Asianet Suvarna News Asianet Suvarna News

ಹೊಸ ವರ್ಷಕ್ಕೆ ಚಿತ್ರ ವಿಚಿತ್ರ ಸಂಪ್ರದಾಯ, ಇಲ್ಲಿ ಹರಿಯುತ್ತೆ ಮುತ್ತಿನ ಹೊಳೆ!

ಮುಂದಿನ ವರ್ಷದ ಪ್ಲಾನ್ ಸಿದ್ಧಪಡಿಸಿ, ಒಂದಿಷ್ಟು ಪಾರ್ಟಿ ಮಾಡಿ, ಸಂಭ್ರಮಿಸೋದು ನಮ್ಮ ದೇಶದಲ್ಲಿ ಹೊಸ ವರ್ಷ ಅಂದ್ರೆ ೨೦೨೪ನ್ನು ಸ್ವಾಗತಿರುವ ವಿಧಾನ. ಆದ್ರೆ ಎಲ್ಲ ದೇಶದಲ್ಲೂ ಹೀಗಿಲ್ಲ. ಕೆಲವೊಂದು ಪದ್ಧತಿ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ಪದ್ಧತಿಗಳು ಅಚ್ಚರಿ ಹುಟ್ಟಿಸುವಂತಿವೆ. 
 

New Years Celebration Surprising Traditions roo
Author
First Published Dec 20, 2023, 3:16 PM IST

ಹೊಸ ವರ್ಷದಲ್ಲಿ ಹೊಸತನ್ನು ಜನರು ಬಯಸ್ತಾರೆ. ಹೊಸ ವರ್ಷ ಒಂದಿಷ್ಟು ಯಶಸ್ಸು, ಆರೋಗ್ಯ ತರಲಿ ಎಂದು ಜನರು ದೇವರನ್ನು ಪ್ರಾರ್ಥನೆ ಮಾಡ್ತಾರೆ. ವರ್ಷಾಂತ್ಯ ಹತ್ತಿರವಾಗ್ತಿದ್ದಂತೆ ಬರುವ ವರ್ಷದ ಪ್ಲಾನ್ ಶುರುವಾಗುತ್ತದೆ. ಡಿಸೆಂಬರ್ ೩೧ ಮತ್ತು ಜನವರಿ ಒಂದು ಸಾಕಷ್ಟು ವಿಶೇಷತೆಯಿಂದ ಕೂಡಿರುತ್ತದೆ. ಭಾರತದಲ್ಲಿ ಜನವರಿ ಒಂದನ್ನು ಕ್ಯಾಲೆಂಡರ್ ನ ನವ ವರ್ಷೆಂದು ಪರಿಗಣಿಸಲಾಗುತ್ತದೆ. ಹಿಂದೆ ಡಿಸೆಂಬರ್ 31 ರ ಮಧ್ಯ ರಾತ್ರಿ ಸಂಭ್ರಮಾಚರಣೆ ಬಹಳ ಕಡಿಮೆ ಇತ್ತು. ಆದ್ರೆ ವರ್ಷಗಳು ಕಳೆದಂತೆ ಡಿಸೆಂಬರ್ ೩೧ರ ಮಧ್ಯ ರಾತ್ರಿ ಬಹಳ ಅದ್ಧೂರಿಯಾಗಿರುತ್ತದೆ. ಅನೇಕ ಕಡೆ ಕಾರ್ಯಕ್ರಮ, ಪಾರ್ಟಿಗಳನ್ನು ಏರ್ಪಡಿಸಲಾಗುತ್ತದೆ. ಆದ್ರೆ ವಿದೇಶದಲ್ಲಿ ಅನೇಕಾನೇಕ ವರ್ಷಗಳಿಂದಲೇ ವರ್ಷದ ಆಚರಣೆ ಇದೆ. ಅದ್ರಲ್ಲೂ ಕೆಲ ದೇಶಗಳು ತಮ್ಮದೇ ಪದ್ಧತಿ ಆಚರಿಸಿಕೊಂಡು ಬಂದಿವೆ. ಅದು ನಮಗೆ ವಿಚಿತ್ರ ಎನ್ನಿಸಿದ್ರೂ, ಮನರಂಜನೆಗಾಗಿ ಮಾಡ್ತಿದ್ದಾರೆ ಎನ್ನಿಸಿದ್ರೂ ಅದ್ರ ಹಿಂದೆ ಸಂಸ್ಕೃತಿ, ಸಂಪ್ರದಾಯ ಅಡಗಿದೆ. ನಾವಿಂದು ಡಿಸೆಂಬರ್ 31ರ ಮಧ್ಯ ರಾತ್ರಿ ಹಾಗೂ ಜನವರಿ ಒಂದರಂದು ಯಾವ ದೇಶದ ಜನರು ಯಾವೆಲ್ಲ ಪದ್ಧತಿ ಅನುಸರಿಸುತ್ತಾರೆ ಎಂಬುದನ್ನು ಹೇಳ್ತೇವೆ.

