Asianet Suvarna News Asianet Suvarna News

ರಾಮ-ಸೀತಾಮಾತೆ ಜನ್ಮಸ್ಥಳ ಸಂಪರ್ಕಿಸಲು ಹೊಸ ರೈಲು, ಡಿ.30ರಂದು ಮೋದಿ ಚಾಲನೆ

ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳ ಸೀತಾಮಡಿಯನ್ನು ಸಂಪರ್ಕಿಸುವ ರಾಷ್ಟ್ರದ ಮೊದಲ ಅಮೃತ್‌ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಡಿ.30ರಂದು ಚಾಲನೆ ನೀಡಲಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

New train to connect Rama-Sitamata birth place, Modi inagurates on December 30 Vin
Author
First Published Dec 24, 2023, 8:31 AM IST

ನವದೆಹಲಿ: ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳ ಸೀತಾಮಡಿಯನ್ನು ಸಂಪರ್ಕಿಸುವ ರಾಷ್ಟ್ರದ ಮೊದಲ ಅಮೃತ್‌ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಡಿ.30ರಂದು ಚಾಲನೆ ನೀಡಲಿದ್ದಾರೆ. ಈ ರೈಲು ತನ್ನ ಮೊದಲ ಪ್ರಯಾಣದಲ್ಲಿ ಅಯೋಧ್ಯೆಯಿಂದ ಸೀತಾಮಡಿಯ ಮೂಲಕ ದರ್ಭಾಂಗಕ್ಕೆ ತೆರಳಲಿದೆ. ಮರುದಿನದಿಂದ ಆ ರೈಲುದೆಹಲಿಯಿಂದ ಅಯೋಧ್ಯೆ-ಸೀತಾಮಡಿಯ ಮೂಲಕ ದರ್ಭಾಂಗಕ್ಕೆ ಸಂಚಾರ ನಡೆಸುತ್ತದೆ. 

ಕೋಳಿ ಅಂಗಡಿಯಾದ ಪಾಕಿಸ್ತಾನದ ಪ್ರಸಿದ್ಧ ರಾಮ-ಸೀತೆ ದೇವಸ್ಥಾನ!

ಇದೇ ವೇಳೆ ಪ್ರಧಾನಿ ಅಯೋಧ್ಯೆಯಲ್ಲಿ ವಂದೇ ಭಾರತ್ ಹಾಗೂ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಚಾಲನೆ ನೀಡುವ ನಿರೀಕ್ಷೆಯಿದೆ. ಅಮೃತ್‌ ಭಾರತ್ ರೈಲುಗಳು ಹವಾನಿಯಂತ್ರಣ ರಹಿತ ರೈಲುಗಳಾಗಿದ್ದು, ವಲಸೆ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪರಿಚಯಿಸಲಾಗುತ್ತಿದೆ. ಈ ರೈಲು ಹೆಚ್ಚಾಗಿ ರಾತ್ರಿಯ ವೇಳೆ ಸಂಚರಿಸುತ್ತವೆ.

Follow Us:
Download App:
  • android
  • ios