ಪ್ರವಾಸಕ್ಕೆ ಹೋಗಿ, ಹೋಟೆಲ್ ನಲ್ಲಿ ಉಳ್ಕೊಂಡ್ರೆ ಖರ್ಚು ಕಟ್ಟಿಟ್ಟಬುತ್ತಿ. ಆದ್ರೆ ಈ ಮಹಿಳೆ ಮೂರು ಲಕ್ಷದ ಬಿಲ್ ಫ್ರೀ ಮಾಡ್ಕೊಂಡು ಟ್ರಿಪ್ ಎಂಜಾಯ್ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಬಳಸಿದ ಟ್ರಿಕ್ ಏನು ಗೊತ್ತಾ?
ದೇಶ ಸುತ್ತಿ, ಪ್ರವಾಸ (trip) ಎಂಜಾಯ್ ಮಾಡ್ಬೇಕು ಎಂಬ ಆಸೆ ಎಲ್ಲರಿಗಿದ್ರೂ ಕೈನಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಜನರು ಹಿಂದೇಟು ಹಾಕ್ತಾರೆ. ಲಕ್ಷಾಂತರ ಬಿಲ್ ಬರುವ ಹೊಟೇಲ್ ರೂಮ್ (hotel room) ಬುಕ್ ಮಾಡುವ ಸಾಹಸಕ್ಕೆ ಹೋಗೋದಿಲ್ಲ. ಕಡಿಮೆ ಖರ್ಚಿನಲ್ಲಿ ಹೇಗೆ ಪ್ರವಾಸ ಎಂಜಾಯ್ ಮಾಡ್ಬಹುದು ಎಂಬ ಟ್ರಿಕ್ ಹುಡುಕ್ತಿರ್ತಾರೆ. ಕೆಲ ಉಪಾಯದ ಮೂಲಕ ನಿಮ್ಮ ಪ್ರವಾಸವನ್ನು ಉಚಿತಗೊಳಿಸಬಹುದು. ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಒಬ್ಬರು ಒಂದು ಲಕ್ಷ ರೂಪಾಯಿ ವೆಚ್ಚದ ಐಷಾರಾಮಿ ಹೋಟೆಲ್ ನಲ್ಲಿ ಮೂರು ದಿನವಿದ್ದು ಬಂದಿದ್ದಾರೆ. ಆದ್ರೆ ಹೊಟೇಲ್ ಗೆ ಒಂದೇ ಒಂದು ರೂಪಾಯಿ ಪಾವತಿ ಮಾಡಿಲ್ಲ. ಅದು ಹೇಗೆ ಎಂಬುದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಹೆಸರು ಪ್ರೀತಿ ಜೈನ್. ಪುಣೆ ಮೂಲದ ಪ್ರೀತಿ, ಕ್ರೆಡಿಟ್ ಕಾರ್ಡ್ (Credit Card) ಬಳಸಿ, ಮೂರು ದಿನ ಐಷಾರಾಮಿ ಹೊಟೇಲ್ ನಲ್ಲಿ ಕಳೆದಿದ್ದಾರೆ. ಪ್ರೀತಿ ಉತ್ತರಾಖಂಡಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅವರು ಈ ಪ್ರವಾಸವನ್ನು ಕ್ರೆಡಿಟ್ ಕಾರ್ಡ್ ಪಾಯಿಂಟ್ ಮೇಲೆ ಮಾಡಿದ್ದಾರೆ. ಅವರು ಅಮೆರಿಕನ್ ಎಕ್ಸ್ ಪ್ರೆಸ್ ನ ಪ್ಲಾಟಿನಂ ಕಾರ್ಡ್ ಹೊಂದಿದ್ದಾರೆ. ಅವರು 58,000 ಮೆಂಬರ್ಶಿಪ್ ರಿವಾರ್ಡ್ ಪಾಯಿಂಟ್ ಗಳಿಸಿದ್ದರು. ಅದನ್ನು ಬಳಸಿಕೊಂಡು ಅವರು 3 ದಿನಗಳ ಕಾಲ ಮ್ಯಾರಿಯಟ್ ರೆಸಾರ್ಟ್ (Marriott Resort) ನಲ್ಲಿ ತಂಗಿದ್ದರು. ಮ್ಯಾರಿಯಟ್ ರೆಸಾರ್ಟ್ನಲ್ಲಿ ಒಂದು ರಾತ್ರಿ ತಂಗಬೇಕು ಅಂದ್ರೆ 1 ಲಕ್ಷ ರೂಪಾಯಿ ಪಾವತಿ ಮಾಡ್ಬೇಕು. ಮೂರು ದಿನಕ್ಕೆ ಪ್ರೀತಿ ಸುಮಾರು 3 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ಆದ್ರೆ ಮೆಂಬರ್ಶಿಪ್ ರಿವಾರ್ಡ್ ಪಾಯಿಂಟ್‌ಗಳ ಆಧಾರದ ಮೇಲೆ ಅವರು ಒಂದು ರೂಪಾಯಿ ಪಾವತಿಸಲಿಲ್ಲ.