ಮಧ್ಯರಾತ್ರಿ (Midnight) ಯಲ್ಲಿ ಮುತ್ತುಗಳ ಸುರಿಮಳೆ : ಹೊಸ ವರ್ಷವನ್ನು ಮಧ್ಯರಾತ್ರಿ ಸ್ವಾಗತಿಸಿ ಪರಸ್ಪರ ಮುತ್ತಿಟ್ಟುಕೊಂಡ್ರೆ ನಮಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಅಮೆರಿಕದಲ್ಲಿ ಇದು ಕಾಮನ್. ಹೊಸ ವರ್ಷ (New Year ) ದ ಸಂಭ್ರಮಾಚರಣೆಯ ನಂತರ ಮಧ್ಯರಾತ್ರಿ ಚುಂಬಿಸುವ ಹಳೆಯ ಸಂಪ್ರದಾಯವಿದೆ. ಕೆಲವು ಇತಿಹಾಸಕಾರರ ಪ್ರಕಾರ, ಹೊಸ ವರ್ಷದ ಆಚರಣೆಯ ಈ ಸಂಪ್ರದಾಯವು ಪ್ರಾಚೀನ ರೋಮ್ (Rome) ಹಬ್ಬವಾದ ಸ್ಯಾಟರ್ನಾಲಿಯಾದಿಂದ ಹುಟ್ಟಿಕೊಂಡಿದೆ.  ನೃತ್ಯ ಮತ್ತು ಮದ್ಯಪಾನದ ಪಾರ್ಟಿಯೊಂದಿಗೆ ಪ್ರಾರಂಭವಾಗಿ, ಮಧ್ಯರಾತ್ರಿಯಲ್ಲಿ ನವವಿವಾಹಿತರ ನಡುವೆ ಚುಂಬನದ ಮಳೆಯಾಗುತ್ತದೆ. ಮಧ್ಯರಾತ್ರಿ ದಂಪತಿ ಹೀಗೆ ಮಾಡೋದ್ರಿಂದ ಇಬ್ಬರ ಮಧ್ಯೆ ಪ್ರೀತಿ, ಸಂಬಂಧ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ.

INDIAN RAILWAY NEW RULES: ರೈಲಿನಲ್ಲಿ ಪ್ರಯಾಣಿಸುವಾಗ ಹೀಗೆಲ್ಲಾ ಮಾಡಿದ್ರೆ ಮುಲಾಜೇ ಇಲ್ಲ, ದಂಡ ಕಟ್ಲೇಬೇಕು

ರೋಸ್ ಪೆರೇಡ್ (Rose Parade) ಮತ್ತು ಮಮ್ಮರ್ಸ್ ಪರೇಡ್ : ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ರೋಸ್ ಪರೇಡ್ ಮತ್ತು ಫಿಲಡೆಲ್ಫಿಯಾದಲ್ಲಿ ಮಮ್ಮರ್ಸ್ ಪರೇಡ್ ನಡೆಯುತ್ತದೆ. ಹೊಸ ವರ್ಷದ ಆರಂಭವನ್ನು ಇಲ್ಲಿನ ಜನ ಈ ಪರೇಡ್ ಮೂಲಕ ಆಚರಿಸುತ್ತಾರೆ. ಭವ್ಯವಾದ ಮತ್ತು ವರ್ಣರಂಜಿತ ಮೆರವಣಿಗೆಯಲ್ಲಿ ಅನೇಕ ಅಮೆರಿಕನ್ನರು ಪಾಲ್ಗೊಳ್ಳುತ್ತಾರೆ.

