ಕೋಳಿ ಅಂಗಡಿಯಾದ ಪಾಕಿಸ್ತಾನದ ಪ್ರಸಿದ್ಧ ರಾಮ-ಸೀತೆ ದೇವಸ್ಥಾನ!
ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮತಾಂತರದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಪಾಕಿಸ್ತಾನದ ಅಹಮದ್‌ಪುರದ ಸಿಯಾಲ್‌ನ ವಿಡಿಯೋ ಇದಾಗಿದ್ದು, ರಾಮ ಸೀತೆ ದೇವಾಲಯವನ್ನು ಕೆಡವಿ ಅದನ್ನು ಕೋಳಿ ಅಂಗಡಿಯನ್ನಾಗಿ ಪರಿವರ್ತನೆ ಮಾಡಲಾಗಿದೆ.
ಇಸ್ಲಾಮಾಬಾದ್ (ಡಿ.16): ಪಾಕಿಸ್ತಾನದ ಅಹ್ಮದ್‌ಪುರ ಸಿಯಾಲ್‌ನಲ್ಲಿರುವ ರಾಮ-ಸೀತಾ ದೇವಸ್ಥಾನದ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿಂದೂ ದೇವಾಲಯವನ್ನು ಕೋಳಿ ಅಂಗಡಿಯಾಗಿ ಪರಿವರ್ತಿಸಲಾಗಿದೆ. ದೇವಾಲಯದ ವಿಡಿಯೋ ವೈರಲ್ ಆದ ನಂತರ, ಜನರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಹಲವು ದೇವಾಲಯಗಳನ್ನು ಧ್ವಂಸ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿದ್ದವು. ಕೆಲವೆಡೆ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಮತ್ತು ಕೆಲವು ಕಡೆ ದೇವಸ್ಥಾನವನ್ನು ದನದ ಕೊಟ್ಟಿಗೆಯಾಗಿ ಪರಿವರ್ತಿಸಲಾಗಿದೆ. ಈಗ ರಾಮ ಸೀತಾ ದೇವಸ್ಥಾನದ ಈ ವಿಡಿಯೋ ವೈರಲ್ ಆಗಿದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ದೇವಾಲಯ: ಸೀತಾ ರಾಮ ದೇವಾಲಯವು ಪಾಕಿಸ್ತಾನದ ಅಹ್ಮದ್‌ಪುರ ಸಿಯಾಲ್‌ನಲ್ಲಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ದೇವಾಲಯವಾಗಿದೆ. ಇದು ಒಂದು ಶತಮಾನದಷ್ಟು ಹಳೆಯ ದೇವಸ್ಥಾನ ಇದಾಗಿದೆ. ಈ ದೇವಾಲಯವು ಆ ಪ್ರದೇಶದ ಹಿಂದೂ ಸಮುದಾಯದ ಆರಾಧನೆಯ ಸ್ಥಳವಾಗಿತ್ತು. ದೇವಾಲಯದ ಸುಂದರವಾದ ಕೆತ್ತನೆಗಳು ಮತ್ತು ಪವಿತ್ರ ಚಿಹ್ನೆಗಳಿಂದ ಅಲಂಕರಿಸಲ್ಪಟ್ಟ ಅದರ ವಾಸ್ತುಶಿಲ್ಪವು ಧಾರ್ಮಿಕ ಗಡಿಗಳನ್ನು ಮೀರಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕಥೆಯನ್ನು ಹೇಳುತ್ತದೆ.
ಪಾಕಿಸ್ತಾನದಲ್ಲಿ ಈ ರಾಮ ಸೀತಾ ಮಂದಿರವನ್ನು ಕೋಳಿ ಅಂಗಡಿಯನ್ನಾಗಿ ಪರಿವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹೆಚ್ಚಿನವರು ಅಸಹಿಷ್ಣು ಎಂದರೆ ಇದು, ಇದಕ್ಕಿಂತ ಅನಾಗರಿಕ ಕೃತ್ಯ ಮತ್ತೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ದೇವಾಲಯದ ವೈರಲ್ ವೀಡಿಯೊದಲ್ಲಿ, ಹಲವೆಡೆ ಓಂ ಎಂದು ಬರೆಯಲಾಗಿದೆ.
Ayodhya Ground Report: ರಾಮಲಲ್ಲಾನ ಸಾರ್ವಜನಿಕ ದರ್ಶನ ಯಾವಾಗ ಆರಂಭ? ಇಲ್ಲಿದೆ ಡೀಟೇಲ್ಸ್
ಅನೇಕ ದೇವಾಲಯಗಳನ್ನು ಪರಿವರ್ತಿಸಲಾಗಿದೆ: ಇದಕ್ಕೂ ಮುನ್ನ ಪಾಕಿಸ್ತಾನದ ಹಲವು ದೇವಾಲಯಗಳ ಪರಿವರ್ತನೆಯ ವಿಡಿಯೋ ವೈರಲ್ ಆಗಿದೆ. ಕೆಲವೆಡೆ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಮತ್ತು ಕೆಲವು ಕಡೆ ದೇವಸ್ಥಾನವನ್ನು ದನದ ಕೊಟ್ಟಿಗೆಯಾಗಿ ಪರಿವರ್ತಿಸಲಾಗಿದೆ. ಈಗ ರಾಮ ಸೀತಾ ದೇವಸ್ಥಾನವನ್ನು ಕೋಳಿ ಅಂಗಡಿಯನ್ನಾಗಿ ಪರಿವರ್ತನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೆಲ ಸಮಯದ ಹಿಂದೆ ಶ್ರೀಕೃಷ್ಣ ದೇವಸ್ಥಾನದ ವಿಡಿಯೋ ವೈರಲ್ ಆಗಿದ್ದು, ದೇಗುಲವನ್ನು ದನದ ಕೊಟ್ಟಿಗೆಯನ್ನಾಗಿ ಪರಿವರ್ತಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಎಮ್ಮೆ ಮತ್ತು ಮೇಕೆಗಳನ್ನು ಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿತ್ತು.
Ayodhya Ground Report: 6 ಟೆಂಟ್ ಸಿಟಿಯಲ್ಲಿ 15 ಸಾವಿರ ಅತಿಥಿಗಳ ವಾಸ, ಫೈವ್ ಸ್ಟಾರ್ ಹೋಟೆಲ್‌ನಂತಿದೆ ಈ ಸಿಟಿ!