Valentines Day 2023: ಸಂಗಾತಿ ಜೊತೆ ರೊಮ್ಯಾಂಟಿಕ್ ಸ್ಥಳ ಸುತ್ತಿ ಬನ್ನಿ

ಪ್ರೇಮಿಗಳ ದಿನ ಪರಸ್ಪರ ಉಡುಗೊರೆ ನೀಡೋದು, ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡೋದು ಕಾಮನ್. ಈ ಬಾರಿ ಸ್ವಲ್ಪ ಸ್ಪೆಷಲ್ ಆಗಿರಲಿ ಎಂದು ಬಯಸುವವರು ದೇಶ ಸುತ್ತೋಕೆ ಹೋಗ್ಬಹುದು. ಪ್ರೇಮಿಗಳಿಗೆ ಹೇಳಿ ಮಾಡಿಸಿದ ಕೆಲ ರೋಮ್ಯಾಂಟಿಕ್ ಪ್ರದೇಶಗಳ ವಿವರ ಇಲ್ಲಿದೆ. 
 

Most Romantic Places In The World Lovers Must Visit

ಪ್ರೀತಿಯ ತಿಂಗಳು ಎಂದೇ ಪ್ರಸಿದ್ಧಿ ಪಡೆದ ತಿಂಗಳು ಫೆಬ್ರವರಿ. ಅದ್ರಲ್ಲೂ ಈ ಒಂದು ವಾರ ಪ್ರೇಮಿಗಳಿಗೆ ಮೀಸಲು. ಫೆಬ್ರವರಿ 7ರಿಂದ ಫೆಬ್ರವರಿ 14ರವರೆಗೆ ಒಂದು ವಾರವನ್ನು ಪ್ರೇಮಿಗಳ ವಾರವೆಂದೇ ಕರೆಯಲಾಗುತ್ತದೆ. ಇದನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್  ವಾರವೆಂದು ಆಚರಣೆ ಮಾಡಲಾಗುತ್ತದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದ ಎಲ್ಲಾ ದೇಶಗಳು ಫೆಬ್ರವರಿ 14 ಅನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತವೆ. ಪ್ರೀತಿಯನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ದಿನವೆಂದೇ ನಂಬಲಾಗಿದೆ. 

ಮೊದಲ ಬಾರಿ ಪ್ರೇಮ (Love) ನಿವೇದನೆಗೆ ಮಾತ್ರ ವ್ಯಾಲಂಟೈನ್ ಡೇ (Valentines Day )ಮೀಸಲಾಗಿಲ್ಲ. 20 ವರ್ಷಗಳಿಂದ ಜೊತೆಗಿರುವ ಜೋಡಿ ಕೂಡ ಮತ್ತೊಮ್ಮೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನ ಒಳ್ಳೆಯದು ಎಂದು ನಂಬುತ್ತಾರೆ. ಹಾಗಾಗಿಯೇ ಪ್ರೀತಿಸುವ ವ್ಯಕ್ತಿಗಳು ಪರಸ್ಪರ ಒಟ್ಟಿಗೆ ಸಮಯ ಕಳೆಯುತ್ತಾರೆ. 

ಮೌಂಟ್ ಎವರೆಸ್ಟ್ ಹತ್ತಲು ಬಯಸ್ತೀರಾ? ಕಾರು ಕೊಳ್ಳುವುದಕ್ಕಿಂತಲೂ ದುಬಾರಿ

ಪ್ರೇಮಿಗಳ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರವಾಸ (Trip) ದ ಪ್ಲಾನ್ ಮಾಡ್ತಾರೆ. ವ್ಯಾಲೆಂಟೈನ್  ಡೇಗೆ ಪ್ರವಾಸದ ಪ್ಲಾನ್ ಮಾಡ್ತಿದ್ದರೆ ಜಗತ್ತಿನ ಅತ್ಯಂತ ರೋಮ್ಯಾಂಟಿಕ್ (Romantic) ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ. ಈ ಬಾರಿ ಅಲ್ಲದಿದ್ರೂ ಮುಂದಿನ ವರ್ಷವಾದ್ರೂ  ಪ್ರೇಮಿಗಳಿಗೆ ಸೂಕ್ತವಾದ ಪ್ರವಾಸಿ ತಾಣಕ್ಕೆ ಭೇಟಿ ನೀಡಿ. ನಾವಿಂದು ವಿಶ್ವದ ಕೆಲ ರೋಮ್ಯಾಂಟಿಕ್ ಸ್ಥಳಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. 

