಗೆ ಹೆಚ್ಚು ಆಲೋಚನೆ ಮಾಡೋದಿಲ್ಲ. ಆದ್ರೆ ಈ ಕಂಪನಿ (Company) ಭಿನ್ನವಾಗಿ ಆಲೋಚನೆ ಮಾಡಿದೆ. ಕೀಟನಾಶಕ (Insecticide) ಗಳನ್ನು ತಯಾರಿಸುವ ಕಂಪನಿಯೂ ತ್ಯಾಗ, ಶ್ರದ್ಧಾಂಜಲಿ ಬಗ್ಗೆ ಆಲೋಚನೆ ನಡೆಸುತ್ತದೆ.
ಹೆಚ್ಚು ವರ್ಷ ಆರೋಗ್ಯವಾಗಿ ಬದುಕ್ಬೇಕಂದ್ರೆ ಬ್ಲೂ ಝೋನ್ ಡಯಟ್‌ಗೆ ಹೊರಳಿ
ಕೀಟಗಳಿಗೆ ಆತ್ಮಕ್ಕೆ ಶಾಂತಿ : ಈ ಕಂಪನಿ ಜಪಾನ್ ನಲ್ಲಿದೆ. ಕಂಪನಿ ಹೆಸರು ಅರ್ಥ್ ಫಾರ್ಮಾಸ್ಯುಟಿಕಲ್. ಮನೆಯಲ್ಲಿ ಬಳಸುವ ಕೀಟನಾಶಕವನ್ನು ಇದು ತಯಾರಿಸುತ್ತದೆ. ದಶಕಗಳ ಸಂಶೋಧನೆಯ ನಂತರ ಕಂಪನಿಯು ದೊಡ್ಡ ಹೆಸರು ಗಳಿಸಿದೆ. ಜಪಾನಿನಲ್ಲಿ ಇದು ಪ್ರಸಿದ್ಧ ಕೀಟನಾಶಕ ಕಂಪನಿಯಾಗಿದೆ. ಕಂಪನಿ ತನ್ನ ಉತ್ಪನ್ನಗಳ ಪರಿಣಾಮಗಳನ್ನು ಪರೀಕ್ಷಿಸಲು ನಗರದಲ್ಲಿ ವಿವಿಧ ಜಾತಿಯ ಕೀಟಗಳನ್ನು ಬಳಸುತ್ತದೆ. ಈ ಸಂಶೋಧನಾ ಪ್ರಕ್ರಿಯೆಯಲ್ಲಿ ಕೆಲವು ಕೀಟಗಳು ಸಾಯುತ್ತವೆ . ಇಂತಹ ಪರಿಸ್ಥಿತಿಯಲ್ಲಿ ಅರ್ಥ್ ಫಾರ್ಮಾಸ್ಯುಟಿಕಲ್ ಕೀಟಗಳ ಸಾವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಕೀಟಗಳಿಗೆ ಮನುಷ್ಯರಂತೆ ಬೆಲೆ ನೀಡುತ್ತದೆ. ಅವುಗಳ ಬಲಿದಾನವನ್ನು ನೆನೆಯುತ್ತದೆ. ಅವುಗಳಿಗೆ ಧನ್ಯವಾದ ಹೇಳುತ್ತದೆ. ಇದೇ ಕಾರಣಕ್ಕೆ ಎಕೋ ನಗರದ ಮಯೋಡೋಜಿ ದೇವಸ್ಥಾನದಲ್ಲಿ ಕೀಟಗಳನ್ನು ಗೌರವಿಸಲು ಸಮಾರಂಭ ಏರ್ಪಡಿಸಲಾಗುತ್ತದೆ. ಹಿಂದಿನ ತಿಂಗಳು ಕೂಡ ಕಂಪನಿ ಈ ಸಮಾರಂಭ ಏರ್ಪಡಿಸಿತ್ತು.
ರೈಲ್ವೆ ನಿಲ್ದಾಣದಲ್ಲಿ ಗಂಟೆಗಟ್ಲೆ ನಿಲ್ಬೇಕಾಗಿಲ್ಲ, 150 ರೂ.ಗೆ ಸಿಗುತ್ತೆ ರೂಮ್ !
ಶ್ರದ್ಧಾಂಜಲಿ ಕಾರ್ಯಕ್ರಮ : ಹಿಂದಿನ ತಿಂಗಳು ನಡೆದ ಸಮಾರಂಭದಲ್ಲಿ 60 ಕ್ಕೂ ಹೆಚ್ಚು ಅರ್ಥ್ ಫಾರ್ಮಾಸ್ಯುಟಿಕಲ್ ನೌಕರರು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಟಾವೋ ಧರ್ಮದ ಪಾದ್ರಿ ದಾವೋಶಿ, ಸತ್ತ ಕೀಟಗಳ ಡಜನ್ ಗಟ್ಟಲೆ ಫೋಟೋಗಳ ಮುಂದೆ ಪ್ರಾರ್ಥನೆ ಸಲ್ಲಿಸಿದ್ರು. ಇದರಲ್ಲಿ ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಹಾಕಲಾಗಿತ್ತು. ನಂತ್ರ ಅದರ ಮುಂದೆ ಪ್ರಾರ್ಥನೆ ಸಲ್ಲಿಸಲಾಯ್ತು.
ಕಂಪನಿ ಮುಖ್ಯಸ್ಥರು ಹೇಳೋದೇನು? : ಅರ್ಥ್ ಫಾರ್ಮಾಸ್ಯುಟಿಕಲ್ ರಿಸರ್ಚ್ ಮುಖ್ಯಸ್ಥ ಟೊಮಿಹಿರೊ ಕೊಬೊರಿ ಪ್ರಕಾರ, ವಿಜ್ಞಾನದ ಹೆಸರಿನಲ್ಲಿ ಸಾವಿರಾರು ಕೀಟಗಳನ್ನು ಕೊಲ್ಲಲಾಗುತ್ತದೆ. ವಿಜ್ಞಾನ, ಸಂಶೋಧನೆಗಾಗಿ ಕೀಟಗಳು ತ್ಯಾಗ ಮಾಡುತ್ತವೆ. ಇದನ್ನು ಅನೇಕರು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಈ ಸಮಾರಂಭವು ಅದನ್ನು ಅರ್ಥೈಸುವ ಪ್ರಯತ್ನ ಎಂದು ಟೊಮಿಹಿರೊ ಕೊಬೊರಿ ಹೇಳಿದ್ದಾರೆ. ಅರ್ಥ್ ಫಾರ್ಮಾಸ್ಯುಟಿಕಲ್, ತನ್ನ ಸಂಶೋಧನೆಗಾಗಿ ಸುಮಾರು 1 ಮಿಲಿಯನ್ ಜಿರಳೆಗಳನ್ನು ಮತ್ತು 100 ಮಿಲಿಯನ್‌ಗಿಂತಲೂ ಹೆಚ್ಚು ಕೀಟಗಳನ್ನು ಬಳಸಿಕೊಳ್ಳುತ್ತದೆ. ಮಾನವನ ಆರೋಗ್ಯ ಮತ್ತು ಅನುಕೂಲಕ್ಕೆ ಕೀಟಗಳು ತ್ಯಾಗ ಮಾಡುತ್ತವೆ ಎಂದು ಅವರು ಹೇಳುತ್ತಾರೆ. ಅರ್ಥ್ ಫಾರ್ಮಾಸ್ಯುಟಿಕಲ್ ಇದೇ ಮೊದಲು ಈ ಸಮಾರಂಭ ನಡೆಸುತ್ತಿಲ್ಲ. ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.