ಹೋಟೆಲ್‌ ಇನ್ನೂ ನಿರ್ಮಾಣ ಹಂತದಲ್ಲಿದೆ ಎನ್ನುವುದನ್ನು ವ್ಯಕ್ತಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಬಳಿಕ ಮೇಕ್‌ ಮೈ ಟ್ರಿಪ್‌ ಹಾಗೂ ಓಯೋ ರೂಮ್ಸ್‌ ವ್ಯಕ್ತಿಗೆ ಕ್ಷಮೆ ಕೇಳಿದೆ. 

ನವದೆಹಲಿ (ಫೆ.12): ಮೇಕ್‌ ಮೈ ಟ್ರಿಪ್‌ ವೆಬ್‌ಸೈಟ್‌ ಮೂಲಕ ಓಯೋ ಹೋಟೆಲ್‌ ರೂಮ್‌ ಬುಕ್‌ ಮಾಡಿದ್ದ ಅಮಿತ್‌ ಚನ್ಸಿಕರ್ ಎನ್ನುವ ವ್ಯಕ್ಯಿಗೆ ತಮ್ಮ ಸ್ಟೇ ಅತ್ಯುತ್ತಮವಾಗಿ ಇರುತ್ತದೆ ಎನ್ನುವ ಭಾವನೆಯಲ್ಲಿದ್ದರು. ಆದರೆ, ಚೆಕ್‌ ಇನ್‌ ಆಗಿರುವ ಅವರು ಹೋಟೆಲ್‌ ಬಳಿ ಬಂದಾಗ ಅವರಿಗೆ ಎದುರಾಗಿದ್ದು, ಅದಕ್ಕಿಂತಲೂ ದೊಡ್ಡ ಶಾಕ್‌. ಏಕೆಂದರೆ, ಅವರು ಬುಕ್‌ ಮಾಡಿದ್ದ ಹೋಟೆಲ್‌ ಇನ್ನೂ ನಿರ್ಮಾಣ ಹಂತದಲ್ಲಿತ್ತು. ಈ ಕುರಿತಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ ಕೆಲವೇ ಕ್ಷಣದಲ್ಲಿ ಇದು ವೈರಲ್‌ ಆಗಿದ್ದು ಮಾತ್ರವಲ್ಲದೆ ದೊಡ್ಡ ಮಟ್ಟದ ಪ್ರತಿಕ್ರಿಯೆಗಳೂ ಬಂದವು. ಇನ್ನು ಮೇಕ್‌ ಮೈ ಟ್ರಿಪ್‌ ಹಾಗೂ ಓಯೋ ರೂಮ್ಸ್‌ ಕೂಡ ಈ ವಿಚಾರದಲ್ಲಿ ತಮ್ ಪ್ರತಿಕ್ರಿಯೆ ನೀಡಿದೆ.

ಮೇಕ್ ಮೈ ಟ್ರಿಪ್‌ ಮತ್ತು ಓಯೋ ರೂಮ್ಸ್‌ ನಿಮ್ಮ ಬೆಂಗಳೂರಿನ ಸ್ಕ್ಯಾಮ್‌ ಅಲರ್ಟ್‌. ನಾನು ಬುಕ್‌ ಮಾಡಿದ ಹೋಟೆಲ್‌ಗೆ ಚೆಕ್‌ ಇನ್‌ ಆಗಲು ಬಂದಾಗ ಇದು ಪುನರ್‌ನವೀಕರಣದ ಹಂತದಲ್ಲಿದೆ. ಒಬ್ಬನೇ ಒಬ್ಬ ಜೀವಂತ ವ್ಯಕ್ತಿ ಈ ಸ್ಥಳದಲ್ಲಿದ್ದ. ಇದು ಅತೀದೊಡ್ಡ ಮೋಸಕ್ಕೆ ಸಮ! ಇಲ್ಲಿ ಎರಡು ಗಂಟೆ ವ್ಯರ್ಥ ಮಾಡಿದ ನಂತರ, ಅವರು ನನ್ನ ಮರುಪಾವತಿಯಿಂದ ಹಣವನ್ನು ಕಡಿತಗೊಳಿಸಿದ್ದಾರೆ ಎಂದು ಚನ್ಸಿಕರ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಅವರು ಬುಕಿಂಗ್‌ ರಶೀದಿಯ ಸ್ನ್ಯಾಪ್‌ಶಾಟ್‌ಗಳನ್ನು ಕೂಡ ಸೇರಿಸಿದ್ದಾರೆ. ಮೇಕ್‌ ಮೈ ಟ್ರಿಪ್‌ ವೆಬ್‌ಸೈಟ್‌ ಮೂಲಕ ನಾನು ಓಯೋ ರೂಮ್ಸ್‌ ಬುಕ್‌ ಮಾಡಿದ್ದಾರೆ ಎನ್ನುವುದು ಸ್ನ್ಯಾಪ್‌ಶಾಟ್‌ನಿಂದ ಗೊತ್ತಾಗಿದ್ದರೆ, ಇನ್ನೊಂದು ಚಿತ್ರವು ಇನ್ನೂ ನಿರ್ಮಾಣ ಹಂತದಲ್ಲಿರುವ ಹೋಟೆಲ್‌ಅನ್ನು ತೋರಿಸಿದೆ.