ಫ್ರಾನ್ಸ್ ನ ಪ್ಯಾರಿಸ್ : ರೋಮ್ಯಾನ್ಸ್ ಎಂದಾಗ ನೆನಪಾಗೋದು ಪ್ಯಾರಿಸ್. ಅನೇಕ ಸಿನಿಮಾಗಳಲ್ಲಿ, ಪ್ರೀತಿಯ ಪೋಸ್ಟ್ ರಗಳಲ್ಲಿ ನೀವು ಪ್ಯಾರಿಸ್‌ನ ಐಫೆಲ್ ಟವರ್‌ ನೋಡ್ಬಹುದು. ಪ್ಯಾರಿಸ್ ಪ್ರೇಮಿಗಳ ತಾಣ. ಸಾಮಾನ್ಯ ಜನರು ಮಾತ್ರವಲ್ಲ ಸೆಲೆಬ್ರಿಟಿಗಳ ಮೊದಲ ಆಯ್ಕೆ ಕೂಡ ಪ್ಯಾರಿಸ್. ನೀವು ಬಯಸಿದ್ರೆ ಪ್ಯಾರಿಸ್ ಗೆ ಪ್ರಯಾಣ ಬೆಳೆಸಬಹುದು. ಐಫೆಲ್ ಟವರ್ ಮುಂದೆ ನಿಮ್ಮ ಪ್ರೇಮ ನಿವೇದನೆ ಮಾಡ್ಬಹುದು. 

ಇಟಲಿಯ ಫ್ಲಾರೆನ್ಸ್ : ಪ್ಯಾರಿಸ್ ಹೊರತುಪಡಿಸಿ ಸುಂದರವಾದ ಮತ್ತು ರೋಮ್ಯಾಂಟಿಕ್ ಸ್ಥಳವನ್ನು ನೀವು ಹುಡುಕುತ್ತಿದ್ದರೆ ಫ್ಲಾರೆನ್ಸ್ ನಗರಕ್ಕೆ ಭೇಟಿ ನೀಡ್ಬಹುದು. ಫ್ಲಾರೆನ್ಸ್ ಇಟಲಿಯಲ್ಲಿ. ಫ್ಲಾರೆನ್ಸ್ ನಗರದ ಸೌಂದರ್ಯ ದಂಪತಿ ಮಧ್ಯೆ ಪ್ರಣಯವನ್ನು ಹೆಚ್ಚಿಸುತ್ತದೆ. ಫ್ಲಾರೆನ್ ನ ಕಿರಿದಾದ ಬೀದಿಗಳು ಇತಿಹಾಸದ ಕಥೆಗಳನ್ನು ಹೇಳ್ತವೆ. ಇಲ್ಲಿನ ಫಿಯೊರೆಂಟಿನಾ ಪಾಕಪದ್ಧತಿ ವಿಶ್ವವಿಖ್ಯಾತವಾಗಿದೆ. ಜೀವನದಲ್ಲಿ ಒಮ್ಮೆಯಾದ್ರೂ ನಿಮ್ಮ ಸಂಗಾತಿ ಜೊತೆ ಫ್ಲಾರೆನ್ಸ್ ಗೆ ಭೇಟಿ ನೀಡಿ.