'ಬಾಡಿಗೆ ಮನೆಯೇ ಬೆಸ್ಟ್..' ಎಂದಿದ್ದ ನಿಖಿಲ್ ಕಾಮತ್ ಯು-ಟರ್ನ್, ಸ್ವಂತ ಮನೆ ಖರೀದಿ
ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು 4 ಲಕ್ಷ ರೂಪಾಯಿಯನ್ನು ಪ್ರೀತಿ ಖರ್ಚು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬೋನಸ್ ಪಾಯಿಂಟ್ ಸಿಕ್ಕಿತ್ತು. ಅದನ್ನು ಮ್ಯಾರಿಯೊಟ್ ಬೊನ್ವಾಯ್ ಅಂಕ (Marriott Bonvoy Points)ಗಳಾಗಿ ಪರಿವರ್ತಿಸಲಾಯಿತು. ಈ ಪಾಯಿಂಟನ್ನು ಮ್ಯಾರಿಯೊಟ್‌ನ ಯಾವುದೇ ಹೋಟೆಲ್ ಅಥವಾ ರೆಸಾರ್ಟ್‌ನಲ್ಲಿ ಬಳಸಬಹುದು.
ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಪ್ರೀತಿ ನಾರ್ಮಲ್ ರೂಮ್ ಬುಕ್ ಮಾಡಿದ್ದರಂತೆ. ಆದ್ರೆ ಮ್ಯಾರಿಯೊಟ್ ಅದನ್ನು ಪ್ರಿಮಿಯರ್ ರೂಮ್ ಗೆ ಅಪ್ ಗ್ರೇಡ್ ಮಾಡಿತ್ತು. ಇದು ಸಂಪೂರ್ಣ ರಾಜಮನೆತನದ ಅನುಭವ ನೀಡಿತ್ತು ಎಂದು ಪ್ರೀತಿ ಹೇಳಿದ್ದಾರೆ. ಈ ರೂಮಿನ ಬಾಡಿಗೆ ಸುಮಾರು 90 ಸಾವಿರ ಎಂದು ಪ್ರೀತಿ ಹೇಳಿದ್ದಾರೆ. ಬ್ರೇಕ್ ಫಾಸ್ಟ್ ಉಚಿತವಾಗಿ ಸಿಕ್ತು ಎಂದ ಪ್ರೀತಿ, ಉತ್ತಮ ಆಹಾರ – ವ್ಯವಸ್ಥೆ, ಲೈವ್ ಸಂಗೀತ ಸೇರಿದಂತೆ ಸಾಕಷ್ಟು ಐಷಾರಾಮಿ ಸೌಲಭ್ಯವನ್ನು ಎಂಜಾಯ್ ಮಾಡಿದ್ದಾಗಿ ಹೇಳಿದ್ದಾರೆ. ಕೇವಲ 1.5 ಲಕ್ಷ ಉಳಿಸಬಹುದು ಎಂದು ಪ್ರೀತಿ ಲೆಕ್ಕಾಚಾರ ಮಾಡಿದ್ರು. ಆದ್ರೆ ಅಪ್ ಗ್ರೇಡ್ ಆಗಿದ್ದರಿಂದ 3 ಲಕ್ಷ ರೂಪಾಯಿಯನ್ನು ಆರಾಮವಾಗಿ ಉಳಿಸಿದೆ ಎಂದಿದ್ದಾರೆ ಪ್ರೀತಿ.
ದಿನಾ 100 ರೂ. PPF'ನಲ್ಲಿ ಹಾಕಿದ್ರೆ 10 ಲಕ್ಷ ಸಿಗುತ್ತೆ!
ಕೆಲ ದಿನಗಳ ಹಿಂದೆ ಕುಟುಂಬವೊಂದು ನಯಾಪೈಸೆ ಖರ್ಚು ಮಾಡದೆ, 27.5 ಲಕ್ಷ ರೂಪಾಯಿ ವೆಚ್ಛದ ಪ್ರವಾಸವನ್ನು ಎಂಜಾಯ್ ಮಾಡಿತ್ತು. ಅದಕ್ಕೆ ಕಾರಣವಾಗಿದ್ದು ಕ್ರೆಡಿಟ್ ಕಾರ್ಡ್ ಅಂಕಗಳು. ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶಕ್ಕೆ ಬಂದಿದ್ದ ಕುಟುಂಬವೊಂದು, ಜೆಡಬ್ಲ್ಯೂ ಮ್ಯಾರಿಯೊಟ್‌ನಲ್ಲಿ 5 ರಾತ್ರಿಯನ್ನು ಆರಾಮವಾಗಿ ಕಳೆದಿತ್ತು. ಕ್ರೆಡಿಟ್ ಕಾರ್ಡ್, ತನ್ನ ಬಳಕೆದಾರರಿಗೆ ಪಾಯಿಂಟ್ ನೀಡುತ್ತದೆ. ಈ ಪಾಯಿಂಟ್ ಬಳಸಿ ಬಳಕೆದಾರರು ವಸ್ತುಗಳನ್ನು ಖರೀದಿ ಮಾಡಬಹುದು. ಇಲ್ಲವೆ ಪ್ರವಾಸಕ್ಕೆ ಈ ಪಾಯಿಂಟ್ ವ್ಯಯಿಸಬಹುದು.
