ಶಾಪ, ನದಿ ನೀರು ಮುಟ್ಟಲೂ ಹೆದರ್ತಾರೆ ಇಲ್ಲಿಯ ಜನ
ಹರಿಯುವ ನೀರಿನಲ್ಲಿ ಮಿಂದೆದ್ದರೆ ಪಾಪವೆಲ್ಲ ಕಳೆಯುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಅದ್ರಲ್ಲೂ ಕೆಲ ಪವಿತ್ರ ನದಿಗಳ ಪೂಜೆ ನಿತ್ಯ ನಡೆಯುತ್ತದೆ. ಆದ್ರೆ ಭಾರತದಲ್ಲಿ ಜನರು ಸ್ಪರ್ಶಿಸಲು ಭಯಪಡುವಂತಹ ನದಿ ಇದೆ. ಅದಕ್ಕೆ ಕಾರಣ ಇಲ್ಲಿದೆ.
ನದಿಗಳ (rivers) ತವರು ಭಾರತ (India). ಗಂಗೆ, ಯಮುನಾ, ನರ್ಮದಾ, ಸಿಂಧು, ಕಾವೇರಿ ಹೀಗೆ ಭಾರತದಲ್ಲಿ ಹರಿಯುವ ನದಿಗಳ ಪಟ್ಟಿ ದೊಡ್ಡದಾಗಿದೆ. ಇಲ್ಲಿನ ಜನರು ನದಿಗಳನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನದಿಗಳಿಗೆ ಪೂಜೆ ನಡೆಯುತ್ತದೆ. ನದಿಯಲ್ಲಿ ಮಿಂದೇಳುವುದನ್ನು ಪುಣ್ಯ ಸ್ನಾನ (holy bath) ಎಂದು ಪರಿಗಣಿಸಲಾಗುತ್ತದೆ. ಗಂಗೆ, ಕಾವೇರಿ ಸೇರಿದಂತೆ ಅನೇಕ ನದಿಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಗಂಗೆಯ ನೀರನ್ನು ಮನೆಗೆ ತಂದು ಪೂಜೆ ಮಾಡಲಾಗುತ್ತದೆ. ಭಾರತದಲ್ಲಿ ಪವಿತ್ರ ನದಿ ಮಾತ್ರವಲ್ಲ ಅಪವಿತ್ರ ಎಂಬ ಪಟ್ಟಿಗೆ ಸೇರಿರುವ ನದಿಯೂ ಇದೆ. ಆ ನದಿಯಲ್ಲಿ ಸ್ನಾನ ಮಾಡೋದು ಇರಲಿ, ನದಿ ಬಳಿ ಹೋಗಲೂ ಜನರು ಹೆದರ್ತಾರೆ.
ಶಾಪಗ್ರಸ್ತ ನದಿ (Cursed river) ಇದು : ಅಪವಿತ್ರ ನದಿ ಪಟ್ಟ ಕಟ್ಟಿಕೊಂಡಿರುವ ನದಿ ಹೆಸರು ಕರ್ಮನಾಶ (karmanasha )ನದಿ. ಈ ನದಿ ಬಿಹಾರದ ಕೈಮುರ್ ಜಿಲ್ಲೆಯಲ್ಲಿ ಹುಟ್ಟಿ ಉತ್ತರ ಪ್ರದೇಶದ ಸೋನಭದ್ರಾ, ಚಂದೌಲಿ, ವಾರಣಾಸಿ, ಗಾಜಿಪುರ ಜಿಲ್ಲೆಯಲ್ಲಿ ಹರಿಯುತ್ತದೆ. ಬಕ್ಸಾರ್ ನಲ್ಲಿ ಇದು ಗಂಗೆಯನ್ನು ಸೇರಿ, ಪವಿತ್ರವಾಗುತ್ತದೆ. ಕರ್ಮನಾಶ ನದಿ ಹೆಸರು ಎರಡು ಶಬ್ಧಗಳಿಂದಾಗಿದೆ. ಕರ್ಮ ಹಾಗೂ ನಾಶ. ಕರ್ಮ ಅಂದ್ರೆ ನಾವು ಮಾಡು ಕೆಲಸ ಹಾಗೂ ನಾಶ ಅಂದ್ರೆ ನಷ್ಟ. ನೀವು ಎಷ್ಟು ಒಳ್ಳೆಯ ಕೆಲಸ ಮಾಡ್ತಿರೋ ಎಲ್ಲವನ್ನು ಈ ನದಿ ನಾಶ ಮಾಡುತ್ತದೆ ಎಂಬ ಅರ್ಥವನ್ನು ಈ ನದಿ ನೀಡುತ್ತದೆ.
ಐಷಾರಾಮಿ ಹೋಟೆಲ್ ನಲ್ಲಿ ಉಳಿದ್ಕೊಂಡ್ರೂ ಕೈ ಖಾಲಿಯಾಗ್ಲಿಲ್ಲ, ಕ್ರೆಡಿಟ್ ಕಾರ್ಡ್ ಬಳಸಿ 3 ಲಕ್ಷ
ಕರ್ಮನಾಶ ನದಿ ಶಾಪಗ್ರಸ್ತ ನದಿಯಾಗಿದೆ. ಹಾಗಾಗಿಯೇ ಈ ನದಿಯಲ್ಲಿ ಸ್ನಾನ ಮಾಡುವುದು ಹಾಗೂ ಅದನ್ನು ಬಳಸುವುದು ಪಾಪದ ಕೆಲಸ. ಮಾಡಿದ ಎಲ್ಲ ಪುಣ್ಯ ನಾಶವಾಗುತ್ತದೆ ಎಂದು ಜನರು ನಂಬುತ್ತಾರೆ. ನದಿ ಶಾಪಗ್ರಸ್ತ ಎನ್ನುವ ಕಾರಣಕ್ಕೆ ಈ ನದಿಯ ನೀರನ್ನು ಜನರು ಸ್ಪರ್ಶಿಸೋದಿಲ್ಲ.