ಇದರ ಇನ್ನೊಂದು ಅಪ್‌ಡೇಟ್‌ ಟ್ವೀಟ್‌ನಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಚನ್ಸಿಕರ್‌, ಓಯೋ ಹಾಗೂ ಎಂಎಂಟಿಯ ಪ್ರತಿನಿಧಿಗಳು ನನ್ನನ್ನು ದೂರವಾಣಿ ಕರೆ ಹಾಗೂ ಈಮೇಲ್‌ ಮೂಲಕ ಸಾಕಷ್ಟು ಬಾರಿ ಸಂಪರ್ಕ ಮಾಡಿದ್ದಾರೆ. ನನ್ನ ಮರುಪಾವತಿ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲಿಯೇ ಅದು ನನ್ನ ಅಕೌಂಟ್‌ಗೆ ಬೀಳಲಿದೆ. ಒಮ್ಮೆ ಇದು ಆದ ಬಳಿಕ ನಾನೇ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಈ ಪೋಸ್ಟ್ ಅನ್ನು ಫೆಬ್ರವರಿ 9 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಬಳಿಕ 1,100 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ವಿವಿಧ ಕಾಮೆಂಟ್‌ಗಳನ್ನು ಗಳಿಸಿದೆ.

 MakeMyTrip ಈ ಪೋಸ್ಟ್‌ಗೆ ಉತ್ತರಿಸಿದ್ದು“ಅಮಿತ್, ನಮ್ಮೊಂದಿಗೆ ನೀವು ಅನುಭವಿಸಿದ ಅನುಭವಕ್ಕಾಗಿ ನಾವು ನಿಜವಾಗಿಯೂ ಕ್ಷಮೆಯಾಚಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವಾಗಲೂ ಉತ್ತಮ ಅನುಭವವನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ನಮ್ಮ ದೂರವಾಣಿ ಸಂಭಾಷಣೆಯ ಪ್ರಕಾರ, ಮರುಪಾವತಿಯನ್ನು ಅದೇ ಪಾವತಿ ವಿಧಾನದಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಮರುಪಾವತಿ ವಿವರಗಳನ್ನು ಮತ್ತು MMT ಖಾತೆಯ ಅಡಿಯಲ್ಲಿ ನನ್ನ ಪ್ರವಾಸಗಳನ್ನು ದಯವಿಟ್ಟು ಪರಿಶೀಲಿಸಿ' ಎಂದು ತಿಳಿಸಿದೆ. OYO ದ ಅಧಿಕೃತ ಖಾತೆಯು ಸಹ ಪ್ರತಿಕ್ರಿಯಿಸಿದ್ದಯ, "ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ತಂಡವು ಈಗಾಗಲೇ ನಿಮ್ಮೊಂದಿಗೆ ಸಂಪರ್ಕ ಹೊಂದಿದೆ ಮತ್ತು ಅಗತ್ಯ ಕೆಲಸವನ್ನು ಮಾಡಿದೆ ಎಂದು ನಾವು ಭಾವಿಸುತ್ತೇವೆ. ಅಲ್ಲದೆ, ಹೆಚ್ಚಿನ ಸಹಾಯಕ್ಕಾಗಿ MMT ಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಿದ್ದೇವೆ ." ಎಂದಿದೆ.

Scroll to load tweet…

ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!

ಈ ಬಗ್ಗೆ ವ್ಯಕ್ತಿಯೊಬ್ಬರು ಬರೆದಿದ್ದು, MakeMyTrip ಅತ್ಯಂತ ಕೆಟ್ಟ ಹೋಟೆಲ್‌ಗಳಿಗೆ ಹೆಚ್ಚಿನ ದರವನ್ನು ವಿಧಿಸುತ್ತಿದೆ. ವೆಬ್‌ಸೈಟ್‌ನಿಂದ ಬುಕ್ ಮಾಡಿದ ಕೊನೆಯ ಪ್ರವಾಸದಲ್ಲಿ ಇದನ್ನು ಅನುಭವಿಸಿದ್ದೇನೆ. ದೂರು ನೀಡಿದರೂ ಏನೂ ಆಗಲಿಲ್ಲ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ಈ ಬಗ್ಗೆ ನೀವು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. "ನಾನು ಓಯೋನಿಂದ ಹೋಟೆಲ್ ಬುಕ್‌ ಮಾಡಿದ್ದೆ. ಕೊನೆಯ ಕ್ಷಣದಲ್ಲಿ, ಆಸ್ತಿ ಈಗಾಗಲೇ ಮಾರಾಟವಾಗಿದೆ ಎಂದು ನನಗೆ ತಿಳಿಯಿತು. ನಂತರ ನಾನು ಇನ್ನೊಂದು ಹೋಟೆಲ್ ಅನ್ನು ಬುಕ್ ಮಾಡಿದ್ದೆ. ಅಲ್ಲಿಗೆ ತಲುಪಿದ ನಂತರ ಅವರು ಓಯೋ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಿದರು. ಇದರಿಂದಾಗಿ ನನಗೆ ಮರುಪಾವತಿ ಹಣ ಬರಲು ಒಂದು ವಾರದ ಸಮಯ ಹಿಡಿಯಿತು ಎಂದಿದ್ದಾರೆ.

ಹೊಸ ವರ್ಷಕ್ಕೆ ದಾಖಲೆಯ ಓಯೋ ರೂಮ್ ಬುಕ್ಕಿಂಗ್‌, ಪ್ರತಿ ಗಂಟೆಗೆ ಸೇಲ್ ಆದ ಕಾಂಡೋಮ್ ಎಷ್ಟ್‌ ಗೊತ್ತಾ?