ವರ್ಷದ ಮೊದಲ ದಿನದ ಸೂರ್ಯೋದಯ ನೋಡಿದ್ರೆ ಲಾಭ : ಜಪಾನ್ (Japan)ನಲ್ಲಿ ಹೊಸ ವರ್ಷದ ಮೊದಲ ದಿನದ ಸೂರ್ಯೋದಯ ನೋಡುವ ಪದ್ಧತಿ ಇದೆ. ಇದನ್ನು ಹ್ಯಾಟ್ಸುನ್ ಎಂದು ಕರೆಯುತ್ತಾರೆ. ಸೂರ್ಯನ ಬೆಳಕು ನೋಡಿದವರ ಬಾಳಲ್ಲಿ ಹೊಸ ವರ್ಷ ಬೆಳಕು, ಯಶಸ್ಸು ಮತ್ತು ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಜನವರಿ ಮೊದಲ ದಿನದ ಸೂರ್ಯೋದಯ ನೋಡಲು ಇಲ್ಲಿನ ಜನರು ಸಮುದ್ರ ಪ್ರದೇಶ ಅಥವಾ ಬೆಟ್ಟದ ಪ್ರದೇಶಕ್ಕೆ ಹೋಗ್ತಾರೆ.

ಯಾರಿಗೂ ತಿಳಿಯದ ಕರ್ನಾಟಕದ ಈ ಅದ್ಭುತ ತಾಣಗಳಿಗೆ ಯಾವತ್ತಾದರೂ ವಿಸಿಟ್ ಮಾಡಿದ್ದೀರಾ?

ಕೆಂಪು ದಾಲ್ (Red Daal) ಸೇವನೆ : ಇನ್ನು ಇಟಲಿ ಜನ ಜನವರಿ ಮೊದಲ ದಿನ ಕೆಂಪು ದಾಲ್ ಸೇವನೆ ಮಾಡ್ತಾರೆ. ಇದು ಚಿನ್ನದ ನಾಣ್ಯದಂತೆ ಕಾಣುತ್ತದೆ ಎಂದು ನಂಬುವ ಅವರು ಅದರ ಸೇವನೆಯಿಂದ ಸಮೃದ್ಧಿ ಸಿಗುತ್ತದೆ ಎಂದು ಭಾವಿಸ್ತಾರೆ.

ಸುಂದರ ಕನಸಿಗೆ ಹೀಗೆ ಮಾಡ್ತಾರೆ ಜನ : ಮಿಸ್ಟ್ಲೆಟೊ ಹೊಸ ವರ್ಷದ ಮೊದಲ ದಿನ ದಿಂಬಿನ ಕೆಳಗೆ ಪವಿತ್ರ ಐವಿ ಮರದ ಚಿಗುರು ಇಟ್ಟುಕೊಂಡು ಮಲಗುತ್ತಾರೆ. ಹೀಗೆ ಮಾಡಿದ್ರೆ ಒಳ್ಳೆ ಕನಸು ಬೀಳುತ್ತದೆಯಂತೆ. ಒಂದೊಳ್ಳೆ ಕನಸಿನ ಮೂಲಕ ಹೊಸ ವರ್ಷವನ್ನು ಶುರು ಮಾಡೋದು ಅವರ ಉದ್ದೇಶವಾಗಿದೆ. 

ನದಿಗೆ ನಾಣ್ಯ ಎಸೆಯುವ ಜನ : ಸುಖ, ಸಮೃದ್ಧಿಗಾಗಿ ರೊಮೇನಿಯಾದಲ್ಲಿ ಜನರು ನದಿಗೆ ನಾಣ್ಯವನ್ನು ಎಸೆಯುವ ಪದ್ಧತಿ ಇದೆ.  ನದಿಗೆ ನಾಣ್ಯ ಎಸೆಯೋದ್ರಿಂದ ಸುಖ ಸಿಗುತ್ತೋ ಗೊತ್ತಿಲ್ಲ, ಅದನ್ನು ಕಲೆಕ್ಟ್ ಮಾಡಿದೋರ ಜೇಬು ತುಂಬೋದು ಗ್ಯಾರಂಟಿ.

Follow Us:
Download App:
  • android
  • ios