ಕರ್ಮನಾಶ ನದಿಗೆ ಶಾಪ ಬರಲು ಕಾರಣ : ಇದಕ್ಕೆ ಒಂದು ಪೌರಾಣಿಕ ಕಥೆ ಇದೆ. ರಾಜ ಹರಿಶ್ಚಂದ್ರ (Harishchandra)ನ ತಂದೆ ರಾಜಾ ಸತ್ಯವ್ರತ (king Satyavrata) ನು, ಸಶರೀರವಾಗಿ ಸ್ವರ್ಗಕ್ಕೆ ಹೋಗುವ ಆಸೆಯನ್ನು ಗುರು ವಶಿಷ್ಠರ ಮುಂದೆ ಹೇಳ್ತಾನೆ. ಆದ್ರೆ ವಶಿಷ್ಠರು ಅದಕ್ಕೆ ಒಪ್ಪುವುದಿಲ್ಲ. ಆ ನಂತ್ರ ಸತ್ಯವ್ರತನು ವಿಶ್ವಾಮಿತ್ರರ ಬಳಿ ಈ ವಿಷ್ಯವನ್ನು ಹೇಳ್ತಾನೆ. ವಶಿಷ್ಠರ ಮೇಲಿನ ದ್ವೇಷದಿಂದ ವಿಶ್ವಾಮಿತ್ರರು ಇದಕ್ಕೆ ಒಪ್ಪುತ್ತಾರೆ. ಹಾಗೆಯೇ ತಮ್ಮ ಶಕ್ತಿಯಿಂದ ಸತ್ಯವ್ರತನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ. ಆದ್ರೆ ಕೋಪಗೊಂಡ ಇಂದ್ರನು, ಸತ್ಯವ್ರತನನ್ನು ತಲೆಕೆಳಗಾಗಿ ವಾಪಸ್ ಕಳುಹಿಸುತ್ತಾನೆ. ಹಠಬಿಡದ ವಿಶ್ವಾಮಿತ್ರರು ಸತ್ಯವ್ರತನನ್ನು ಸ್ವರ್ಗ ಮತ್ತು ಭೂಮಿ ಮಧ್ಯೆ ನಿಲ್ಲಿಸುತ್ತಾರೆ. ಸತ್ಯವ್ರತ ತ್ರಿಶಂಕು ಸ್ಥಿತಿಯಲ್ಲಿ ಇರುವ ಸ್ಥಿತಿ ನಿರ್ಮಾಣವಾಗುತ್ತದೆ. ತಲೆಕೆಳಗಾಗಿದ್ದ ಸತ್ಯವ್ರತನ ಬಾಯಿಂದ ಲಾಲಾರಸ ಬರಲು ಶುರುವಾಗುತ್ತದೆ. ಇದು ಭೂಮಿಯಲ್ಲಿ ನದಿಯಾಗಿ ಕಾಣಿಸಿಕೊಳ್ಳುತ್ತದೆ. ಈ ವೇಳೆ ವಶಿಷ್ಠರು ರಾಜನನ್ನು ಚಂಡಾಲನಾಗುವಂತೆ ಶಪಿಸುತ್ತಾರೆ. ಹಾಗಾಗಿ ಸತ್ಯವ್ರತನ ಲಾಲಾರಸದಿಂದ ರಚನೆಯಾದ ನದಿಯನ್ನು ಶಾಪಗ್ರಸ್ತ ನದಿ ಎನ್ನಲಾಗುತ್ತದೆ. ಬಿಹಾರದ ಜನರಿಗೆ ಈ ನದಿ ಕಥೆಯಲ್ಲಿ ಮಾತ್ರವಲ್ಲ ವಾಸ್ತವದಲ್ಲೂ ಶಾಪವಾಗಿದೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ, ವಿನಾಶಕ್ಕೆ ಕಾರಣವಾಗುತ್ತದೆ.
ಕರ್ಮನಾಶ ನದಿಯಿಂದಾಗುವ ನಷ್ಟ : ಜನರ ನಂಬಿಕೆ ಪ್ರಕಾರ, ಕರ್ಮನಾಶ ನದಿಯ ನೀರನ್ನು ಬಳಕೆ ಮಾಡಬಾರದು. ಅದ್ರಲ್ಲಿ ಸ್ನಾನ ಮಾಡುವುದು, ಅದನ್ನು ಸ್ಪರ್ಶಿಸುವುದು ಮಾಡಿದ್ರೆ ವ್ಯವಹಾರದಲ್ಲಿ ನಷ್ಟವಾಗುತ್ತದೆ. ಕೆಲಸಗಳಿಗೆ ಅಡ್ಡಿಯಾಗುತ್ತದೆ. ಇಷ್ಟು ವರ್ಷಗಳ ಕಾಲ ಮಾಡಿದ ಎಲ್ಲ ಪುಣ್ಯಗಳು ನಾಶವಾಗುತ್ತವೆ. ಹಾಗಾಗಿಯೇ ಅಲ್ಲಿನ ಜನರು ಈ ನದಿ ನೀರನ್ನು ದೂರವಿಟ್ಟಿದ್ದಾರೆ.