ಗ್ರೀಸ್ ನ ಸ್ಯಾಂಟೋರಿನಿ : ರೋಮ್ಯಾಂಟಿಕ್ ಪ್ರದೇಶ ಎಂಬ ವಿಷ್ಯ ಬಂದಾಗ ಸ್ಯಾಂಟೋರಿನ್ ಹೆಸರು ಬರದೆ ಇರೋದಿಲ್ಲ. ಸ್ಯಾಂಟೋರಿನಿ ಪ್ರಾಕೃತಿಕ ಸೌಂದರ್ಯದಿಂದ ಸುತ್ತುವರೆದಿದೆ.  ಹನಿಮೂನ್ ಗೆ ಇದು ನೆಚ್ಚಿನ ತಾಣವಾಗಿದೆ. ಸ್ಯಾಂಟೋರಿನ್ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಪ್ರಣಯಕ್ಕೆ ಸೂಕ್ತವಾದ ಸ್ಥಳ ಸ್ಯಾಂಟೋರಿನಿ.

Train Travel: ಚಳಿಗಾಲದಲ್ಲೂ ಎಸಿ ಕೋಚ್ ಗೆ ಯಾಕೆ ನೀಡ್ಬೇಕು ಹೆಚ್ಚಿನ ಹಣ..!

ಮಾಲ್ಡೀವ್ಸ್ : ಭಾರತದ ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಅತ್ಯಂತ ಜನಪ್ರಿಯ ತಾಣವಾಗಿದೆ. ಇದು ವಿಶ್ವದ ಅತ್ಯಂತ ರೋಮ್ಯಾಂಟಿಕ್ ದ್ವೀಪಸಮೂಹಗಳಲ್ಲಿ ಒಂದಾಗಿದೆ. ವ್ಯಾಲೆಂಟೈನ್ ಸಮಯದಲ್ಲಿ ಸಂಗಾತಿ ಜೊತೆ ಪ್ರವಾಸದ ಪ್ಲಾನ್ ಮಾಡ್ತಿದ್ದರೆ ನೀವು ವಾಲ್ಡೀವ್ಸ್ ಗೆ ಹೋಗ್ಬಹುದು. ಮಾಲ್ಡೀವ್ಸ್ ನ ಸುಂದರ ನೋಟಗಳು, ಕಡಲ ತೀರಗಳು ಮತ್ತು ಐತಿಹಾಸಿಕ ಸ್ಥಳಗಳು ನಿಮ್ಮಿಬ್ಬರ ಮಧ್ಯೆ ಪ್ರೀತಿ ಹೆಚ್ಚಿಸುತ್ತದೆ. 

ಭಾರತದಲ್ಲಿದೆ ಇದೆಲ್ಲ ರೊಮ್ಯಾಂಟಿಕ್ ಸ್ಥಳ : ವಿದೇಶಕ್ಕೆ ಹೋಗೋದು ಸಾಧ್ಯವಿಲ್ಲ ಎನ್ನುವವರು ಭಾರತದಲ್ಲಿರುವ ರೋಮ್ಯಾಂಟಿಕ್ ಸ್ಥಳಕ್ಕೆ ಭೇಟಿ ನೀಡ್ಬಹುದು. ಭಾರತದಲ್ಲಿ ಪ್ರೇಮಿಗಳಿಗಾಗಿಯೇ ಮೀಸಲಿರುವ ಅನೇಕ ಸ್ಥಳಗಳಿವೆ. ರಾಜಸ್ಥಾನದ ಉದಯಪುರ, ಗೋವಾ, ಅಂಡಮಾನ್ ನಿಕೋಬಾರ್,ಶಿಮ್ಲಾ, ಕೇರಳ, ಆಗ್ರಾ ಹೀಗೆ ಅನೇಕ ಪ್ರದೇಶಗಳು ಭಾರತದಲ್ಲಿದ್ದು, ಪ್ರೇಮಿಗಳ ದಿನದಂದು ಅಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ದಿನವನ್ನು ಮತ್ತಷ್ಟು ರೋಮ್ಯಾಂಟಿಕ್ ಗೊಳಿಸಬಹುದು. 
 

Latest Videos
Follow Us:
Download App:
  • android
  • ios